ಹೇಮಂತ್ ಬಹಳ ಬುದ್ಧಿವಂತ, ಅವನ ಶಾಲಾ ದಿನಗಳಲ್ಲಿ ಯಾವಾಗಲೂ ಅವನೇ ಫಸ್ಟ್; ಇಂಜಿನಿಯರಿಂಗ್ ಪದವಿ ಪಡೆದು ಕೆಲಸಕ್ಕೆ ಸೇರಿದ ಅವನು ಉದ್ಯೋಗದಲ್ಲಿ ಸಹೋದ್ಯೋಗಿಗಳೊಂದಿಗೆ ಸರಿಯಾಗಿ ಹೊಂದಿಕೊಳ್ಳದೆ ಕೆಲಸ ಬಿಟ್ಟು ಮತ್ತೊಂದು ಕೆಲಸಕ್ಕೆ ಸೇರಿದ, ಅಲ್ಲಿಯೂ ಯಶಸ್ವಿಯಾಗದೆ ನಿರುದ್ಯೋಗಿಯಾಗಿ ಕಾಲ ಕಳೆಯುತ್ತಿರುವನು. ಅವನ ಕೌಟುಂಬಿಕ ಜೀವನವೂ ಸುಖವಾಗಿಲ್ಲ; ಪತ್ನಿಯೊಂದಿಗೆ ಸರಿಯಾಗಿ ಹೊಂದಿಕೊಳ್ಳದೆ ವಿಚ್ಛೇದನಕ್ಕಾಗಿ ಅಜರ್ಿ ಸಲ್ಲಿಸಿದ್ದು, ಪ್ರಕರಣ ಕೋರ್ಟ್ನಲ್ಲಿದೆ.
ಹೇಮಂತ್ ಬುದ್ಧಿವಂತನಾಗಿದ್ದರೂ, ತನ್ನ ಜೀವನದಲ್ಲಿ ಯಶಸ್ವಿಯಾಗದೇ ಇರುವುದಕ್ಕೇ ಕಾರಣವಾದ ಅಂಶ ಯಾವುದು? ಹೇಮಂತ್ನಂತೆಯೇ ಅನೇಕರು ಉತ್ತಮ ಬುದ್ಧಿಶಕ್ತಿ ಹೊಂದಿದ್ದರೂ ಯಶಸ್ವಿಯಾಗದೆ ಇರುವುದಕ್ಕೆ ಕಾರಣವಾದರೂ ಏನು? ಈ ಕುರಿತಂತೆ ಕುತೂಹಲ ಹೊಂದಿದ್ದ ಮನೋವಿಜ್ಞಾನಿಗಳು ಹಲವಾರು ದಶಕಗಳ ಕಾಲ ಸಂಶೋಧನೆ ನಡೆಸಿ ಕಂಡುಕೊಂಡ ಸತ್ಯವೆಂದರೆ ಉತ್ತಮ ಯಶಸ್ಸು ಪಡೆಯಲು ಬುದ್ಧಿಶಕ್ತಿ ಮಾತ್ರ ಕಾರಣ ಎಂಬ ಅಂಶವನ್ನು ಬದಿಗೆ ಸರಿಸಿ, ಭಾವನಾತ್ಮಕ ಬುದ್ಧಿಶಕ್ತಿ ಹೊಂದಿರುವವರು ಜೀವನದಲ್ಲಿ ಅತಿ ಹೆಚ್ಚಿನ ಯಶಸ್ಸು ಗಳಿಸುತ್ತಾರೆ ಎಂಬ ಪ್ರಮುಖ ಅಂಶವನ್ನು ಹೊರಗೆಡವಿದ್ದಾರೆ.
ನೀವು ನಿಮ್ಮ ವರ್ತನೆಯನ್ನು ಹೇಗೆ ನಿರ್ವಹಣೆ ಮಾಡುತ್ತೀರಾ, ಸಾಮಾಜಿಕ ಸಂಕೀರ್ಣತೆಗಳನ್ನು ಹೇಗೆ ನಿಭಾಯಿಸುತ್ತೀರಾ ಮತ್ತು ಉತ್ತಮ ಫಲಿತಾಂಶಗಳನ್ನು ಪಡೆಯಲು ಯಾವ ರೀತಿಯ ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಾ ಎಂಬುದನ್ನು ಭಾವಾನಾತ್ಮಕ ಬುದ್ಧಿಶಕ್ತಿಯು (ಇಟಠಣಠಟಿಚಿಟ ಟಿಣಜಟಟರಜಟಿಛಿಜ ಕಿಣಠ- ಣಜಟಿಣ-ಇಕಿ) ಒಳಗೊಳ್ಳುತ್ತದೆ. ಭಾವನೆಗಳು ಅವುಗಳು ಜರುಗುತ್ತಿರುವ ಹಾಗೆಯೇ ಗ್ರಹಿಸಿ, ಎಚ್ಚರದ ಸ್ಥಿತಿಯಲ್ಲಿದ್ದು, ನಿಮ್ಮ ವರ್ತನೆಗಳನ್ನು ನಿದರ್ೇಶಿಸುವ ಸಾಮಥ್ರ್ಯವು ವೈಯಕ್ತಿಕ ಸಾಮಥ್ರ್ಯವೆನಿಸಿದರೆ ಇತರೆ ವ್ಯಕ್ತಿಗಳಲ್ಲುಂಟಾಗುವ ಭಾವನೆಗಳನ್ನು ನಿಖರವಾಗಿ ಗ್ರಹಿಸಿ, ಅದರೊಂದಿಗೆ ನಿಮ್ಮ ಭಾವನೆಗಳನ್ನೂ ಉಪಯೋಗಿಸಿಕೊಂಡು ಸಂಬಂಧಗಳನ್ನು ಉತ್ತಮವಾಗಿ ನಿರ್ವಹಿಸುವುದು ಸಾಮಾಜಿಕ ಸಾಮಥ್ರ್ಯವೆನಿಸುತ್ತದೆ. ಈ ಎರಡೂ ಸಾಮಥ್ರ್ಯಗಳು ಭಾವಾನಾತ್ಮಕ ಬುದ್ಧಿಶಕ್ತಿಯ ಭಾಗಗಳಾಗಿವೆ.
ಬುದ್ಧಿಶಕ್ತಿಗೂ ಭಾವನಾತ್ಮಕ ಬುದ್ಧಿಶಕ್ತಿಗೂ ಇರುವ ವ್ಯತ್ಯಾಸವಾದರೂ ಏನು ಎಂಬ ಪ್ರಶ್ನೆ ಉದ್ಭವಿಸಬಹುದು. ಸಾಮಾನ್ಯ ಬುದ್ದಿಶಕ್ತಿಯು ಕಲಿಯುವ ಸಾಮಥ್ರ್ಯವಾಗಿದ್ದು, ಅದು 15 ವರ್ಷಗಳಲ್ಲಿರುವಷ್ಟೆ 50 ವರ್ಷಗಳಲ್ಲಿಯೂ ಇರುತ್ತದೆ. ಆದರೆ ಇ.ಕ್ಯೂ ಎನ್ನುವುದು ಚಲನಶೀಲ ಕೌಶಲಗಳ ಗುಚ್ಛವಾಗಿದ್ದು, ನೀವು ನಿಮ್ಮ ನಿರಂತರ ಪ್ರಯತ್ನಗಳ ಮೂಲಕ ಗಳಿಸಿಕೊಳ್ಳಬಹುದು ಹಾಗೂ ಬೆಳೆಸಿಕೊಳ್ಳಲೂಬಹುದು. ಇ.ಕ್ಯೂ. ಇಲ್ಲದೆ ಹುಟ್ಟಿದಾಗ್ಯೂ ನೀವು ಕಾಲಕ್ರಮೇಣ ನಿಮ್ಮ ಪ್ರಜ್ಞಾಪೂರ್ವಕ ಪ್ರಯತ್ನಗಳ ಮೂಲಕ ಅಭಿವೃದ್ಧಿಪಡಿಸಿಕೊಂಡು ಇ.ಕ್ಯೂ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು.
ಮಕ್ಕಳಲ್ಲಿ ಇ.ಕ್ಯೂ. ಬೆಳೆಸುವುದು ಹೇಗೆ?
ನಿಮ್ಮ ಮಗುನಿನ ಇ.ಕ್ಯೂ.ವನ್ನು ಬೆಳೆಸುವುದು ಹೇಗೆ ಎಂದು ಆಲೋಚಿಸಿದ್ದೀರಾ? ವಿಭಿನ್ನ ಸನ್ನಿವೇಶಗಳಲ್ಲಿ ನಿಮ್ಮ ಮಗುವಿನ ವರ್ತನೆಗಳನ್ನು ಗಮನಿಸಿ ಸುಧಾರಣೆ ಅವಶ್ಯವಿರುವೆಡೆ ಮಾರ್ಪಾಡುಗಳನ್ನು ಮಾಡಿಕೊಳ್ಳಲು ಹಾಗೂ ಇತರರೊಂದಿಗೆ ಸಂವಹನ ಅಥವಾ ಸ್ಪಂದಿಸುವ ಸಂದರ್ಭಗಳಲ್ಲಿ ಹೊಸ ವಿಧಾನಗಳನ್ನು ಆಲೋಚಿಸಲು ನಯವಾಗಿ ಸೂಚಿಸಿದ್ದೀರಾ?
ಒಬ್ಬ ಶಿಕ್ಷಕ ಅಥವಾ ಪೋಷಕನಾಗಿ ಮಕ್ಕಳ ಇ.ಕ್ಯೂ. ಬೆಳೆಸಲು ಇದು ತಕ್ಕ ಸಮಯವಾಗಿದೆ. ಈಗಲಾದರೂ ಅವರ ವರ್ತನೆಗಳನ್ನು ಗಮನಿಸಿ, ಅಗತ್ಯವಿರುವ ಸಂದರ್ಭಗಳಲ್ಲಿ ಸೂಕ್ಷ್ಮ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿ; ವಿವಿಧ ಉದ್ವೇಗದ ಸನ್ನಿವೇಶಗಳಲ್ಲಿ ಅವರ ಪ್ರತಿಕ್ರಿಯೆಗಳನ್ನು ಗಮನಿಸಿ, ನಮ್ರ ರೀತಿಯಲ್ಲಿ ಮಾರ್ಗದರ್ಶನ ನೀಡಲು ಹಿಂಜರಿಯದಿರಿ. ನಮ್ಮಲ್ಲಿರುವ ಭಾವನೆಗಳನ್ನು ಅರ್ಥೈಸಿಕೊಳ್ಳುವುದರ ಜೊತೆ ಇತರರ ಭಾವನೆಗಳನ್ನು ಅರ್ಥ ಮಾಡಿಕೊಂಡು ಅವರೊಂದಿಗೆ ಯಶಸ್ವಿಯಾಗಿ ಒಡನಾಡುವ ಸಾಮಥ್ಯವೇ ಇ.ಕ್ಯೂ. ವಾಗಿದ್ದು, ಜೀವನದ ಯಶಸ್ಸು ಅಥವಾ ಸಂತೋಷದ ಅತಿ ದೊಡ್ಡ ಮುನ್ಸೂಚಕವಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಅತಿ ಹೆಚ್ಚು ಇ.ಕ್ಯೂ. ಹೊಂದಿದ ಮಕ್ಕಳು ಉತ್ತಮ ಆತ್ಮ ವಿಶ್ವಾಸವುಳ್ಳವರು,
ಸಹಕಾರದ ಮನೋಭಾವದವರು, ಆಶಾವಾದಿಗಳು, ಸಮಾಧಾನ ಜೀವಿಗಳು ಮತ್ತು ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳುವ ಸಾಮಥ್ರ್ಯ ಹೊಂದಿದವರೂ ಆಗಿರುತ್ತಾರೆ. ಅವರು ಸದ್ವರ್ತನೆ ತೋರ್ಪಡಿಸುವುದರ ಜೊತೆ ವವಿವಿಧ ಭಾವುಕ ಸನ್ನಿವೇಶಗಳಿಗೆ ಕಡಿಮೆ ಪ್ರಚೋದನೆಗೊಳ್ಳುತ್ತಾರೆ ಹಾಗೂ ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ಸಾಧನೆ ತೋರ್ಪಡಿಸುತ್ತಾರೆ. ಅವರು ಹೆಚ್ಚು ಸಂತಸಕರವಾಗಿದ್ದು, ಹೆಚ್ಚು ಗೆಳೆಯರ ಗುಂಪನ್ನು ಹೊಂದಿದವರಾಗಿದ್ದು, ಜೀವನದಲ್ಲಿ ಯಶಸ್ಸನ್ನು ಪಡೆಯಬಲ್ಲವರಾಗಿರುತ್ತಾರೆ. ಪೋಷಕರಾಗಿ ಅಥವಾ ಶಿಕ್ಷಕರಾಗಿ ನಿಮ್ಮ ಮಕ್ಕಳಲ್ಲಿ ಇ.ಕ್ಯೂ. ಬೆಳೆಸಲು ಅಗತ್ಯವಾದ ಕೆಲವು ಟಿಪ್ಸ್ಗಳು
1.ನಿಮ್ಮ ಮಕ್ಕಳ ಭಾವನೆಗಳನ್ನು ಹಾಗೂ ಪ್ರತಿಕ್ರಿಯೆಗಳನ್ನು ಒಪ್ಪಿಕೊಳ್ಳಿ:
ಹೆಂಗಸಿನ ಹಾಗೆ ಅಳಬೇಡ, ಅಂಜುಬುರುಕನಂತೆ ವರ್ತಿಸಬೇಡ ಎಂದು ನೀವು ಪ್ರತಿಕ್ರಿಯಿಸುವುದು ಸಮಂಜಸವಾಗಲಾರದು. ಇದರ ಬದಲು ಓಹ್! ನಿನಗೆ ಎಷ್ಟೊಂದು ದುಃಖ ಬಂದಿದೆ ಎಂದು ನನಗೆ ತೋರಿಸುತ್ತಿರುವೆ, ನಿನ್ನನ್ನು ಗಮನಿಸಿದರೆ ನೀನು ಭಯಗೊಂಡಂತೆನಿಸುತ್ತದೆ ನೀನು ಅಪ್ಸೆಟ್ ಆದಂತೆ ತೋರುತ್ತದೆ. ಶಾಲೆಯಲ್ಲಿ ಏನಾದರು ಆಗಿರಬೇಕು ಇತ್ಯಾದಿ ರೀತಿಯಲ್ಲಿ ನೀವು ಪ್ರತಿಕ್ರಿಯಿಸುವುದು ಒಳಿತು. ನಿಮ್ಮ ಮಕ್ಕಳು ತೋರುವ ವಿಪರೀತದ ವರ್ತನೆಗಳಿಗೆ ನಾವು ಏನು ಮಾಡಲಾಗದಿದ್ದರೂ, ಅವರೆಡೆ ಅನುಭೂತಿ ವ್ಯಕ್ತಪಡಿಸುವುದರಿಂದ ಅವರಿಗೂ ಸಮಾಧಾನವಾಗುತ್ತದೆ ಹಾಗೂ ಅವರಲ್ಲಿಯೂ ಅನುಭೂತಿಯ ಭಾವನೆ ಬೆಳೆಯಲು ಸಹಾಯವಾಗುತ್ತದೆ.
ಆಟವನ್ನು ನಿಲ್ಲಿಸಿ ಊಟಕ್ಕೆ ಬರುವುದು ನಿನಗೆ ಕಷ್ಟ ಎಂದು ಗೊತ್ತು, ಆದರೆ ಈಗ ಊಟದ ಸಮಯವಾಗಿದೆ. ಬಾ ಊಟ ಮಾಡೋಣ, ಮಳೆಬರುತ್ತಿರುವುದು ನಿನಗೆ ಅತೃಪ್ತಿಯಾದಂತಿದೆ.. ಈ ರೀತಿ ಮಕ್ಕಳ ಭಾವನೆಗಳನ್ನು ಅವರ ನೆಲೆಯಲ್ಲಿಯೇ ಆಲೋಚಿಸಿ ಒಪ್ಪಿಕೊಳ್ಳುವುದು ಅವರಲ್ಲಿ ಸಮಾಧಾನ ತರುತ್ತದೆ.
2. ಮಕ್ಕಳ ಭಾವನೆಗಳನ್ನು ಗುರುತಿಸಿ, ಹಂಚಿಕೊಳ್ಳಲು ಬೆಂಬಲ ಮತ್ತು ಅವಕಾಶ ನೀಡಿ.
ಯಾವುದೇ ಭಾವನೆಗಳು ಅವಮಾನಕರ ಅಥವಾ ಕೆಟ್ಟವುಗಳಲ್ಲ. ಮಕ್ಕಳು ತಮ್ಮಲ್ಲಿರುವ ಭಾವನೆಗಳನ್ನು ವ್ಯಕ್ತಪಡಿಸದೆ ಒತ್ತಾಯಪೂರ್ವಕವಾಗಿ ದಮನ ಮಾಡುವುದು ಆರೋಗ್ಯಕರವಾದುದಲ್ಲ. ದಮನ ಮಾಡಲ್ಪಟ್ಟ ಭಾವನೆಗಳು ಕೆಲವೊಮ್ಮೆ ಸ್ಫೋಟಗೊಳ್ಳುವ ಸಾಧ್ಯತೆಯಿರುತ್ತದೆ. ಈ ಕಾರಣದಿಂದ ಮಕ್ಕಳಿಗೆ ತಮ್ಮ ಭಾವನೆಗಳನ್ನು ಸಮಂಜಸ ರೀತಿಯಲ್ಲಿ ವ್ಯಕ್ತಪಡಿಸುವುದನ್ನು ಕಲಿಯಲು ಅವಕಾಶ ಕಲ್ಪಿಸಬೇಕು. ಮಕ್ಕಳಿಗೆ ತಮ್ಮ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಅವಕಾಶ ಕಲ್ಪಿಸಿದಲ್ಲಿ ಯಾವುದೇ ಭಾವನೆಗಳನ್ನು ನಿರ್ವಹಣೆ ಮಾಡುವ ಕಲಿಕೆ ನಿಮ್ಮ ಮಕ್ಕಳದ್ದಾಗುತ್ತದೆ.
ನಿನಗೆ ಆ ಘಟನೆಯಿಂದ ಬೇಸರವಾಗಿದೆಯೆಂದು ನಾನು ಊಹಿಸುವೆ, ನೀನು ಭಯಗೊಂಡಿರುವೆ ಎನ್ನಿಸುತ್ತದೆ, ಅವನ ವರ್ತನೆಯಿಂದ ನೀನು ಬಹಳಷ್ಟು ಕೋಪಗೊಂಡಿರುವೆ ಎನ್ನಿಸುತ್ತದೆ ನಿನ್ನ ತಮ್ಮ ನಿನ್ನ ಆಟಿಕೆಯನ್ನು ಹಾಳು ಮಾಡಿರುವುದರಿಂದ ನಿನಗೆ ಕೆಟ್ಟ ಕೋಪ ಬಂದಿದೆಯೆನಿಸುತ್ತದೆ. ಆದರೆ ನಾನು ಅವನಿಗೆ ಹೊಡೆಯುವ ಹಾಗೆ ಇಲ್ಲ. ಬಾ ಇಲ್ಲಿ, ನಿನಗೆ ಯಾವ ರೀತಿಯ ಕೋಪ ಬಂದಿದೆಯೆಂದು ನಿನ್ನ ತಮ್ಮನಿಗೆ ಹೇಗೆ ಹೇಳಬೇಕೆಂದು ತಿಳಿಸಿಕೊಡುತ್ತೇನೆ.
ಪರೀಕ್ಷೆಯ ಫಲಿತಾಂಶದಿಂದ ನೀನು ಅವಮಾನಿತನಾಗಿರುವೆ ಎನಿಸುತ್ತದೆ. ಕೆಲವೊಂದು ಸಂದರ್ಭದಲ್ಲಿ ಈ ರೀತಿ ಎಲ್ಲರ ಜೀವನದಲ್ಲೂ ಆಗುತ್ತದೆ. ನಾನೂ ಸಹ ಪದವಿ ತರಗತಿಯಲ್ಲಿ ಒಮ್ಮೆ ಫೇಲಾಗಿದ್ದೆ, ನಿನಗೆ ಅಳು ಬರುತ್ತಿದ್ದರೆ ಒಮ್ಮೆ ಅತ್ತು ಬಿಡುವುದು ಒಳ್ಳೆಯದು. ಈ ರೀತಿಯ ಹೇಳಿಕೆಗಳಿಂದ ಮಕ್ಕಳು ತಮ್ಮ ಭಾವನೆಗಳನ್ನು ಗುರುತಿಸಿ, ಹಂಚಿಕೊಳ್ಳಲು ಅವಕಾಶ ಕಲ್ಪಿಸಬೇಕು.
3. ಇತರೆ ವ್ಯಕ್ತಿಗಳು ಹೊಂದಬಹುದಾದ ಭಾವನೆಗಳನ್ನು ಗುರ್ತಿಸಲು ಮಕ್ಕಳಿಗೆ ಸಹಾಯ ಮಾಡಿ.
ಕೆಲವು ಸನ್ನಿವೇಶ, ಸಂದರ್ಭಗಳಲ್ಲಿ ತನ್ನ ಗೆಳೆಯರು, ಶಿಕ್ಷಕರು, ತಂದೆ-ತಾಯಿಗಳು ಯಾವ ರೀತಿಯ ಭಾವನೆಗಳನ್ನು ಹೊಂದಿರಬಹುದೆಂದು ಗುರ್ತಿಸಲು ಮಕ್ಕಳಿಗೆ ಸಹಾಯ ಮಾಡುವುದರಿಂದ ಅವರಲ್ಲಿ ಅನುಭೂತಿಯ ಭಾವನೆಗಳು ಬೆಳೆಯಲು ಹಾಗೂ ಇತರರರ ಭಾವನೆಗಳನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ. ಇದರಿಂದ ಉದ್ಭವವಾಗಬಹುದಾದ ಸಂಘರ್ಷಗಳು ಕಡಿಮೆಯಾಗುತ್ತವೆ.
ಈ ಘಟನೆಯಿಂದ ಅವಳಲ್ಲಿ ಯಾವ ರೀತಿಯ ಭಾವನೆಯುಂಟಾಯಿತೆಂದು ನೀನು ಆಲೋಚಿಸಿರುವೆಯಾ? ನಿಮ್ಮ ಸ್ನೇಹಿತರ ವರ್ತನೆಯಿಂದ ನಿಮ್ಮ ಶಿಕ್ಷಕರ ಮನಸ್ಸಿಗೆ ಎಷ್ಟು ನೋವಾಗಿರಬಹುದೆಂದು ಊಹಿಸಿತ್ತೀಯಾ? ನಿನ್ನ ಮಾತಿನಿಂದ ನಿನ್ನ ಗೆಳೆಯನಿಗೆ ಅಸಂತೋಷವಾಗಿರಬಹುದು ಎಂದೆನಿಸುತ್ತಿದೆಯಾ? ಈ ರೀತಿಯ ಹೇಳಿಕೆಗಳು ಮಕ್ಕಳಿಗೆ ಇತರರ ಭಾವನೆಗಳನ್ನು ಗುರುತಿಸಲು ಹಾಗೂ ತನ್ಮೂಲಕ ಆ ಭಾವನೆಗಳನ್ನು ಗೌರವಿಸಲು ಅವಕಾಶ ದೊರೆಯುತ್ತದೆ.
4. ಮಕ್ಕಳು ತಾವು ಉದ್ವೇಗ ಅಥವಾ ಒತ್ತಡಕ್ಕೊಳಗಾಗಿರುವುದನ್ನು ಗುರ್ತಿಸಲು ಸಹಾಯ ಮಾಡುವುದು.
ಮಕ್ಕಳು ತಾವು ಯಾವ ಸಂದರ್ಭದಲ್ಲಿ ತಮ್ಮ ಶಾಂತ ಮನಸ್ಥಿತಿಯನ್ನು ಕಳೆದುಕೊಂಡು ಉದ್ವೇಗಕ್ಕೊಳಗಾಗುತ್ತಾರೆ ಹಾಗೂ ಯಾವ ಕಾರಣದಿಂದ ಅವರಿಗೆ ಮಾನಸಿಕ ಒತ್ತಡ ಉಂಟಾಗುತ್ತದೆಂಬುದನ್ನು ಗುರ್ತಿಸುವುದನ್ನು ಕಲಿಸಿ. ಹೆಚ್ಚಿನ ವೇಳೆಯಲ್ಲಿ ಒತ್ತಡದ ಮೂಲವನ್ನು ಅರಿತಾಗ ಅದರ ನಿರ್ವಹಣೆ ಸುಲಭವಾಗುತ್ತದೆ.
ಇದು ನಿನ್ನಲ್ಲಿ ಉದ್ವೇಗಕ್ಕೊಳಗಾಗುವಂತೆ ಮಾಡಿದೆಯೆನಿಸುತ್ತದೆ.
ಕೆಂಪಾಗಿರುವ ನಿನ್ನ ಕಣ್ಣುಗಳನ್ನು ನೋಡಿದರೆ ನೀನು ಕೋಪಗೊಂ ಡಿರುವೆಯೆನಿಸುತ್ತದೆ.
5. ತಾವೇ ಸಾಂತ್ವನಗೊಳ್ಳುವುದನ್ನು ಕಲಿಸಿ.ತಮ್ಮ ತೀವ್ರ ರೀತಿಯ ಉದ್ವೇಗ ಅಥವಾ ಒತ್ತಡದ ಭಾವನೆಗಳಿಂದ ತಾವೇ ಹೊರಬಂದು ಶಾಂತಗೊಳ್ಳುವುದನ್ನು ಕಲಿಸುವುದು ಮುಖ್ಯ. ಇದರಿಂದ ವಿಪರೀತದ ಭಾವನೆಗಳಾದ ಕೋಪ, ಹತಾಶೆ, ಭಯ ಇತ್ಯಾದಿಗಳನ್ನು ತಾವೇ ನಿರ್ವಹಿಸಿಕೊಳ್ಳುವುದನ್ನು ಹಂತ ಹಂತವಾಗಿ ಮಕ್ಕಳು ಕಲಿಯುತ್ತಾರೆ. ಕೆಲವೊಮ್ಮೆ ಮಕ್ಕಳು ಯಾವುದಾದರೂ ಒತ್ತಡದ ಸನ್ನಿವೇಶದಲ್ಲಿ ವಿಪರೀತದ ವರ್ತನೆಯನ್ನು ತೋರ್ಪಡಿಸಿದಾಗ, ಅದನ್ನು ಘಟನೆಯ ನಂತರದ ಸನ್ನಿವೇಶದಲ್ಲಿ ಅವರು ಯಾವ ರೀತಿ ಪ್ರಬುದ್ಧತೆಯಿಂದ ವರ್ತಿಸಬಹುದಿತ್ತೆಂಬುದನ್ನು ಅವರೊಂದಿಗೆ ಚಚರ್ಿಸುವ ಮೂಲಕ ಕಲಿಸಿಕೊಡಿ.
6. ಸಮಸ್ಯೆಗಳನ್ನು ನಿರ್ವಹಿಸುವುದನ್ನು/ಪರಿಹರಿಸುವುದನ್ನು ಕಲಿಸಿ.ಭಾವನೆಗಳನ್ನು ಅರ್ಥೈಸಿಕೊಂಡು ಅವುಗಳನ್ನು ಒಪ್ಪಿಕೊಂಡಲ್ಲಿ ಭಾವನೆಗಳ ತೀವ್ರತೆ ತನ್ನಷ್ಟಕ್ಕೇ ಕಡಿಮೆಯಾಗುತ್ತವೆ. ಇದು ಸಮಸ್ಯೆಗಳ ನಿವಾರಣೆಗೆ ಅಗತ್ಯವಾದ ವೇದಿಕೆ ಸೃಷ್ಟಿಮಾಡುತ್ತದೆ. ಕೆಲವೊಂದು ಸನ್ನಿವೇಶದಲ್ಲಿ ಸಮಸ್ಯೆಗಳನ್ನು ಯಾವ ರೀತಿ ಪರಿಹರಿಸಬಹುದು ಅಥವಾ ನಿರ್ವಹಿಸಬಹುದು ಎಂಬುದರ ಬಗ್ಗೆ ಕೆಲವೊಂದು ನಿದರ್ಶನ ಸಹಿತ ತಿಳಿಸಿಕೊಡುವುದು ಸಹಾಯವಾಗುತ್ತದೆ
7. ಮಾದರಿ
ಇ.ಕ್ಯೂವಯಸ್ಕರಾಗಿ ಒತ್ತಡದ ಸನ್ನಿವೇಶದಲ್ಲಿ ನೀವು ಯಾವ ರೀತಿ ಪ್ರತಿಕ್ರಿಯಿಸುತ್ತೀರಾ ಎಂಬುದರ ಆಧಾರದ ಮೇಲೆ ನಿಮ್ಮ ಮಕ್ಕಳು ತಮ್ಮ ವರ್ತನೆಗಳನ್ನು ತೋರ್ಪಡಿಸಿಕೊಳ್ಳುವುದನ್ನು ಕಲಿಯುತ್ತಾರೆ. ಒತ್ತಡದ ಸನ್ನಿವೇಶದಲ್ಲಿ ನೀವು ಕೂಗಾಡುವುದು ಅಥವಾ ಸಿಕ್ಕಿದ್ದನ್ನು ಎಸೆಯುವ ವರ್ತನೆ ತೋರ್ಪಡಿಸಿದರೆ ನಿಮ್ಮ ಮಕ್ಕಳೂ ಸಹ ಅದೇ ರೀತಿಯ ವರ್ತನೆಗಳನ್ನು ತೋರ್ಪಡಿಸುವ ಸಾಧ್ಯತೆಯಿರುತ್ತದೆ ಹಾಗೂ ವಯಸ್ಕರಾದ ಮೇಲೂ ಅದೇ ರೀತಿಯ ವರ್ತನೆಗಳನ್ನು ರೂಢಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಈ ಕಾರಣದಿಂದ ನೀವು ಮಕ್ಕಳೆದುರು ಶಿಕ್ಷಕ ಅಥವಾ ಪೋಷಕರಾಗಿ ನಿಮ್ಮ ತೀವ್ರ ಭಾವುಕ ಮನಸ್ಥಿತಿಯ ಕಾರಣದಿಂದ ವಿಪರೀತದ ವರ್ತನೆಗಳನ್ನು ತೋರ್ಪಡಿಸುವುದನ್ನು ತಡೆಗಟ್ಟುವುದು ಒಳಿತು. ವಯಸ್ಕರು ಉತ್ತಮ ರೀತಿಯಲ್ಲಿ ಆರೋಗ್ಯಕರವಾಗಿ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ಮಕ್ಕಳಲ್ಲಿ ಮಾದರಿ ಇ.ಕ್ಯೂ ಬೆಳೆಸಲು ಸಹಾಯ ಮಾಡುವುದು.
8. ಧನಾತ್ಮಕ ಸ್ವಯಂ ಮಾತು ಕಲಿಯಲು ತಿಳಿಸಿಕೊಡಿ.ಧನಾತ್ಮಕ ಸ್ವಯಂ ಹೇಳಿಕೆಗಳು ಅಥವಾ ಮಾತುಗಳು ಮಕ್ಕಳಲ್ಲಿ ಇ.ಕ್ಯೂ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತವೆ. ಇದನ್ನು ನಾನು ಮಾಡಬಲ್ಲೆ, ಈ ಸನ್ನಿವೇಶವನ್ನು ನಾನು ನಿಭಾಯಿಸಬಲ್ಲೆ, ದಿನದಿಂದ ದಿನಕ್ಕೆ ನಾನು ಭಾವನೆಗಳನ್ನು ಉತ್ತಮ ರೀತಿಯಲ್ಲಿ ವ್ಯಕ್ತಪಡಿಸುವುದರಲ್ಲಿ ಉತ್ತಮಗೊಳ್ಳುತ್ತಿದ್ದೇನೆ, ನಾನು ಸದಾ ಸಂತೋಷವಾಗಿರಬಲ್ಲೆ, ನಾನು ಇಂತಹ ಸವಾಲನ್ನು ಇಷ್ಟಪಡುತ್ತೇನೆ ಇತ್ಯಾದಿ ಸ್ವಯಂ ಹೇಳಿಕೆಗಳನ್ನು ಮಕ್ಕಳು ಪುನರಾವರ್ತಿಸಿದಲ್ಲಿ ಪರಿಣಾಮಕಾರಿಯಾಗುತ್ತದೆ.
9. ಉತ್ತಮ ಸಾಧನೆ ತೋರಲು ಅವರನ್ನು ಪ್ರೇರೇಪಿಸುವ ಅಂಶಗಳನ್ನು ಗುರ್ತಿಸಿ ಪ್ರೋತ್ಸಾಹಿಸಿ. ನಿಮ್ಮ ಮಗುವು ಯಾವುದರಿಂದ ಪ್ರೇರೇಪಣೆ ಗೊಳುತ್ತದೆ ಎಂಬುದನ್ನು ಗುರ್ತಿಸಿ, ಪ್ರೋತ್ಸಾಹಿಸಿ. ನೀನು ನಿನ್ನ ಗುರಿ ಅದೆಷ್ಟೇ ಕಠಿಣದ್ದರೂ ಸಾಧಿಸಿ ತೋರಿಸುತ್ತಿರುವುದು ನನಗೆ ಸಂತಸ ತಂದಿದೆ. ನಿನ್ನ ಪರೀಕ್ಷೆಗೆ ಅಗತ್ಯವಾದ ಎಲ್ಲಾ ರೀತಿಯ ತಯಾರಿ ಯೋಜನೆಗಳನ್ನು ಮಾಡಿರುವುದನ್ನು ನೋಡಿ ನನಗೆ ಇಷ್ಟವಾಯಿತು ಇತ್ಯಾದಿ ನಿಮ್ಮ ಹೇಳಿಕೆಗಳ ಮೂಲಕ ಪ್ರೋತ್ಸಾಹಿಸಿ.
10. ಸಂಘರ್ಷಗಳನ್ನು ಪರಿಹರಿಸಿಕೊಳ್ಳುವ ಮಾರ್ಗಗಳನ್ನು ಕಲಿಸಿಕೊಡಿ. ಸಂಘರ್ಷಗಳನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಬಹುದೆಂಬುದನ್ನು ಹಾಗೂ ಈ ರೀತಿ ಮಾಡುವುದರಿಂದ ಸರ್ವರಿಗೂ ಹಿತವೆಂಬುದನ್ನು ಪ್ರಕರಣಗಳ ಸಹಿತ ಮನ ಮುಟ್ಟುವಂತೆ ವಿವರಿಸಿ. 11. ಸ್ವಯಂ ನಿರ್ವಹಣೆ ತೋರಿದಾಗ ಪ್ರಶಂಸೆ ಮಾಡಿ.
ಉದ್ವೇಗ ಅಥವಾ ಒತ್ತಡದ ಸನ್ನಿವೇಶದಲ್ಲಿ ನಿಮ್ಮ ಮಗುವು ತೀವ್ರ ರೀತಿಯ ಭಾವುಕತೆ ತೋರದೆ, ಸ್ವಯಂ ನಿರ್ವಹಣೆ ತೋರಿದಾಗ ಆ ಸನ್ನಿವೇಶವನ್ನು ನೀನು ನಿಜಕ್ಕೂ ಉತ್ತಮವಾಗಿ ನಿರ್ವಹಿಸಿದೆ, ನಿನ್ನ ಸ್ನೇಹಿತ ಕೂಗಾಡುವಾಗ ನೀನು ಸಂಯಮದಿಂದ ಇದ್ದದ್ದು ನನಗೆ ಇಷ್ಟವಾಯಿತು . . . .. ಇತ್ಯಾದಿ ರೀತಿಯಲ್ಲಿ ಅವರನ್ನು ಪ್ರಶಂಸೆ ಮಾಡಿದಾಗ ಸ್ವಯಂ ನಿರ್ವಹಣೆಯ ಕೌಶಲಗಳು ಪುನರ್ಬಲನಗೊಳ್ಳುತ್ತವೆ.
12. ತಮ್ಮ ಕೋಪ, ಹತಾಶೆಗಳನ್ನು ಪಯರ್ಾಯ ಮಾರ್ಗಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವುದನ್ನು ಕಲಿಸಿಕೊಡಿ. ಕೆಲವರು ಕೋಪ ಅಥವಾ ಹತಾಶೆಗೊಂಡಾಗ ಹೊಡೆಯುವುದು, ಸಿಕ್ಕಿದನ್ನು ಎಸೆಯುವುದು ಮಾಡುತ್ತಾರೆ. ಅದಕ್ಕೆ ಬದಲಾಗಿ ಆರೋಗ್ಯಕರವಾದ ಪಯರ್ಾಯ ಮಾರ್ಗಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವುದನ್ನು ತಿಳಿಸಿಕೊಡಿ.
ಹೊಡೆಯುವ ಅಥವಾ ಕೆಟ್ಟದಾಗಿ ಬೈಯುದರ ಬದಲು ನಿನಗೆ ಎಷ್ಟು ಕೋಪ ಬಂದಿದೆ ಎಂಬುದನ್ನು ಮಾತಿನಲ್ಲಿ ಯಾವ ರೀತಿ ತಿಳಿಸಬಹುದೆಂಬುದನ್ನು ಆಲೋಚಿಸಿದ್ದೀಯಾ ಈ ರೀತಿಯ ಹೇಳಿಕೆಗಳ ಮೂಲಕ ಮಕ್ಕಳು ಆತ್ಮಾವಲೋಕನ ಮಾಡಿಕೊಂಡು ಕೋಪ, ಹತಾಶದ ಭಾವನೆಗಳನ್ನು ಸೌಜನ್ಯಯುತವಾಗಿ ಹೊರಹಾಕುವುದನ್ನು ಕಲಿಯುತ್ತಾರೆ.
ಆಧುನಿಕ ನಾಗರಿಕ ಸಮಾಜದಲ್ಲಿ ಮಕ್ಕಳು ತುಂಬಾ ಸೂಕ್ಷ್ಮ ಮನಸ್ಥಿತಿಯವರಾಗಿದ್ದು, ಪೋಷಕರು ಅಥವಾ ಶಿಕ್ಷಕರು ಕೆಲವೊಮ್ಮೆ ಸಣ್ಣದಾಗಿ ಬೈದರೂ ಆತ್ಮಹತ್ಯೆಯಂತಹ ಕೃತ್ಯಗಳಿಗೆ ಪ್ರಯತ್ನಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಸನ್ನಿವೇಶದಲ್ಲಿ ಮಕ್ಕಳಲ್ಲಿ ಇ.ಕ್ಯೂ ಬೆಳೆಸುವುದು ಪ್ರಾಮುಖ್ಯತೆ ಪಡೆಯುತ್ತದೆ. ಎಷ್ಟೋ ವೇಳೆ ಹಿರಿಯರಾದ ನಾವು ಮಕ್ಕಳೊಂದಿಗೆ ಸಂಯಮದಿಂದ ವರ್ತಿಸದೆ ಕೂಗಾಡಿ ನಮ್ಮೊಳಗಿರುವ ಆತಂಕಗಳನ್ನು ಹೊರಹಾಕುತ್ತೇವೆ. ಇ.ಕ್ಯೂವನ್ನು ಹೆಚ್ಚಿಸಿಕೊಳ್ಳಲು ನಾವೂ ಪ್ರಯತ್ನಿಸಿ ನಮ್ಮ ಮಕ್ಕಳಲ್ಲಿಯೂ ಬೆಳೆಸಲು ಪ್ರಯತ್ನಿಸಬಹುದಲ್ಲವೆ.