Tuesday 25 May 2021

ವ್ಯವಹಾರ ಅಧ್ಯಯನ



 ವ್ಯವಹಾರ ಅಧ್ಯಯನ
ಅಧ್ಯಾಯ-2.
ವ್ಯವಹಾರ – ಅರ್ಥ ಮತ್ತು ಪ್ರಾಮುಖ್ಯತೆ.
ವ್ಯವಹಾರದ ಅರ್ಥ: ವಸ್ತುಗಳ ಉತ್ಪಾದನೆ ಮತ್ತು ಸೇವೆಗಳನ್ನು ಗ್ರಾಹಕರಿಗೆ ಪೂರೈಸುವ ಒಂದು ಆರ್ಥಿಕ ಚಟುವಟಿಕೆಯೇ ವ್ಯವಹಾರ.
ವ್ಯವಹಾರವು ಮುಖ್ಯವಾಗಿ ಎರಡು ಉದ್ದೇಶಗಳಿಂದ ಕೂಡಿದೆ.
1.ಆರ್ಥಿಕ ಉದ್ದೇಶಗಳು 2.ಸಾಮಾಜಿಕ ಉದ್ದೇಶಗಳು
1.ಆರ್ಥಿಕ ಉದ್ದೇಶಗಳು ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ.
*ವ್ಯವಹಾರವು ನ್ಯಾಯಯುಕ್ತ ಲಾಭಗಳಿಕೆ.
*ವ್ಯವಹಾರಸ್ಥನು ಸುಖಮಯ ಜೀವನ ನಡೆಸುವಷ್ಟು ಲಾಭವಿರಬೇಕು.
*ವ್ಯವಹಾರವು ವಸ್ತುಗಳನ್ನು ಮತ್ತು ಸೇವೆಗಳನ್ನು ಗ್ರಾಹಕರಿಗೆ ಪೂರೈಸುತ್ತದೆ ಮತ್ತು ಗ್ರಾಹಕರನ್ನು ಸೃಷ್ಟಿಸುತ್ತದೆ.
*ವ್ಯವಹಾರವು ಹೊಸ ಹೊಸ ಸಂಶೋಧನೆಗಳ ಮೂಲಕ ಉತ್ಪಾದನೆಯಲ್ಲಿ ಬದಲಾವಣೆಗಳನ್ನು ತರುತ್ತದೆ.

2.ಸಾಮಾಜಿಕ ಉದ್ದೇಶಗಳು ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ.
*ವ್ಯವಹಾರವು ದೇಶದ ಜನರಿಗೆ ಉದ್ಯೋಗವನ್ನು ಕಲ್ಪಿಸುತ್ತದೆ.
*ಸಂಬಳ ಅಥವಾ ಮಜೂರಿಗಳ ಮೂಲಕ ವರಮಾನ ಕೊಟ್ಟು ಜನರ ಜೀವನಮಟ್ಟ ಸುಧಾರಿಸಲು ಸಹಾಯ ಮಾಡುತ್ತದೆ.
*ತೆರಿಗೆ ಮತ್ತು ಕರ ಪಾವತಿ ಮಾಡುವುದರ ಮೂಲಕ ಸರ್ಕಾರದ ಆದಾಯ ಹೆಚ್ಚಿಸಿ ರಾಷ್ಟ್ರದ ಅಭಿವೃದ್ದಿಗೆ ನೆರವಾಗುತ್ತದೆ.
*ಶಾಲಾ-ಕಾಲೆಜುಗಳು , ಆಸ್ಪತ್ರೆಗಳು , ಸಮುದಾಯ ಭವನಗಳನ್ನು ನಿರ್ಮಿಸಿ ಅವುಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿರುತ್ತದೆ.
*ಉದ್ಯಾನವನ , ಕ್ರೀಡಾಂಗಣಗಳ ನಿರ್ವಹಣೆ ಮೂಲಕ ಸಮಾಜ ಕಲ್ಯಾಣಕ್ಕಾಗಿ ಶ್ರಮಿಸುತ್ತದೆ.
ವ್ಯಾಪಾರ
ವ್ಯಾಪಾರದ ಅರ್ಥ:
ಸರಕುಗಳನ್ನು ಕೊಳ್ಳುವುದು ಮತ್ತು ಗ್ರಾಹಕರಿಗೆ ಮಾರುವುದನ್ನು ವ್ಯಾಪಾರ ಎನ್ನುತ್ತೇವೆ.
ವ್ಯಾಪಾರವನ್ನು ಮೂರು ವಿಧಗಳಾಗಿ ವಿಂಗಡಿಸಬಹುದು.ಅವುಗಳೆಂದರೆ,
1.ಆಂತರೀಕ ವ್ಯಾಪಾರ (ದೇಶೀಯ ವ್ಯಾಪಾರ)
2.ವಿದೇಶೀ ವ್ಯಾಪಾರ (ಅಂತರರಾಷ್ಟ್ರೀಯ ವ್ಯಾಪಾರ)
3.ಪುನರ್ ರಫ್ತು ವ್ಯಾಪಾರ
1.ಆಂತರೀಕ ವ್ಯಾಪಾರ (ದೇಶೀಯ ವ್ಯಾಪಾರ) :-
ಒಂದು ದೇಶದ ಎಲ್ಲೆಯೊಳಗೆ ನಡೆಯುವ ವ್ಯಾಪಾರವೇ ಆಂತರೀಕ ವ್ಯಾಪಾರ.
*ಈ ವ್ಯಾಪಾರವು ಚಿಲ್ಲರೆ ಮಾರಾಟಗಾರರು ಅಥವಾ ಸಗಟು ವ್ಯಾಪಾರಿಗಳಿಂದ ನಡೆಯುತ್ತದೆ.
*ಚಿಲ್ಲರೆ ವ್ಯಾಪಾರಿಗಳು ವಸ್ತುಗಳ ವಿತರಣೆಯ ಕೊನೆಯ ಕೊಂಡಿಯಾಗಿದ್ದಾರೆ.

ಅ)ಆಂತರೀಕ ವ್ಯಾಪಾರದಲ್ಲಿ ಚಿಲ್ಲರೆ ಮಾರಾಟಗಾರರ ಪಾತ್ರ/ಪ್ರಾಮುಖ್ಯತೆ:-
*ಇವರು ಸಗಟು ವ್ಯಾಪಾರಿಗಳಿಂದ ದೊಡ್ಡ ಪ್ರಮಾಣದಲ್ಲಿ ಸರಕುಗಳನ್ನು ತಂದು ಸಣ್ಣ ಪ್ರಮಾಣದಲ್ಲಿ ಗ್ರಾಹಕರಿಗೆ ಮಾರುತ್ತಾರೆ.
*ಗ್ರಾಹಕರ ಇಷ್ಟದಂತೆ ಸರಕುಗಳನ್ನು ವಿಂಗಡಿಸಿ ಒದಗಿಸುತ್ತಾರೆ.
*ಮಾರುಕಟ್ಟೆಗೆ ಹೊಸದಾಗಿ ಬಂದ ವಸ್ತುಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ಒದಗಿಸುತ್ತಾರೆ.
*ಗ್ರಾಹಕರಿಗೆ ಒಂದು ನಿರ್ದಿಷ್ಟ ವಸ್ತು ದೊರೆಯದಿದ್ದರೆ ಪರ್ಯಾಯ ವಸ್ತುಗಳ ಬಗ್ಗೆ ತಿಳಿಸುತ್ತಾರೆ.
*ಅನೇಕ ಸಾರಿ ಉಂಟಾಗುವ ವ್ಯಾಪಾರ ನಷ್ಟಗಳನ್ನು ತಾವೇ ಭರಿಸುತ್ತಾರೆ.
ಚಿಲ್ಲ್ಲರೆ ವ್ಯಾಪಾರವು ಎರಡು ರೀತಿಯಲ್ಲಿ ನಡೆಯುತ್ತದೆ:-
1.ಖಾಯಂ ಅಂಗಡಿಗಳು.
2.ಸಂಚಾರಿ ಅಂಗಡಿಗಳು.
1.ಖಾಯಂ ಅಂಗಡಿಗಳು:-ಇವರು ಒಂದು ನಿರ್ದಿಷ್ಟ ಜಾಗದಲ್ಲಿ ಅಂಗಡಿಗಳನ್ನು ತೆರೆದು ವಸ್ತುಗಳನ್ನು ಮಾರುತ್ತಾರೆ.
2.ಸಂಚಾರಿ ಅಂಗಡಿಗಳು:-ಇವರು ಒಂದು ನಿರ್ದಿಷ್ಟ ಜಾಗದಲ್ಲಿ ವ್ಯಾಪಾರ ಮಾಡುವುದಿಲ್ಲ.
ಸಂಚಾರಿ ವ್ಯಾಪಾರಿಗಳಲ್ಲಿ ಕಂಡುಬರುವ ವಿಧಗಳು:
ಅ)ತಲೆ ಹೊರೆ ವ್ಯಾಪಾರಿಗಳು  
ಆ)ತಳ್ಳು ಗಾಡಿ ವ್ಯಾಪಾರಿಗಳು  
ಇ)ರಸ್ತೆ ಬದಿ ವ್ಯಾಪಾರಿಗಳು  
ಈ)ಸಂತೆ ವ್ಯಾಪಾರಿಗಳು.
ಅ)ತಲೆ ಹೊರೆ ವ್ಯಾಪಾರಿಗಳು :- ಇವರು ಸರಕುಗಳನ್ನು ತಲೆಯ ಮೇಲೆ ಹೊತ್ತು ಬೀದಿಬೀದಿಗಳಲ್ಲಿ ಸುತ್ತಿ ಮನೆ ಬಾಗಿಲುಗಳಿಗೆ ಬಂದು ಸರಕುಗಳನ್ನು ಮಾರುತ್ತಾರೆ.
ಉದಾ:ತರಕಾರಿ ಮಾರುವವರು , ಹೂ ಮಾರುವವರು.
ಆ)ತಳ್ಳು ಗಾಡಿ ವ್ಯಾಪಾರಿಗಳು :-ಇವರು ಅನೇಕ ಸರಕುಗಳನ್ನು ತಳ್ಳುಗಾಡಿಗಳಲ್ಲಿ ತುಂಬಿ ಬೀದಿಬೀದಿಗಳಲ್ಲಿ ಸುತ್ತಿ ಮನೆ ಬಾಗಿಲುಗಳಿಗೆ ಬಂದು ಸರಕುಗಳನ್ನು ಮಾರುತ್ತಾರೆ.
ಇ)ರಸ್ತೆ ಬದಿ ವ್ಯಾಪಾರಿಗಳು :-ಇವರು ಹೆಚ್ಚು ಜನಜಂಗುಳಿ ಇರುವ ಬೀದಿಗಳ ಮೂಲೆಗಳಲ್ಲಿ ಅಥವಾ ರಸ್ತೆ ಬದಿಗಳಲ್ಲಿ ತಮ್ಮ ಸರಕುಗಳನ್ನು ಹೆಡಿಕೊಂಡು ವ್ಯಾಪಾರ ಮಾಡುತ್ತಾರೆ.
ಈ)ಸಂತೆ ವ್ಯಾಪಾರಿಗಳು :-ಕೆಲವು ಊರುಗಳಲ್ಲಿ ವಾರಕ್ಕೊಮ್ಮೆ ಸಂತೆ ನಡೆಯುತ್ತದೆ.ವಿವಿಧ ವಸ್ತುಗಳ ವ್ಯಾಪಾರಿಗಳು ತಮ್ಮ ವಸ್ತುಗಳನ್ನು ಅಲ್ಲಿಗೆ ಕೊಂಡೊಯ್ದು ಜನರಿಗೆ ಮಾರುತ್ತಾರೆ.
ಸಂತೆ ವ್ಯಾಪಾರಿಗಳ ವೈಶಿಷ್ಟ್ಯತೆಗಳು:-
*ಗ್ರಾಮಗಳ ಜನರು ತಾವು ಬೆಳೆದ ಅಥವಾ ಉತ್ಪಾದಿಸಿದ ವಸ್ತುಗಳನ್ನು ಸಂತೆಗಳಿಗೆ ಕೊಂಡೊಯ್ದು ಮಾರುತ್ತ್ತಾರೆ.
ಉದಾ:-ತರಕಾರಿ , ಮೊಟ್ಟೆ ,. ಬೆಣ್ಣೆ , ತುಪ್ಪ , ಕಬ್ಬಿಣದ ಉಪಕರಣಗಳು , ಬುಟ್ಟಿಗಳು.
*ಇವುಗಳ ಮಾರಾಟದಿಂದ ಬಂದ ಹಣದಿಂದ ತಮಗೆ ಬೇಕಾದ ವಸ್ತುಗಳನ್ನು ಕೊಳ್ಳುತ್ತಾರೆ.
*ಇವರು ಕೆಲವು ಊರುಗಳಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗಳಲ್ಲೂ ತಮ್ಮ ವಸ್ತುಗಳನ್ನು ಮಾರುತ್ತಾರೆ.
ಆ)ಸಗಟು ವ್ಯಾಪಾರ :- ಸಗಟು ವ್ಯಾಪಾರಿಗಳು ಸರಕುಗಳನ್ನು ಉತ್ಪಾದಕರಿಂದ ಹೆಚ್ಚು ಪ್ರಮಾಣದಲ್ಲಿ ಕೊಂಡು , ಸಣ್ಣ ಪರಮಾಣದಲ್ಲಿ ಚಿಲ್ಲರೆ ವ್ಯಾಪಾರಿಗಳಿಗೆ ಮಾರುತ್ತಾರೆ.
ಆಂತರೀಕ ವ್ಯಾಪಾರದಲ್ಲಿ ಸಗಟು ವ್ಯಾಪಾರಿಗಳ ಪಾತ್ರ/ಪ್ರಾಮುಖ್ಯತೆ:-
*ಇವರು ಚಿಲ್ಲರೆ ವ್ಯಾಪಾರಿಗಳಿಗೆ ಸಾಲ ಸೌಲಭ್ಯವನ್ನು ಒದಗಿಸುತ್ತಾರೆ.
*ಮಾರುಕಟ್ಟೆಯ ವಿವರಗಳನ್ನು ಚಿಲ್ಲರೆ ವ್ಯಾಪಾರಿಗಳಿಗೆ ಕೊಡುತ್ತಾರೆ.
*ಹೆಚ್ಚು ಲಾಭದ ಪ್ರಮಾಣ ಇಟ್ಟಿರುವುದಿಲ್ಲ.
*ಉತ್ಪಾದಕರಿಗೆ ಮಾರುಕಟ್ಟೆಯ ವಿವರಗಳನ್ನು , ಬೆಲೆಯ ಏರಿಳಿತಗಳನ್ನು ಗ್ರಾಹಕಲರ ಇಷ್ಟಗಳನ್ನು ತಿಳಿಸುತ್ತಾರೆ.
*ಉತ್ಪಾದಕರ ಪರವಾಗಿ ಜಾಹೀರಾತು ಮಾಡುತ್ತಾರೆ.
2.ವಿದೇಶೀ ವ್ಯಾಪಾರ (ಅಂತರರಾಷ್ಟ್ರೀಯ ವ್ಯಾಪಾರ) :-
ಎರಡು ದೇಶಗಳ ನಡುವೆ ನಡೆಯುವ ವ್ಯಾಪಾರವನ್ನು ವಿದೇಶೀ ವ್ಯಾಪಾರ ಎನ್ನತ್ತೇವೆ.
ವಿದೇಶೀ ವ್ಯಾಪರದಲ್ಲಿ ಮೂರು ವಿಧ. ಅವುಗಳೆಂದರೆ,
*ಆಮದು *ರಫ್ತು *ಪುನರ್ ರಫ್ತು.
*ಆಮದು:- ಒಂದು ದೇಶವು ತನ್ನ ಆಂತರೀಕ ಬಳಕೆಗಾಗಿ ಬೇರೆ ದೇಶದಿಂದ ಸರಕುಗಳನ್ನು ಕೊಳ್ಳುವುದೇ ಆಮದು.
*ರಫ್ತು :- ಒಂದು ದೇಶವು ಬೇರೆ ದೇಶಗಳ ಆಂತರೀಕ ಬಳಕೆಗಾಗಿವಸ್ತುಗಳನ್ನು ಮಾರುವುದೇ ರಫ್ತು.
*ಪುನರ್ ರಫ್ತು :- ಒಂದು ದೇಶದಿಂದ ಸರಕುಗಳನ್ನು ಕೊಂಡು ಅದನ್ನು ಮತ್ತೊಂದು ದೇಶಕ್ಕೆ ಮಾರುವುದೇ ಪುನರ್ ರಫ್ತು. ಉದಾ : ಸಿಂಗಪೂರ.
ವಿದೇಶೀ ವ್ಯಾಪಾರದ ಅವಶ್ಯಕತೆ :
*ಪ್ರಪಂಚದ ಯಾವುದೇ ದೇಶವಾಗಲೀ ಎಲ್ಲಾ ಸಂನ್ಮೂಲಗಳನ್ನೂ ಹೊಂದಿರುವುದಿಲ್ಲ.
*ಕೆಲವು ಸಂಪನ್ಮೂಲಗಳು ಹೇರಳವಾಗಿಯೂ , ಕೆಲವು ಸಂಪನ್ಮೂಲಗಳು ವಿರಳವಾಗಿಯೂ ದೊರೆಯುತ್ತವೆ.
*ಹೇರಳವಾಗಿರುವ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಹೆಚ್ಚು ಉತ್ಪಾದನೆ ಮಾಡಿ , ಉಳಿದ ಸಂಪನ್ಮೂಲಗಳನ್ನುರಫ್ತು ಮಾಡುತ್ತಾರೆ.
*ವಿರಳವಾಗಿರುವ ಸಂಪನ್ಮೂಲಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಾರೆ.
*ಇದರಿಂದಾಗಿ ಪ್ರತಿ ದೇಶಕ್ಕೂ ವಿದೇಶೀ ವ್ಯಾಪಾರ ಅವಶ್ಯಕವಾಗಿದೆ.
ಕೈಗಾರಿಕೆ (ಉದ್ಯಮಗಳು)
ವಸ್ತುಗಳ ಉತ್ಪಾದನೆ , ಖನಿಜಗಳನ್ನು ಹೊರತೆಗೆಯುವುದು ಮತ್ತು ಕೆಲವು ಸೇವೆಗಳನ್ನು ಒದಗಿಸುವ ಒಂದು ಆರ್ಥಿಕ ಚಟುವಟಿಕೆಯೇ ಕೈಗಾರಿಕೆ.
ಕೈಗಾರಿಕೆಗಳಲ್ಲಿ ಎರಡು ವಿಭಾಗಗಳು :-
1.ಪ್ರಾಥಮಿಕ ಉದ್ಯಮಗಳು :- ಇದರಲ್ಲಿ ತಳಿ ವೈಜ್ಞಾನಿಕ ಉದ್ಯಮಗಳು ಮತ್ತು ಗಣಿ ಉದ್ಯಮಗಳು ಎರಡು ವಿಧಗಳಿವೆ.
2.ದ್ವಿತೀಯ ಉದ್ಯಮಗಳು :- ಇದರಲ್ಲಿ ಉತ್ಪಾದನಾ ಉದ್ಯಮಗಳು ಮತ್ತು ನಿರ್ಮಾಣ ಉದ್ಯಮಗಳು ಎಂಬ
 ಎರಡು ವಿದಗಳಿವೆ.
1.ಪ್ರಾಥಮಿಕ ಉದ್ಯಮಗಳು :- ನಿಸರ್ಗದಿಂದ ದೊರೆಯುವ ವಸ್ತುಗಳನ್ನು ಉತ್ಪಾದಿಸುವುದೇ ಪ್ರಾಥಮಿಕ ಉದ್ಯಮಗಳು.
ಅ)ತಳಿ ವೈಜ್ಞಾನಿಕ ಉದ್ಯಮಗಳು :- ಈ ಉದ್ಯಮ ಕೆಲವು ವಿಧದ ಧಾನ್ಯಗಳು , ಸಸ್ಯಗಳು ಹಾಗೂ ಪ್ರಾಣಿಗಳ ಪುನರ್ ಉತ್ಪಾದನೆಯಲ್ಲಿ ತೊಡಗಿರುತ್ತವೆ. ಉದಾ: ತೋಟಗಾರಿಕೆ , ಹೈನುಗಾರಿಕೆ , ಕೋಳಿ ಸಾಕಾಣಿಕೆ.
ಆ)ಗಣಿ ಉದ್ಯಮಗಳು :-ಈ ಉದ್ಯಮವು ಭೂಮಿಯ ತಳಭಾಗದಿಂದ ವಿವಿಧ ರೂಪದ ಕಚ್ಚಾ ವಸ್ತುಗಳನ್ನು ಹೊರತೆಗೆಯುವ ಕಾರ್ಯದಲ್ಲಿ ತೊಡಗಿರುತ್ತವೆ.
2.ದ್ವಿತೀಯ ಉದ್ಯಮಗಳು :- ನಿಸರ್ಗದಿಂದ ದೊರೆಯುವ ವಸ್ತುಗಳನ್ನು ಸಿದ್ದ ವಸ್ತುಗಳಾಗಿ ಮಾರ್ಪಡಿಸುತ್ತವೆ. ಈ ಉದ್ಯಮಗಳು ಶ್ರಮ ಪ್ರಧಾನವಾದುದಾಗಿದೆ.
ಅ)ಉತ್ಪಾದನಾ ಉದ್ಯಮಗಳು :- ಈ ಉದ್ಯಮಗಳು ಹೆಚ್ಚಾಗಿ ಮಾನವ ಶ್ರಮವನ್ನು ಬಳಸಿಕೊಳ್ಳುತ್ತವೆ. ಉದಾ:ಕಬ್ಬನ್ನು ಸಕ್ಕರೆಯಾಗಿ ಪರಿವರ್ತಿಸುವುದು , ಕಬ್ಬಿಣದ ಅದಿರನ್ನು ಉಕ್ಕಾಗಿ ಪರಿವರ್ತಿಸುವುದು.
ಆ)ನಿರ್ಮಾಣ ಉದ್ಯಮಗಳು :-ಈ ಉದ್ಯಮಗಳು ಮೂಲ ಸೌಕರ್ಯಗಳನ್ನು ಒದಗಿಸುವ ಕಾರ್ಯ ಮಾಡುತ್ತವೆ.ಉದಾ : ರಸ್ತೆ , ಕಾಲುವೆ , ಸೇತುವೆಗಳು.
ಗೃಹ ಕೈಗಾರಿಕೆಗಳು ಹಾಗೂ ಸಣ್ಣ ಪ್ರಮಾಣದ ಕೈಗಾರಿಕೆಗಳು
ಗೃಹ ಕೈಗಾರಿಕೆಗಳನ್ನು ಗುಡಿ ಕೈಗಾರಿಕೆಗಳೆಂದೂ ಕರೆಯುತ್ತಾರೆ.
ಗೃಹ ಕೈಗಾರಿಕೆಗಳ ಕಾರ್ಯ ನಿರ್ವಹಣೆ:
*ಇವುಗಳನ್ನು ಕುಶಲಕರ್ಮಿಗಳು ತಮ್ಮ ಮನೆಗಳಲ್ಲೇ ನಡೆಸುತ್ತಾರೆ.
*ಇವರಿಗೆ ಕುಟುಂಬದ ಸದಸ್ಯರು ಹಾಗೂ ಕೆಲಸ ಕಲಿಯುವವರು ಸಹಾಯ ಮಾಡುತ್ತಾರೆ.
*ಇವು ಪ್ರಧಾನವಾಗಿ ಹಳ್ಳಿಗಳಲ್ಲಿ ಕೇಂದ್ರೀಕೃತವಾಗಿರುತ್ತವೆ.
* ಈ ಕೈಗಾರಿಕೆಗಳು ಸ್ಥಳೀಯ ಮಾರುಕಟ್ಟೆಗಾಗಿ ವಸ್ತುಗಳನ್ನು ಉತ್ಪಾದಿಸುತ್ತವೆ.
ಗೃಹ ಕೈಗಾರಿಕೆಗಳು ಉತ್ಪಾದಿಸುವ ಸರಕುಗಳು : ಚಾಪೆಗಳು , ಕಲ್ಲಿನ ಕೆತ್ತನೆಗಳು , ಮರ ಮುಟ್ಟುಗಳು , ಬಿದಿರಿನ ಬುಟ್ಟಿಗಳು , ಮಡಿಕೆಗಳು.
ಸಣ್ಣ ಕೈಗಾರಿಕೆಗಳ ಕಾರ್ಯ ನಿರ್ವಹಣೆ:
*ಈ ಕೈಗಾರಿಕೆಗಳು ಒಂದು ನಿರ್ದಿಷ್ಟ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತವೆ.
*ಕೂಲಿ ಕಾರ್ಮಿಕರು ವಸ್ತುಗಳನ್ನು ಉತ್ಪಾದಿಸುತ್ತರೆ.
*ಕಚ್ಚಾ ವಸ್ತುಗಳನ್ನು ಸಂಗ್ರಹಿಸಿ ಉತ್ಪಾದನೆ ಆರಂಭಿಸುತ್ತಾರೆ.
*ಸಣ್ಣ ಯಂತ್ರಗಳು ಮತ್ತು ವಿದ್ಯುಚ್ಛಕ್ತಿಯನ್ನು ಬಳಸುತ್ತವೆ.
*ಸ್ಥಳೀಯ ಮಾರುಕಟ್ಟೆಗಷ್ಟೇ ಅಲ್ಲದೇ ವಿದೇಶ ಮಾರುಕಟ್ಟೆಗೂ ವಸ್ತುಗಳು ಸರಬರಾಜಾಗುತ್ತದೆ.
ಸಣ್ಣ ಕೈಗಾರಿಕೆಗಳು ಉತ್ಪಾದಿಸುವ ಸರಕುಗಳು : ರಾಸಾಯನಿಕ ವಸ್ತುಗಳು , ಇಂಜಿನಿಯರಿಂಗ್ ವಸ್ತುಗಳು , ಪಾದರಕ್ಷೆಗಳು , ಬೈಸಿಕಲ್ಲುಗಳು , ರೇಡಿಯೋಈ , ಹೊಲಿಗೆ ಯಂತ್ರಗಳು.
ಸೇವೆಗಳು
ವ್ಯವಹಾರವು ಸುಗಮವಾಗಿ ನಡೆಯಲು ರೂಢಿಗೆ ಬಂದ ವ್ಯವಸ್ಥೆಯೇ ಸೇವೆಗಳು. ಇವುಗಳನ್ನು ವಾಣಿಜ್ಯ ಸಾಧನಗಳೆಂದೂ ಕರೆಯುತ್ತಾರೆ.
ವ್ಯವಹಾರದ ಸುಗಮ ನಿರ್ವಹಣೆಗೆ ಇದ್ದ ಅಡಚಣೆಗಳು ಹಾಗೂ ಅವುಗಳ ನಿವಾರಣೆಗೆ ಕ್ರಮಗಳು.

ಅಡಚಣೆ ನಿವಾರಣಾ ಕ್ರಮ
1.ಸ್ಥಳದ ಅಡಚಣೆ ಸಾರಿಗೆ ಸೇವೆ
2.ಹಣಕಾಸಿನ ಅಡಚಣೆ ಬ್ಯಾಂಕುಗಳ ಸೇವೆ
3.ನಷ್ಟದ ಭಯ ವಿಮಾ ಕಂಪನಿಗಳ ಸೇವೆ
4.ಸಮಯದ ಅಡಚಣೆ ಶೇಖರಣೆ ಸೇವೆ
5.ಜ್ಞಾನದ ಕೊರತೆ ಜಾಹೀರಾತು ಸೇವೆ

1.ಸ್ಥಳದ ಅಡಚಣೆ (ಸಾರಿಗೆ ಸೇವೆ):-
ಸ್ಥಳದ ಅಡಚಣೆಯನ್ನು ನಿವಾರಿಸಲು ಸಾಗಾಟದ ಸಾರಿಗೆ ಸೇವೆಯನ್ನು ಬಳಸಲಾಗುತ್ತದೆ.ರಸ್ತೆ ಸಾರಿಗೆ , ರೈಲು ಸಾರಿಗೆ ಮತ್ತು ವಾಯುಸಾರಿಗೆ ಸಾಗಾಟದ ಬೇರೆ ಬೇರೆ ಮಾಧ್ಯಮಗಳಾಗಿವೆ.
2.ಹಣಕಾಸಿನ ಅಡಚಣೆ (ಬ್ಯಾಂಕುಗಳ ಸೇವೆ) :-
ಉತ್ಪಾದಕರಿಂದ ಗ್ರಾಹಕರಿಗೆ ಸರಕುಗಳನ್ನು ವಿತರಣೆ ಮಾಡುವ ಕಾರ್ಯದಲ್ಲಿ ಹಣಕಾಸಿನ ಸಮಸ್ಯೆ ಉಂಟಾಗುತ್ತದೆ.ಇದಕ್ಕಾಗಿ ಬ್ಯಾಂಕುಗಳು ವ್ಯಾಪಾರಿಗಳಿಗೆ ಹಣಕಾಸಿನ ಸೌಲಭ್ಯವನ್ನು ಒದಗಿಸುತ್ತವೆ.
 3.ನಷ್ಟದ ಭಯ (ವಿಮ ಕಂಪನಿ ಸೇವೆಗಳು) :-
ಉತ್ಪಾದಕರಿಂದ ಗ್ರಾಹಕರಿಗೆ ಸರಕುಗಳನ್ನು ವಿತರಣೆ ಮಾಡುವಾಗ ಅಥವಾ ಅವುಗಳನ್ನು ಉಗ್ರಾಣಗಳಲ್ಲಿ ಸಂಗ್ರಹಿಸಿಟ್ಟಾಗ ನಾಶ ಹೊಂದುವುದು , ಹಾನಿಗೊಳಗಾಗುವುದು ಸಾಮಾನ್ಯ.ಈ ನಷ್ಟದ ತೊಡಕುಗಳನ್ನು ನಿವಾರಿಸಲು ವಿಮಾ ಕಂಪನಿಗಳು ವಿಮಾ ಸೌಲಭ್ಯ ಒದಗಿಸುತ್ತವೆ. (ಅಗ್ನಿ ವಿಮೆ , ಜಲ ವಿಮೆ)
4.ಸಮಯದ ಅಡಚಣೆ (ಶೇಖರಣೆ) :-
ಸರಕುಗಳ ಉತ್ಪಾದನೆ ಮತ್ತು ಕಾಲಕಾಲಕ್ಕೆ ಒದಗಿಸಲು ಅವುಗಳನ್ನು ಶೇಖರಿಸಿಡಬೇಕಾಗುತ್ತದೆ.ಇದಕ್ಕಾಗಿ ಉಗ್ರಾಣ ಸೇವೆ ಒದಗಿಸಲಾಗಿದೆ.
5.ಜ್ಞಾನದ ಕೊರತೆ (ಜಾಹೀರಾತು) :-
ಅನುಭೋಗಿಗಳಿಗೆ ಹೊಸ ಹೊಸ ಸರಕುಗಳ ಬಗ್ಗೆ ಮಾಹಿತಿ ಕೊಡಲು ಜಾಹೀರಾತು ಸೇವೆಗಳು ಬಹಂ ಉಪಯುಕ್ತವಾಗಿವೆ.
ವ್ಯವಹಾರದ ನೀತಿತತ್ವಗಳು (ಬಿಸಿನೆಸ್ ಎಥಿಕ್ಸ್)
ವ್ಯಾಪಾರಸ್ಥರು ವ್ಯವಹಾರದಲ್ಲಿ ಅತಿ ಹೆಚ್ಚಿನ ಲಾಭ ಗಳಿಸಲು ಅಹಿತಕರ ವ್ಯವಹಾರ ಪದ್ದತಿ ಅನುಸರಿಸದೇ ನಡೆಸುವ ವ್ಯವಹಾರವೇ ವ್ಯವಹಾರದ ನೀತಿತತ್ವ.
ವ್ಯಾಪಾರದಲ್ಲಿ ವ್ಯಾಪಾರಿಗಳು ಅನುಸರಿಸುವ ಅಹಿತಕರ ವ್ಯವಹಾರ ಪದ್ದತಿಗಳು :-
*ವಸ್ತುಗಳ ಕಲಬೆರಕೆ     
*ಹೆಚ್ಚು ಲಾಭ
 *ತೂಕ ಮತ್ತು ಅಳತೆಯಲ್ಲಿ ಮೋಸ   
*ಅಕ್ರಮ ದಾಸ್ತಾನು  
*ಪದಾರ್ಥಗಳ ಕೃತಕ ಅಭಾವ  
*ಕಾಳ ಸಂತೆಯಲ್ಲಿ ವಸ್ತುಗಳನ್ನು ಮಾರುವುದು.
ವ್ಯಾಪಾರದಲ್ಲಿ ವ್ಯಾಪಾರಿಗಳು ಅನುಸರಿಸುವ ಅಹಿತಕರ ವ್ಯವಹಾರ ಪದ್ದತಿಯನ್ನು ತಡೆಗಟ್ಟಲು ಸರ್ಕಾರ ಕೈಗೊಂಡಿರುವ ಕ್ರಮಗಳು :-
*ಸಾರ್ವಜನಿಕ ವಿತರಣಾ ವ್ಯವಸ್ಥೆ ಜಾರಿಗೆ ತರಲಾಗಿದೆ.
*ಅಗತ್ಯ ವಸ್ತುಗಳ ಸರಬರಾಜು ಶಾಸನ ಜಾರಿಗೆ ತರಲಾಗಿದೆ.
*ಪದಾರ್ಥಗಳ ಗುಣಮಟ್ಟ ಕಾಪಾಡಲು “ಭಾರತೀಯ ಮಾನಕ ಸಂಸ್ಥೆ” ಯನ್ನು ಸ್ಥಾಪಿಸಿದೆ.ಇದು ಪದಾರ್ಥಗಳ ಗುಣಮಟ್ಟ ಪರೀಕ್ಷಿಸಿ ಸರಿಯಾಗಿರುವ ವಸ್ತುಗಳಿಗೆ ಐ.ಎಸ್.ಐ ಮುದ್ರೆ ನೀಡುತ್ತದೆ.
*ವ್ಯವಸಾಯ ಉತ್ಪನ್ನಗಳಿಗೆ “ಅಗ್ಮಾರ್ಕ್” ಚಿನ್ಹೆಯನ್ನು ವಕಡ್ಡಾಯಗೊಳಿಸಿದೆ.
*ಗ್ರಾಹಕರ ಸಹಕಾರಿ ಸಂಘಗಳು , ಜನತಾ ಬಜಾರುಗಳನ್ನು ಸ್ಥಾಪಿಸಿದೆ.