Monday 15 March 2021

ಗಾದೆಗಳು4. ಬೆಳೆಯುವ ಸಿರಿ ಮೊಳಕೆಯಲ್ಲಿ ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು.ಇವು ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೊಂದಿರುತ್ತವೆ. ಬೆಳೆಯುವ ಸಸಿಯನ್ನು ನೋಡಿದಾಗಲೇ ಅದು ಮುಂದೆ ಎಂತಹ ಬೆಳೆಯನ್ನು ಕೊಡುತ್ತದೆ ಎಂಬುದು ತಿಳಿಯುತ್ತದೆ. ಹಾಗೆಯೇ ಬಾಲ್ಯದಲ್ಲಿ ಮಕ್ಕಳ ನಡೆನುಡಿಗಳನ್ನು ಗಮನಿಸಿದರೆ ಮುಂದೆ ಅವರು ಏನಾಗುತ್ತಾರೆ ಎಂಬುದನ್ನು ಅರಿಯಬಹುದು. ಕ್ರಿಕೆಟ್ ಆಟಗಾರ ಸಚಿನ್ ಜೀವನವೇ ಇದಕ್ಕೊಂದು ಉತ್ತಮ ಉದಾಹರಣೆ.ಮೊಳಕೆ ಚೆನ್ನಾಗಿದ್ದರೆ ಬೆಳೆ ಚೆನ್ನಾಗಿರುತ್ತದೆ. ಅದೇ ರೀತಿ ಮಕ್ಕಳು ಬಾಲ್ಯದಲ್ಲಿ ಉತ್ತಮ ಗುಣಗಳನ್ನು ಬೆಳೆಸಿಕೊಂಡರೆ ಮುಂದೆ ಅವರು ಉತ್ತಮ ವ್ಯಕ್ತಿಗಳಾಗುತ್ತಾರೆ ಎಂಬುದೇ ಈ ಗಾದೆಯ ಅರ್ಥವಾಗಿದೆ. 5. ಮಾತೇ ಮುತ್ತು; ಮಾತೇ ಮೃತ್ಯು. ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು. ಇವು ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೊಂದಿರುತ್ತವೆ. ಮನುಷ್ಯನಿಗೆ ಮಾತೇ ಮುಖ್ಯವಾದುದು. ಮಾತಿನಿಂದ ನಮಗೆ ಎಲ್ಲವೂ ದೊರೆಯುತ್ತದೆ. ಬಸವಣ್ಣನವರು 'ನುಡಿದರೆ ಮುತ್ತಿನ ಹಾರದಂತಿರಬೇಕು' ಎಂದಿದ್ದಾರೆ. ನಯವಿನಯದಿಂದ ಮಾತನಾಡಿದರೆ ಜಗತ್ತನ್ನೇ ಗೆಲ್ಲಬಹುದು. ಹಾಗೆಯೇ ಮಾತಿನಿಂದ ದ್ವೇಷ ವಿರಸಗಳು ಉಂಟಾಗುತ್ತವೆ. ಕೊನೆಗೆ ಮೃತ್ಯುವು ಬರಬಹುದು. 'ಮಾತು ಬಲ್ಲವನಿಗೆ ಜಗಳವಿಲ್ಲ' ಎಂಬ ಗಾದೆಯೂ ಮೇಲಿನ ಗಾದೆಗೆ ಪೂರಕವಾಗಿದೆ. ಆದ್ದರಿಂದ ನಾವು ಸಮಯೋಚಿತವಾಗಿ ಎಚ್ಚರಿಕೆಯಿಂದ ಮಾತನಾಡಬೇಕು ಎಂಬುದೇ ಇದರ ಅರ್ಥವಾಗಿದೆ.

ಕೊಟ್ಟಿರುವ ಪ್ರಶ್ನೆಗಳಿಗೆ ನೀಡಲಾಗಿರುವ ಆಯ್ಕೆಗಳಲ್ಲಿ ಸೂಕ್ತ ಉತ್ತರವನ್ನು ಆರಿಸಿ, ಕ್ರಮಾಕ್ಷರದೊಡನೆ ಬರೆಯಿರಿ. 1. 'ಬೆಟ್ಟದಾವರೆ' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ : (ಎ) ಕರ್ಮಧಾರೆಯ (ಬಿ) ದ್ವಿಗು (ಸಿ) ತತ್ಪುರುಷ (ಡಿ) ಬಹುವ್ರೀಹಿ 2. 'ಪೆರ್ಮರ' ಪದವನ್ನು ವಿಗ್ರಹ ವಾಕ್ಯ ಮಾಡಿದಾಗ : (ಎ) ಪಿರಿದು + ಮರ (ಬಿ) ಪಿರಿ + ಮರ (ಸಿ) ಪೆರೆ + ಮರ (ಡಿ) ಪೆರ್ + ಮರ 3. ಪೂರ್ವಪದ ಸಂಖ್ಯಾವಾಚಕವಾಗಿದ್ದು ಉತ್ತರಪದ ನಾಮಪದವಾಗಿರುವ ಸಮಾಸ : (ಎ) ತತ್ಪುರುಷ (ಬಿ) ಅಂಶಿ (ಸಿ) ಕ್ರಿಯಾ (ಡಿ) ದ್ವಿಗು 4. 'ಅಂಶಿ' ಸಮಾಸಕ್ಕೆ ಉದಾಹರಣೆ : (ಎ) ಕೈಯನ್ನು (ಬಿ) ಅಂಗೈ (ಸಿ) ಅರಮನೆ (ಡಿ) ಕಾರ್ಮೋಡ ಮೊದಲೆರಡು ಪದಗಳಿಗೆ ಇರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿ ಸಂಬಂಧಹೊಂದುವ ಪದಗಳನ್ನು ಬರೆಯಿರಿ. 1. ಕಣ್ದೆರೆ : ಕ್ರಿಯಾಸಮಾಸ :: ಕರಿತುರಗರಥಗಳು : _____ 2. ಆಕಲ್ಲು : ಗಮಕ :: ಮೆಲ್ವಾತು : ________ 3. ಹಣೆಗಣ್ಣ : ಬಹುವ್ರೀಹಿ :: ನೆಯ್ದವಸ್ತ್ರ : __________ ಕ್ರಿಯಾಪದ ಕ್ರಿಯಾಪದದ ಮೂಲರೂಪ ಧಾತು. ಸಕರ್ಮಕ ಧಾತು : ಕೊಡು, ಬಿಡು, ಉಣ್ಣು, ಉಜ್ಜು, ಇದ್ದು, ಮುಚ್ಚು ಇತ್ಯಾದಿ. ಅಕರ್ಮಕ ಧಾತು : ಮಲಗು, ಓಡು, ಬದುಕು, ಹೋಗು, ನಾಚು ಇತ್ಯಾದಿ. ಭೂತಕಾಲ ಸೂಚಕ ಪ್ರತ್ಯಯ 'ದ'. ವರ್ತಮಾನಕಾಲ ಸೂಚಕ ಪ್ರತ್ಯಯ 'ಉತ್ತ'. ಭವಿಷ್ಯತ್ಕಾಲ ಸೂಚಕ ಪ್ರತ್ಯಯ 'ಉವ/ವ'.

ವಿಧ್ಯರ್ಥಕ : ಮಾಡಲಿ, ತಿನ್ನಲಿ, ಓದಲಿ. ನಿಷೇಧಾರ್ಥಕ : ಮಾಡನು, ತಿನ್ನಳು, ಓದರು. ಸಂಭಾವನಾರ್ಥಕ : ಮಾಡಿಯಾನು, ತಿಂದಾಳು, ಓದಿಯಾರು. ಕೊಟ್ಟಿರುವ ಪ್ರಶ್ನೆಗಳಿಗೆ ನೀಡಲಾಗಿರುವ ಆಯ್ಕೆಗಳಲ್ಲಿ ಸೂಕ್ತ ಉತ್ತರವನ್ನು ಆರಿಸಿ, ಕ್ರಮಾಕ್ಷರದೊಡನೆ ಬರೆಯಿರಿ. 1.ಕ್ರಿಯಾಪದದ ಮೂಲರೂಪವನ್ನು ಹೀಗೆಂದು ಕರೆಯುತ್ತಾರೆ : (ಎ) ಪ್ರತ್ಯಯ (ಬಿ) ಉಪಸರ್ಗ (ಸಿ) ಧಾತು (ಡಿ) ಪ್ರಾತಿಪದಿಕ 2. ಇದು ಅಕರ್ಮಕ ಧಾತುವಿಗೆ ಉದಾಹರಣೆ : (ಎ) ತಿನ್ನು (ಬಿ) ಮಲಗು (ಸಿ) ಉಜ್ಜು (ಡಿ) ಬಿಡು 3. ಇದು ಸಕರ್ಮಕ ಧಾತುವಿಗೆ ಉದಾಹರಣೆ : (ಎ) ಓದು (ಬಿ) ನಾಚು (ಸಿ) ಕೊಡು (ಡಿ) ಬದುಕು 4. ಧಾತು, ಕಾಲಸೂಚಕ ಪ್ರತ್ಯಯ ಮತ್ತು ಆಖ್ಯಾತ ಪ್ರತ್ಯಯ ಸೇರಿದಾಗ ಆಗುವ ರೂಪ : (ಎ) ನಾಮಪದ (ಬಿ) ಕ್ರಿಯಾಪದ (ಸಿ) ಅವ್ಯಯ (ಡಿ) ತದ್ಧಿತಾಂತ 5. 'ಶಿಕ್ಷಣವು ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ದ ಹಕ್ಕಾಗಲಿ' ಈ ವಾಕ್ಯದಲ್ಲಿರುವ ವಿಧ್ಯರ್ಥಕ ಕ್ರಿಯಾಪದ : (ಎ) ಶಿಕ್ಷಣ (ಬಿ) ಹಕ್ಕಾಗಲಿ (ಸಿ) ಪ್ರಗತಿ (ಡಿ) ಎಲ್ಲರ 6. ಕಾರ್ಯವು ಮುಂದೆ ನಡೆಯಲಿದೆ ಎನ್ನುವುದನ್ನು ತಿಳಿಸುವ ಕಾಲ : (ಎ) ಭೂತಕಾಲ (ಬಿ) ವರ್ತಮಾನಕಾಲ (ಸಿ) ಭವಿಷ್ಯತ್ ಕಾಲ (ಡಿ) ಸಂದಿಗ್ಧಕಾಲ 7. 'ನೋಡುತ್ತಾನೆ' ಕ್ರಿಯಾಪದದ ಭೂತಕಾಲ ರೂಪ : (ಎ) ನೋಡಲಿ (ಬಿ) ನೋಡಿದನು (ಸಿ) ನೋಡುವನು (ಡಿ) ನೋಡನು 8. 'ಭೀಮನಿಂದ ಅನ್ನವು ಉಣ್ಣಲ್ಪಟ್ಟಿತ್ತು' ಈ ವಾಕ್ಯವು ಕ್ರಿಯಾಪದದ ಈ ಪ್ರಯೋಗಕ್ಕೆ ಉದಾಹರಣೆ (ಎ) ಕರ್ಮಣಿ (ಬಿ) ಕರ್ತರಿ (ಸಿ) ಸಕರ್ಮ (ಡಿ) ಅಕರ್ಮ ಮೊದಲೆರಡು ಪದಗಳಿಗೆ ಇರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಸಂಬಂಧ ಹೊಂದುವ ಪದಗಳನ್ನು ಬರೆಯಿರಿ 1. ಉಜ್ಜು : ಸಕರ್ಮಕ :: ಬದುಕು : ___________ 2. ಮಾಡುತ್ತಾನೆ : ಮಾಡು :: ಓದಿದನು : ___________ 3. ಸೇರಿದನು : ಭೂತಕಾಲ :: ಸೇರುತ್ತಾನೆ : ___________

ಕೊಟ್ಟಿರುವ ಪ್ರಶ್ನೆಗಳಿಗೆ ನೀಡಲಾಗಿರುವ ಆಯ್ಕೆಗಳಲ್ಲಿ ಸೂಕ್ತ ಉತ್ತರವನ್ನು ಆರಿಸಿ, ಕ್ರಮಾಕ್ಷರದೊಡನೆ ಬರೆಯಿರಿ. 1. 'ಭಾನು' ಪದದ ಅರ್ಥ : (ಎ) ಆಕಾಶ (ಬಿ) ಸೂರ್ಯ (ಸಿ) ಆಗಸ (ಡಿ) ಬೆಳಕು 2. 'ಸೂನು' ಪದದ ಅರ್ಥ : (ಎ) ಬೇಗ (ಬಿ) ನಾಯಿ (ಸಿ) ಮಗ (ಡಿ) ಸೊಣಗ ಮೊದಲೆರಡು ಪದಗಳಿಗೆ ಇರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿ ಸಂಬಂಧಹೊಂದುವ ಪದಗಳನ್ನು ಬರೆಯಿರಿ. 1. ಬೆಸಗೈ : ಹೇಳು : : ಪರಿಷೇಕ : ___________ 2. ಇರಿವನ್ನರ್: ಯುದ್ಧ ಮಾಡುವವರು : : ಮುತ್ತರ್ : __________ 3. ಎತ್ತಣ : ಎಲ್ಲಿಯ : : ಪಚ್ಚೆ : ___________ 4. ಅಗಡು : ಶೌರ್ಯ : : ಅಬ್ಧಿಪ : __________