Tuesday 9 March 2021

ನೈಜ


 ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿ.
1. ಭಾರತದ ನೈಜ ಅಭಿವೃದ್ಧಿಯೆಂದರೆ, ಅದು ಗ್ರಾಮಗಳ ಅಭಿವೃದ್ಧಿ ಎಂದು ಹೇಳಿದವರು ಮಹಾತ್ಮ ಗಾಂಧಿ
2. ಸಂವಿಧಾನದ 73ನೆಯ ತಿದ್ದುಪಡಿಯ ಪ್ರಕಾರ ಭಾರತದಲ್ಲಿ ಮೂರು ಹಂತದ ಪಂಚಾಯ್ತಿಗಳು ಅಸ್ತಿತ್ವಕ್ಕೆ ಬಂದಿವೆ.  
3. ಪಂಚಾಯತ್ ಸಂಸ್ಥೆಗಳು ಪ್ರಜಾಪ್ರಭುತ್ವದ ತತ್ವಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ.
4. ಗ್ರಾಮೀಣ ಬಡ ಮಹಿಳೆಯರನ್ನು ಸಂಘಟಿಸಲು ಮತ್ತು ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲು ಮಹಿಳಾ ಸ್ವ ಸಹಾಯ ಸಂಘಗಳನ್ನು ಅಸ್ತಿತ್ವಕ್ಕೆ ತರಲಾಗಿದೆ.
5. ಪಂಚಾಯತ್ ರಾಜ್ ಸಂಸ್ಥೆಗಳನ್ನು ಗ್ರಾಮೀಣ ಸ್ಥಳೀಯ ಸರ್ಕಾರಗಳು ಎಂದೂ ಕರೆಯುವರು.
6. 2011 ರ ಜನಗಣತಿಯ ಪ್ರಕಾರ ಶೇ.68.84 ರಷ್ಟು ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ.
7. ಭಾರತದ ಆರ್ಥಿಕಾಭಿವೃದ್ಧಿಯಲ್ಲಿ ಗ್ರಾಮೀಣಾಭಿವೃದ್ಧಿಯು ಹೆಚ್ಚಿನ ಮಹತ್ವ ಪಡೆದಿದೆ.

ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.
1. ಗ್ರಾಮೀಣಾಭಿವೃದ್ಧಿಯ ಅರ್ಥ ತಿಳಿಸಿ.
 ಗ್ರಾಮೀಣ ಪ್ರದೇಶದಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳ ಅಭಿವೃದ್ಧಿಯ ಜೊತೆಗೆ ವಸತಿ, ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಸಾರಿಗೆ ಸಂಪರ್ಕ ಮುಂತಾದ ಸಾಮಾಜಿಕ ಮತ್ತು ಆರ್ಥಿಕ ಮೂಲ ಸೌಲಭ್ಯಗಳ ಅಭಿವೃದ್ಧಿ, ಉದ್ಯೋಗ ನಿಮರ್ಾಣ, ಸಾಮಾಜಿಕ ಕಲ್ಯಾಣ ಮುಂತಾದ ಹಲವಾರು ಚಟುವಟಿಕೆಗಳನ್ನು ಒಳಗೊಂಡಿರುವ ವಿಸ್ತೃತ ಅಭಿವೃದ್ಧಿ ಕಾರ್ಯಕ್ರಮವೇ ಗ್ರಾಮೀಣಾಭಿವೃದ್ಧಿ.

2. ಅಧಿಕಾರ ವಿಕೇಂದ್ರೀಕರಣ ಎಂದರೇನು?
 ಪ್ರತಿಯೊಂದು ಹಳ್ಳಯ ಆಡಳಿತದ ಅಧಿಕಾರ ಹಾಗೂ ಹಳ್ಳಿಯ ಅಭಿವೃದ್ಧಿಯ ಜವಾಬ್ದಾರಿಯನ್ನು ಹಳ್ಳಿಯ ಜನರಿಗೇ ವಹಿಸಿಕೊಡುವುದನ್ನು ಅಧಿಕಾರ ವಿಕೇಂದ್ರೀಕರಣ ಎನ್ನುವರು.

3. ಪಂಚಾಯತ್ ರಾಜ್ ವ್ಯವಸ್ಥೆಯ ಮೂರು ಹಂತಗಳನ್ನು ಹೆಸರಿಸಿ.
 ಗ್ರಾಮ ಪಂಚಾಯ್ತಿಗಳು, ತಾಲ್ಲೂಕು ಪಂಚಾಯ್ತಿಗಳು ಹಾಗೂ ಜಿಲ್ಲಾ ಪಂಚಾಯ್ತಿಗಳು.

4. ಯಾವುದಾದರೂ ಎರಡು ವಸತಿ ಯೋಜನೆಗಳನ್ನು ತಿಳಿಸಿ.
 ಇಂದಿರಾ ಆವಾಸ್ ಯೋಜನೆ
 ಅಂಬೇಡ್ಕರ್ - ವಾಲ್ಮೀಕಿ ವಸತಿ ಯೋಜನೆ
 ಆಶ್ರಯ ಯೋಜನೆ

5. ಮಹಿಳೆಯರ ಯಾವ ದುಡಿಮೆಯನ್ನು ಶ್ರಮ ಎಂದು ಪರಿಗಣಿಸಿಲ್ಲ
 ಮಹಿಳೆಯರು ಮನೆಯಲ್ಲಿ ಮಾಡುವ ಕೂಲಿ ರಹಿತ ದುಡಿಮೆಯನ್ನು ಶ್ರಮ ಎಂದು ಪರಿಗಣಿಸಿಲ್ಲ.

 ಕೆಳಗಿನ ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ.
1. ಭಾರತದಲ್ಲಿ ಗ್ರಾಮೀಣ ಆರ್ಥಿಕ ಪರಿಸ್ಥಿತಿ ಹೇಗಿದೆ?
 ಬಹುತೇಕ ಕೃಷಿಯೊಂದನ್ನೇ ಅವಲಂಬಿಸಿರುವ ಗ್ರಾಮೀಣ ಜನರಲ್ಲಿ ಬಡತನ ಹೆಚ್ಚಾಗಿದೆ. ಇವರಲ್ಲಿ ಮೂರನೇ ಒಂದು ಭಾಗದ ಜನರು ಕಡು ಬಡತನದಲ್ಲಿ ಬದುಕುತ್ತಿದ್ದಾರೆ. ಆಧುನಿಕತೆಯ ಹೊಡೆತಕ್ಕೆ ಸಿಲುಕಿ ಗ್ರಾಮೀಣ ಗುಡಿಕೈಗಾರಿಕೆಗಳು ನಶಿಸಿಹೋಗಿವೆ. ಸುಮಾರು ಶೇ.60 ರಷ್ಟು ಜನರು ಪ್ರಾಥಮಿಕ ವಲಯದಲ್ಲಿ ದುಡಿಯುತ್ತಿದ್ದರೂ, ರಾಷ್ಟ್ರೀಯ ಆದಾಯಕ್ಕೆ ಈ ವಲಯದ ಕೊಡುಗೆ ಅತ್ಯಂತ ಕಡಿಮೆಯಿದ್ದು, ಅದು ನಿರಂತರವಾಗಿ ಕಡಿಮೆಯಾಗುತ್ತಿದೆ.

2. ಗ್ರಾಮೀಣ ಅಭಿವೃದ್ಧಿಯ ಮಹತ್ವವನ್ನು ಸಂಕ್ಷಿಪ್ತವಾಗಿ ವಿವರಿಸಿ.
 ಭಾರತದ ಆರ್ಥಿಕಾಭಿವೃದ್ಧಿಯಲ್ಲಿ ಗ್ರಾಮೀಣಾಭಿವೃದ್ಧಿಯು ಹೆಚ್ಚಿನ ಮಹತ್ವ ಪಡೆದಿದೆ. ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚಿನ ಜನರು ವಾಸಿಸುತ್ತಿದ್ದು, ಅವರು ಬಡತನ, ನಿರುದ್ಯೋಗ, ಅನಕ್ಷರತೆ, ಅನಾರೋಗ್ಯ, ಮೂಲ ಸೌಕರ್ಯಗಳ ಕೊರತೆ ಮುಂತಾದ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ, ಗ್ರಾಮೀಣ ಭಾರತವನ್ನು ಸಮೃದ್ಧ ಹಾಗೂ ಶ್ರೀಮಂತಗೊಳಿಸಬೇಕಾದ ಅವಶ್ಯಕತೆ ಇದೆ.

3. ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ವಿಕೇಂದ್ರೀಕರಣ ಹಿನ್ನೆಲೆಯಲ್ಲಿ ತಿಳಿಸಿ.
 ವಿಕೇಂದ್ರೀಕರಣದ ಮೂಲಕ ಸ್ವಾವಲಂಬಿ, ಸ್ವಯಂಪೂರ್ಣ ಹಾಗೂ ಸಮೃದ್ಧ ಗ್ರಾಮಗಳನ್ನು ಅಭಿವೃದ್ಧಿಪಡಿಸಬಹುದು. ಇದನ್ನೆಲ್ಲ ಗಾಂಧೀಜಿಯವರು 'ಗ್ರಾಮ ಸ್ವರಾಜ್ಯ' ಎಂದು ಕರೆದಿದ್ದರು. ವಿಕೇಂದ್ರೀಕರಣವು ಎಲ್ಲ ರೀತಿಯ ಶೋಷಣೆಗಳನ್ನು ತಡೆಯುತ್ತದೆ. ಮಾನವನ ಸ್ವಾತಂತ್ರ್ಯ ಮತ್ತು ಘನತೆಯನ್ನು ಸಂರಕ್ಷಿಸುತ್ತದೆ ಹಾಗೂ ಸಹಾನುಭೂತಿ ಮತ್ತು ಸಹಕಾರದಿಂದ ಮಾನವೀಯ ಮೌಲ್ಯಗಳನ್ನು ವೃದ್ಧಿಸುತ್ತದೆ.

4. ಗ್ರಾಮೀಣಾಭಿವೃದ್ಧಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರವನ್ನು ಬರೆಯಿರಿ.
ಗ್ರಾಮೀಣಾಭಿವೃದ್ಧಿಯಲ್ಲಿ ಗ್ರಾಮಗಳ ಜನರು ಪಾಲ್ಗೊಳ್ಳುವಂತೆ ಮಾಡುವಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರ ಹಿರಿದಾದುದು. ಇವು ಗ್ರಾಮಗಳಿಗೆ ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿ ದೀಪ, ಶೌಚಾಲಯ, ಶಾಲೆ ಮತ್ತು ಆಸ್ಪತ್ರೆ ಕಟ್ಟಡಗಳು, ಮಾರುಕಟ್ಟೆ ಮುಂತಾದ ಸಮುದಾಯಕ್ಕೆ ಉಪಯೋಗವಾಗುವ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿದೆ. ಗ್ರಾಮೀಣ ಉತ್ಪಾದಕ ಚಟುವಟಿಕೆಗಳಾದ ಕೃಷಿ, ಪಶುಪಾಲನೆ, ಕೋಳಿಸಾಕಣೆ, ಮೀನುಗಾರಿಕೆ, ಸಾಮಾಜಿಕ ಅರಣ್ಯ ಮುಂತಾದವುಗಳನ್ನು ಅಭಿವೃದ್ಧಿಪಡಿಸುವ ಮೂಲಕ ಜನರಿಗೆ ದುಡಿಯುವ ಅವಕಾಶಗಳನ್ನು ಹೆಚ್ಚಿಸಬಹುದಾಗಿದೆ. ಕೆರೆ ಕಟ್ಟೆಗಳ ನಿಮರ್ಾಣ, ಅವುಗಳ ಹೂಳು ತೆಗೆಯುವುದು, ಕಿರು ನೀರಾವರಿ ಯೋಜನೆಗಳ ನಿರ್ವಹಣೆ ಮುಂತಾದ ಕಾರ್ಯಗಳ ಮೂಲಕ ಕೃಷಿ ನೀರಾವರಿಯನ್ನು ವಿಸ್ತರಿಸಬಹುದಾಗಿದೆ. ಗ್ರಾಮೀಣ ಹಾಗೂ ಗುಡಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಬಹುದು. ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಬಹುದು. ಪಂಚಾಯ್ತಿಗಳ ಮೂಲಕ ಇವುಗಳ ಅಭಿವೃದ್ಧಿಗಾಗಿ ಸಮ್ಮೇಳನಗಳು, ವಿಚಾರ ಸಂಕಿರಣಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸಬಹುದು. ಉದ್ಯೋಗ ನಿಮರ್ಾಣ ಹಾಗೂ ಬಡತನ ನಿರ್ಮೂಲನ ಯೋಜನೆಗಳನ್ನು ಪಂಚಾಯತ್ ಸಂಸ್ಥೆಗಳ ಮೂಲಕ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬಹುದಾಗಿದೆ. ಗ್ರಾಮಗಳಲ್ಲಿನ ಪಡಿತರ ವ್ಯವಸ್ಥೆಯನ್ನು ಬಲಪಡಿಸಿ, ಅರ್ಹ ಬಡಜನರಿಗೆ ಅಗತ್ಯ ಆಹಾರ ಧಾನ್ಯಗಳು ಸಮಪರ್ಕವಾಗಿ ದೊರೆಯುವಂತೆ ಮಾಡಬಹುದು. ಗ್ರಾಮಗಳಲ್ಲಿನ ವಯೋವೃದ್ಧರು, ಅಂಗವಿಕಲರು, ವಿಧವೆಯರು, ಮಾನಸಿಕ ಅಸ್ವಸ್ಥರು ಮುಂತಾದವರನ್ನು ಗುರುತಿಸಿ, ಅವರಿಗೆ ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ದೊರಕಿಸಿಕೊಡುವ ಮೂಲಕ ಸಮಾಜ ಕಲ್ಯಾಣ ಸೇವೆಗಳನ್ನು ಒದಗಿಸಬಹುದಾಗಿದೆ. ಮಹಿಳಾ ಸ್ವ ಸಹಾಯ ಸಂಘಗಳನ್ನು ಸಂಘಟಿಸಿ, ಉತ್ಪಾದಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ, ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಬಹುದು.

5. ಗ್ರಾಮ ಸ್ವರಾಜ್ಯ ಎಂದರೇನು?
 ಅಧಿಕಾರ ವಿಕೇಂದ್ರೀಕರಣದಿಂದ ಸ್ವಾವಲಂಬಿ ಸ್ವಯಂಪೂರ್ಣ ಹಾಗೂ ಸಮೃದ್ದ ಗ್ರಾಮಗಳನ್ನು ಅಭಿವೃದ್ದಿಪಡಿಸಬಹುದು, ಇದನ್ನೇ ಗ್ರಾಮ ಸ್ವರಾಜ್ಯ ಎನ್ನುವರು.