Friday 5 March 2021

ಭೂಮಿ


 ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಗಳನ್ನು ಬರೆಯಿರಿ.
1. ಭೂಬಳಕೆ ಎಂದರೇನು?
 ಭೂಮಿ ಪ್ರಾಕೃತಿಕ ಸಂಪನ್ಮೂಲಗಳಲ್ಲಿ ಅತಿ ಮುಖ್ಯವಾದುದು. ಭೂಮಿಯನ್ನು ಸಾಗುವಳಿ ಅರಣ್ಯ, ಹುಲ್ಲುಗಾವಲು, ಬೀಳು ಭೂಮಿ, ವ್ಯವಸಾಯೇತರ ಬಳಕೆ, ಹೀಗೆ ವಿವಿಧ ಉದ್ದೇಶಗಳಿಗೆ ಬಳಸುವುದನ್ನೇ 'ಭೂ ಬಳಕೆ' ಎನ್ನುವರು.

2. ಭೂ ಬಳಕೆಯ ಮೇಲೆ ಪ್ರಭಾವ ಬೀರುವ ಅಂಶಗಳು ಯಾವುವು?
 ಭೂ ಬಳಕೆಯ ಮೇಲೆ ಹಲವಾರು ಪ್ರಾಕೃತಿಕ, ಆರ್ಥಿಕ ಹಾಗೂ ಸಾಮಾಜಿಕ ಅಂಶಗಳು ಪ್ರಭಾವ ಬೀರುತ್ತವೆ. ಅವುಗಳಲ್ಲಿ ಭೂ ಸ್ವರೂಪಗಳು, ವಾಯುಗುಣ ಮಣ್ಣಿನ ಲಕ್ಷಣಗಳು ಪ್ರಾಕೃತಿಕವಾಗಿ ಪ್ರಭಾವ ಬೀರುತ್ತವೆ. ಭೂ ಹಿಡುವಳಿ, ಜನಸಂಖ್ಯೆ, ವ್ಯವಸಾಯೋತ್ಪನ್ನಗಳ ಬೇಡಿಕೆ, ಉದ್ಯೋಗ ಜನರ ಮನೋಭಾವ, ಸಾಮಾಜಿಕ ಪರಿಸ್ಥಿತಿ ಮಾರುಕಟ್ಟೆ ಮೊದಲಾದ ಅಂಶಗಳು ಪ್ರಭಾವ ಬೀರುತ್ತವೆ. ತಾಂತ್ರಿಕತೆ, ನೀರಾವರಿ ಸೌಲಭ್ಯ, ಮಾನವನ ಸಾಮಥ್ರ್ಯ, ಭೂ ಒಡೆತನ ಮೊದಲಾದವು ಭೂ ಬಳಕೆಯ ಮೇಲೆ ಪ್ರಭಾವವನ್ನು ಬೀರುತ್ತವೆ.

3. ವ್ಯವಸಾಯ ಎಂದರೇನು?
 ಭೂ ವಲಯವನ್ನು ಉಳುಮೆ ಮಾಡಿ ಸಸ್ಯಗಳನ್ನು ಪೋಷಿಸಿ ಅದರಿಂದ ಮಾನವ ಮತ್ತು ಪ್ರಾಣಿಗಳಿಗೆ ಉಪಯೋಗವನ್ನು ಪಡೆಯುವುದನ್ನೇ ವ್ಯವಸಾಯ ಅಥವಾ ಕೃಷಿ ಎಂದು ಕರೆಯುವರು. ವ್ಯಾಪಕ ಅರ್ಥದಲ್ಲಿ ಇದು ಮೀನುಗಾರಿಕೆ, ಪಶುಪಾಲನೆ ಮತ್ತು ಅರಣ್ಯಗಾರಿಕೆಯನ್ನೂ ಸಹ ಒಳಗೊಂಡಿದೆ.

4. ವ್ಯವಸಾಯದ ವಿಧಗಳು ಯಾವುವು?
ಸಾಂದ್ರ ಬೇಸಾಯ
ಜೀವನಾಧಾರ ಬೇಸಾ
ವಾಣಿಜ್ಯ ಬೇಸಾಯ
ಮಿಶ್ರ ಬೇಸಾಯ
ತೋಟಗಾರಿಕಾ ಬೇಸಾಯ

5. ಖರೀಫ್ ಬೇಸಾಯ ಎಂದರೇನು?
 ನೈರುತ್ಯ ಮಾನ್ಸೂನ್ ಮಾರುತಗಳ ಅವದಿಯ ಬೇಸಾಯವನ್ನೇ 'ಮುಂಗಾರು ಬೇಸಾಯ' ಅಥವಾ 'ಖರೀಫ್ ಬೇಸಾಯ'ವೆಂದು ಕರೆಯುವರು. ಇಲ್ಲಿ ಜೂನ್ ಅಥವಾ ಜುಲೈ ತಿಂಗಳಲ್ಲಿ ಬಿತ್ತನೆ ಮಾಡಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಕಟಾವು ಮಾಡುವರು.

6. ರಬಿ ಎಂದರೇನು?
 ಅಕ್ಟೋಬರ್ ನವೆಂಬರ್ನಲ್ಲಿ ಬಿತ್ತನೆ ಮಾಡಿ ಫೆಬ್ರವರಿ- ಮಾಚರ್ಿ ಅವದಿಯಲ್ಲಿ ಕಟಾವು ಮಾಡುವುದಕ್ಕೆ ರಬಿ ಬೇಸಾಯ ಅಥವಾ ಹಿಂಗಾರು ಬೇಸಾಯ ಎನ್ನುವರು.

7. ಹತ್ತಿ ಬೆಳೆ ಬೆಳೆಯಲು ಅವಶ್ಯಕವಿರುವ ಪೂರಕಾಂಶಗಳಾವುವು?
 ಹತ್ತಿಯು ಉಷ್ಣವಲಯ ಹಾಗೂ ಉಪ ಉಷ್ಣ ವಲಯದ ಬೆಳೆಯಾಗಿದೆ. ಹತ್ತಿ ಬೆಳೆಗೆ 200 ಯಿಂದ 250 ಸೆಲ್ಸಿಯಸ್ವರೆಗೆ ಉಷ್ಣಾಂಶದ ಅವಶ್ಯಕತೆ ಇದೆ. ಸುಮಾರು 75 ರಿಂದ 150 ಸೆಂ. ಮೀ. ಗಿಂತ ಹೆಚ್ಚು ಮಳೆ ಪಡೆಯುವ ಪ್ರದೇಶಗಳಲ್ಲಿ ಬೆಳೆಯಬಹುದು. ಕಪು್ ಮಣ್ಣು ಮತ್ತು ಮೆಕ್ಕಲು ಮಣ್ಣು ಇದಕ್ಕೆ ಸೂಕ್ತ. ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಮಣ್ಣು ಇದಕ್ಕೆ ಹೆಚ್ಚು ಸೂಕ್ತ.

8. ಪುಷ್ಪ ಬೇಸಾಯದಲ್ಲಿ ನಿಮ್ಮ ಸುತ್ತಮುತ್ತ ಬೆಳೆಯುತ್ತಿರುವ ಪುಷ್ಪಗಳ ಪಟ್ಟಿ ತಯಾರಿಸಿ
 ವಾಣಿಜ್ಯ ಮಾದರಿಯ ಪುಷ್ಪ ಕೃಷಿ ಅಥವಾ ಬೇಸಾಯವನ್ನು 'ಪೊ್ರಿಕಲ್ಚರ್' ಎನ್ನುವರು. ನಾವು ಬೆಳೆಯುವ ಹೂವುಗಳಲ್ಲಿ ಮಲ್ಲಿಗೆ, ದುಂಡುಮಲ್ಲಿಗೆ, ಸಂಪಿಗೆ, ಚಟೆಂಡು ಹೂವು, ಸೇವಂತಿಗೆ, ಕನಕಾಂಬರ, ಗುಲಾಬಿ, ಲಿಲ್ಲಿ, ಮುಂತಾದವು ಪ್ರಮುಖವಾಗಿವೆ. ಸಾಂಪ್ರದಾಯಿಕ ಹೂವುಗಳಿಗಿಂತ ಉದ್ದವಾಗಿ ಕತ್ತರಿಸಿದ ಗುಲಾಬಿ, ಆರ್ಕೆಡ್, ಲಿಲ್ಲಿ, ಗ್ಲಾಡಿಯೋಲಸ್, ಕಾರನೇಷನ್ ಆಂಥೋರಿಯಂ ಮೊದಲಾದ ಹೂವುಗಳಿಗೆ ಅಪಾರ ಬೇಡಿಕೆ ಇದ್ದು ಇವುಗಳ ಉತ್ಪಾದನೆ ಹೆಚ್ಚು ಪ್ರಾಮುಖ್ಯತೆ ಗಳಿಸಿದೆ.

9. ಟರ್ಮಿನಲ್ ಮಾರ್ಕೆಟ್ ಎಂದರೇನು?
 ತೋಟಗಾರಿಕಾ ಬೆಳೆಗಳ ಉತ್ಪಾದನೆಯ ಪ್ರದೇಶಗಳನ್ನು ಮಾರುಕಟ್ಟೆಗಳೊಡನೆ ಸಂಪರ್ಕಿಸುವ ಮಹತ್ತರ ಯೋಜನೆಯನ್ನು ಕೈಗೊಳ್ಳಲಾಗಿದೆ. ಈ ಮಾರುಕಟ್ಟೆಗಳು ಸುತ್ತಲಿನ ಉತ್ಪಾದನಾ ಪ್ರದೇಶಗಳೊಡನೆ ನೇರ ಸಂಪರ್ಕವನ್ನು ಹೊಂದಿರುತ್ತವೆ. ಇದನ್ನು ಟರ್ಮಿನಲ್ ಮಾರ್ಕೆಟ್ ಎನ್ನುವರು.

10. ಬೀಳುಭೂಮಿ ಎಂದರೇನು?
 ವ್ಯವಸಾಯಕ್ಕೆ ಒಳಪಡದ ಭೂಮಿಯೇ ಬೀಳುಭೂಮಿ. ಜನಸಂಖ್ಯೆ ಅದಿಕಗೊಂಡಂತೆ ವ್ಯವಸಾಯೋತ್ಪನ್ನಗಳ ಮೇಲೆ ಹೆಚ್ಚು ಒತ್ತಡವಾಗಿದ್ದು, ಅದಕ್ಕೆ ಅನುಗುಣವಾಗಿ ಹೆಚ್ಚು ಕ್ಷೇತ್ರವನ್ನು ಸಾಗುವಳಿಗೆ ಬಳಸಲಾಗಿದೆ. ಅಲ್ಲದೆ ಬೀಳು ಬಿದ್ದಿದ್ದ ಹಾಗೂ ವ್ಯವಸಾಯ ಯೋಗ್ಯವಲ್ಲದ ಭೂ ಪ್ರದೇಶಗಳನ್ನು ಸಹ ತಾಂತ್ರಿಕತೆಯ ಅಳವಡಿಕೆಯೊಂದಿಗೆ ಇಂದು ವ್ಯವಸಾಯಕ್ಕೆ ಬಳಸಲಾಗಿದೆ.

11. ಭೂ ಬಳಕೆಯ ಪ್ರಕಾರಗಳು ಯಾವುವು?
* ನಿವ್ವಳ ಸಾಗುವಳಿ ಕ್ಷೇತ್ರ
* ಅರಣ್ಯ ಭೂಮಿ
*ವ್ಯವಸಾಯೇತರ ಭೂ ಬಳಕೆ
* ಬೀಳು ಭೂಮಿ
*ಹುಲ್ಲುಗಾವಲು
* ಬಳಕೆಯಾಗದ ವ್ಯವಸಾಯ ಯೋಗ್ಯ ಭೂಮಿ.

12. ವ್ಯವಸಾಯದ ಪ್ರಾಮುಖ್ಯತೆಯನ್ನು ವಿವರಿಸಿ.
* ವ್ಯವಸಾಯವು ಭಾರತೀಯರ ಮುಖ್ಯ ಉದ್ಯೋಗವಾಗಿದೆ. ದೇಶದ ಎಲ್ಲ ಭಾಗಗಳಲ್ಲಿಯೂ ವಿವಿಧರೂಪ ಹಾಗೂ ವಿವಿಧ ಉತ್ಪಾದನೆಗಲಲ್ಲಿ ತೊಡಗಿರುವುದನ್ನು ಕಾಣಬಹುದು.
* ದೇಶದ ಅಗಾಧ ಜನಸಂಖ್ಯೆಗೆ ವ್ಯವಸಾಯವು ಆಹಾರ ಧಾನ್ಯಗಳನ್ನು ಪೂರೈಸುತ್ತದೆ.
* ವ್ಯವಸಾಯವು ಜೀವನಾಧಾರ ಉದ್ಯೋಗವಾಗಿದ್ದು, ಉಳಿದ ಎಲ್ಲ ಕ್ಷೇತ್ರಗಳಿಗಿಂತಲೂ ಹೆಚ್ಚು ಜನರಿಗೆ ಉದ್ಯೋಗಾವಕಾಶಗಳನ್ನು ನೀಡಿದೆ.
* ಭಾರತವು ಅಸಂಖ್ಯಾತ ಕೈಗಾರಿಕೆಗಳನ್ನು ಹೊಂದಿದ್ದು, ಈ ಕೈಗಾರಿಕೆಗಳು ತಮ್ಮ ಕಚ್ಚಾ ವಸ್ತುಗಳಿಗಾಗಿ ವ್ಯವಸಾಯವನ್ನೇ ಅವಲಂಬಿಸಿವೆ.
* ವ್ಯವಸಾಯವು ಪರೋಕ್ಷವಾಗಿಯೂ ಹಲವಾರು ಕೈಗಾರಿಕೆಗಳನ್ನು ಪೋಷಿಸುತ್ತದೆ. ಉದಾ : ರಾಸಾಯನಿಕ ಗೊಬ್ಬರ, ಕ್ರಿಮಿ ಕೀಟನಾಶಕಗಳು, ಯಂತ್ರೋಪಕರಣಗಳ ಕೈಗಾರಿಕೆಗಳು.
* ವ್ಯವಸಾಯವು ಸಂಚಾರ ಸಾರಿಗೆ, ವ್ಯಾಪಾರ, ಬ್ಯಾಂಕಿಂಗ್ ಮೊದಲಾದ ಹಲವಾರು ತೃತೀಯ ಆರ್ಥಿಕ ಉದ್ಯೋಗಗಳನ್ನು ಪೋಷಿಸಿದೆ.

13) ಸ್ಥಿರ ಬೇಸಾಯ ಹಾಗೂ ಸ್ಥಳಾಂತರ ಬೇಸಾಯಗಳಿಗಿರುವ ವ್ಯತ್ಯಾಸವೇನು?
*ಸ್ಥಿರ ಬೇಸಾಯ : ಯಾವುದೇ ಒಂದು ಪ್ರದೇಶದಲ್ಲಿ ಜನರು ಶಾಶ್ವತವಾಗಿ ನೆಲೆಸಿ ಬೇಸಾಯವನ್ನು ಮಾಡುವುದಕ್ಕೆ ಸ್ಥಿರಬೇಸಾಯ ಎನ್ನುವರು. ಈ ಬೇಸಾಯವು ಸಾಂಪ್ರದಾಯಿಕವಾಗಿದ್ದು, ಚಿಕ್ಕ ಹಿಡುವಳಿಯ್ನು ಹೊಂದಿರುತ್ತದೆ.
*ಸ್ಥಳಾಂತರ ಬೇಸಾಯ : ಯಾವುದೇ ಒಂದು ಪ್ರದೇಶ ದಲ್ಲಿ ಜನರು ಸ್ಥಿರವಾಗಿ ನೆಲೆಸದೆ ಅಲ್ಲಿರುವ ಅರಣ್ಯಗಳನ್ನು ಕಡಿದು ಬೇಸಾಯ ಮಾಡುವರು. ಒಂದೆರಡು ವರ್ಷ ಬೇಸಾಯ ಮಾಡಿ ಅಲ್ಲಿನ ಮಣ್ಣಿನ ಫಲವತ್ತತೆ ಕಡಿಮೆಯಾದ ನಂತರ ಬೇರೆ ಪ್ರದೇಶಗಳಿಗೆ ಹೋಗಿ ಬೇಸಾಯ ಮಾಡುವರು. ಇಂತಹ ಬೇಸಾಯವನ್ನು ಸ್ಥಳಾಂತರ ಬೇಸಾಯ ಎನ್ನುವರು. ಇಂದು ಇದನ್ನು ನಿಷೇದಿಸಲಾಗಿದೆ.

14) ಮಿಶ್ರ ಬೇಸಾಯ ಎಂದರೇನು?
 ಕೃಷಿ ಭೂಮಿಯನ್ನು ಬೆಳೆಗಳನ್ನು ಬೆಳೆಯುವುದಕ್ಕಷ್ಟೇ ಅಲ್ಲದೇ ದನಕರು ಸಾಕಾಣಿಕೆ, ಕೋಳಿ ಸಾಕಾಣಿಕೆ, ಹಂದಿ ಸಾಕಾಣಿಕೆ, ರೇಷ್ಮೆ ಕೃಷಿ ಮುಂತಾದ ಉದ್ದೇಶಗಳಿಗಾಗಿಯೂ ಬಳಸಿದರೆ ಅದನ್ನು ಮಿಶ್ರ ಬೇಸಾಯ ಎನ್ನುವರು.

15) ಬೆಳೆಗಳ ಮಾದರಿ ಎಂದರೇನು?
 ಯಾವುದೇ ಒಂದು ಪ್ರದೇಶವು ಒಂದು ನಿದರ್ಿಷ್ಟ ಕಾಲಾವದಿಯಲ್ಲಿ ಹಲವಾರು ಬೆಳೆಗಳಿಂದ ಆವರಿಸಿದ್ದು, ಇವುಗಳ ಅನುಪಾತವನ್ನು ಬೆಳೆ ಮಾದರಿ ಎನ್ನುವರು.

16. ಬೆಳೆಗಳ ಮಾದರಿಯನ್ನು ನಿರ್ಧರಿಸುವ ಅಂಶಗಳು ಯಾವುವು?
 ನೈಸರ್ಗಿಕ ಅಂಶಗಳು : ನೈಸರ್ಗಿಕ ಅಂಶಗಳಲ್ಲಿ ಭೂ ಸ್ವರೂಪ, ವಾಯುಗುಣ ಮತ್ತು ಮಳೆ. ಪಮರಉಖವಾಗಿದ್ದು ಬೆಳೆಯ ಮಾದರಿಯನ್ನು ನಿರ್ಧರಿಸವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
 ಆರ್ಥಿಕ ಅಂಶಗಳು : ಭಾರತದ ಕೆಲವು ವಿಶಾಲ ಹಿಡುವಳಿ ಹೊಂದಿರುವ ಪ್ರದೇಶಗಳಲ್ಲಿ ಮುಖ್ಯವಾಗಿ ಹೆಚ್ಚು ಬೆಲೆ ಕೊಡುವ ವಾಣಿಜ್ಯ ಉತ್ಪನ್ನಗಳನ್ನು ಬೆಳೆಯಲಾಗುತ್ತದೆ. ಇದರ ಮುಖ್ಯ ಉದ್ದೇಶ ಹೆಚ್ಚು ಆರ್ಥಿಕ ಲಾಭ ಪಡೆಯುವುದಾಗಿದೆ.
 ಸಾಮಾಜಿಕ ಅಂಶಗಳು : ಪ್ರಮುಖವಾಗಿ ಸಾಮಾಜಿಕ ಅಂಶಗಳಾದ ಸಂಪ್ರದಾಯ, ಮೂಢನಂಬಿಕೆ, ಅನಕ್ಷರತೆ ಮುಂತಾದ ಅಂಶಗಳು ಸಹ ಬೆಳೆ ಯ ಮಾದರಿಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
 ರೈತರ ಮನೋಭಾಗ : ಯಾವುದೇ ಒಂದು ಪ್ರದೇಶದ ಬೆಳೆ ಮಾದರಿಯಲ್ಲಿ ರೈತರ ಧೋರಣೆಯು ಪ್ರಮುಖ ಪ್ರಭಾವ ಬೀರುತ್ತದೆ. ಉದಾಹರಣೆ : ಉತ್ತರ ಕನರ್ಾಟಕದಲ್ಲಿ ರೈತರು ಮೊದಲು ಜೋಳ, ಗೋದಿಯನ್ನು ಹೆಚ್ಚಾಗಿ ಬೆಳೆಯುತ್ತಲಿದ್ದರು. ಆದರೆ ಇತ್ತೀಚೆಗೆ ಆರ್ಥಿಕ ಲಾಭ ಕೊಡುವ ಸೂರ್ಯಕಾಂತಿ, ಮತ್ತು ಶೇಂಗಾ, ತೊಗರಿ, ಈರುಳ್ಳಿ ಬೆಳೆಯನ್ನು ಬೆಳೆಯುತ್ತಿದ್ದಾರೆ.

17. ಭಾರತದ ಮೂರು ಬೆಳೆ ಋತುಗಳು ಅಥವಾ ವ್ಯವಸಾಯದ ಅವದಿಗಳು ಯಾವುವು?
 ಭಾರತದಲ್ಲಿ ಮೂರು ವ್ಯವಸಾಯದ ಅವದಿಗಳು ಕಂಡು ಬರುತ್ತವೆ. ಅವುಗಳೆಂದರೆ
 () ಮುಂಗಾರು ಅಥವಾ ಖರೀಫ್ ಬೇಸಾಯ
 () ಹಿಂಗಾರು ಅಥವಾ ಚಳಿಗಾಲದ ಅಥವಾ ರಬಿ ಬೇಸಾಯ
 () ಬೇಸಿಗೆಯ ಅಥವಾ ಜೇಡ್ ಬೇಸಾಯ

18. ಜೇಡ್ ಬೇಸಾಯ ಎಂದರೇನು?ಈ ಬೇಸಾಯದ ಬೆಳೆಗಳನ್ನು ಹೆಸರಿಸಿ.
 ರಬಿ ಹಾಗೂ ಖರೀಫ್ ಬೇಸಾಯದ ನಡುವಿನ ಅವದಿಯಲ್ಲಿಯೂ ಭಾರತದ ಹಲವು ಕಡೆಗಳಲ್ಲಿ ಬೇಸಾಯ ಕಂಡುಬರುವುದು. ಬೇಸಿಗೆಯ ಈ ಬೇಸಾಯವನ್ನೇ 'ಜೇಡ್ ಬೇಸಾಯ ಕಂಡು ಬರುವುದು. ಬೇಸಿಗೆಯ ಈ ಬೇಸಾಯವನ್ನೇ 'ಜೇಡ್ ಬೇಸಾಯ'ವೆಂದು ಕರೆಯುವರು.  ದ್ವಿದಳ ಧಾನ್ಯಗಳಾದ ಉದ್ದು, ಹೆಸರು, ಎಣ್ಣೆಕಾಳುಗಳು ಮತ್ತು ತರಕಾರಿಗಳನ್ನು ಈ ಅವದಿಯಲ್ಲಿ ಬೆಳೆಯುವರು.

19. ಸುವರ್ಣ ಕ್ರಾಂತಿ ಎಂದರೇನು?
 ಭಾರತ ಮಾವು ಬಾಳೆ, ಸಪೋಟ ಹಾಗೂ ನಿಂಬೆ ಜಾತಿಯ ಹಣ್ಣುಗಳ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಮೊದಲನೆಯ ಸ್ಥಾನದಲ್ಲಿದೆ. ಇದರಿಂದ ಸರಕಾರವು ತೋಟಗಾರಿಕೆ ಬೇಸಾಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು, ಈ ಕ್ಷೇತ್ರವು ಅಪಾರ ಪ್ರಗತಿಯನ್ನು ಸಾದಿಸಿದೆ. ತೋಟಗಾರಿಕೆ ಬೇಸಾಯದ ಈ ಪ್ರಗತಿಯನ್ನು 'ಸುವರ್ಣ ಕ್ರಾಂತಿ'ಎನ್ನುವರು.

20. ಬೆಳೆಗಳು ಹಾಗೂ ಅತಿ ಹೆಚ್ಚು ಉತ್ಪಾದನೆ ಮಾಡುವ ರಾಜ್ಯಗಳಲ್ಲಿ ಹೆಸರಿಸಿ.
   ಬೆಳೆ     ಹೆಚ್ಚು ಉತ್ಪಾದಕರು
 1) ಭತ್ತ    1) ಪಶ್ಚಿಮ ಬಂಗಾಳ
 2) ಗೋದಿ    2) ಗೋದಿ ಪ್ರದೇಶ
 3) ಕಬ್ಬು    3) ಉತ್ತರ ಪ್ರದೇಶ
 4) ಹೊಗೆಸೊಪು್   4) ಉತ್ತರ ಪ್ರದೇಶ
 5) ಹತ್ತಿ     5) ಮಹಾರಾಷ್ಟ್ರ
 6) ಟೀ    6) ಅಸ್ಸಾಂ