Wednesday 3 March 2021

ಭಾರತ

 


ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1. ಭಾರತ ಹೆಚ್ಚಾಗಿ ಯಾವ ವಿಧದ ವಾಯುಗುಣವನ್ನು ಹೊಂದಿದೆ?
 ಭಾರತ ಹೆಚ್ಚು ಭಾಗದಲ್ಲಿ ಉಷ್ಣವಲಯದ ಮಾನ್ಸೂನ್ ವಾಯುಗುಣವನ್ನು ಹೊಂದಿದೆ.

2. ಮಾನ್ ಸೂನ್ ಮಾರುತಗಳೆಂದರೇನು?
 ಮಾನ್ಸೂನ್ ಎಂಬ ಪದವು ಅರಬ್ಬೀ ಭಾಷೆಯ 'ಮೌಸಿಮ್' ಎಂಬ ಪದದಿಂದ ಬಂದಿದೆ. ಮೌಸಿಮ್ ಎಂದರೆ ಋತು ಎಂದರ್ಥ. ಋತುಕಾಲದ ಮಾರುತಗಳನ್ನು ಸಹ ಮಾನ್ಸೂನ್ ಮಾರುತಗಳೆನ್ನುವರು.

3. ಸಾಮಾನ್ಯವಾಗಿ ಯಾವ ಋತುವನ್ನು ಮಳೆಗಾಲ ಎಂದು ಕರೆಯುತ್ತಾರೆ?
 ಜೂನ್ನಿಂದ ಸೆಪ್ಟೆಂಬರ್ವರೆಗಿನ ನೈರುತ್ಯ ಮಾನ್ಸೂನ್ ಮಾರುತಗಳ ಕಾಲವನ್ನು ಮಳೆಗಾಲ ಎನ್ನುವರು.

4. ಭಾರತದ ವಾಯುಗುಣವನ್ನು ಪ್ರಭಾವಿಸುವ ಅಂಶಗಳು ಯಾವುವು?
 ಅಕ್ಷಾಂಶ ಸಮುದ್ರಮಟ್ಟದಿಂದ ಎತ್ತರ, ಸಮುದ್ರದಿಂದ ಇರುವ ದೂರ, ಮಾರುತಗಳ ದಿಕ್ಕು, ಪರ್ವತ ಶ್ರೇಣಿಗಳು, ಸಾಗರದ ಪ್ರವಾಹಗಳು ಮುಂತಾದವು ಭಾರತದ ವಾಯುಗುಣವನ್ನು ಪ್ರಭಾವಿಸುತ್ತವೆ.

5. 'ಭಾರತದ ವ್ಯವಸಾಯವನ್ನು ಮಾನ್ಸೂನ್ ಜೊತೆಗಿನ ಜೂಜಾಟ ಎನ್ನುತ್ತಾರೆ' ಚರ್ಚಿಸಿ.
 ದೇಶದ ಆರ್ಥಿಕ ಬೆಳವಣಿಗೆಯ ಮೇಲೆ ವಾಯುಗುಣವು ಹೆಚ್ಚಿನ ಪ್ರಭಾವ ಬೀರುತ್ತದೆ.  ಭಾರತದ ಜನತೆಯ ಪ್ರಧಾನ ಉದ್ಯೋಗವಾದ ವ್ಯವಸಾಯವನ್ನು ನೈರುತ್ಯ ಮಾನ್ಸೂನ್ಮಾರುತಗಳು ನಿಯಂತ್ರಿಸುತ್ತವೆ.  ಮಳೆ ವಿಫಲವಾದರೆ ಬರಗಾಲ ಉಂಟಾಗುವುದು.  ಮಾನ್ಸೂನ್ ಜಾಸ್ತಿಯಾದರೆ ಮಳೆ ಹೆಚ್ಚಾಗಿ ಪ್ರವಾಹ ಉಂಟಾಗುತ್ತದೆ. ಈ ಪ್ರವಾಹ ಪ್ರಾಣಹಾನಿ ಮತ್ತು ಆಸ್ತಿಗಳಿಗೆ ಹಾನಿ ಉಂಟಾಗುತ್ತದೆ.   ಆದ್ದರಿಂದ ಭಾರತದ ವ್ಯವಸಾಯವನ್ನು ಮಾನ್ಸೂನ್ ಜೊತೆಯಲ್ಲಿ ಆಡುವ ಜೂಜಾಟ ಎಂದು ಕರೆಯುತ್ತಾರೆ.

6. ಬೇಸಿಗೆಯಲ್ಲಿ ಬರುವ ಬೇರೆ ಬೇರೆ ಹೆಸರಿನ ಮಳೆಗಳನ್ನು ತಿಳಿಸಿ
 ಕಾಲ ಬೈಸಾಕಿ  - ಪಶ್ಚಿಮ ಬಂಗಾಳ
 ಆಂಡಿಸ್  - ಉತ್ತರ ಪ್ರದೇಶ
 ಕಾಪಿ ತುಂತುರು  - ಕನರ್ಾಟಕ
 ಮಾವಿನ ಹೊಯ್ಲು - ಕೇರಳ

7. ಮಳೆ ಹಂಚಿಕೆಯ ಆಧಾರದ ಮೇಲೆ ಭಾರತದ ಮೂರು ವಿಭಾಗ(ಪ್ರದೇಶ)ಗಳನ್ನು ಹೆಸರಿಸಿ.
ಕಡಿಮೆ ಮಳೆ ಬೀಳುವ ಪ್ರದೇಶ - 50 ಸೆಂ. ಮೀ ಗಿಂತ ಕಡಿಮೆ
 ಸಾಧಾರಣ ಮಳೆ ಪಡೆಯುವ ಪ್ರದೇಶ - 50 ಸೆಂ. ಮೀ. ನಿಂದ 250 ಸೆಂ. ಮೀ.
 ಅದಿಕ ಮಳೆಯ ಪ್ರದೇಶ - 250 ಸೆಂ. ಮೀ. ಗಿಂತ ಕಡಿಮೆ.

8. ಭಾರತದ ಅದಿಕ ಮಳೆಯ ಪ್ರದೇಶಗಳಾವುವು?
250 ಸೆಂ. ಮೀ. ಗಳಿಗಿಂತ ಹೆಚ್ಚು ಮಳೆ ಬೀಳುವ ಭಾಗಗಳನ್ನು ಅದಿಕ ಮಳೆ ಬೀಳುವ ಪ್ರದೇಶ ಎನ್ನುವರು.
ಉದಾಹರಣೆ  ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗ,ಅಸ್ಸಾಂ ಹಾಗೂ ಇತರ ಪೂರ್ವ ರಾಜ್ಯಗಳು,ಪಶ್ಚಿಮ ಬಂಗಾಳ,ಮೇಘಾಲಯದ ಮಾಸಿನ್ ರಾಮ್ (ಭಾರತದಲ್ಲೇ ಅದಿಕ ಮಳೆ ಬೀಳುವ ಪ್ರದೇಶ)

9. ಭಾರತದ ಕಡಿಮೆ ಮಳೆ ಬೀಳುವ ಪ್ರದೇಶಗಳಾವುವು?
 50 ಸೆಂ. ಮೀ. ಗಿಂತ ಕಡಿಮೆ ಮಳೆ ಬೀಳುವ ಪ್ರದೇಶಗಳೆಂದರೆ :
 ರಾಜಸ್ಥಾನದ ಥಾರ ಮರುಭೂಮಿ ಹಾಗೂ ಅದಕ್ಕೆ, ಹೊಂದಿಕೊಂಡಂತಿರುವ ಪಂಜಾಬ್, ಹರಿಯಾಣ, ಗುಜರಾತಿನ ಕಛ್ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರದ ಪೂರ್ವ ಭಾಗ, ಕನರ್ಾಟಕದ ಒಳನಾಡು.
 ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ 'ರೂಯ್ಲಿ' ಭಾರತದ ಅತಿ ಕಡಿಮೆ ಮಳೆ ಬೀಳುವ ಪ್ರದೇಶವಾಗಿದೆ. (ವಾರ್ಷಿಕ ಸರಾಸರಿ 8.3 ಸೆಂ. ಮೀ)

10. ಭಾರತದ ಮಳೆಗಾಲದ ಬಗ್ಗೆ ವಿವರಿಸಿ.
ಭಾರತದಲ್ಲಿ ನೈರುತ್ಯ ಮಾನ್ಸೂನ್ ಎಂದರೆ ಮಳೆಗಾಲ ಎಂದರ್ಥ. ಇವುಗಳನ್ನು ಮುಂಗಾರು ಮಳೆಗಾಲದ ಮಾರುತಗಳೆಂದು ಕರೆಯುತ್ತಾರೆ. ನೈಋತ್ಯ ಮಾನ್ಸೂನ್ ಮಾರುತಗಳು ಜಲಾಂಶಪೂರಿತವಾಗಿದ್ದು ಭಾರತದ ಹೆಚ್ಚು ಭಾಗದಲ್ಲಿ ಮಳೆ ಸುರಿಸುತ್ತವೆ. ಮಳೆಗಾಲ ಜೂನ್ನಿಂದ ಸೆಪ್ಟೆಂಬರ್ವರೆಗೆ ಕಂಡು ಬರುವುದು. ಭಾರತದ ಒಟ್ಟು ಮಳೆಯಲ್ಲಿ ಶೇ. 75 ರಷ್ಟು ಈ ಕಾಲದಲ್ಲಿ ಬೀಳುವುದು. ನೈಋತ್ಯ ಮಾನ್ಸೂನ್ ಮಾರುತಗಳು ಬಾರತವನ್ನು ಎರಡು ಕವಲುಗಳಾಗಿ ಪ್ರವೇಶಿಸುತ್ತವೆ. ಅವುಗಳೆಂದರೆ
!) ಅರಬ್ಬಿ ಸಮುದ್ರ ಶಾಖೆ ()ಬಂಗಾಳ ಕೊಲ್ಲಿಯ ಶಾಖೆ
ಅರಬ್ಬಿ ಸಮುದ್ರ ಶಾಖೆಯು ಪಶ್ಚಿಮ ಘಟ್ಟಗಳಿಂದ ತಡೆಯಲ್ಪಟ್ಟು ಘಟ್ಟಗಳ ಪಶ್ಚಿಮ ಭಾಗಕ್ಕೆ ಹೆಚ್ಚು ಮಳೆ ಸುರಿಸುತ್ತವೆ. ಈ ಮಾರುತಗಳು ಪೂರ್ವಕ್ಕೆ ಮುಂದುವರೆದಂತೆ ಮಳೆ ಕಡಿಮೆಯಾಗುತ್ತದೆ. ಪಶ್ಚಿಮ ಘಟ್ಟಗಳ ಪೂರ್ವಭಾಗವು ಮಳೆಯ ನೆರಳಿನ ಪ್ರದೇಶವೆನಿಸಿದೆ. ಬಂಗಾಳ ಕೊಲ್ಲಿ ಶಾಖೆಯು ಮಯನ್ಮಾರ್, ಬಾಂಗ್ಲಾದೇಶ, ಭಾರತದ ಈಶಾನ್ಯ ಭಾಗ, ಹಿಮಾಲಯದ ತಪ್ಪಲು ಮತ್ತು ಉತ್ತರದ ಮೈದಾನಗಳ ಕಡೆಗೆ ಮಳೆಯನ್ನು ತರುತ್ತದೆ. ಉತ್ತರ ಭಾರತದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಹೋದಂತೆಲ್ಲಾ ಮಳೆ ಕಡಿಮೆಯಾಗುತ್ತದೆ. ತಮಿಳುನಾಡು ಹೊರತುಪಡಿಸಿ ಭಾರತದ ಹೆಚ್ಚು ಭಾಗಕ್ಕೆ ನೈರುತ್ಯ ಮಾನ್ಸೂನ್ ಮಾರುತಗಳು ಮಳೆಯನ್ನು ತರುತ್ತವೆ.

11. ಭಾರತ ಮಾಚರ್ಿಯಿಂದ ಮೇ ವರೆಗೆ ಬೇಸಿಗೆಯನ್ನು ಹೊಂದಿದೆ ? ಹೇಗೆ? ವಿವರಿಸಿ.
ಭಾರತದಲ್ಲಿ ಬೇಸಿಗೆ ಕಾಲವು ಮಾಚರ್್ ತಿಂಗಳ ಮೊದಲ ವಾರದಲ್ಲಿ ಪ್ರಾರಂಭವಾಗಿ ಮೇ ತಿಂಗಳ ಕೊನೆಯವರೆಗೂ ಮುಂದುವರೆಯುತ್ತದೆ. ಈ ಋತುವಿನಲ್ಲಿ ಸೂರ್ಯನ ಲಂಬ ಕಿರಣಗಳು ಉತ್ತರಾರ್ಧಗೋಳದ ಮೇಲೆ ಬೀಳುವುದರಿಂದ ಭಾರತದಲ್ಲಿ ಉಷ್ಣಾಂಶ ಅದಿಕವಾಗಿರುತ್ತದೆ. ದೀರ್ಘ ಹಗಲು ಮತ್ತು ಸಮುದ್ರಕ್ಕೆ ದೂರವಾಗಿರುವ ಉತ್ತರ ಭಾರತವು ಹೆಚ್ಚು ಉಷ್ಣಾಂಶದಿಂದ ಕೂಡಿರುತ್ತದೆ.

12. ಯಾವ ಮಾರುತಗಳಿಂದ ಪಶ್ಚಿಮಘಟ್ಟಗಳು ಮಳೆಯನ್ನು ಪಡೆಯುತ್ತವೆ ? ಹೇಗೆ?
 ನೈರುತ್ಯ ಮಾನ್ಸೂನ್ ಮಾರುತಗಳು ಅರಬ್ಬಿ ಸಮುದ್ರ ಶಾಖೆಯಿಂದ ಪಶ್ಚಿಮ ಘಟ್ಟಗಳು ಮಳೆಯನ್ನು ಪಡೆಯುತ್ತವೆ. ಅರಬ್ಬಿ ಸಮುದ್ರ ಶಾಖೆಯು ಪಶ್ಚಿಮ ಘಟ್ಟಗಳಿಂದ ತಡೆಯಲ್ಪಟ್ಟು ಘಟ್ಟಗಳ ಪಶ್ಚಿಮ ಭಾಗಕ್ಕೆ ಹೆಚ್ಚು ಮಳೆ ಸುರಿಸುತ್ತವೆ. ಈ ಮಾರುತಗಳು ಪೂರ್ವಕ್ಕೆ ಮುಂದುವರೆದಂತೆ ಮಳೆ ಕಡಿಮೆಯಾಗುತ್ತದೆ.

13. ಬೇಸಿಗೆಯಲ್ಲಿ ಭಾರತದ ಕೆಲವು ಸ್ಥಳಗಳಿಗೆ ಮಳೆಯಾಗುತ್ತದೆ. ಕಾರಣಗಳನ್ನು ಕೊಡಿ.
 ಬೇಸಿಗೆಯಲ್ಲಿ ಉತ್ತರ ಭಾರತದ ಪರ್ವತ ಪ್ರದೇಶ ಮತ್ತು ಪಯರ್ಾಯ ಪ್ರಸ್ಥಭೂಮಿಗಳು ಸಾಕಷ್ಟು ತಂಪಾಗಿರುತ್ತವೆ. ಅಲ್ಲಲ್ಲಿ ಸ್ಥಳೀಯ ಉಷ್ಣಾಂಶ ಮತ್ತು ಪ್ರಚಲನ ಪ್ರವಾಹಗಳಿಂದ ಮಳೆ ಉಂಟಾಗುತ್ತದೆ.