Friday 30 April 2021

ಪ್ರಧಾನ ಮಂತ್ರಿ

ಪ್ರಧಾನ ಮಂತ್ರಿ

- ಎಸ್.ಎಸ್.ಭೂಮಣ್ಣವರ.

ಭಾರತದ ಭವಿಷ್ಯವನ್ನೇ ಬದಲಿಸಲು ಹೊಸ ಹೊಸ ಯೋಜನೆಗಳನ್ನು ಸಾಕಾರಗೊಳ್ಳುತ್ತಿವೆ,ಅವುಗಳಲ್ಲಿ ಅತ್ಯಂತ ಮಹತ್ವಪೂರ್ಣವಾದ ಪ್ರಧಾನ ಮಂತ್ರಿಯವರ ಕನಸಿನ ಇಂಡಿಯಾ ಜಗತ್ತಿನಲ್ಲೇ ಶ್ರೇಷ್ಠ ಸ್ಥಾನಕ್ಕೆ ಹೋಗಲು ಹಾಕಿಕೊಂಡಿರುವ ಬೃಹತ್ ಯೋಜನೆಯೇ ಡಿಜಿಟಲ್ ಇಂಡಿಯಾ  ದಿನಾಂಕ 1-7-2015 ರಂದು ನವದೆಹಲಿಯಲ್ಲಿ ಏರ್ ಬಸ್ ಸಿಇಒ-ಪೀಟರ್ ಗುಟ್ಸಮೇಡ್, ರಿಲಯನ್ಸ್ಸ್ನ-ಮುಖೇಶ ಅಂಬಾನಿ, ಟಾಟಾ ಗ್ರೂಪ್ನ ಸೈರಸ್ ಮಿಸ್ಟ್ರಿ, ಭಾರ್ತಿ ಎಂಟರ್ ಪ್ರೈಸ್ನ ಸುನಿಲ್ ಭಾರ್ತಿ ಮಿತ್ತಲ್, ವಿಪ್ರೋನ ಅಜೀಂ ಪ್ರೇಮಜಿ, ಸ್ಟೆರ್ಲೈಟ್ನ ಅನಿಲ್ ಅಗರವಾಲ್, ಆದಿತ್ಯ ಬಿರ್ಲಾಗ್ರೂಪ್ನ ಕುಮಾರ ಮಂಗಲಂ, ಇನ್ಫೋಸಿಸ್ ನಾರಾಯಣಮೂರ್ತಿ ಸೇರಿದಂತೆ ಅನೇಕ ಬೃಹತ್ ಕೈಗಾರಿಕೋದ್ಯಮಿಗಳ ಸಮ್ಮುಖದಲ್ಲಿ ದೇಶದ ಚಿತ್ರಣವನ್ನೇ ಬದಲಿಸುವ ಈ ಡಿಜಿಟಲ್ ಇಂಡಿಯಾ ಯೋಜನೆಯನ್ನು ಲೋಕಾರ್ಪಣೆ ಮಾಡಿದರು. ಭಾರತವನ್ನು ಡಿಜಿಟಲೀಕರಣಗೊಳಿಸುವ ಸ್ಪಷ್ಟ ಯೋಜನೆಯನ್ನು ಪ್ರಧಾನಿ ಮೋದಿಯವರು ಪ್ರಸ್ತುತಪಡಿಸಿದರು. ಡಿಜಿಟಲ್ ಲಾಕರ್, ಇ-ಎಜುಕೇಷನ್ ಮತ್ತು ಇ- ಹೆಲ್ತ್ ನಂತಹ ವಿಭಿನ್ನ ಯೋಜನೆಗಳನ್ನು ಇದು ಒಳಗೊಂಡಿದೆ. ಭಾರತದ ಪ್ರತಿಯೊಂದು ಗ್ರಾಮಗಳನ್ನು ಡಿಜಿಟಲೀಕರಣ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅಲ್ಲದೇ ಈ ಕೆಳಕಂಡ ಉದ್ದೇಶಗಳನ್ನು ಒಳಗೊಂಡಿದೆ.

* ದೇಶದೆಲ್ಲೆಡೆ ಡಿಜಿಟಲ್ ಮೂಲಭೂತ ಸೌಕರ್ಯ
* ಜನರ ಇಚ್ಛೆಗೆ ಅನುಗುಣವಾದ ಪಾರದರ್ಶಕ ಆಡಳಿತ
* ಅತ್ಯುತ್ತಮ ದರ್ಜೆಯ ಹೆದ್ದಾರಿಗಳ ನಿರ್ಮಾಣ
* ಅಂತಾರಾಷ್ಟ್ರೀಯ ಮಟ್ಟದ ದೂರ ಸಂಪರ್ಕ ಸೇವೆ ಒದಗಿಸುವುದು
* ಸಾರ್ವಜನಿಕ ಅಂತರ್ಜಾಲ ಸಂಪರ್ಕ ಸೇವೆ ಒದಗಿಸುವುದು.
* ಇ-ಆಡಳಿತ, ತಂತ್ರಜ್ಞಾನದ ಮೂಲಕ ಆಡಳಿತ ನಿರ್ವಹಣೆ.
* ಇ-ಕ್ರಾಂತಿ, ಇಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಎಲ್ಲ ಬಗೆಯ ಸಂಪರ್ಕ ಸಾಧಿಸುವುದು. ಎಲ್ಲರಿಗೂ ಸಕಲ ಮಾಹಿತಿ ವ್ಯವಸ್ಥೆ.
* ಇಲೆಕ್ಟ್ರಾನಿಕ್ ಉತ್ಪನ್ನ ತಯಾರಿಕೆಗೆ ವಿಶೇಷ ಒತ್ತು ನೀಡುವುದು.
* ಮಳೆ ನೀರು ಕೊಯ್ಲು ಯೋಜನೆಗಳಿಗೆ 2019 ಕ್ಕೆ ಡಿಜಿಟಲ್ ಎಫೆಕ್ಟ್. ಎಲ್ಲ 2.5 ಲಕ್ಷ ಹಳ್ಳಿಗಳಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕ ಕಲ್ಪಿಸುವುದು.
* ವಿದೇಶಗಳಿಂದ ಇಲೆಕ್ಟ್ರಾನಿಕ್ ಉಪಕರಣಗಳು, ವಸ್ತುಗಳನ್ನು ಆಮದು ಮಾಡಿಕೊಳ್ಳುವಂತಿಲ್ಲ.
* ಲಕ್ಷ ಸಾರ್ವಜನಿಕ ಅಂತರ್ಜಾಲ ಸಂಪರ್ಕ ಘಟಕಗಳ ಸ್ಥಾಪನೆ.
* ಶಾಲಾ-ಕಾಲೇಜು, ವಿಶ್ವವಿದ್ಯಾಲಯ, ವಸತಿನಿಲಯಗಳಿಗೆ ವೈ-ಫೈ ಸಂಪರ್ಕ ಕಲ್ಪಿಸುವುದು.
* ಆರೋಗ್ಯ, ಶಿಕ್ಷಣ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳು ಸಂಪೂರ್ಣ ಡಿಜಟಲೀಕರಣ.

ಕರ್ನಾಟಕದಲ್ಲಿ ಡಿಜಿಟಲ್ ಇಂಡಿಯಾಕ್ಕೆ ಇರುವ ಅವಕಾಶಗಳು :
ಈಗಾಗಲೇ ಸ್ಮಾರ್ಟ್ ಸಿಟಿ ಪರಿಕಲ್ಪನೆ ಜಾರಿಯಲ್ಲಿದ್ದು ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಸಹಕಾರ ನೀಡಬೇಕು. ಕೇಂದ್ರ ಸರ್ಕಾರದ ಈ ಉತ್ತಮ ಯೋಜನೆ ಅಳವಡಿಸಿಕೊಂಡರೆ 2018ರ ವೇಳೆಗೆ ರಾಜ್ಯದ ಎಲ್ಲ ಯುವಕರಿಗೆ ಉದ್ಯೊಗ ಲಭ್ಯವಾಗಲಿದೆ. ಡಿಜಿಟಲ್ ಇಂಡಿಯಾ ಕರ್ನಾಟಕಕ್ಕೆ ಹೇಗೆ ನೆರವಾಗುತ್ತದೆ ಎಂಬುದನ್ನು ಈ ಕೆಳಗಿನ ಅಂಶಗಳು ಪುಷ್ಠೀಕರಿಸುತ್ತವೆ.

1. ರಾಜ್ಯದ ಆರ್ಥಿಕ ಬದಲಾವಣೆ ಮತ್ತು ಬೆಳವಣಿಗೆಗೆ ಇದು ಮಾನದಂಡವಾಗಿ ನಿಲ್ಲುತ್ತದೆ.
2. ಲಕ್ಷಾಂತರ ಯುವಕರಿಗೆ ಉದ್ಯೋಗ ದೊರೆಯುತ್ತದೆ.
3. ರಾಜ್ಯದಲ್ಲಿ 5 ಸಾವಿರ ಗ್ರಾಮ ಪಂಚಾಯಿತಿಗಳಿದ್ದು ಜನರ ಜೀವನ ಮಟ್ಟ ಸುಧಾರಣೆಗೆ ಡಿಜಿಟಲ್ ಇಂಡಿಯಾ ಕಾರಣವಾಗಬಲ್ಲದು.
4. ಬಡತನ ರೇಖೆಗಿಂತ ಕೆಳಗಿನವರು ತಮ್ಮ ಜೀವನಮಟ್ಟ ಸುಧಾರಣೆ ಮಾಡಿಕೊಳ್ಳಲು ನೇರವಾಗಿ ನೆರವಾಗುತ್ತದೆ.
5. ಇದು ಕೇವಲ ನಗರಗಳಿಗೆ ಸೀಮಿತವಾದ ಯೋಜನೆಯಲ್ಲ, ಪ್ರತಿಯೊಂದು ಹಳ್ಳಿ ಗ್ರಾಮದಲ್ಲಿ ಕಳೆದ 60 ವರ್ಷಗಳಲ್ಲಿ ಆಗದ ಬದಲಾವಣೆ ಸಾಧ್ಯವಿದೆ.
6.ಅಂತ್ಯೋದಯ ಹೆಸರಿನ ತಕ್ಕದಾದ ರೀತಿಯಲ್ಲಿ ಯೋಜನೆ ನಡೆದುಕೊಳ್ಳುತ್ತಿದ್ದು ಎಲ್ಲರ ಬೆಳವಣಿಗೆಯ ಧ್ಯೇಯ ಹೊಂದಿದೆ.
7. ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಕಟ್ಟಕಡೆಯ ವ್ಯಕ್ತಿಗೂ ಸ್ವಂತ ಕಾಲ ಮೇಲೆ ನಿಲ್ಲುವ ಶಕ್ತಿ ಕಲ್ಪಿಸಿಕೊಡುತ್ತದೆ.
8. ಗ್ರಾಮೀಣ ಭಾಗದಲ್ಲಿ ಮತ್ತು ಚಿಕ್ಕ ನಗರಗಳಲ್ಲಿ ಬಿಪಿಒ ಸೆಂಟರ್ಗಳ ಸ್ಥಾಪನೆ.
9. ದ್ವಿತೀಯ ದರ್ಜೆಯ ಹೆದ್ದಾರಿಗಳಲ್ಲಿ ಮೇಕ್ ಇನ್ ಇಂಡಿಯ ಮತ್ತು ಡಿಜಿಟಲ್ ಇಂಡಿಯ ಜತೆಯಾಗಿ ಹೆಜ್ಜೆ ಹಾಕಲಿವೆ.
10. ಹೊಸ ಸಂಶೋಧನೆ ಮತ್ತು ಪರಿಸರ ಕಾಳಜಿ ವಿಷಯಗಳಿಗೆ ವಿಶೇಷ ಒತ್ತು ನೀಡಲಿದೆ.
11 ಅತ್ಯುತ್ತಮ ದರ್ಜೆಯ ಹೆದ್ದಾರಿಗಳು ನಿರ್ಮಾಣವಾಗುತ್ತವೆ.
12. ಎಲೆಕ್ಟ್ರಾನಿಕ್ ಉತ್ಪನ್ನ ತಯಾರಿಕೆಗೆ ವಿಶೇಷ ಒತ್ತು ನೀಡುತ್ತದೆ.
13. ಸಾರ್ವಜನಿಕ ಅಂತರ್ಜಾಲ ಸಂಪರ್ಕ ಸೇವೆ ಒದಗಿಸುವುದು.

ಶಿಕ್ಷಣ ಕ್ಷೇತ್ರದ ಮೇಲೆ ಡಿಜಿಟಲ್ ಇಂಡಿಯಾ ದ ಪ್ರಭಾವ :
 ಇ'-ಶಿಕ್ಷಣ: ಭಾರತದಲ್ಲಿ ಇಂದು ಶಿಕ್ಷಣ ಕ್ಷೇತ್ರ. ಕ್ಷಿಪ್ರಗತಿಯಲ್ಲಿ ಬದಲಾವಣೆ ತರುತ್ತಿದೆ. ಆದ್ದರಿಂದ ಇ'-ಶಿಕ್ಷಣದಿಂದ ಶಿಕ್ಷಕ-ವಿದ್ಯಾರ್ಥಿ-ಪಠ್ಯಕ್ರಮ- ಶಾಲಾ ಪರಿಸರದಲ್ಲಿ ಆಮೂಲಾಗ್ರ ಬದಲಾವಣೆ ಉಂಟಾಗುತ್ತದೆ. ವಿದ್ಯಾರ್ಥಿಗಳಿಗೆ ಪುಸ್ತಕದ ಹೊರೆ ಕಡಿಮೆಯಾಗಿ ಕೇವಲ ಪರೀಕ್ಷೆಗೆ ತಯಾರಿಯಾಗದೆ ವೃತ್ತಿ ಆಧಾರಿತ ಹಾಗೂ ಕೌಶಲ್ಯಾಧಾರಿತ ಶಿಕ್ಷಣವನ್ನು ಒದಗಿಸಲು ಅನುಕೂಲವಾಗುತ್ತದೆ. ಶಾಲಾ ಸ್ಥಾವರ, ಸಂಸ್ಥಾಯೋಜನೆ ಎಲ್ಲವೂ ಡಿಜಿಟಲ್ಮಯವಾಗುತ್ತವೆ. ಶಿಕ್ಷಕರಿಗೂ ಸ್ಮಾರ್ಟ್ ಕ್ಲಾಸ್ ಬಳಕೆಯ ಪರಿಣಾಮವನ್ನು ಪರಿಚಯಿಸುತ್ತದೆ.

 ಶಾಲಾ ದಾಖಲಾತಿ/ಹಾಜರಾತಿ ಉಳಿಕೆ ಮತ್ತು ಸುಧಾರಣೆ:
ಈ ಯೋಜನೆಯ ಮೂಲಕ ಪ್ರತಿ ಶಾಲಾ-ಕಾಲೇಜು ವಿಶ್ವವಿದ್ಯಾಲಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಾಗುತ್ತದೆ. ದಾಖಲಾದ ಎಲ್ಲ ವಿದ್ಯಾರ್ಥಿಗಳು ಮಾರ್ಗಮಧ್ಯದಲ್ಲಿ ಶಾಲೆ ಬಿಡದೆ ಉಳಿಕೆ ಸಾಧಿಸಲು ಅನುಕೂಲವಾಗುತ್ತದೆ. ವಿದ್ಯಾರ್ಥಿಗಳ ಹಾಜರಾತಿ ಆಯಾ ತರಗತಿವಾರು ತಕ್ಷಣವೇ ದಾಖಲಿಸಿ ಮೇಲಾಧಿಕಾರಿಗಳಿಗೆ ತಿಳಿಸಬೇಕಾಗುತ್ತದೆ. ಶೈಕ್ಷಣಿಕ ವರ್ಷ ಪ್ರತಿಶತ 95% ಹಾಜರಾತಿ ಇದ್ದರೆ ಮಾತ್ರ ಎಲ್ಲ ಸೌಲಭ್ಯಗಳಿಗೆ ಅರ್ಹರು ಎಂಬುದು ಇದರ ಜೀವಾಳವಾಗುತ್ತದೆ.

 ರಾಷ್ಟ್ರೀಯ ಶಿಷ್ಯವೇತನಗಳು: ಡಿಜಿಟಲ್ ಇಂಡಿಯಾದಲ್ಲಿ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ವಿಶಿಷ್ಠ ರೀತಿಯ ಶಿಷ್ಯವೇತನಗಳು ಹಾಗೂ ಫೆಲೋಶಿಪ್ಗಳನ್ನು ಒದಗಿಸಲಾಗುತ್ತದೆ, ಇದು ಅವರ ಯಾವುದೇ ಧರ್ಮ, ಜಾತಿ, ಕುಲ, ಪಂಥ ಎಂಬ ಭೇದಭಾವವಿಲ್ಲದೇ ಪ್ರತಿಭಾವಂತ ಹಾಗೂ ಸಂಶೋಧನಾ ಮನೋಭಾವವುಳ್ಳ ಎಲ್ಲರಿಗೂ ಶಿಷ್ಯವೇತನ ದೊರೆಯುತ್ತದೆ. ಇದರಿಂದ ಬಡ ಪ್ರತಿಭಾವಂತ ಹಾಗೂ ಅವಕಾಶವಂಚಿತ ಮಕ್ಕಳಿಗೆ ಇದು ವೇದಿಕೆಯಾಗಲಿದೆ.

ಡಿಜಿಟಲ್ ಇ-ಲಾಕರ್ : ಇದು ಹೆಸರೇ ಸೂಚಿಸುವಂತೆ ಎಲ್ಲ ದಾಖಲೆಗಳ, ಅಂಕಪಟ್ಟಿಗಳ ಮತ್ತು ವಿದ್ಯಾರ್ಥಿಗೆ ಸಂಬಂಧಿಸಿದ ದತ್ತಾಂಶಗಳ ಸಂಗ್ರಹಣಾಗಾರವಾಗಿದೆ.ಎಲ್ಲ ದಾಖಲೆಗಳನ್ನು ಅತ್ಯಂತ ಸುರಕ್ಷಿತ ಹಾಗೂ ಗೌಪ್ಯವಾಗಿಡಲು ಮತ್ತು ಎಲ್ಲಾ ಕಡೆ ಯಾವುದೇ ಸಂದರ್ಭದಲ್ಲಿ ಬಳಸಿಕೊಳ್ಳಲು ಸುಲಭವಾಗಿ ಅನುಕೂಲವಾಗುವಂತೆ ರೂಪಿಸಿದ ಯೋಜನೆಯಾಗಿದೆ. ಯಾವುದೇ ಅರ್ಜಿ ಹಾಕಲು ಪರದಾಟ ಇರುವುದಿಲ್ಲ ಮತ್ತು ಹೆಚ್ಚು ಸುರಕ್ಷಿತವಾಗಿರುತ್ತವೆ.

ಸ್ಮಾರ್ಟ್ ಕ್ಲಾಸ್ ಮತ್ತು ಇ-ಪುಸ್ತಕಗಳು:
ಹಳೆಯ ಸಾಂಪ್ರದಾಯಿಕ ತರಗತಿ ವಾತಾವರಣದ ಹೊರತಾಗಿ ಇದರಿಂದ ಸ್ಮಾರ್ಟ್ ಕ್ಲಾಸ್ಗಳು ಬಂದಿವೆ ಮತ್ತು ಶಾಲಾ ಪುಸ್ತಕಗಳ ಬದಲಾಗಿ ಇ-ಡಿಜಿಟಲ್ ಪುಸ್ತಕಗಳನ್ನು ಒದಗಿಸಲಾಗುತ್ತದೆ. ಇದರಿಂದ ಶಿಕ್ಷಣ ದ್ವಿಮುಖ ಪ್ರಕ್ರಿಯೆಯಾಗಿ ಪರಿಣಾಮಕಾರಿ ಕಲಿಕೆ-ಬೋಧನೆಗೆ ಅನುಕೂಲ ಆಗುತ್ತದೆ. ವಿದ್ಯಾರ್ಥಿಗಳಿಗೆ ತಾಂತ್ರಿಕತೆಯಿಂದ ಕೂಡಿದ ಇ-ಪುಸ್ತಕಗಳ ಸಹಾಯದಿಂದ ಕಲಿಕೆ ನಡೆಯುತ್ತದೆ. ಡಿಜಿಟಲ್ ಸಾಕ್ಷರತೆ ಡಿಜಿಟಲ್ ಇಂಡಿಯಾದ ಮೂಲಕ ದೇಶಾದ್ಯಂತ ಕೇವಲ ಸಾಕ್ಷರತಾ ಪ್ರಮಾಣ ಅಷ್ಟೇ ಅಲ್ಲದೇ ಡಿಜಿಟಲ್ ಸಾಕ್ಷರತೆ ಅಂದರೆ ಡಿಜಿಟಲ್ ಸಾಕ್ಷರರು ಅಥವಾ ತಾಂತ್ರಿಕತೆಯ ಜ್ಞಾನ ಹಾಗೂ ಕೌಶಲ್ಯ ಉಳ್ಳವರು. ವೈಯಕ್ತಿಕವಾಗಿ ತನ್ನ ವೇಗಕ್ಕನುಗುಣವಾಗಿ ಕಲಿಯಲು ಇದರಿಂದ ಸಹಾಯಕಾರಿ ಆಗುತ್ತದೆ. ಸ್ವ-ಉದ್ಯೋಗ, ಸ್ವ-ಮಾರುಕಟ್ಟೆ, ವ್ಯಾಪಾರ, ವ್ಯವಹಾರ, ಆಮದು- ರಫ್ತು, ತನ್ನ ವೃತ್ತಿ, ಮೂಲ ಕಸಬು ಕುರಿತು ಸಂಪೂರ್ಣ ಮಾಹಿತಿಯನ್ನು ತನ್ನ ಹತ್ತಿರದ ಸ್ಥಳದಿಂದಲೇ ಪಡೆಯಬಹುದಾಗಿದೆ.

 ಪ್ರಜ್ಞಾವಂತರಿಂದ ಕೂಡಿದ ಸಮಾಜ ನಿರ್ಮಾಣ : ಈ ಕಾರ್ಯಕ್ರಮವು ಕೇವಲ ನಗರವಾಸಿಗಳಿಗೆ ಮಾತ್ರ ಸೀಮಿತವಾಗಿರದೆ ಪ್ರತಿ ಗ್ರಾಮ ಗ್ರಾಮಗಳಿಗೂ ತಲುಪುವ ಯೋಜನೆಯಾಗಿದೆ. ಇದರ ಸದುಪಯೋಗದಿಂದ ಅನಾಗರೀಕತೆಯಿಂದ ನಾಗರಿಕತೆಯೆಡೆಗೆ, ಹಾಗೂ ಅಜ್ಞಾನದಿಂದ ಜ್ಞಾನದ ಕಡೆಗೆ ಸಾಗಲು ಅನುಕೂಲವಾಗುತ್ತದೆ. ದೇಶದ ಆಗು-ಹೋಗುಗಳು, ತಾಂತ್ರಿಕತೆ, ಜ್ಞಾನ, ತಿಳುವಳಿಕೆ ಮುಂತಾದ ಕೌಶಲ್ಯಪೂರ್ಣವಾದ ಜ್ಞಾನವಂತರಾಗುವುದರಿಂದ ಇಡೀ ಸಮಾಜವೇ ಬದಲಾಗುತ್ತದೆ .

ಇ- ಆಡಳಿತ ಅನವಶ್ಯಕ ಆಡಳಿತ ಹಾಗೂ ಪತ್ರವ್ಯವಹಾರದಲ್ಲಿ ವಿಳಂಬ ಸಲ್ಲದು ಎಂದು ಪ್ರಧಾನಿಯವರ ಅಭಿಪ್ರಾಯವಾಗಿದೆ. ಆಡಳಿತವು ಅತ್ಯಂತ ಪಾರದರ್ಶಕತೆಯಿಂದ ಕೂಡಿರಬೇಕು ಹಾಗೂ ಮುಖ್ಯವಾಗಿ ತಾಂತ್ರಿಕತೆಯಿಂದ ಕೂಡಿದ್ದಾಗಿರಬೇಕು. ಕಾಗದ ರಹಿತ ಆಡಳಿತ ನಿರ್ವಹಣೆಗೆ ಒತ್ತು ನೀಡಲಾಗುತ್ತಿದೆ. ಇದರಿಂದ ತಕ್ಷಣ ಯಾವುದೇ ಸೌಲಭ್ಯ, ಅಪೀಲುಗಳು ನೇರವಾಗಿ ಫಲಾನುಭವಿಗಳಿಗೆ ತಲುಪುವುದಾಗಿದೆ. ವಿವಿಧ ಯೋಜನೆಗಳು, ಸರ್ಕಾರಿ ಸಾರ್ವಜನಿಕ ಉಪಯುಕ್ತ ಕೆಲಸಗಳು, ಎಲ್ಲಾ ಉದ್ಯೋಗಿಗಳ ವೇತನ ವಿನಾಕಾರಣ ವಿಳಂಬವಾಗದೆ, ಇ-ಆಡಳತದಿಂದ ನಿಗದಿತ ಅವಧಿಯಲ್ಲಿ ಕಾರ್ಯಸಾಧಿಸಬಹುದಾಗಿದೆ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಈ ಡಿಜಿಟಲ್ ಇಂಡಿಯಾ ಕಾರ್ಯಕ್ರಮ ಅತ್ಯಂತ ಪ್ರಮುಖ ಸ್ಥಾನವನ್ನು ಪಡೆಯುತ್ತಿದೆ. ಶಿಕ್ಷಣ ಕ್ಷೇತ್ರಕ್ಕೂ ಇದು ಹೊರತಾಗಿಲ್ಲ, ಯೋಜನೆ ಉತ್ತಮವಾಗಿದೆ ಫಲಕ್ಕಾಗಿ ಸ್ವಲ್ಪ ಕಾಯೋಣ....