Tuesday 9 March 2021

ಶತಮಾನ


 ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭತರ್ಿ ಮಾಡಿ:
1. 20ನೇ ಶತಮಾನದಲ್ಲಿ ಸರ್ಕಾರಗಳು ಆರ್ಥಿಕಾಭಿವೃದ್ಧಿಯ ತಂತ್ರವಾಗಿ ಆರ್ಥಿಕ ಯೋಜನೆಯನ್ನು ಜಾರಿಗೆ ತಂದವು.
2. ಭಾರತದಲ್ಲಿ ಪಂಚವಾರ್ಷಿಕ ಯೋಜನೆಯನ್ನು ರೂಪಿಸುವ ಸಂಸ್ಥೆ ರಾಷ್ಟ್ರೀಯ ಯೋಜನಾ ಆಯೋಗ
3. 11ನೇ ಪಂಚವಾರ್ಷಿಕ ಯೋಜನೆಯಲ್ಲಿ 'ಎಲ್ಲರನ್ನು ಒಳಗೊಂಡ ಬೆಳವಣಿಗೆಗೆ' ಪ್ರಾಮುಖ್ಯತೆ ನೀಡಲಾಯಿತು.
4. ಹಸಿರು ಕ್ರಾಂತಿಯ ಪಿತಾಮಹ ಡಾ|| ಎಂ.ಎಸ್. ಸ್ವಾಮಿನಾಥನ್
5. ಪರಿಸರ ಸ್ನೇಹಿ ಹಾಗೂ ಸುಸ್ಥಿರ ಕೃಷಿಗಾಗಿ ಸರ್ಕಾರವು ರೈತರಿಗೆ ಸಾವಯವ ಕೃಷಿ ವಿಧಾನವನ್ನು ಬಳಸುವಂತೆ ಪ್ರೋತ್ಸಾಹಿಸುತ್ತಿದೆ.
6. ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳ ಉತ್ಪಾದನೆಯಲ್ಲಿ ಆದಂತಹ ಅಗಾಧ ಹೆಚ್ಚಳವನ್ನು ಕಾಮನಬಿಲ್ಲು ಕ್ರಾಂತಿ ಎಂದು ಕರೆಯಲಾಗುತ್ತದೆ.
7. ಮಾಂಸದ ಉತ್ಪಾದನೆಗೆ ಕೆಂಪು ಕ್ರಾಂತಿ ಎನ್ನುವರು.
8. ಸಾವಯವ ಕೃಷಿ, ಜೈವಿಕ ಗೊಬ್ಬರ ಮುಂತಾದ ಪರಿಸರ ಸ್ನೇಹಿ ತಂತ್ರಗಳನ್ನು ಬಳಸುವ ಮೂಲಕ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಪ್ರಯತ್ನಕ್ಕೆ 'ಎರಡನೇ ಹಸಿರು ಕ್ರಾಂತಿ ಅಥವಾ 'ಸದಾ ಹಸಿರು ಕ್ರಾಂತಿ' ಎನ್ನಲಾಗುತ್ತದೆ.  
9. ಸದ್ಯದಲ್ಲಿ ರಾಷ್ಟ್ರೀಯ ಆದಾಯಕ್ಕೆ ಸೇವಾವಲಯದಿಂದ ಅತಿ ಹೆಚ್ಚು ಆದಾಯ ಬರುತ್ತದೆ.  

ಗಿ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.

1. 'ಆರ್ಥಿಕ ಯೋಜನೆ'ಯ ಅರ್ಥವನ್ನು ವಿವರಿಸಿ.
 ಸರ್ಕಾರವು ಕೆಲವು ನಿರ್ದಿಷ್ಟ ಧ್ಯೇಯೋದ್ದೇಶಗಳೊಂದಿಗೆ, ದೇಶದಲ್ಲಿರುವ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು, ಜನರ ಸುಖವನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲು, ಪ್ರಜ್ಞಾಪೂರ್ವಕವಾಗಿ ಮತ್ತು ವಿವೇಯುತವಾಗಿ ಜಾರಿಗೊಳಿಸುವ ಪ್ರಕ್ರಿಯೆಯನ್ನು ಆರ್ಥಿಕ ಯೋಜನೆ ಎನ್ನುವರು. ಆರ್ಥಿಕ ಯೋಜನೆಯು ದೇಶದ ಸಮಗ್ರ ಅಭಿವೃದ್ಧಿಯ ಒಂದು ತಂತ್ರವಾಗಿ ಬಳಕೆಯಾಗುತ್ತಿದೆ.

2. ಭಾರತದ 'ಆರ್ಥಿಕ ಯೋಜನೆಯ ಪಿತಾಮಹ' ಯಾರು?
 ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ

3. ಪಂಚವಾರ್ಷಿಕ ಯೋಜನೆಗಳಿಗೆ ಅನುಮೋದನೆ ನೀಡುವ ಸಂಸ್ಥೆ ಯಾವುದು?
  'ರಾಷ್ಟ್ರೀಯ ಅಭಿವೃದ್ಧಿ ಮಂಡಳಿ' ಪಂಚವಾರ್ಷಿಕ ಯೋಜನೆಗಳಿಗೆ ಅನುಮೋದನೆ ನೀಡುವ ಸಂಸ್ಥೆಯಾಗಿದೆ.
4. ಹಸಿರು ಕ್ರಾಂತಿ ಎಂದರೇನು?
 1967-70 ರ ಅವಧಿಯಲ್ಲಿ ಭಾರತದ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಆದಂತಹ ಶೀಘ್ರ ಪ್ರಗತಿಯನ್ನು 'ಹಸಿರು ಕ್ರಾಂತಿ' ಎನ್ನುವರು.

5. ಸುಗ್ಗಿ ನಂತರದ ತಂತ್ರಜ್ಞಾನ ಎಂದರೇನು?
 ಕೃಷಿ ಉತ್ಪನ್ನಗಳ ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರಾಟದಲ್ಲಿ ಬಳಕೆಗೆ ತರಲಾದ ಸುಧಾರಿತ ತಂತ್ರಜ್ಞಾನವನ್ನು 'ಸುಗ್ಗಿ ನಂತರದ ತಂತ್ರಜ್ಞಾನ' ಎನ್ನುವರು.

6. ಜಾಗತೀಕರಣ ಎಂದರೇನು?
 ಭಾರತದ ಅರ್ಥವ್ಯವಸ್ಥೆಯನ್ನು ವಿಶ್ವದ ಅರ್ಥವ್ಯವಸ್ಥೆಯೊಂದಿಗೆ ಒಗ್ಗೂಡಿಸುವ ಪ್ರಕ್ರಿಯೆಯನ್ನು ಜಾಗತೀಕರಣ ಎನ್ನುತ್ತೇವೆ. ಅಂದರೆ ಆಮದು ಮತ್ತು ರಫ್ತು ವ್ಯಾಪಾರದಲ್ಲಿ ಜಾರಿಯಲ್ಲಿದ್ದ ಸರ್ಕಾರದ ನಿಯಂತ್ರಣ ಮತ್ತು ನಿರ್ಬಂಧಗಳನ್ನು ತೆಗೆದುಹಾಕಿ, ರಾಷ್ಟ್ರಗಳ ನಡುವೆ ಪರಸ್ಪರ ಸರಕು ಸೇವೆಗಳು, ಬಂಡವಾಳ ಮತ್ತು ತಂತ್ರಜ್ಞಾನದ ಚಲನವಲನಕ್ಕೆ ಮುಕ್ತ ಅವಕಾಶ ಮಾಡಿಕೊಡುವುದು ಎಂದರ್ಥ.

ಕೆಳಗಿನ ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ.
1. ಕಲ್ಯಾಣ ರಾಜ್ಯಗಳಲ್ಲಿ ಸರ್ಕಾರಗಳ ಕಾರ್ಯಕ್ಷೇತ್ರ ಹೇಗೆ ವಿಸ್ತರಣೆಗೊಂಡಿದೆ?
 20ನೆಯ ಶತಮಾನದಲ್ಲಿ ಕಲ್ಯಾಣ ರಾಜ್ಯಗಳ ಉದಯದೊಂದಿಗೆ ಸರ್ಕಾರಗಳ ಕಾರ್ಯಕ್ಷೇತ್ರ ವಿಸ್ತರಣೆಯಾಯಿತು. ಸರ್ಕಾರಗಳು ಎಲ್ಲ ಪ್ರಜೆಗಳಿಗೆ ಆಹಾರ, ಬಟ್ಟೆ, ವಸತಿ, ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಸಾರಿಗೆ ಸಂಪರ್ಕ ಮುಂತಾ ಹಲವು ಸೌಕರ್ಯಗಳನ್ನು ಒದಗಿಸಿಕೊಡಲು ಮುಂದಾದವು. ಹಾಗಾಗಿ ಸರ್ಕಾರವು ಜನರ ಆರ್ಥಿಕ ಚಟುವಟಿಕೆಗಳಲ್ಲಿ ಮಧ್ಯ ಪ್ರವೇಶಿಸಲು ಮುಂದಾಯಿತು. ಆರ್ಥಿಕ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸರ್ಕಾರದ ಪಾತ್ರ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯಿತು.

2. ಪಂಚವಾರ್ಷಿಕ ಯೋಜನೆಗಳ ಉದ್ದೇಶಗಳನ್ನು ಬರೆಯಿರಿ.
(1) ಉತ್ಪಾದನೆಯನ್ನು ಗರಿಷ್ಟ ಮಟ್ಟಕ್ಕೆ ಹೆಚ್ಚಿಸುವುದು.
(2) ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು.
(3) ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡುವುದು.
(4) ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವುದು.
(5) ಅರ್ಥವ್ಯವಸ್ಥೆಯನ್ನು ಆಧುನೀಕರಣಗೊಳಿಸುವುದು, ಮುಂತಾದವು.

3. ಪಂಚವಾರ್ಷಿಕ ಯೋಜನೆಗಳ ಸಾಧನೆಗಳನ್ನು ಪಟ್ಟಿ ಮಾಡಿರಿ.
 ವರ್ಷಗಳು ಕಳೆದಂತೆ ರಾಷ್ಟ್ರೀಯ ಆದಾಯದ ಬೆಳವಣಿಗೆಯ ವೇಗ ಕ್ರಮೇಣ ಹೆಚ್ಚಿದೆ.
 ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಲಾಗಿದೆ.
 ಕೈಗಾರಿಕೆ ಹಾಗೂ ಸೇವಾವಲಯಗಳ ವಿಸ್ತರಣೆಯಿಂದ ಉದ್ಯೋಗಾವಕಾಶಗಳು ಹೆಚ್ಚಿವೆ.
 ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಗಾಧ ಪ್ರಗತಿ ಕಂಡು ಬಂದಿದೆ.
 ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದೆ.
 ಜನರ ನಿರೀಕ್ಷಿತ ಜೀವಿತಾವಧಿ ಹಾಗೂ ಸಾಕ್ಷರತಾ ಪ್ರಮಾಣ ಹೆಚ್ಚುತ್ತಿದೆ.
 ಶಿಶು ಮರಣ ಮತ್ತು ತಾಯಂದಿರ ಮರಣ ದರಗಳು ಕಡಿಮೆಯಾಗುತ್ತಿವೆ.
 ಜನನಮತ್ತು ಮರಣದರಗಳೆರಡೂ ಕಡಿಮೆಯಾಗುತ್ತಿದ್ದು, ಜನಸಂಖ್ಯಾ ಬೆಳವಣಿಗೆ ದರ ಇಳಿಕೆಯಾಗುತ್ತಿದೆ.

4. ಹಸಿರು ಕ್ರಾಂತಿಗೆ ಪ್ರೇರಣೆಯಾದ ಅಂಶಗಳಾವುವು?
 ಹಸಿರು ಕ್ರಾಂತಿಯು 'ಹೆಚ್ಚು ಇಳುವರಿ ಬೀಜ'ಗಳ ಬಳಕೆಯ ಪರಿಣಾಮವಾಗಿದೆ.
 1960 ರ ಪ್ರಾರಂಭದಲ್ಲಿ ಡಾ|| ನಾರ್ಮನ್ ಬೋರ್ಲಾಗ್ ಎಂಬ ಜರ್ಮನ್ ಕೃಷಿ ವಿಜ್ಞಾನಿ ಮೆಕ್ಸಿಕೋ ದೇಶದಲ್ಲಿ ನಡೆಸಿದ ಪ್ರಯೋಗದ ಫಲವಾಗಿ ಗೋಧಿಯಲ್ಲಿ ಹೆಚ್ಚು ಇಳುವರಿ ಬೀಜಗಳ ಸಂಶೋಧನೆಯಾಯಿತು.  ಈ ಬೀಜಗಳನ್ನು ಬಳಕೆಗೆ ತಂದ ಮೆಕ್ಸಿಕೋ ಮತ್ತು ತೈವಾನ್ ದೇಶಗಳು ಗೋಧಿಯ ಉತ್ಪಾದನೆಯಲ್ಲಿ ಅತಿ ಹೆಚ್ಚಿನ ಪ್ರಗತಿಯನ್ನು ಸಾಧಿಸಿದವು.

5. ಸರ್ಕಾರವು ಉದಾರೀಕರಣದ ಪ್ರಕ್ರಿಯೆಯ ಅಡಿಯಲ್ಲಿ ಯಾವ ಕ್ರಮಗಳನ್ನು ಕೈಗೊಂಡಿದೆ?
 ಸರ್ಕಾರವು ಜನರ ಆರ್ಥಿಕ ಚಟುವಟಿಕೆಗಳ ಮೇಲಿನ ತನ್ನ ಎಲ್ಲ ಅನಗತ್ಯ ನಿಯಂತ್ರಣ ಮತ್ತು ನಿರ್ಬಂಧಗಳನ್ನು ಸಡಿಲಗೊಳಿಸಿ ಮುಕ್ತ ಅರ್ಥವ್ಯವಸ್ಥೆಗೆ ಅವಕಾಶ ಮಾಡಿಕೊಡಲು ಮುಂದಾಗಿದೆ. ಈ ಪ್ರಕ್ರಿಯೆಯನ್ನು ಉದಾರೀಕರಣ ಎನ್ನುತ್ತೇವೆ.
 ಜನರ ಆರ್ಥಿಕ ಚಟುವಟಿಕೆಗಳಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದನ್ನು ಕಡಿಮೆಗೊಳಿಸಿದೆ.
 ಸರಕು ಸೇವೆಗಳ ಉತ್ಪಾದನೆಯಲ್ಲಿ ಸ್ಪಧರ್ೆಗೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ  ಸಂಪನ್ಮೂಲಗಳ ಸಮರ್ಪಕ ಬಳಕೆಯಾಗುತ್ತದೆ.
 ಸರಕು-ಸೇವೆಗಳ ಮಾರಾಟದಲ್ಲಿ ಸ್ಪಧರ್ೆಗೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಸರಕು-  ಸೇವೆಗಳ ಬೆಲೆಗಳು ಕಡಿಮೆಯಾಗಿ, ಅವು ಎಲ್ಲ ಜನರಲ್ಲಿ ಆದಷ್ಟೂ ಸಮಾನವಾಗಿ ಹಂಚಿಕೆಯಾಗಲು ಸಾಧ್ಯವಾಗುತ್ತದೆ.

6. 'ಕಲ್ಯಾಣ ರಾಜ್ಯ' ಎಂದರೇನು?
ಯಾವ ರಾಜ್ಯ ತನ್ನ ನೀತಿ ಹಾಗೂ ಕಾರ್ಯಕ್ರಮಗಳ ಮೂಲಕ ಜನರಿಗೆ ಸಾಮಾಜಿಕ ಹಾಗೂ ಆರ್ಥಿಕ ಸೇವೆಯನ್ನು ಒದಗಿಸುತ್ತದೆಯೂ ಅದೇ 'ಕಲ್ಯಾಣ ರಾಜ್ಯ'.

7. ಯೋಜನಾ ಆಯೋಗದ ಅಧ್ಯಕ್ಷರು ಯಾರಾಗಿರುತ್ತಾರೆ?
ಭಾರತದ ಪ್ರಧಾನ ಮಂತ್ರಿಗಳು ಯೋಜನಾ ಆಯೋಗದ ಅಧ್ಯಕ್ಷರಾಗಿರುತ್ತಾರೆ.

8. ಯಾವ ಮಾದರಿಯನ್ನು ಆಧರಿಸಿ ನಮ್ಮ ಪಂಚವಾರ್ಷಿಕ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ?
ಸೋವಿಯತ್ ರಷ್ಯಾ ಮಾದರಿಯನ್ನು ಆಧರಿಸಿ ನಮ್ಮ ಪಂಚವಾರ್ಷಿಕ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.

9. ಭಾರತಕ್ಕೆ ಯೋಜಿತ ಅರ್ಥವ್ಯವಸ್ಥೆ ಎಂಬ ಪುಸ್ತಕದಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರು ಏನನ್ನು ಒತ್ತಿ ಹೇಳಿದ್ದಾರೆ?
ಸರ್ ಎಂ. ವಿಶ್ವೇಶ್ವರಯ್ಯನರವರು ಭಾರತಕ್ಕೆ ಯೋಜಿತ ಅರ್ಥವ್ಯವಸ್ಥೆ ಎಂಬ ಪುಸ್ತಕದಲ್ಲಿ ಭಾರತದ ಆರ್ಥಿಕ ಅಭಿವೃದ್ಧಿಗೆ ಯೋಜನೆಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

10. ಆರ್ಥಿಕ ಯೋಜನೆಗಳನ್ನು ಭಾರತದಲ್ಲಿ ಪಂಚವಾರ್ಷಿಕ ಯೋಜನೆ ಎಂದು ಏಕೆ ಕರೆಯುವರು?
ಭಾರತದಲ್ಲಿ ಆರ್ಥಿಕ ಯೋಜನೆಗಳ ಅವಧಿ 5 ವರ್ಷಗಳಾಗಿರುವುದರಿಂದ ಇವುಗಳನ್ನು ಪಂಚವಾರ್ಷಿಕ ಯೋಜನೆಗಳೆನ್ನುವರು.

11. ಸುಗ್ಗಿ ಪೂರ್ವ ತಂತ್ರಜ್ಞಾನ ಎಂದರೇನು?
ಕೃಷಿ ಉತ್ಪಾದನೆಯಲ್ಲಿ ಬಳಸಲಾಗುವ ಸುಧಾರಿತ ತಂತ್ರಜ್ಞಾನವನ್ನು ಸುಗ್ಗಿ ಪೂರ್ವ ತಂತ್ರಜ್ಞಾನ ಎನ್ನುವರು.