Saturday 8 May 2021

ಕ್ರೀಡಾ ಸಾಧಕಿ ಹುಸ್ನಾ ನವಾಜ್



 ಕ್ರೀಡಾ ಸಾಧಕಿ ಹುಸ್ನಾ ನವಾಜ್
- ಶ್ರೀನಿವಾಸ ಗೌಡ,

ಹುಸ್ನಾ ನವಾಜ್ ಅವರು ದೈಹಿಕ ಶಿಕ್ಷಣ ಶಿಕ್ಷಕರಾಗಿ ದಿನಾಂಕ: 03-10-2008 ರಂದು ಸೇವೆಗೆ ಸೇರಿದರು, ಪ್ರಸ್ತುತ ತುಮಕೂರು (ದ) ಜಿಲ್ಲೆ, ಗುಬ್ಬಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಅಂಕಸಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು ಇಲ್ಲಿನ ಮಕ್ಕಳಿಗೆ ಕ್ರೀಡಾಕ್ಷೇತ್ರದಲ್ಲಿ ಉತ್ತಮ ಅಭಿರುಚಿ ಮೂಡಿಸುವುದರ ಜೊತೆಗೆ  ಸ್ವತಃ ಹುಸ್ನಾವಾಜ್ ಅವರು ರಾಜ್ಯ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟಗಳ ನಿರ್ಣಾಯಕರಾಗಿ ಸೇವೆ ಸಲ್ಲಿಸುತಿದ್ದಾರೆ.  

ಅಂಕಸಂದ್ರದ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ, ಅಂದರೆ ಕ್ರೀಡೆ, ಪ್ರತಿಭಾ ಕಾರಂಜಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಾರತ ಸೇವಾದಳ ಇತ್ಯಾದಿ ಕ್ಷೇತ್ರಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.

ಕ್ರೀಡೆಯ ಹೊರತಾಗಿ ಹುಸ್ನಾ ನವಾಜ್ ಅವರು ಶಾಲೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ದೃಷ್ಠಿಯಿಂದ ಹಲವಾರು ಗಣ್ಯರು ಮತ್ತು ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ, ಹಲವು ಸಂಘಸಂಸ್ಥೆಗಳಿಂದ ವಿದ್ಯಾರ್ಥಿಗಳಿಗೆ ಅವಶ್ಯಕವಿರುವ ಶಾಲಾಕಿಟ್, ಕ್ರೀಡಾ ಸಮವಸ್ತ್ರ, ಬಾಸ್ಕೆಟ್ಬಾಲ್ ಮತ್ತು ರಿಂಗ್, ಲೇಜಿಮ್ಸ್, ಮುಂತಾದ ವಸ್ತುಗಳನ್ನು ಸಂಗ್ರಹಿಸಿ ವಿತರಿಸುತ್ತಾರೆ. ಅಲ್ಲದೆ ಶಾಲೆಗಾಗಿ ಧ್ವನಿವರ್ಧಕ ಮುಂತಾದ ಅತ್ಯಗತ್ಯ ವಸ್ತುಗಳನ್ನು ದೇಣಿಗೆ ರೂಪದಲ್ಲಿ ಸಂಗ್ರಹಿಸಿ ಆ ಮೂಲಕ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಶಾಲಾ ಆವರಣದಲ್ಲಿ ನೆಡಲು ಸಸಿಗಳು ತರಿಸಿ ನೆಟ್ಟು ಅವುಗಳನ್ನು ಮಕ್ಕಳು ನೀರು ಹನಿಸುವ ಮೂಲಕ ಪೋಷಿಸುವುದರೊಂದಿಗೆ ಪರಿಸರ ಪೋಷಣೆಗೆ ಒತ್ತು ನೀಡಿದ್ದಾರೆ.

ಹುಸ್ನಾವಾಜ್ ಅವರು 2009 ರಿಂದ 2018ರ ವರೆಗೆ ಗೈಡ್ಕ್ಯಾಪ್ಟನ್, ಉನ್ನತ ಸಹಾಯಕ ಕ್ರೀಡಾಶ್ರೀ, ನೈ,ಆ,ಮೌ,ಶಿ ಮತ್ತು ಯೋಗ, ಉತ್ತುಂಗ, ಕರಾಟೆ, ಜಿಪಿಇಡಿ ತರಬೇತಿ, ವಾಲಿಬಾಲ್ ತೀರ್ಪುಗಾರರ ತರಬೇತಿ ಮತ್ತು ಕಬ್ಬಡಿ ತೀರ್ಪುಗಾರರ ತರಬೇತಿ ಪಡೆದಿರುತ್ತಾರೆ. ಅಲ್ಲದೆ 2013 ರಿಂದ 2018 ವರೆಗೆ ವಾಲಿಬಾಲ್ ಮತ್ತು ಕಬ್ಬಡಿಯಲ್ಲಿ ತೀರ್ಪುಗಾರರಾಗಿ ಎಸ್,ಜಿ,ಎಫ್,ಐ ಮತ್ತು ಎ,ಕೆ,ಎಫ್,ಐ ಆಶ್ರಯದಲ್ಲಿ ಆಯೋಜಿಸಲಾದ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರೋ ಕಬ್ಬಡಿ ಟೂರ್ನಿಯಲ್ಲಿ ಕಾರ್ಯನಿರ್ವಹಿಸಿರುತ್ತಾರೆ.

2009-10 ರಿಂದ 2017-18 ರ ವರೆಗೆ ಶೈಕ್ಷಣಿಕ ಸಾಲಿನಲ್ಲಿ ರಾಜ್ಯ ವಾಲಿಬಾಲ್, ರಾಜ್ಯ ಕಬ್ಬಡಿ, ಎ,ಕೆ,ಎಫ್,ಐ ಕಬ್ಬಡಿ ತಿರ್ಪುಗಾರರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಹುಸ್ನಾ ನವಾಜ್ ಅವರಿಗೆ 2016-17 ರ ಶೈಕ್ಷಣಿಕ ಸಾಲಿನಲ್ಲಿ ತಾಲ್ಲೂಕು ಉತ್ತಮ ದೈಹಿಕ ಶಿಕ್ಷಕಿ ಪ್ರಶಸ್ತಿ, ವಾಲಿಬಾಲ್ನಲ್ಲಿ ಉತ್ತಮ ತೀರ್ಪುಗಾರ್ತಿ ಪ್ರಶಸ್ತಿ ಮತ್ತು ಕಬ್ಬಡಿಯಲ್ಲಿ ಸಾಧಕಿ ಪ್ರಶಸ್ತಿ ಹಾಗೂ ಹಲವಾರು ಸಂಘ ಸಂಸ್ಥೆಗಳು ಕಬಡ್ಡಿ ಕ್ರೀಡೆಯಲ್ಲಿನ ಸಾಧನೆಯನ್ನು ಗುರುತಿಸಿ ಸನ್ಮಾನಿಸಿರುತ್ತಾರೆ.

 ಕರ್ನಾಟಕದ ಕ್ರೀಡಾ ಶಾಲೆಗಳು
- ಕೆ.ವಿ. ದಿವಾಕರ,

`ವಿದ್ಯಾ ದಧಾತಿ ವಿನಯಂ' ಅಂದರೆ ಯಾರಲ್ಲಿ ವಿನಯವಿದಯೋ ಅವರಲ್ಲಿ ವಿದ್ಯೆ ತಾನಾಗಿಯೇ ಬರುತ್ತದೆ ಹಾಗೂ ಕಲಿಕೆಯಲ್ಲಿ ಮನಸ್ಸು- ಆಸಕ್ತಿ-ಛಲ ಇವುಗಳಿದ್ದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು. `ಶರೀರ ಮಾದ್ಯಂ ಖಲು ಧರ್ಮ ಸಾಧನಂ' ಎಂಬಂತೆ ಮಗುವಿನ ಸರ್ವಾಂಗೀಣ ಬೆಳವಣಿಗೆಯಲ್ಲಿ ಚಟುವಟಿಕೆ ಎಂಬುದು ಬಹುಮುಖ್ಯವಾದದ್ದು. ಅಂದರೆ ಮಗು ಸದಾ ಕ್ರಿಯಾಶೀಲತೆಯಿಂದ ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸದಾ ಯಾವುದಾದರೊಂದು ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದರೆ ಆ ಮಗುವಿನ ಬುದ್ಧಿಶಕ್ತಿಗೆ ಹಾಗು ದೇಹದ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ಪುರಾತನ ಕಾಲದಿಂದಲೂ ಸಹ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಬೇಕಾದರೆ ಬಹಳಷ್ಟು ದೂರ ಕಾಲ್ನಡಿಗೆಯಲ್ಲಿಯೇ, ಹಳ್ಳ-ಕೊಳ್ಳ, ಗುಡ್ಡ-ಬೆಟ್ಟಗಳನ್ನು ದಾಟಿ ಹೋಗಬೇಕಾಗಿತ್ತು. ಹಾಗಾಗಿ ಅವರಿಗೆ ಅರಿವಿಲ್ಲದೆಯೇ ಚಟುವಟಿಕೆಗಳಲ್ಲಿ ತಲ್ಲೀನರಾಗಿರುತ್ತಿದ್ದರು ಹಾಗೂ ಅದಕ್ಕೆ ತಕ್ಕ ಆಹಾರವನ್ನೂ ಸಹ ಸೇವಿಸುತ್ತಿದ್ದರು. ಆದರೆ ನಗರ ಪ್ರದೇಶಗಳಲ್ಲಿ ಇಂದು ನಾವು ದೈಹಿಕವಾದ ಶ್ರಮಾಧಾರಿತ ಚಟುವಟಿಕೆಯಿಲ್ಲದೆಯೇ ಮಾನಸಿಕವಾಗಿ ಹಾಗು ದೈಹಿಕವಾಗಿ ಕುಗ್ಗಿ-ಹೋಗಿ ವಿವಿಧ ಖಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಹೀಗೆ ಮುಂದುವರೆದಲ್ಲಿ ಭವಿಷ್ಯದಲ್ಲಿ ಆರೋಗ್ಯವಂತ ಮನುಷ್ಯನನ್ನು ನೋಡುವುದೇ ವಿರಳವೆನಿಸುತ್ತದೆ. ಹಾಗಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ಇಂದು ಕ್ರೀಡೆ, ಯೋಗ ಮುಂತಾದವುಗಳನ್ನು ಬಾಲ್ಯಾವಸ್ಥೆಯಲ್ಲಿಯಿಂದಲೇ ಕಡ್ಡಾಯವಾಗಿ ಅಭ್ಯಾಸಿಸುತ್ತಿರುವುದು ಕಂಡುಬಂದಿದೆ.

ಇದನ್ನೆಲ್ಲಾ ಗಮನಿಸಿ ನಮ್ಮ ರಾಜ್ಯ ಸರ್ಕಾರ ಹಾಗು ಕೇಂದ್ರ ಸರ್ಕಾರ ಶಿಕ್ಷಣ ಇಲಾಖೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು "ಅಚಿಣಛಿ ಣಜಟ ಚಿಟಿಜ ಅಠಚಿಛಿ ಣಜಟ" ಎಂಬ ಶೀರ್ಷಿಕೆಯಡಿಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ, ತಾಲ್ಲೂಕು ಕೇಂದ್ರಗಳಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ ಹಾಗು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನೇಕ ಕ್ರೀಡಾ ಶಾಲೆಗಳನ್ನು ಮತ್ತು ಕ್ರೀಡಾ ನಿಲಯಗಳನ್ನು ತೆರೆದು ಅಲ್ಲಿ ಮಕ್ಕಳಿಗೆ ನುರಿತ ತರಬೇತುದಾರರಿಂದ ಆಯಾ ಕ್ರೀಡೆಗಳಿಗೆ ಉತ್ತಮ ಮಾರ್ಗದರ್ಶನವನ್ನು, ತರಬೇತಿಯನ್ನು ನೀಡುತ್ತಿದ್ದಾರೆ ಹಾಗೂ ಆ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಶಿಕ್ಷಣ ಇಲಾಖೆಯು ಹತ್ತಿರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗು ಪ್ರೌಢಶಾಲೆಗಳಲ್ಲಿ ಉಚಿತವಾಗಿ ವ್ಯಾಸಂಗಮಾಡಲು ಸಹಕರಿಸುತ್ತಿದೆ. ಅಲ್ಲದೆ ದೇಶಕ್ಕೆ ಭವಿಷ್ಯದ ಕ್ರೀಡಾಪಟುಗಳು ಶಾಲಾಹಂತದಿಂದಲೇ ತಯಾರಾಗಬೇಕು ಮತ್ತು ಗ್ರಾಮೀಣ ಪ್ರದೇಶಗಳ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಈ ಕ್ರೀಡಾ ನಿಲಯಗಳು ಸಹಕಾರಿಯಾಗುತ್ತವೆ.

`ಬೆಳೆಯುವ ಪೈರು ಮೊಳಕೆಯಲ್ಲಿಯೇ ಎಂಬಂತೆ' ಮಗುವಿನ ಚಲನಾಶಕ್ತಿ, ಆಸಕ್ತಿ ಹಾಗು ಚಟುವಟಿಕೆಗಳನ್ನು ಬಾಲ್ಯಾವಸ್ಥೆಯಲ್ಲಿಯೇ ಗುರುತಿಸಿ 5ನೇ ತರಗತಿ, 8ನೇ ತರಗತಿ ಮತ್ತು 11ನೇ ತರಗತಿಗೆ ಯುವ ಸಬಲೀಕರಣ ಹಾಗು ಕ್ರೀಡಾ ಇಲಾಖೆಯು ರಾಜ್ಯದ ವಿವಿಧ ಜಿಲ್ಲೆ, ತಾಲ್ಲೂಕುಗಳಲ್ಲಿ ವಿವಿಧ ಕ್ರೀಡೆಗಳಿಗೆ ಸಂಬಂಧಿಸಿದಂತೆ ಕ್ರೀಡಾ ನಿಲಯಗಳಿವೆ ಹಾಗು ಆಯಾ ಕ್ರೀಡೆಗೆ ಸಂಬಂಧಿಸಿದಂತೆ 5ನೇ ತರಗತಿಯಿಂದ ಪದವಿಯವರೆಗೂ ವ್ಯಾಸಂಗ ಮಾಡಬಹುದು. ನಮ್ಮ ಕರ್ನಾಟಕ ಸರ್ಕಾರ ರಾಜ್ಯದ ಯುವ ಸಬಲೀಕರಣ ಕ್ರೀಡಾ ಇಲಾಖೆಯ ವ್ಯಾಪ್ತಿಯಲ್ಲಿ ರಾಜ್ಯದ ವಿವಿಧೆಡೆ ವಿವಿಧ ಕ್ರೀಡೆಗಳಲ್ಲಿ ನುರಿತ ತರಬೇತುದಾರರನ್ನು ನೇಮಿಸಿಕೊಂಡು ಅವರಿಗೆ ಹೆಚ್ಚಿನ ತರಬೇತಿಯನ್ನು ಆಯಾ ಕ್ರೀಡೆಗಳಲ್ಲಿ ನೀಡುತ್ತಿದ್ದಾರೆ. ರಾಜ್ಯದ ಒಟ್ಟು ನಾಲ್ಕು ವಿಭಾಗಗಳಲ್ಲಿಯೂ ಸಹ 30ಕ್ಕೂ ಹೆಚ್ಚು ಕ್ರೀಡಾ ನಿಲಯ/ಕ್ರೀಡಾ ಶಾಲೆಗಳನ್ನು ತೆರೆದು ಅಲ್ಲಿ ಆಯ್ಕೆಯಾದ ಮಕ್ಕಳಿಗೆ ನುರಿತ ಕ್ರೀಡಾ ತರಬೇತುದಾರರನ್ನು ನೇಮಿಸಿ ವೈಜ್ಞಾನಿಕವಾಗಿ ಕ್ರೀಡೆಯಲ್ಲಿ ತರಬೇತಿಯನ್ನು ನೀಡುತ್ತಿದ್ದಾರೆ. ಆಯಾ ಪ್ರದೇಶದ ತಾಲ್ಲೂಕಿನ, ಜಿಲ್ಲೆಯ, ಮಕ್ಕಳ ಹಿತಾಸಕ್ತಿಯನ್ನು ಅಂದರೆ ಯಾವ ಕ್ರೀಡೆಯತ್ತ ಮಗುವಿನ ಒಲವಿದೆ ಎಂಬುದನ್ನು ಮನಗಂಡು ಆ ಕ್ರೀಡೆಗೆ ಸಂಬಂಧಿಸಿದಂತೆ ತರಬೇತುದಾರರನ್ನು ನೇಮಿಸಿ ಅವರಿಗೆ ತರಬೇತಿಯನ್ನು ನೀಡಲಾಗುತ್ತಿದೆ.

ಉದಾಹರಣೆಗೆ ಬೆಂಗಳೂರು ವಿಭಾಗದಲ್ಲಿ ವಿದ್ಯಾನಗರ ಕ್ರೀಡಾಶಾಲೆಯಲ್ಲಿ ಬಾಸ್ಕೆಟ್ ಬಾಲ್, ವಾಲಿಬಾಲ್, ಫುಟ್ಬಾಲ್ ಹಾಗೂ ಅಥ್ಲೆಟಿಕ್ಸ್ ವಿಭಾಗದಲ್ಲಿ ಕ್ರೀಡಾತರಬೇತಿಯನ್ನು ನೀಡಲಾಗುತ್ತಿದೆ. ದಾವಣಗೆರೆಯಲ್ಲಿ ಕುಸ್ತಿ, ಅಥ್ಲೆಟಿಕ್ಸ್, ಕಬ್ಬಡಿ, ಖೋ-ಖೊ ಮುಂತಾದ ತರಬೇತಿಗಳನ್ನು ನೀಡಲಾಗುತ್ತಿದೆ. ಶಿವಮೊಗ್ಗದಲ್ಲಿ ಫುಟ್ಬಾಲ್, ಹಾಕಿ, ಅಥ್ಲೆಟಿಕ್ಸ್, ಮೈಸೂರು ವಿಭಾಗದ ಕೂಡಿಗೆಯಲ್ಲಿ ಹಾಕಿ, ಅಥ್ಲೆಟಿಕ್ಸ್, ಜಿಮ್ನಾಸ್ಟಿಕ್ಸ್, ಮೈಸೂರು ನಗರದಲ್ಲಿ ಬಾಸ್ಕೆಟ್ಬಾಲ್, ಹಾಕಿ, ವಾಲಿಬಾಲ್, ಫುಟ್ಬಾಲ್, ಹಾಸನದಲ್ಲಿ ಬಾಸ್ಕೆಟ್ಬಾಲ್, ವಾಲಿಬಾಲ್, ಹಾಕಿ, ಮಂಡ್ಯದಲ್ಲಿ ಬಾಸ್ಕೆಟ್ಬಾಲ್, ಫುಟ್ಬಾಲ್, ಕಬ್ಬಡಿ, ಬೆಳಗಾಂ ವಿಭಾಗದಲ್ಲಿ ಕುಸ್ತಿ, ಜೂಡೋ, ವಾಲಿಬಾಲ್, ಧಾರವಾಡದಲ್ಲಿ ಜಿಮ್ನಾಸ್ಟಿಕ್, ಬಾಸ್ಕೆಟ್ಬಾಲ್, ವಿಜಯಪುರದಲ್ಲಿ ಸೈಕ್ಲಿಂಗ್, ಬಾಸ್ಕೆಟ್ಬಾಲ್, ವಾಲಿಬಾಲ್, ಬಾಗಲಕೋಟೆಯಲ್ಲಿ ಕುಸ್ತಿ, ಸೈಕ್ಲಿಂಗ್, ಗುಲ್ಬರ್ಗಾ ವಿಭಾಗದ ಬಳ್ಳಾರಿಯಲ್ಲಿ ಅಥ್ಲೆಟಿಕ್ಸ್, ಫುಟ್ಬಾಲ್, ಹಾಕಿ, ಯಾದಗಿರಿಯಲ್ಲಿ ವಾಲಿಬಾಲ್, ಅಥ್ಲೆಟಿಕ್ಸ್ ಕಲ್ಬುಗರ್ಿಯಲ್ಲಿ ಹಾಕಿ, ಅಥ್ಲೆಟಿಕ್ಸ್ ಹಾಗು ಇನ್ನಿತರ ಕ್ರೀಡೆಗಳಲ್ಲಿ ಹೆಚ್ಚಿನ ತರಬೇತಿಯನ್ನು ನೀಡುತ್ತಿದ್ದಾರೆ. ಈ ಎಲ್ಲಾ ಕ್ರೀಡೆಗಳಲ್ಲಿ ಮಕ್ಕಳು ಪ್ರತಿ ವರ್ಷ ಉತ್ತಮವಾದ ಸಮರ್ಪಕವಾದ ಸಾಮಥ್ರ್ಯ, ಉತ್ತಮ ಫಲಿತಾಂಶ ನೀಡುತ್ತಾ ಬಂದಲ್ಲಿ ಆ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕೆ ಇಲಾಖೆ ಅನುವು ಮಾಡಿಕೊಡುತ್ತದೆ ಹಾಗೂ ಪದವಿಯ ನಂತರ ಇದೇ ಸಾಮಥ್ರ್ಯವನ್ನು ಕಾಪಾಡಿಕೊಂಡು ಬಂದಲ್ಲಿ ಅವರಿಗೆ ರಾಷ್ಟ್ರೀಯ ಶಾಲಾ ಕ್ರೀಡಾಕೂಟ, ಅಂತರ ಕಾಲೇಜು, ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಛಾಂಪಿಯನ್ಷಿಫ್, ಅಂತಾರಾಷ್ಟ್ರೀಯ ಛಾಂಪಿಯನ್ಷಿಫ್, ಏಷಿಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್, ಒಲಂಪಿಕ್ ಗೇಮ್ಸ್ಗಳಲ್ಲಿ ಪದಕವನ್ನು ಪಡೆದರೆ ಅಂತಹ ಕ್ರೀಡಾಪಟುಗಳಿಗೆ ವ್ಯಾಸಂಗ ಮಾಡುತ್ತಿರುವ ಸಮಯದಲ್ಲಿ ನಗದು ರೂಪದಲ್ಲಿ ವಿದ್ಯಾರ್ಥಿ ವೇತನ ನೀಡಲಾಗುವುದು ಹಾಗೂ ಅಂತಹ ಶ್ರೇಷ್ಠ ಕ್ರೀಡಾಪಟುಗಳಿಗೆ ರಾಜ್ಯದ ವಿವಿಧ ಇಲಾಖೆಗಳಲ್ಲಿ ಕ್ರೀಡಾ ಖೋಟಾದಡಿಯಲ್ಲಿ ರಾಷ್ಟ್ರೀಯ ರೈಲ್ವೆ ಇಲಾಖೆ, ಬ್ಯಾಂಕ್, ಆದಾಯ ತೆರಿಗೆ ಇಲಾಖೆಗಳಲ್ಲಿ ಮತ್ತು ಕಾರ್ಪೋರೇಟ್ ಕಛೇರಿಗಳಲ್ಲಿ ಉದ್ಯೋಗ ಅವಕಾಶಗಳನ್ನು ಪಡೆಯಲು ಅನುಕೂಲವಾಗುತ್ತದೆ ವವ