Wednesday 31 March 2021

ಕರ್ನಾಟಕ ನಾಗರಿಕ ಸೇವಾ

 


ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957.
- ಕೆ.ಎಸ್.ರವಿಶಂಕರ
ಸರ್ಕಾರಿ ನೌಕರನ ಮೇಲೆ ದೋಷಾರೋಪಣೆಯನ್ನು ಮಾಡುವಾಗ ನೌಕರನು ಯಾವ ಯಾವ ನಿಯಮಗಳನ್ನು ಉಲ್ಲಂಘಿಸಿದ್ದಾನೆಂಬುದನ್ನು ಸ್ಪಷ್ಟಪಡಿಸಬೇಕು.

ಈ ದೋಷಾರೋಪಣೆಗೆ ಉತ್ತರಿಸಲು ಆರೋಪಿ ನೌಕರನಿಗೆ ನ್ಯಾಯಯುತ ಕಾಲಾವಕಾಶ ನೀಡಬೇಕು. ರೂಢಿಯಲ್ಲಿರುವಂತೆ ರಜಾ ದಿನ ಹೊರತುಪಡಿಸಿ ಕನಿಷ್ಠ 10 ರಿಂದ 15 ದಿನ ಕಾಲಾವಕಾಶ ನೀಡಬಹುದು. ಶಿಸ್ತು ಪ್ರಾಧಿಕಾರಿಯು ಆರೋಪಿ ನೌಕರನು ಸಲ್ಲಿಸುವ ಪ್ರತಿ ರಕ್ಷಣಾ ಹೇಳಿಕೆ ಹಾಗೂ ಹೇಳಿಕೆಗೆ ಸಮರ್ಥನೆಯಾಗಿ ಸಲ್ಲಿಸಿರುವ ದಾಖಲೆಗಳನ್ನು ಕೂಲಕುಂಶವಾಗಿ ಪರಿಶೀಲಿಸಿ ತನ್ನ ನಿರ್ಣಯವನ್ನು ದಾಖಲಿಸಬೇಕು. ಈ ರೀತಿ ವಿಚಾರಣಾ ಪ್ರಕ್ರಿಯೆಯನ್ನು ನಡೆಸುವಾಗ ಪೂರ್ವಾಗ್ರಹಪೀಡಿತರಾಗಿ ಕ್ರಮ ಕೈಗೊಳ್ಳದೆ ಪ್ರಕರಣದ ಹಿನ್ನೆಲೆ ಹಾಗೂ ದಾಖಲೆಗಳನ್ನು ಆಧರಿಸಿ ನಿರ್ಣಯ ಕೈಗೊಳ್ಳುವುದು ಅಪೇಕ್ಷಣೀಯ. ಒಂದು ಬಾರಿ ನೌಕರನ ಮೇಲೆ ದೋಷಾರೋಪಣಾ ಪಟ್ಟಿಯನ್ನು ಜಾರಿ ಮಾಡಿದ ನಂತರ ಕಾಲಮಿತಿಯಲ್ಲಿ ವಿಚಾರಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ತತ್ಸಂಬಂಧವಾದ ಆದೇಶವನ್ನು ಹೊರಡಿಸಬೇಕು. ನೌಕರನು ನಿವೃತ್ತಿಗೆ ಸಮೀಪದಲ್ಲಿದ್ದಲ್ಲಿ ನಿವೃತ್ತಿಗೆ ಪೂರ್ವದಲ್ಲಿ ವಿಚಾರಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದಲ್ಲಿ ಮುಂದೆ ಉದ್ಬವವಾಗುವ ಕಾನೂನಿನ ತೊಡಕುಗಳನ್ನು ತಡೆಗಟ್ಟಬಹುದಾಗಿದೆ.

ಸಿ.ಸಿ.ಎ. ನಿಯಮ 12 ರಡಿ ವಿಚಾರಣೆ ಕೈಗೊಂಡು ಆರೋಪ ಸಾಬೀತಾದಲ್ಲಿ ಲಘು ದಂಡನೆಗಳನ್ನು ಮಾತ್ರ ವಿಧಿಸಬೇಕೇ ಹೊರತು ಕಠಿಣ ದಂಡನೆಗಳನ್ನು ವಿಧಿಸುವಂತಿಲ್ಲ. ಸಿಸಿಎ ನಿಯಮ 12 ರಡಿ ನಡೆಸಲಾದ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದ್ದಲ್ಲಿ ಪ್ರಕರಣದ ತೀವ್ರತೆಯನ್ನನುಸರಿಸಿ ಸಿಸಿಎ ನಿಯಮ 8  ಗಳಲ್ಲಿ ಯಾವುದಾದರೊಂದು ದಂಡನೆಯನ್ನು ಮಾತ್ರ ವಿಧಿಸಬಹುದು. ಈ ರೀತಿ ದಂಡನಾದೇಶವನ್ನು ಹೊರಡಿಸಿದಾಗ ಸಿಸಿಎ ನಿಯಮ 8 ರಲ್ಲಿ ದಂಡನಾ ಅವಧಿಯು ತಕ್ಷಣ ಮುಕ್ತಾಯವಾಗುವುದರಿಂದ ಅದರ ಪರಿಣಾಮ ಮುಂದುವರಿಯುವುದಿಲ್ಲ. ಆದರೆ ನಿಯಮ 8ರಡಿ ದಂಡನಾದೇಶವನ್ನು ಹೊರಡಿಸಿದಾಗ ಅದರ ಪರಿಣಾಮದ ಅವಧಿಯನ್ನು ಕೆ.ಸಿ.ಎಸ್.ಆರ್. ನಿಯಮ 59 ರನ್ವಯ ಸ್ಪಷ್ಟಪಡಿಸಬೇಕು. ಅಂದರೆ.(1) ದಂಡನಾದೇಶ ಜಾರಿಗೆ ಬರುವ ದಿನಾಂಕ(2) ದಂಡನಾದೇಶ ಜಾರಿಯಲ್ಲಿರುವ ಅವಧಿ(ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ) (3) ಕಾಲಿಕ ವೇತನ ಶ್ರೇಣಿಯಲ್ಲಿ ಹಂತವನ್ನು ಇಳಿಸಿದಲ್ಲಿ ಇಳಿಸಲಾದ ವೇತನ ಶ್ರೇಣಿ ಹಾಗೂ ಯಾವ ಹಂತಕ್ಕೆ ಇಳಿಸಲಾಗಿದೆ. (4) ದಂಡನಾದೇಶ ಜಾರಿಯಲ್ಲಿರುವ ಅವಧಿಯಲ್ಲಿ ನೌಕರನು ವೇತನ ಬಡ್ತಿಗಳನ್ನು ಗಳಿಸುವನೆ (5) ವೇತನ ಬಡ್ತಿ ಅಥವಾ ಕಾಲಿಕ ವೇತನ ಶ್ರೇಣಿ ಪುನರ್ ಸ್ಥಾಪನೆಯಾಗುವ ದಿನಾಂಕ ಹಾಗೂ ಆ ದಿನಾಂಕದಲ್ಲಿ ನೌಕರನ ವೇತನ ಶ್ರೇಣಿ ಹಾಗೂ ವೇತನ (6) ಕಾಲಿಕ ವೇತನ ಶ್ರೇಣಿಯಲ್ಲಿ ಅನಿರ್ದಿಷ್ಟ ಅವಧಿಯವರೆಗೆ ಅಥವಾ ಖಾಯಂ ಆಗಿ ಕೆಳಹಂತಕ್ಕಿಳಿಸಲು ಅವಕಾಶವಿಲ್ಲ.  ಈ ಅಂಶಗಳನ್ನು  ಸ್ಪಷ್ಟಪಡಿಸಿ ದಂಡನಾದೇಶವನ್ನು ಹೊರಡಿಸಬೇಕು.

ಸರ್ಕಾರಿ ನೌಕರನ ಮೇಲೆ ದೋಷಾರೋಪಣೆಯನ್ನು ಮಾಡುವಾಗ ನೌಕರನು ಯಾವ ಯಾವ ನಿಯಮಗಳನ್ನು ಉಲ್ಲಂಘಿಸಿದ್ದಾನೆಂಬುದನ್ನು ಸ್ಪಷ್ಟಪಡಿಸಬೇಕು. ಈ ದೋಷಾರೋಪಣೆಗೆ ಉತ್ತರಿಸಲು ಆರೋಪಿ ನೌಕರನಿಗೆ ನ್ಯಾಯಯುತ ಕಾಲಾವಕಾಶ ನೀಡಬೇಕು. ರೂಢಿಯಲ್ಲಿರುವಂತೆ ರಜಾ ದಿನ ಹೊರತುಪಡಿಸಿ ಕನಿಷ್ಠ 10 ರಿಂದ 15 ದಿನ ಕಾಲಾವಕಾಶ ನೀಡಬಹುದು.  ಶಿಸ್ತು ಪ್ರಾಧಿಕಾರಿಯು ಆರೋಪಿ ನೌಕರನು ಸಲ್ಲಿಸುವ ಪ್ರತಿ ರಕ್ಷಣಾ ಹೇಳಿಕೆ ಹಾಗೂ ಹೇಳಿಕೆಗೆ ಸಮರ್ಥನೆಯಾಗಿ ಸಲ್ಲಿಸಿರುವ ದಾಖಲೆಗಳನ್ನು ಕೂಲಕುಂಶವಾಗಿ ಪರಿಶೀಲಿಸಿ ತನ್ನ ನಿರ್ಣಯವನ್ನು ದಾಖಲಿಸಬೇಕು. ಈ ರೀತಿ ವಿಚಾರಣಾ ಪ್ರಕ್ರಿಯೆಯನ್ನು ನಡೆಸುವಾಗ ಪೂರ್ವಾಗ್ರಹಪೀಡಿತರಾಗಿ ಕ್ರಮ ಕೈಗೊಳ್ಳದೆ ಪ್ರಕರಣದ ಹಿನ್ನೆಲೆ ಹಾಗೂ ದಾಖಲೆಗಳನ್ನು ಆಧರಿಸಿ ನಿರ್ಣಯ  ಕೈಗೊಳ್ಳುವುದು ಅಪೇಕ್ಷಣೀಯ. ಒಂದು ಬಾರಿ ನೌಕರನ ಮೇಲೆ ದೋಷಾರೋಪಣಾ ಪಟ್ಟಿಯನ್ನು ಜಾರಿ ಮಾಡಿದ ನಂತರ ಕಾಲಮಿತಿಯಲ್ಲಿ ವಿಚಾರಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ತತ್ಸಂಬಂಧವಾದ ಆದೇಶವನ್ನು ಹೊರಡಿಸಬೇಕು. ನೌಕರನು ನಿವೃತ್ತಿಗೆ ಸಮೀಪದಲ್ಲಿದ್ದಲ್ಲಿ ನಿವೃತ್ತಿಗೆ ಪೂರ್ವದಲ್ಲಿ ವಿಚಾರಣಾ ಪ್ರಕ್ರಿಯೆಯನ್ನು  ಪೂರ್ಣಗೊಳಿಸಿದಲ್ಲಿ ಮುಂದೆ ಉದ್ಭವವಾಗುವ ಕಾನೂನಿನ ತೊಡಕುಗಳನ್ನು ತಡೆಗಟ್ಟಬಹುದಾಗಿದೆ.

ಸಿ.ಸಿ.ಎ. ನಿಯಮ 12 ರಡಿ ವಿಚಾರಣೆ ಕೈಗೊಂಡು ಆರೋಪ ಸಾಬೀತಾದಲ್ಲಿ ಲಘು ದಂಡನೆಗಳನ್ನು ಮಾತ್ರ ವಿಧಿಸಬೇಕೇ ಹೊರತು ಕಠಿಣ ದಂಡನೆಗಳನ್ನು ವಿಧಿಸುವಂತಿಲ್ಲ. ಸಿಸಿಎ ನಿಯಮ 12 ರಡಿ ನಡೆಸಲಾದ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದ್ದಲ್ಲಿ ಪ್ರಕರಣದ ತೀವ್ರತೆಯನ್ನನುಸರಿಸಿ ಸಿಸಿಎ ನಿಯಮ 8 ಗಳಲ್ಲಿ ಯಾವುದಾದರೊಂದು ದಂಡನೆಯನ್ನು ಮಾತ್ರ ವಿಧಿಸಬಹುದು. ಈ ರೀತಿ ದಂಡನಾದೇಶವನ್ನು ಹೊರಡಿಸಿದಾಗ ಸಿಸಿಎ ನಿಯಮ 8ರಲ್ಲಿ ದಂಡನಾ ಅವಧಿಯು ತಕ್ಷಣ ಮುಕ್ತಾಯವಾಗುವುದರಿಂದ ಅದರ ಪರಿಣಾಮ ಮುಂದುವರಿಯುವುದಿಲ್ಲ. ಆದರೆ ನಿಯಮ 8 ರಡಿ ದಂಡನಾದೇಶವನ್ನು ಹೊರಡಿಸಿದಾಗ ಅದರ ಪರಿಣಾಮದ ಅವಧಿಯನ್ನು ಕೆ.ಸಿ.ಎಸ್.ಆರ್. ನಿಯಮ 59 ರನ್ವಯ ಸ್ಪಷ್ಟಪಡಿಸಬೇಕು. ಅಂದರೆ.(1) ದಂಡನಾದೇಶ ಜಾರಿಗೆ ಬರುವ ದಿನಾಂಕ(2) ದಂಡನಾದೇಶ ಜಾರಿಯಲ್ಲಿರುವ ಅವಧಿ (ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ) (3) ಕಾಲಿಕ ವೇತನ ಶ್ರೇಣಿಯಲ್ಲಿ ಹಂತವನ್ನು ಇಳಿಸಿದಲ್ಲಿ ಇಳಿಸಲಾದ ವೇತನ ಶ್ರೇಣಿ ಹಾಗೂ ಯಾವ ಹಂತಕ್ಕೆ ಇಳಿಸಲಾಗಿದೆ. (4) ದಂಡನಾದೇಶ ಜಾರಿಯಲ್ಲಿರುವ ಅವಧಿಯಲ್ಲಿ ನೌಕರನು ವೇತನ ಬಡ್ತಿಗಳನ್ನು ಗಳಿಸುವನೆ (5) ವೇತನ ಬಡ್ತಿ ಅಥವಾ ಕಾಲಿಕ ವೇತನ ಶ್ರೇಣಿ ಪುನರ್ ಸ್ಥಾಪನೆಯಾಗುವ ದಿನಾಂಕ ಹಾಗೂ ಆ ದಿನಾಂಕದಲ್ಲಿ ನೌಕರನ ವೇತನ ಶ್ರೇಣಿ ಹಾಗೂ ವೇತನ (6) ಕಾಲಿಕ ವೇತನ ಶ್ರೇಣಿಯಲ್ಲಿ ಅನಿರ್ದಿಷ್ಟ ಅವಧಿಯವರೆಗೆ ಅಥವಾ ಖಾಯಂ ಆಗಿ ಕೆಳಹಂತಕ್ಕಿಳಿಸಲು ಅವಕಾಶವಿಲ್ಲ.  

ಈ ಅಂಶಗಳನ್ನು ಸ್ಪಷ್ಟಪಡಿಸಿ ದಂಡನಾದೇಶವನ್ನು ಹೊರಡಿಸಬೇಕು. ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957. ರ ನಿಯಮ 8 ರಲ್ಲಿನ ದಂಡನೆಗಳನ್ನು (ಕಠಿಣ ದಂಡನೆ) ವಿಧಿಸಬೇಕಾಗಿದ್ದಲ್ಲಿ, ನಿಯಮ 11 ರಲ್ಲಿ ಸವಿವರವಾದ ವಿಚಾರಣಾ ಪ್ರಕ್ರಿಯೆ ನಡೆದಿರಬೇಕು. ಪ್ರಕರಣದ ತೀವ್ರತೆಯನ್ನು ಪರಿಗಣಿಸಿ ನೌಕರರನ್ನು ಅಮಾನತ್ತುಗೊಳಿಸಿ ವಿಚಾರಣೆ ನಡೆಸಬಹುದು ಅಥವಾ ನೌಕರರನ್ನು ಅಮಾನತ್ತುಗೊಳಿಸದೆಯೂ ವಿಚಾರಣೆಯನ್ನು ನಡೆಸಬಹುದು. ನೌಕರರನ್ನು ಅಮಾನತ್ತುಗೊಳಿಸಿದಲ್ಲಿ ಅಲ್ಲಿಂದ ವಿಚಾರಣಾ ಪ್ರಕ್ರಿಯೆ ಆರಂಭವಾಗಿದೆಯೆಂದು ಪರಿಗಣಿಸಬೇಕಾಗುತ್ತದೆ. ನೌಕರರ ಅಮಾನತ್ತನ್ನು ತೆರವುಗೊಳಿಸುವ ಪೂರ್ವದಲ್ಲಿಯೇ ದೋಷಾರೋಪಣಾ ಪಟ್ಟಿಯನ್ನು ಜಾರಿಮಾಡಿದಲ್ಲಿ ವಿಚಾರಣೆ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಅನುಕೂಲವಾಗುತ್ತದೆ ಹಾಗೂ ವಿನಾ ಕಾರಣ ಅಮಾನತ್ತನ್ನು ಮುಂದುವರಿಸುವುದನ್ನು ತಡೆಗಟ್ಟಬಹುದಾಗಿದೆ.

ಸಿ.ಸಿ.ಎ. ನಿಯಮ 11 ರಡಿ ದೊಷಾರೋಪಣೆಯನ್ನು ಜಾರಿ ಮಾಡಿದ ನಂತರ ಶಿಸ್ತು ಪ್ರಾಧಿಕಾರಿಯೇ ಸ್ವತ: ವಿಚಾರಣೆ ನಡೆಸಬಹುದು ಅಥವಾ ಸಿ.ಸಿ.ಎ. ನಿಯಮ 11((5) (ಛ) ರನ್ವಯ ಬೇರೊಬ್ಬ ವಿಚಾರಣಾ ಪ್ರಾಧಿಕಾರಿಯನ್ನು ನೇಮಿಸಬಹುದು. ವಿಚಾರಣಾ ಪ್ರಕ್ರಿಯೆಯನ್ನು ಪ್ರಾರಂಬಿಸುವ ಪೂರ್ವದಲ್ಲಿ ಈ ಮುಂದಿನ ವಿವರಗಳನ್ನು ಒಳಗೊಂಡ ದೊಷಾರೋಪಣಾ ಪಟ್ಟಯನ್ನು ಆರೋಪಿ ನೌಕರರಿಗೆ ಜಾರಿ ಮಾಡಬೇಕು. (1) ಸಿ.ಸಿ.ಎ. ನಿಯಮ 11 ರಡಿ ಇಲಾಖಾ ವಿಚಾರಣೆ ನಡೆಸಲು ಉದ್ದೇಶಿಸಿರುವ ನೋಟೀಸ್.(2) ನೌಕರನು ಯಾವ ನಿಯಮಗಳನ್ನು ಉಲ್ಲಂಘಿಸಿ ದುರ್ನಡತೆಯೆಸಗಿದ್ದಾನೆಂಬ ಬಗ್ಗೆ ಆರೋಪ ಪಟ್ಟಿ. ಅನುಬಂಧ-1 (3) ನೌಕರನು ಎಸಗಿರುವ ದುರ್ನಡತೆಯ ದೋಷಾರೋಪಣೆಗೆ ಪೂರ್ಣ ವಿವರಣಾ ಪಟ್ಟಿ. ಅನುಬಂಧ-2 (4) ನೌಕರನ ಮೇಲಿನ ದೋಷಾರೋಪಣೆಗೆ ಆಧಾರವಾದ ದಾಖಲೆಗಳ ಪಟ್ಟಿ. ಅನುಬಂಧ-3 (5) ನೌಕರನ ಮೇಲಿನ ದೋಷಾರೋಪಣೆಯನ್ನು ಸಾಬೀತುಪಡಿಸಬಲ್ಲ ಸಾಕ್ಷಿಗಳ ಪಟ್ಟಿ. ಅನುಬಂಧ-4. . ಆರೋಪಿ ನೌಕರನು ಈ ದೋಷಾರೋಪಣಾ ಪಟ್ಟಿಗೆ ಸಲ್ಲಿಸುವ ಲಿಖಿತ ಹೇಳಿಕೆ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನಂತರ ಶಿಸ್ತು ಪ್ರಾಧಿಕಾರಿಯು ವಿಚಾರಣೆಯನ್ನು ಮುಂದುವರಿಸುವ ಬಗ್ಗೆ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ವಿಚಾರಣೆಯನ್ನು ಮುಂದುವರಿಸಲು ನಿರ್ಣಯಿಸಿದ ನಂತರ ಸಿ.ಸಿ.ಎ. ನಿಯಮ 11((5) (ಛ) ರನ್ವಯ ಬೇರೊಬ್ಬ ವಿಚಾರಣಾ ಪ್ರಾಧಿಕಾರಿಯನ್ನು ನೇಮಿಸಬಹುದು ಹಾಗೂ ಶಿಸ್ತು ಪ್ರಾಧಿಕಾರಿಯ ಪರವಾಗಿ ದಾಖಲೆಗಳನ್ನು ಹಾಜರುಪಡಿಸಲು ಸಿ.ಸಿ.ಎ. ನಿಯಮ 11((5) (ಛಿ) ರನ್ವಯ ಪ್ರೆಸೆಂಟಿಂಗ್ ಆಫೀಸರ್ನ್ನು (ಹಾಜರುಪಡಿಸುವ ಅಧಿಕಾರಿ) ನೇಮಿಸಬೇಕಾಗುತ್ತದೆ. ವಿಚಾರಣಾ ಪ್ರಾಧಿಕಾರಿ ಹಾಗೂ ಪ್ರೆಸೆಂಟಿಂಗ್ ಆಫೀಸರ್ ಇವರುಗಳು ವಿಚಾರಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಲು ಕಾಲಮಿತಿಯನ್ನು ನಿಗಧಿಪಡಿಸುವುದು ಪ್ರಕರಣದ ಶೀಘ್ರ ಇತ್ಯರ್ಥದ ದೃಷ್ಟಿಯಿಂದ ಸೂಕ್ತವಾಗಿದೆ.