Thursday 27 May 2021

ಶಾಲಾ ಸಂಘಗಳು



 14. ಶಾಲಾ ಸಂಘಗಳು

  ವ್ಯಕ್ತಿಯು ವೈಯಕ್ತಿಕವಾಗಿ ಸಾಧನೆ ಮಾಡಲಾರದ್ದನ್ನು ಸಂಘದ ಮೂಲಕ ಸಾಧಿಸಿ ತೋರಿಸಬಹುದು. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಉಕ್ತಿಯು ಸಂಘದ ಚಟುವಟಿಕೆಗೆ ಬೆನ್ನೆಲುಬು. ಸಂಘದ ಚಟುವಟಿಕೆಯಲ್ಲಿ ವಿದ್ಯಾರ್ಥಿ ಭಾಗವಹಿಸುವುದರಿಂದ ನಾಯಕತ್ವ ಗುಣ, ಸಹಕಾರ  ಮನೋಭಾವ ಹಾಗೂ ಸಾಮಾಜಿಕ ಮೌಲ್ಯಗಳು ಬೆಳವಣಿಗೆಯಾಗುತ್ತವ. ವಿದ್ಯಾರ್ಥಿಯ ಸರ್ವತೋಮುಖ ಅಭಿವೃದಿಗಾಗಿ ವಿವಿದ್ಧ  ಸಂಘಗಳನ್ನು ಪ್ರಾರಂಭಿಸಿ ಅದರ ಅಡಿಯಲ್ಲಿ ಹಲವಾರು ಚಟುವಟಿಕೆಗಳನ್ನು ವಿದ್ಯಾರ್ಥಿಗಳ ಸಂಘಟಿಸಬೇಕು. ಶಿಕ್ಷಣ ಇಲಾಖೆಯು ಶಾಲೆಗಳಲ್ಲಿ ವಿವಿಧ ಸಂಘಗಳನ್ನು ಸ್ಥಾಪಿಸಿ, ಚಟುವಟಿಕೆಗಳನ್ನು ಸಂಘಟಿಸಿ, ಕಾರ್ಯರೂಪಕ್ಕೆ ತಂದು, ಕಾರ್ಯ ಪ್ರವೃತರಾಗ್ತುವಂತೆ ಸುತೋಲ್ತೆಯನ್ನು ಕಳುಹಿಸಿದೆ.

ಶಾಲೆಗಳಲ್ಲಿ ನಿರ್ವಹಿಸಬಹುದಾದ ಸಂಘಗಳು
  ವಿಜ್ಞಾನ ಸಂಘ, ಗಣಿತ ಸಂಘ, ಸಾಹಿತ್ಯ ಸಂಘ, ಕಲಾ ಸಂಘ, ಸಾಹಸ ಸಂಘ, ಇಕೋ ಕ್ಲಬ್, ಗ್ರಾಹ ಕ್ಲಬ್, ರೆಡ್ ರಿಬ್ಬನ್ ಕ್ಲಬ್, ವಿದ್ಯಾರ್ಥಿ ಸಂಘ, ಕ್ರೀಡಾ ಸಂಘ ಇತ್ಯಾದಿ.

ವಿಜ್ಞಾನ ಸಂಘ:
ಅರ್ಥ: ಮಕ್ಕಳು ವಿಜ್ಞಾನವನ್ನು ಸಂತಸದಾಯಕವಾಗಿ, ಆಸಕಿಯಿಂದ್ತ  ಕಲಿಯಲು, ವೈಜ್ಞಾನಿಕ ಚಿಂತನೆ ಬೆಳಸಿಕೆೊಳ್ಳಲು ವಿದ್ಯಾರ್ಥಿಗಳ  ಸ್ಥಾಪಿಸುವ ಸಂಘ.

ರಚನೆ:
 ಮುಖ್ಯ ಶಿಕ್ಷಕರು ಗೌರವ ಅಧ್ಯಕ್ಷರಾಗಿ, ವಿಜ್ಯಾನ ಶಿಕ್ಷಕರು ಮಾರ್ಗದರ್ಶಕರಾಗಿ, ವಿದ್ಯಾರ್ಥಿಗಳ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಸದಸ್ಯರಾಗಿ ಸಂಘದ ಚಟುವಟಿಕೆಗಳನ್ನೂ ನಡೆಸುವುದು.

ನಾಮಕರಣ:
 ಸಂಘಕ್ಕೆ ಖ್ಯಾತ ವಿಜ್ಞಾನಿಯ ಹೆಸರನ್ನು ನಾಮಕರಣ ಮಾಡಬಹುದು.

ಉದ್ದೇಶಗಳು:
 ವಿಜ್ಞಾನದ ತತ್ವಗಳು ತನ್ನ ಪರಿಸರದಲಿ ಅಳ್ಲ ವಡಿಕೆಯಾಗಿರುವ ಅರಿವು ಮೂಡಿಸುವುದು.
 ವೈಜ್ಞಾನಿಕ ಮನೋಧರ್ಮವನ್ನು ಬೆಳೆಸುವುದು.

ಕೈಗೊಳ್ಳಬಹುದಾದ ಚಟುವಟಿಕೆಗಳು:
 ವಿಜ್ಞಾನ ವಸ್ತು ಪ್ರದರ್ಶನ
 ವಿಜ್ಞಾನ ನಾಟಕ ಸ್ಪರ್ಧೆ
 ವಿಜ್ಞಾನ ಭಾಷಣ ಸ್ಪರ್ಧೆ
 ವಿಜ್ಞಾನಿಗಳ ಜನ್ಮ ದಿನಾಚರಣೆಗಳು
 ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ
 ವಿಜ್ಞಾನ ಪ್ರಬಂಧ ಸ್ಪರ್ಧೆ
 ವಿಜ್ಞಾನ ಮಾದರಿಗಳ ತಯಾರಿಕಾ ಸ್ಪರ್ಧೆ
 ಕಸದ ನಿರ್ವಹಣೆ ಉಪನ್ಯಾಸ
 ಓಜೋನ್ ದಿನಾಚರಣೆ
 ರಾಷ್ಟ್ರೀಯ ವಿಜ್ಞಾನ ದಿನಾಚರಣೆ
 ವೈಜ್ಞಾನಿಕ ಪ್ರವಾಸ ಹಮ್ಮಿಕೊಳ್ಳುವುದು
 ವಿಜ್ಞಾನಿಗಳು, ವಿಷಯ ಪರಿಣಿತರಿಂದ ಪ್ರಚಲಿತ ವಿದ್ಯಮಾನಗಳ ವೈಜ್ಞಾನಿಕ ಉಪನ್ಯಾಸಗಳನ್ನೂಏರ್ಪಡಿಸುವುದು.
 ಆರೋಗ್ಯ ಮೇಳಗಳು, ಜಲ ಸಂರಕ್ಷಣೆ, ಉಪನ್ಯಾಸ, ಸಾವಯವ ಗೊಬ್ಬರ ತಯಾರಿಕೆ, ಎರೆಹುಳು ಗೊಬ್ಬರತಯಾರಿಕಾ ಘಟಕಗಳ ಪ್ರಾತ್ಯಕ್ಷತೆ ಮುಂತಾದ ಕಾರ್ಯಕ್ರವುಗ ಳನ್ನು ಸ ಮುದಾಯದಲ್ಲಿ ಏರ್ಪಡಿಸುವುದು.
 ವಿಜ್ಞಾನಹಬ್ಬ ಆಚರಿಸುವುದು.
 ಪ್ರತಿದಿನ ವಿಜ್ಞಾನದ ವಿಶೇಷತೆಯನ್ನು ಸೂಚನಾ ಫಲಕದಲ್ಲಿ ಬರೆಸುವುದು.

ಗಣಿತ ಸಂಘ
ಅರ್ಥ:
 ಗಣಿತವನ್ನು ಸಂತಸದಾಯಕವಾಗಿ, ಆಸಕ್ತಿಯಿಂದ ಕಲಿಯಲು, ತಾರ್ಕಿಕ ಚಿಂತನೆ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳೇ ಸ್ಥಾಪಿಸುವ ಸಂಘ.

ರಚನೆ:   
ಮುಖ್ಯ ಶಿಕ್ಷಕರು ಗೌರವ ಅಧ್ಯಕ್ಷರಾಗಿ, ಗಣಿತ ಶಿಕ್ಷಕರು ಮಾರ್ಗದರ್ಶಕರಾಗಿ, ವಿದ್ಯಾರ್ಥಿಗಳೇ ಅಧ್ಯಕ್ಷ, ಉಪಾಧ್ಯಕ್ಷಕಾರ್ಯದಶರ್ಿ, ಸದಸ್ಯರಾಗಿ ಸಂಘದ ಚ ಟುವಟಿಕೆಗಳನ್ನು ನಡೆಸುವುದು.

ನಾಮಕರಣ:   
ಸಂಘಕ್ಕೆ ಖ್ಯಾತ ಗಣಿತ ತಜ್ಞರ ಹೆಸರನ್ನು ಇಡುವುದು.

ಉದ್ದೇಶಗಳು:
 ಗಣಿತ ತಜ್ಞರ ಕೊಡುಗೆಗಳನ್ನು ಸ್ಮರಿಸುವುದು.
 ಗಣಿತದ ಜ್ಞಾನವನ್ನು ದಿನನಿತ್ಯ ಜೀವನದಲ್ಲಿ ಬಳಸುವುದು.
 ತಾರ್ಕಿಕ ಮನೋಭಾವ ಬೆಳೆಸುವುದು.

ಕೈಗೊಳ್ಳಬಹುದಾದ ಚಟುವಟಿಕೆಗಳು:
 ಗಣಿತ ವಸ್ತು ಪ್ರದರ್ಶನ ಏರ್ಪಡಿಸುವುದು.
 ಗಣಿತಜ್ಞರ ಜನ್ಮ ದಿನಾಚರಣೆಗಳನ್ನು ಆಚರಿಸುವುದು.
 ಮೆಟ್ರಿಕ್ ಮೇಳಗಳನ್ನು ಸಂಘಟಿಸುವುದು.
 ಸಂತಸ ಗಣಿತ ಕುರಿತು ಚಟುವಟಿಕೆಗಳನ್ನು ಶಾಲಾ ಹಂತದಲ್ಲಿ ಆಯೋಜಿಸುವುದು.
 ಗಣಿತ ವಿಷಯದ ಕಾರ್ಯಾಗಾರಗಳನ್ನು ಏರ್ಪಡಿಸುವುದು.
 ಅನುಪಯುಕ್ತ ವಸ್ತುಗಳಿಂದ ಗಣಿತದ ಮಾದರಿಗಳನ್ನು ತಯಾರಿಸುವುದು.
 ಗಣಿತ ಮಾದರಿಗಳ ತಯಾರಿಕಾ ಸ್ಪರ್ಧೆ ಏರ್ಪಡಿಸುವುದು.
 ಗಣಿತಜ್ಞರು, ವಿಷಯ ಪರಿಣಿತರಿಂದ ಪ್ರಚಲಿತ ವಿದ್ಯಮಾನದ ಗಣಿತದ ಉಪನ್ಯಾಸಗಳನ್ನು ಏರ್ಪಡಿಸುವುದು.
 ಪ್ರತಿದಿನ ಗಣಿತದ ವಿಶೇಷತೆಯನ್ನು ಸೂಚನಾ ಫಲಕದಲ್ಲಿ ಬರೆಸುವುದು.

ಸಾಹಿತ್ಯ ಸಂಘ:
ಅರ್ಥ:
  ಸಾಹಿತ್ಯದ ಅಭಿರುಚಿಯನ್ನು ಬೆಳೆಸಲು, ಸೃಜನಶೀಲತೆಯನ್ನು ಹೊರಹೊಮ್ಮಿಸಲು ವಿದ್ಯಾರ್ಥಿಗಳೇ ಸ್ಥಾಪಿಸುವ ಸಂಘ.

ರಚನೆ:
  ಮುಖ್ಯಶಿಕ್ಷಕರು ಗೌರವ ಅಧ್ಯಕ್ಷರಾಗಿ, ಭಾಷಾ ಶಿಕ್ಷಕರು ಮಾರ್ಗದರ್ಶಕರಾಗಿ, ವಿದ್ಯಾಥಿಗಳೇ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದಶರ್ಿ, ಸದಸ್ಯರಾಗಿ ಸಂಘದ ಚಟುವಟಿಕೆಗಳನ್ನೂ ನಡೆಸುವುದು.

ನಾಮಕರಣ:
  ಸಂಘಕ್ಕೆ ಖ್ಯಾತ ಸಾಹಿತಿಯ ಹೆಸರನ್ನು ಇಡುವುದು.

ಉದ್ದೇಶಗಳು:
 ಭಾಷಾಭಿಮಾನ, ಸಾಹಿತ್ಯ ಅಭಿರುಚಿ ಬೆಳೆಸುವುದು.
 ಲೇಖನಗಳನ್ನು ಬರೆಯುವಂತೆ ಪ್ರೋತ್ಸಾಹಿಸುವುದು.
 ಭಾಷಣ ಮಾಡುವ ಕೌಶಲ ಬೆಳೆಸುವುದು.
 ಸೃಜನಶೀಲತೆಯನ್ನು ಬೆಳೆಸುವುದು.
 ಕವಿಕುಲಕೋಟಿಯನ್ನು ಪರಿಚಯಿಸುವುದು

ಚಟುವಟಿಕೆಗಳು:
 ರಸಪ್ರಶ್ನೆ ಕಾರ್ಯಕ್ರಮ
 ಪ್ರಬಂಧ ಸ್ಪರ್ಧೆ
 ಭಾಷಣ ಸ್ಪರ್ಧೆ
 ನಾಟಕ ಸ್ಪರ್ಧೆ
 ಚರ್ಚಾ ಸ್ಪರ್ಧೆ
 ಆಶುಭಾಷಣ ಸ್ಪರ್ಧೆ
 ಕಿರು ಲೇಖನಗಳ ಸ್ಪರ್ಧೆ
 ಸಾಹಿತಿಗಳ ಜನ್ಮ ದಿನಾಚರಣೆಗಳು
 ಸಾಹಿತಿಗಳ ಭಾವಚಿತ್ರಗಳನ್ನು ಬರೆಸುವುದು.
 ಪ್ರತಿದಿನ ಸಾಹಿತ್ಯದ ವಿಶೇಷತೆಯನ್ನು ಸೂಚನಾ ಫಲಕದಲ್ಲಿ ಬರೆಸುವುದು.
 ಸಾಹಿತಿಗಳಿಂದ ಉಪನ್ಯಾಸಗಳನ್ನು ಏರ್ಪಡಿಸುವುದು.

ಇತಿಹಾಸ ಸಂಘ:
ಅರ್ಥ:
  ವಿದ್ಯಾರ್ಥಿಗಳು ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಲು ತಾವೇ ಸ್ಥಾಪಿಸಿರುವ ಸಂಘ.

ರಚನೆ:
  ಮುಖ್ಯ ಶಿಕ್ಷಕರು, ಗೌರವ ಅಧ್ಯಕ್ಷರಾಗಿ, ಕಲಾ ಶಿಕ್ಷಕರು ಮಾರ್ಗದರ್ಶಕರಾಗಿ, ವಿದ್ಯಾರ್ಥಿಗಳೇ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಸದಸ್ಯರಾಗಿ ಸಂಘದ ಚಟುವಟಿಕೆಗಳನ್ನು ನಡೆಸುವುದು.

ನಾಮಕರಣ:
  ಸಂಘಕ್ಕೆ ಇತಿಹಾಸ ಪ್ರಸಿದ್ಧ ವ್ಯಕ್ತಿಯ ಹೆಸರನ್ನು ಇಡುವುದು.

ಉದ್ದೇಶಗಳು:
 ರಾಜಕೀಯ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು.
 ಐತಿಹಾಸಿಕ ಘಟನೆಗಳನ ಅರಿವು ಮೂಡಿಸುವುದು.
 ಜಗತ್ತಿನ ಪ್ರಚಲಿತ ವಿಷಯಗಳನ್ನು ತಿಳಿಸುವುದು.
 ಸಾಮಾಜಿಕ ಪಿಡುಗುಗಳ ಬಗ್ಗೆ ತಿಳಿಸುವುದು.
 ರಾಷ್ಟ್ರಪ್ರೇಮ ಬೆಳೆಸುವುದು.

ಚಟುವಟಿಕೆಗಳು:
 ಸ್ಥಳೀಯ ಐತಿಹಾಸಿಕ/ಧಾರ್ಮಿಕ ಕ್ಷೇತ್ರ ಭೇಟಿ ಮತ್ತು ವರದಿ ತಯಾರಿಕೆ.
 ಸ್ಥಳೀಯ ಐತಿಹಾಸಿಕ ಮಾಹಿತಿ ಸಂಗ್ರಹಣೆ, ವರದಿ ತಯಾರಿಕೆ.
 ಸ್ಥಳೀಯ ಸ್ವಾತಂತ್ರ್ಯಯೋಧರ ಸಂದರ್ಶನ; ಅನುಭವ ಹಂಚಿಕೆ.
 ಸ್ಥಳೀಯ ಐತಿಹಾಸಿಕ ವಸ್ತುಗಳ ಕುರಿತು ಜಾಗೃತಿ ಮತ್ತು ಸಂರಕ್ಷಣೆ ಕಾರ್ಯ.
 ರಾಷ್ಟ್ರೀಯ ಹಬ್ಬಗಳ ಆಚರಣೆ
 ರಾಷ್ಟ್ರನಾಯಕರ ದಿನಾಚರಣೆಗಳು
 ಸ್ವಾತಂತ್ರ್ಯಯೋಧರ ದಿನಾಚರಣೆಗಳು
 ಮಾಹಿತಿ ಸಂಗ್ರಹಣಾ ಚಟುವಟಿಕೆಗಳಾದ ನಾಣ್ಯಗಳು, ಅಂಚೆ ಚೀಟಿಗಳು, ಹಳೆ ಆಯುಧಗಳು, ಹಳೆಪಾತ್ರೆಗಳು, ಧ್ವಜಗಳು
 ಇವುಗಳ ಸಂಗ್ರಹ.
 ಪ್ರಚಲಿತ ವಿದ್ಯಮಾನದ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು.
 ಸಮಾಜ ವಿಜ್ಞಾನ ವಿಷಯದ ಮಾದರಿಗಳ ತಯಾರಿಕಾ ಸ್ಪರ್ಧೆ.
 ಚಿತ್ರ ಬಿಡಿಸುವ ಸ್ಪರ್ಧೆ.
 ರಸಪ್ರಶ್ನೆ, ಚರ್ಚಾ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಲೇಖನ ಸ್ಪರ್ಧೆಗಳನ್ನು ಏರ್ಪಡಿಸುವುದು.  ಪ್ರತಿದಿನ ಸಮಾಜ ವಿಜ್ಞಾನದ ವಿಶೇಷತೆಯನ್ನು ಸೂಚನಾ ಫಲಕದಲ್ಲಿ ಬರೆಸುವುದು.

 ಸಾಹಸ ಸಂಘ
ಅರ್ಥ:
  ಸಾಹಸ ಅಭಿರುಚಿ ಬೆಳೆಸಲು, ಯೋಧರಾಗುವ ಮನೋಭಾವ ಹೊಂದಲು, ದೇಶಪ್ರೇಮ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳೇ ಸ್ಥಾಪಿಸುವ ಸಂಘ.

ರಚನೆ:
  ಮುಖ್ಯ ಶಿಕ್ಷಕರು ಗೌರವ ಅಧ್ಯಕ್ಷರಾಗಿ, ದೈಹಿಕ ಶಿಕ್ಷಣ ಶಿಕ್ಷಕರು ಮಾರ್ಗದರ್ಶಕರಾಗಿ, ವಿದ್ಯಾರ್ಥಿಗಳೇ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಸದಸ್ಯರಾಗಿ ಸಂಘದ ಚಟುವಟಿಕೆಗಳನ್ನು ನಡೆಸುವುದು.

ನಾಮಕರಣ:
  ಸಂಘಕ್ಕೆ ಸಾಹಸಿಗರ ಹೆಸರನ್ನು ಇಡುವುದು.

ಉದ್ದೇಶಗಳು:
 ಸಾಹಸ ಮನೋಭಾವ ಹೊಂದುವಂತೆ ಮಾಡುವುದು.
 ಯೋಧರ ಸಾಹಸಗಳನ್ನು ಮೆಚ್ಚುವುದು.
 ಪ್ರಾಣಾಪಾಯದಿಂದ ಪಾರಾಗುವ ತಂತ್ರಗಳನ್ನು ಕಲಿಸುವುದು.
 ಪ್ರಕೃತಿ ವಿಕೋಪಗಳ ಬಗ್ಗೆ ಅರಿವು ಮೂಡಿಸುವುದು.

ಚಟುವಟಿಕೆಗಳು:
 ಸ್ಕೌಟ್ ಮತ್ತು ಗೈಡ್ ಸೇವಾದಳ ಸ್ಥಾಪನೆ.
 ಕಾಲ್ನಡಿಗೆಯಲ್ಲಿ ಕೆಲವು ಸಂದೇಶಗಳನ್ನು ತಿಳಿಸುವ ಜಾಥಾ ಕಾರ್ಯಕ್ರಮಗಳು.
 ಬೆಂಕಿ ನಂದಿಸುವ ಪ್ರಾತ್ಯಕ್ಷಿಕೆ.
 ಬೆಟ್ಟ ಹತ್ತುವುದು ಮುಂತಾದ ಸಾಹಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
 ಹುತಾತ್ಮರ ದಿನಾಚರಣೆಗಳು.
 ಸ್ವಾತಂತ್ರ್ಯಯೋಧರ ಉಪನ್ಯಾಸ ಕಾರ್ಯಕ್ರಮಗಳು.
 ಸಾಹಸಿಗರ ಮೇಲಿನ ಉಪನ್ಯಾಸ ಕಾರ್ಯಕ್ರಮಗಳು.
 ಪ್ರಾಣಾಪಾಯದಿಂದ ಪಾರಾಗುವ ತಂತ್ರಗಳ ಉಪನ್ಯಾಸಗಳು.

ಇಕೋಕ್ಲಬ್
ಅರ್ಥ:
  ಜೀವ ವಿಜ್ಞಾನದಲ್ಲಿ ಆಸಕ್ತಿಯಿಂದ ಕಲಿಯಲು, ಪರಿಸರ ಕಾಳಜಿ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳೇ ಸ್ಥಾಪಿಸುವ ಸಂಘ.

ರಚನೆ:
  ಮುಖ್ಯಶಿಕ್ಷಕರು ಗೌರವ ಅಧ್ಯಕ್ಷರಾಗಿ, ಜೀವ ವಿಜ್ಞಾನ ಶಿಕ್ಷಕರು ಸಂಚಾಲಕರಾಗಿ, ವಿದ್ಯಾರ್ಥಿಗಳ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಸದಸ್ಯರಾಗಿ ಸಂಘದ ಚಟುವಟಿಕೆಗಳನ್ನು ನಡೆಸುವುದು.

ನಾಮಕರಣ:
  ಸಂಘಕ್ಕೆ ಜೀವ ವಿಜ್ಞಾನಿಯ ಹೆಸರನ್ನು ಇಡುವುದು.

ಉದ್ದೇಶಗಳು:
 ಪರಿಸರದಲ್ಲಿನ ಸ್ವಚ್ಛತೆ, ನೈರ್ಮಲ್ಯದ ಬಗ್ಗೆ ತಿಳಿಸುವುದು.
 ಪರಿಸರ ಮಾಲಿನ್ಯದಿಂದ ಜೀವ ವೈವಿಧ್ಯತೆಯ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ತಿಳುವಳಿಕೆಉಂಟುಮಾಡುವುದು.
 ಗಿಡಗಳನ್ನು ಬೆಳೆಸುವ, ಸಂರಕ್ಷಿಸುವ ಮನೋಭಾವ ಬೆಳೆಸುವುದು.
 ಔಷಧಿ ಸಸ್ಯಗಳ ಸಂರಕ್ಷಣೆ ಬಗ್ಗೆ ತಿಳಿವಳಿಕೆ ಮೂಡಿಸುವುದು
 ಕಸದ ನಿರ್ವಹಣೆ ಬಗ್ಗೆ ಜಾಗೃತಿ ಮೂಡಿಸುವುದು.
 ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು.

ಚಟುವಟಿಕೆಗಳು:
 ಶಾಲಾ ಕೈತೋಟ ನಿರ್ಮಾಣ
 ಅರಣ್ಯ ಪ್ರದೇಶಗಳಿಗೆ ಭೇಟಿ
 ಗಿಡಗಳನ್ನು ನೆಟ್ಟು, ಸಂರಕ್ಷಿಸುವುದು.
 ಔಷಧಿ ಸಸ್ಯಗಳ ಬಗ್ಗೆ ಉಪನ್ಯಾಸ.
 ವಿವಿಧ ಜಾತಿಯ ಹೂಗಳ ಪ್ರದರ್ಶನ.
 ಸಸ್ಯಗಳ ಹರ್ಬೆರಿಯಂ ತಯಾರಿಸುವುದು.
 ವಿವಿಧ ಜಾತಿಯ ಬೀಜಗಳು, ಎಲೆಗಳನ್ನು ಸಂಗ್ರಹಿಸುವುದು.
 ಸಸ್ಯಗಳ ಚಿತ್ರ ಬರೆಸುವುದು, ರಸಪ್ರಶ್ನೆ, ಪ್ರಬಂಧ, ಭಾಷಣ, ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸುವುದು.
 ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ.
 ಪಕ್ಷಿಧಾಮಗಳಿಗೆ ಪ್ರವಾಸ ಏರ್ಪಡಿಸುವುದು.
 ಜೀವ ವೈವಿಧ್ಯಗಳನ್ನು ಕುರಿತು ವಿದ್ಯಾರ್ಥಿಗಳಿಂದ ಯೋಜನೆಗಳನ್ನು ತಯಾರಿಸಿ ಮಂಡಿಸುವುದು.

ಗ್ರಾಹಕ ಕ್ಲಬ್
ಅರ್ಥ:
  ಮಕ್ಕಳು ತಾವು ದಿನನಿತ್ಯ ಬಳಸುವ ವಸ್ತುಗಳ ಗುಣಮಟ್ಟ ಹಾಗೂ ಇವುಗಳ ಬೆಲೆಗಳ ಬಗ್ಗೆ ತಿಳುವಳಿಕೆ ಹೊಂದಲು ಸ್ಥಾಪಿಸುವ ಸಂಘ.

ರಚನೆ:
  ಸಕರ್ಾರದಿಂದ ಅಂಗೀಕೃತವಾದ ಮಂಡಳಿಗಳಿಂದ ಗುರುತಿಸಲ್ಪಟ್ಟ ಪ್ರೌಢಶಾಲೆಗಳಲ್ಲಿ ಗ್ರಾಹಕ ಕ್ಲಬ್ ತೆರೆಯಬಹುದು. ಕನಿಷ್ಟ 50 ಜನ ಸದಸ್ಯರಿರಬೇಕು. ಸದಸ್ಯರು ಗ್ರಾಹಕರ ಹಿತರಕ್ಷಣೆ ಮತ್ತು ಕಲ್ಯಾಣ ಕಾರ್ಯದಲ್ಲಿ ತಮ್ಮ ಸಮಯ ಮತ್ತು ಸೇವೆಯನ್ನು ಸಮಪರ್ಿಸಿಕೊಳ್ಳಬೇಕಾಗುತ್ತದೆ. ಶಾಲೆಯಲ್ಲಿ ಒಂದೇ ಗ್ರಾಹಕ ಕ್ಲಬ್ ಇರಬೇಕು. ಪ್ರತಿ ಶಾಲೆಯ ಗ್ರಾಹಕ ಕ್ಲಬ್ನ ಜವಾಬ್ದಾರಿಯನ್ನು ಕ್ರಿಯಾ ಶೀಲ ಒಬ್ಬ ಶಿಕ್ಷಕರು ಸಂಚಾಲಕರಾಗಿ ಕಾರ್ಯನಿರ್ವಹಿಸಬೇಕು. ಮುಖ್ಯ ಶಿಕ್ಷಕರು ಗೌರವ ಅಧ್ಯಕ್ಷರಾಗಿದ್ದು, ವಿದ್ಯಾರ್ಥಿಗಳು ಉಳಿದಂತೆ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ.

 ಉದ್ದೇಶಗಳು:
 ಗ್ರಾಹಕ ಸಂರಕ್ಷಣಾ ಕಾಯಿದೆ 1986ರಲ್ಲಿ ಬರುವ ಗ್ರಾಹಕರ ಹಕ್ಕುಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡುವುದಾಗಿದೆ. ಹಾಗೂ ಯುವಕರಲ್ಲೂ ಸಹ ಗ್ರಾಹಕ ಹಕ್ಕುಗಳ ರಕ್ಷಣೆಯ ಬಗ್ಗೆ ಅರಿವು ಮೂಡಿಸಿ ಗ್ರಾಹಕ ಚಳುವಳಿಯನ್ನು ದೇಶದಾದ್ಯಂತ ಹೆಚ್ಚು ಬಲಯುತಗೊಳಿಸುವುದಾಗಿರುತ್ತದೆ.
 ವಿದ್ಯಾರ್ಥಿಗಳು ಗ್ರಾಹಕ ಕ್ಲಬ್ನಿಂದ ಕಲಿತ ವಿಷಯಗಳನ್ನು ಸಂಬಂಧಿಸಿದ ವ್ಯಾಪ್ತಿಯಲ್ಲಿನ ಸಹಪಾಠಿಗಳು ಹಾಗೂ ಜನರಲ್ಲಿ ಪ್ರಚಾರಗೊಳಿಸುವುದು. ಕ್ಲಬ್ನ ಸದಸ್ಯರು ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುವುದು.
 ಗ್ರಾಹಕ ಹಿತರಕ್ಷಣಾ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಜಾರಿಗೆ ತರಲು ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು, ಸಹಪಾಠಿ ವಿದ್ಯಾರ್ಥಿಗಳನ್ನು ಮತ್ತು ಜನರನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸುವುದು.

ಚಟುವಟಿಕೆಗಳು:
 ಡಿಸೆಂಬರ್ ತಿಂಗಳ 24ನೇ ದಿನಾಂಕದಂದು ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಆಚರಿಸುವುದು.
 ಮಾಚರ್್ ತಿಂಗಳ 15ನೇ ದಿನಾಂಕದಂದು ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆಯನ್ನು ಆಚರಿಸುವುದು.
 ಗ್ರಾಹಕರ ಹಿತರಕ್ಷಣೆ ಹಾಗೂ ಕಲ್ಯಾಣಗಳಿಗೆ ಸಂಬಂಧಿಸಿದಂತೆ ದೃಶ್ಯಮಾಧ್ಯಮಗಳು, ಭಿತ್ತಿ ಪತ್ರಗಳು, ಉಪನ್ಯಾಸ, ವಸ್ತು ಪ್ರದರ್ಶನ, ಬೀದಿ ನಾಟಕಗಳು, ಚಚರ್ಾ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಲೇಖನ ಬರೆಯುವ ಸ್ಪರ್ಧೆ, ರಸಪ್ರಶ್ನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

ರೆಡ್ ರಿಬ್ಬನ್ ಕ್ಲಬ್(ಆರ್.ಆರ್.ಸಿ)
ಅರ್ಥ:
  ಹದಿಹರೆಯದವರಿಗಾಗಿ ಶಿಕ್ಷಣದ ಪರಿಕಲ್ಪನೆಯನ್ನು ಪರಿಣಾಮಕಾರಿಯಾಗಿ ಸಂಯೋಜಿಸಿ, ಬೋಧನಾ ಕಲಿಕಾ ಭಾಗವನ್ನಾಗಿ ಅಳವಡಿಸಿ, ವಿದ್ಯಾರ್ಥಿಗಳಲ್ಲಿ ಏಡ್ಸ್ ರೋಗದ ಬಗ್ಗೆ ಅರಿವು ಮೂಡಿಸಲು ಸ್ಥಾಪನೆ ಮಾಡಿರುವ ಸಂಘ.

ರಚನೆ:  
ಮುಖ್ಯ ಶಿಕ್ಷಕರು ಗೌರವ ಅಧ್ಯಕ್ಷರಾಗಿ, ಜೀವ ವಿಜ್ಞಾನದ ಶಿಕ್ಷಕರ ಸಂಚಾಲಕರಾಗಿ ವಿದ್ಯಾರ್ಥಿಗಳೇ ಅಧ್ಯಕ್ಷ, ಉಪಾಧ್ಯಕ್ಷರ, ಕಾರ್ಯದಶರ್ಿ, ಸದಸ್ಯರಾಗಿ ಸಂಘದ ಚಟುವಟಿಕೆಗಳನ್ನು ನಡೆಸುವುದು.

ಉದ್ದೇಶಗಳು:
 ಹದಿಹರೆಯದವರ ಸಂತಾನೋತ್ಪತ್ತಿ. ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು.ಹೆಚ್.ಐ.ವಿ. ಏಡ್ಸ್ ಮಾದಕ ದ್ರವ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು.
 ಹದಿಹರೆಯದಲ್ಲಿನ ವಿವಿಧ ಬೆಳವಣಿಗೆಯ ಬಗ್ಗೆ ಇರುವ ಮೂಢನಂಬಿಕೆ ಮತ್ತು ಕಲ್ಪನೆಗಳ ಬಗ ್ಗೆ ಜಾಗೃತಿ ಮೂಡಿಸುವುದು.
 ಮಾದಕ ದ್ರವ್ಯಗಳ ದುರ್ಬಳಕೆಯ ಬಗ್ಗೆ ಒಳ್ಳೆಯ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವ ಮನೋಭಾವ ಬೆಳಸುವುದು.
 ಏಡ್ಸ್ ರೋಗಿಗಳ ಬಗ್ಗೆ ಧನಾತ್ಮಕ ಮನೋಭಾವ ಹೊಂದುವಂತೆ ಮಾಡುವುದು.
 ಭಿನ್ನ ಲಿಂಗಗಳನ್ನು ಗೌರವದಿಂದ ನೋಡುವಂತೆ ಮಾಡುವುದು.

ಚಟುವಟಿಕೆಗಳು:
 ಪ್ರಶ್ನೆ ಪೆಟ್ಟಿಗೆ
 ಗುಂಪು ಚರ್ಚೆ
 ಮೌಲ್ಯ ಸ್ವಷ್ಟೀಕರಣ
 ವ್ಯಕ್ತಿ ಅಧ್ಯಯನ
 ಚರ್ಚಾ ಸ್ಪರ್ಧೆ
 ಬಣ್ಣ ಹಾಕುವ ಭಿತ್ತಿ ಚಿತ್ರ ಸ್ಪರ್ಧೆ
 ಪ್ರಬಂಧ ಸ್ಪರ್ಧೆ
 ರಸಪ್ರಶ್ನೆ ಸ್ಪರ್ಧೆ
 ವೈದ್ಯರಿಂದ ಉಪನ್ಯಾಸಕಗಳು
 ದಾದಿಯರಿಂದ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವ ಸಂವಾದ ಕಾರ್ಯಕ್ರಮ.
 ಪೋಷಕರೊಂದಿಗೆ ಸಂವಾದ ಕಾರ್ಯಕ್ರಮ.
 ಏಡ್ಸ್ ಕುರಿತ ನಾಟಕಗಳು.

 ಕ್ರೀಡಾ ಸಂಘ:
ಅರ್ಥ:
 ಕ್ರೀಡಾ ಅಭಿಮಾನ ಬೆಳೆಯಲು ವಿದ್ಯಾರ್ಥಿಗಳೇ ಸ್ಥಾಪಿಸುವ ಸಂಘ

ರಚನೆ:
 ಮುಖ್ಯ ಶಿಕ್ಷಕರು ಗೌರವ ಅಧ್ಯಕ್ಷರಾಗಿ, ದೈಹಿಕ ಶಿಕ್ಷಣ ಶಿಕ್ಷಕರು ಮಾರ್ಗದರ್ಶಕರಾಗಿ, ವಿದ್ಯಾರ್ಥಿಗಳೇ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಸದಸ್ಯರಾಗಿ ಸಂಘದ ಚಟುವಟಿಕೆಗಳನ್ನು ನಡೆಸುವುದು.

ನಾಮಕರಣ:
ಕ್ರೀಡಾ ಪಟುವಿನ ಹೆಸರನ್ನು ಇಡುವುದು

ಉದ್ದೇಶಗಳು:
 ಕ್ರೀಡಾ ಮನೋಭಾವ ಬೆಳೆಸುವುದು.
 ಕ್ರೀಡೆಗಳಲ್ಲಿ ಪ್ರತಿಯೊಬ್ಬರು ಭಾಗವಹಿಸುವಂತೆ ಮಾಡುವುದು.
 ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆ ಅಗತ್ಯ ಎಂಬುದರ ಅರಿವು ಮೂಡಿಸುವುದು.

ಚಟುವಟಿಕೆಗಳು:
 ವೈಯಕ್ತಿಕ ಆಟಗಳನ್ನು ಸಂಘಟಿಸುವುದು.
 ಗುಂಪು ಆಟಗಳನ್ನು ಸಂಘಟಿಸುವುದು.
 ಶಾಲಾ ಮಟ್ಟದಲ್ಲಿ ಆಟಗಳನ್ನು ಸಂಘಟಿಸುವುದು.
 ಕ್ರೀಡಾ ಮಾದರಿಗಳ ತಯಾರಿಕಾ ಸ್ಪರ್ಧೆಗಳನ್ನು ಏರ್ಪಡಿಸುವುದು.
 ಕ್ರೀಡಾ ದಿನಾಚರಣೆ ಆಚರಿಸುವುದು.
 ಕ್ರೀಡಾ ಪಟುಗಳ ಜನ್ಮ ದಿನಾಚರಣೆಗಳು.
 ಪ್ರತಿದಿನ ಕ್ರೀಡಾ ವಿಶೇಷತೆಯನ್ನು ಸೂಚನಾಫಲಕದಲ್ಲಿ ಬರೆಸುವುದು.
 ಕ್ರೀಡಾ ಹಬ್ಬವನ್ನು ಆಚರಿಸುವುದು.

 ವಿದ್ಯಾರ್ಥಿ ಸಂಘ
ಅರ್ಥ:
  ಸಾಮಾಜಿಕ ನಾಯಕತ್ವ ಬೆಳವಣಿಗೆ ಉಂಟು ಮಾಡಲು ವಿದ್ಯಾರ್ಥಿಗಳೇ ಸ್ಥಾಪಿಸುವ ಸಂಘ.

ರಚನೆ:
  ಮುಖ್ಯ ಶಿಕ್ಷಕರು ಗೌರ ಅಧ್ಯಕ್ಷರಾಗಿ ಒಬ್ಬ ಶಿಕ್ಷಕರು ಮಾರ್ಗದರ್ಶಕರಾಗಿ, ವಿದ್ಯಾರ್ಥಿಗಳೇ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಸದಸ್ಯರಾಗಿ ಸಂಘದ ಚಟುವಟಿಕೆಗಳನ್ನು ನಡೆಸುವುದು. ಸದಸ್ಯತ್ವದ ವಿವಿಧ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ವಿದ್ಯಾರ್ಥಿಗಳನ್ನು ತಪ್ಪದೇ ಸೇರಿಸುವುದು.

ಉದ್ದೇಶಗಳು
 ಸಹಕಾರ ಒಗ್ಗಟ್ಟು, ನಾಯಕತ್ವ ಗುಣಗಳನ್ನು ಬೆಳಸುವುದು.
 ರಾಜಕೀಯ ಮೌಲ್ಯಗಳನ್ನು ಬೆಳಸುವುದು.
ಸಾಮಾಜಿಕ ಮೌಲ್ಯಗಳನ್ನು ಬೆಳಸುವುದು.
 ಪ್ರಜಾಪ್ರಭುತ್ವ ತತ್ವಗಳನ್ನು ಬೆಳೆಸುವುದು.
 ಸಹಕಾರ, ಒಗ್ಗಟ್ಟು, ನಾಯಕತ್ವ ಗುಣಗಳನ್ನು ಬೆಳೆಸುವುದು.
 ರಾಜಕೀಯ ಮೌಲ್ಯಗಳನ್ನು ಬೆಳೆಸುವುದು.
 ನೈತಿಕ ಮೌಲ್ಯಗಳನ್ನು ಬೆಳೆಸುವುದು.
 ಸಾಮಾಜಿಕ ಮೌಲ್ಯಗಳನ್ನು ಬೆಳೆಸುವುದು.
 ಪ್ರಜಾಪ್ರಭುತ್ವ ತತ್ವಗಳನ್ನು ಬೆಳೆಸುವುದು.

ಚಟುವಟಿಕೆಗಳು:
 ಶಾಲಾ ಮಂತ್ರಿಮಂಡಲದ ರಚನೆ. (ವಿವಿಧ ಕ್ಲಬ್ಗಳಲ್ಲಿ ಅಧ್ಯಕ್ಷರಾಗಿರುವ ವಿದ್ಯಾರ್ಥಿ ನಾಯಕರು ಇಲ್ಲಿ ಸಚಿವರಾಗುವಂತೆ ವ್ಯವಸ್ಥೆಗೊಳಿಸುವುದು ಹಾಗೂ ವಿದ್ಯಾರ್ಥಿ ಸಂಘದ ಚಟುವಟಿಕೆಗಳನ್ನು ಆಯಾ ಸಂಘದ ನೇತೃತ್ವದಲ್ಲಿ ಮತ್ತು ಇತರ ಸಂಘಗಳ ಸಹಕಾರದಿಂದ ನಡೆಸುವುದು)
 ರಾಷ್ಟ್ರೀಯ ಹಬ್ಬಗಳ ಆಚರಣೆ.
 ಎನ್.ಎಸ್.ಎಸ್.ಶಿಬಿರಗಳನ್ನು ಸಂಘಟಿಸುವುದು.
 ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದು.
 ಆರೋಗ್ಯ ಶಿಬಿರಗಳನ್ನು ಏರ್ಪಡಿಸುವುದು.
 ನೈತಿಕ ಮೌಲ್ಯಗಳಿಗೆ ಸಂಬಂಧಿಸಿದ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸುವುದು.
 ಶಾಲಾ ಹಬ್ಬವನ್ನು ಆಚರಿಸುವುದು.