Thursday 11 March 2021

ಸಾವಯವ ಗೊಬ್ಬರ

 


5. ಬಿತ್ತನೆ
ಆಹಾರ ಉತ್ಪಾದನೆಯ ಪ್ರಮುಖ ಹಂತವೇ ಬಿತ್ತನೆ. ಉತ್ತಮ ಗುಣಮಟ್ಟದ ಉತ್ತಮ ಇಳುವರಿ ನೀಡುವ ಬೀಜಗಳನ್ನು ಬಿತ್ತನೆಗಾಗಿ ಆರಿಸಿಕೊಳ್ಳಲಾಗುತ್ತದೆ. 'ಸೀಡ್ಡ್ರಿಲ್' ಎಂಬ ವಿಶೇಷ ಸಾಧನದಿಂದ ಬೀಜಗಳನ್ನು ಬಿತ್ತುತ್ತಾರೆ. ಸೀಡ್ಡ್ರಿಲ್ನಲ್ಲಿ ಒಂದು ಆಲಿಕೆ ಹಾಗೂ ಎರಡು ಚೂಪಾದ ತುದಿಗಳಿರುವ ಪೈಪುಗಳಿರುತ್ತವೆ. ಈ ಚೂಪಾದ ತುದಿಗಳು ಮಣ್ಣಿನ ಒಳಹೋಗುತ್ತವೆ. ನಿರ್ದಿಷ್ಟ ಆಳ ಹಾಗೂ ಅಂತರದಲ್ಲಿ ಬೀಜಗಳನ್ನು ಬಿತ್ತಲು ಸೀಡ್ಡ್ರಿಲ್ ಸಹಾಯಕವಾಗಿದೆ. ಹಳೆಯ ಸೀಡ್ಡ್ರಿಲ್ಗಳ ಬದಲಿಗೆ ಇಂದು ಅತ್ಯಾಧುನಿಕ ಸೀಡ್ಡ್ರಿಲ್ಗಳನ್ನು ಟ್ರಾಕ್ಟರ್ಗಳೊಂದಿಗೆ ಬಳಸಿ ಬಿತ್ತನೆ ಮಾಡುತ್ತಾರೆ.

ಕೆಲವೊಮ್ಮೆ ಬೀಜಗಳನ್ನು ಹದಮಾಡಿದ ನೆಲದಲ್ಲಿ ಬಿತ್ತುವ ಬದಲು ಕಳೆರಹಿತ ಸಿದ್ಧಪಡಿಸಿದ ಭೂಮಿಯಲ್ಲಿ ಸಣ್ಣ ಗಿಡಗಳನ್ನು ನೆಡುತ್ತಾರೆ. ಇಲ್ಲಿಯೂ ಗಿಡಗಳ ನಡುವೆ ಸೂಕ್ತ ಅಂತರವನ್ನು ಕಾಯ್ತುಕೊಳ್ಳುತ್ತಾರೆ. ಇದರಿಂದ ಗಿಡಗಳನ್ನು ಒತ್ತೊತ್ತಾಗಿ ನೆಡುವುದು ತಪ್ಪುತ್ತದೆ. ಹಾಗೆಯೇ ಪ್ರತಿಗಿಡಕ್ಕೂ ಸಾಕಷ್ಟು ಸೂರ್ಯನ ಬೆಳಕು, ನೀರು ಮತ್ತು ಮಣ್ಣಿನಿಂದ ಅಗತ್ಯ ಪೋಷಕಾಂಶಗಳು ದೊರಕುತ್ತವೆ.

6. ಗೊಬ್ಬರ ಮತ್ತು ರಸಗೊಬ್ಬರ
ನಿರಂತರವಾಗಿ ಬೆಳೆಗಳನ್ನು ಬೆಳೆಯುವುದರಿಂದ ಮಣ್ಣು ಕೆಲವು ಪೋಷಕಾಂಶಗಳನ್ನು ಕಳೆದುಕೊಂಡು ಫಲವತ್ತತೆ ಕಡಿಮೆಯಾಗುತ್ತದೆ. ಪೋಷಕಾಂಶಗಳನ್ನು ಮಣ್ಣಿಗೆ ಸೇರಿಸಲು ರೈತರು ಗೊಬ್ಬರ ಮತ್ತು ರಸಗೊಬ್ಬರಗಳನ್ನು ಹಾಕುತ್ತಾರೆ. ಪ್ರಾಣಿ ಮತ್ತು ಸಸ್ಯ ತ್ಯಾಜ್ಯಗಳ ಕೊಳೆಯುವಿಕೆಯಿಂದ ದೊರಕುವ ಸಾವಯವ ವಸ್ತುವೇ ಗೊಬ್ಬರ. ಒಂದು ನಿರ್ದಿಷ್ಟ ಪೋಷಕಾಂಶ ಹೇರಳವಾಗಿರುವ ರಸಾಯನಿಕ ಪದಾರ್ಥವೇ ರಸಗೊಬ್ಬರ.

ರೈತರು ತೆರೆದ ನೆಲದಲ್ಲಿ ಗುಂಡಿಗಳನ್ನು ತೋಡಿ ಸಸ್ಯ ಹಾಗೂ ಪ್ರಾಣಿಗಳ ತ್ಯಾಜ್ಯಗಳನ್ನು ಹಾಕಿ ಕೊಳೆಯಲು ಬಿಡುತ್ತಾರೆ. ಕೆಲವು ಸೂಕ್ಷ್ಮಜೀವಿಗಳು ಈ ತ್ಯಾಜ್ಯಗಳನ್ನು ಕೊಳೆಸುತ್ತವೆ. ಕೊಳೆತ ಪದಾರ್ಥವನ್ನೆ ಸಾವಯವ ಗೊಬ್ಬರದ ಹಾಗೆ ಬಳಸುತ್ತಾರೆ. ವರ್ಮಿ ಕಾಂಪೋಸ್ಮಿಂಗ್ ಮೂಲಕ ಹೆಚ್ಚು ಸಾವಯವ ಎರೆಹುಳು ಗೊಬ್ಬರವನ್ನು ಪಡೆಯಬಹುದು. ಎರೆಹುಳುಗೊಬ್ಬರದಿಂದ ಮಣ್ಣಿನ ಗುಣಮಟ್ಟ ಮತ್ತು ನೀರನ್ನು ಹಿಡಿದಿಡುವ ಸಾಮಥ್ರ್ಯ ಹೆಚ್ಚುತ್ತದೆ. ಗೊಬ್ಬರದಿಂದ ಮಣ್ಣು ಎಲ್ಲಾ ಪೋಷಕಾಂಶಗಳನ್ನು ಪಡೆಯುತ್ತದೆ.

ರಸಾಯನಿಕಗಳನ್ನು ಬಳಸಿ ಕಾರ್ಖಾನೆಗಳಲ್ಲಿ ಕೃತಕವಾಗಿ ರಸಗೊಬ್ಬರಗಳನ್ನು ತಯಾರಿಸುತ್ತಾರೆ. ಯೂರಿಯಾ, ಅಮೋನಿಯಂ ಫಾಸ್ಫೇಟ್, ಸೂಪರ್ಫಾಸ್ಫೇಟ್, ಪೊಟ್ಯಾಷ್ ಮತ್ತು  NPK ರೈತರು ಸಾಮಾನ್ಯವಾಗಿ ಬಳಸುವ ರಸಗೊಬ್ಬರಗಳು. ರಸಗೊಬ್ಬರಗಳ ಬಳಕೆಯಿಂದ ರೈತರು ಗೋಧಿ, ಭತ್ತ, ಮೆಕ್ಕೆಜೋಳ ಮತ್ತಿತರ ಬೆಳೆಗಳ ಹೆಚ್ಚು ಇಳುವರಿ ಪಡೆಯುತ್ತಿದ್ದಾರೆ.

ರಸಗೊಬ್ಬರಗಳನ್ನು ಬೇಕಾದಷ್ಟು ಪ್ರಮಾಣದಲ್ಲಿ ಮಾತ್ರವೇ ಬಳಸಬೇಕು. ಹೆಚ್ಚು ರಸಗೊಬ್ಬರ ಹಾಕಿದರೆ ಮಣ್ಣು ಫಲವತ್ತತೆಯನ್ನು  ಕಳೆದುಕೊಳ್ಳುತ್ತದೆ.  ರಸಗೊಬ್ಬರಗಳಿಂದ  ನೀರು  ಮಲಿನಗೊಳ್ಳುತ್ತದೆ.  ಆದ್ದರಿಂದ  ಮಣ್ಣಿನ ಫಲವತ್ತತೆಯನ್ನು  ಉಳಿಸಿಕೊಳ್ಳಲು  ರಸಗೊಬ್ಬರಗಳ  ಬದಲಿಗೆ  ಸಾವಯವ  ಗೊಬ್ಬರಗಳನ್ನು  ಬಳಸಬೇಕು. ಹಾಗೆಯೇ ರೈತರು ಎರಡು ಬೆಳೆಗಳ ನಡುವೆ ಭೂಮಿಯನ್ನು ಖಾಲಿಬಿಟ್ಟು ರಸಗೊಬ್ಬರಗಳ ಬಳಕೆಯಿಂದಾದ ನಷ್ಟವನ್ನು ಸರಿದೂಗಿಸಿಕೊಳ್ಳುತ್ತಾರೆ. ಜೊತೆಗೆ ಪರ್ಯಾಯ ಬೆಳೆಗಳನ್ನು ಬೆಳೆಯುವುದರಿಂದಲೂ ಭೂಮಿಯ
ಫಲವತ್ತತೆಗೆ ಹಾನಿಯಾಗುವುದಿಲ್ಲ.

ರಸಗೊಬ್ಬರಗಳಿಗಿಂತ ಸಾವಯವ ಗೊಬ್ಬರಗಳು ಉತ್ತಮ. ಏಕೆಂದರೆ-

1. ಸಾವಯವ ಗೊಬ್ಬರ ಮಣ್ಣಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ.
2. ಇದು ಮಣ್ಣಿನಲ್ಲಿ ರಂಧ್ರಗಳನ್ನು ಮಾಡಿ ಅನಿಲಗಳ ವಿನಿಮಯಕ್ಕೆ ದಾರಿ ಮಾಡಿಕೊಡುತ್ತದೆ.
3. ಪರಿಸರ ಸ್ನೇಹಿ ಸೂಕ್ಷ್ಮ ಜೀವಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.
4. ಮಣ್ಣಿನ ಗುಣವನ್ನು ಹೆಚ್ಚಿಸುತ್ತದೆ.

 ಬೆಳೆಗಳ ವಿಧಾನಗಳಲ್ಲಿಯೂ ಕಳೆಗಳನ್ನು ನಿಯಂತ್ರಿಸುತ್ತಾರೆ.

1. ಮಿಶ ಬೇಸಾಯದಲ್ಲಿ ಒಂದೇ ಹೊಲದಲ್ಲಿ ಎರಡು ಅಥವಾ ಹೆಚ್ಚು ಬೆಳೆಗಳನ್ನು ಬೆಳೆಯುತ್ತಾರೆ.
ಉದಾಹರಣೆಗೆ ತೊಗರಿಬೇಳೆಯನ್ನು ಜೋಳ ಅಥವಾ ರಾಗಿಯೊಂದಿಗೆ ಬೆಳೆಯುತ್ತಾರೆ.
 
2. ಬೆಳೆಗಳ ಚಕ್ರ ವಿಧಾನದ ಮೂಲಕ ಬೇರೆ ಬೇರೆ ಕಾಲದಲ್ಲಿ ಒಂದೇ ಹೊಲದಲ್ಲಿ ಧಾನ್ಯಗಳನ್ನು ಹಾಗೂ ಕಾಳುಗಳನ್ನು ಬೆಳೆಯುತ್ತಾರೆ. ಋತುಗಳಿಗೆ ತಕ್ಕಂತೆ ಬೆಳೆಗಳು ಬದಲಾಗುತ್ತವೆ. ಯಾಂತ್ರಿಕ ವಿಧಾನದಿಂದ ಕಳೆಗಳಿಂದ ಬೆಳೆ ರಕ್ಷಣೆ ರಾಸಾಯನಿಕ ವಿಧಾನದಿಂದ ಜೈವಿಕ ವಿಧಾನದಿಂದ ಕಳೆಗಳಿಂದ ಬೆಳೆ ರಕ್ಷಣೆ ಕಳೆಗಳಿಂದ ಬೆಳೆ ರಕ್ಷಣೆ

10.2 ಸಸ್ಯರೋಗಗಳಿಂದ ರಕ್ಷಣೆ
ಶಿಲೀಂಧ್ರ,  ಬ್ಯಾಕ್ಟೀರಿಯಾ,  ವೈರಸ್  ಮುಂತಾದ  ಸೂಕ್ಷ್ಮಜೀವಿಗಳಿಂದ ಸಸ್ಯರೋಗಗಳು  ಬರುತ್ತವೆ.  ಕೆಲವು ರೋಗಗಳು ಮಣ್ಣಿನಿಂದಲೇ ಬರಬಹುದು. ಗಾಳಿಯಿಂದಲೂ ಹಾಗೂ ಬೀಜಗಳಿಂದಲೂ ಕೆಲ ರೋಗಗಳು ಹರಡಬಹುದು. ಕಡಲೆಕಾಯಿಯಲ್ಲಿ ಚುಕ್ಕೆರೋಗ,  ಗೋಧಿಯಲ್ಲಿ ಶಿಲೀಂಧ್ರ,  ಹಾಗೂ  ಭತ್ತದಲ್ಲಿ  ಎಲೆಗಳು ತೂತುಬೀಳುವುದು ಸಾಮಾನ್ಯ ರೋಗಗಳಾಗಿವೆ.

ಮಣ್ಣಿನಿಂದ  ಬರುವ  ರೋಗಗಳನ್ನು  ಸೂಕ್ತ  ಔಷಧಿಗಳಿಂದ  ತಡೆಗಟ್ಟಬಹುದು.  ಗಾಳಿಯಿಂದುಂಟಾಗುವ ರೋಗಗಳನ್ನು ಶಿಲೀಂಧ್ರನಾಶಕಗಳನ್ನು ಸಿಂಪಡಿಸುವ ಮೂಲಕ ನಿಯಂತ್ರಿಸಬಹುದು. ಆರೋಗ್ಯಕರ ಬೀಜಗಳನ್ನು ಆಯ್ದು  ಅವುಗಳನ್ನು  ಬಿತ್ತನೆಗೆ  ಮೊದಲು  ರಸಾಯನಿಕಗಳಿಂದ  ಉಪಚಾರ  ಮಾಡಿ  ನೆಡುವುದರಿಂದ ಬೀಜಗಳಿಂದುಂಟಾಗುವ  ರೋಗಗಳ  ನಿಯಂತ್ರಣ  ಸಾಧ್ಯ.  ರಾಸಾಯನಿಕಗಳು  ರೋಗಕಾರಕ  ಕ್ರಿಮಿಗಳನ್ನು ಕೊಲ್ಲುತ್ತವೆ.

10.3 ಕೀಟಗಳಿಂದ ರಕ್ಷಣೆ
ಬೆಳೆಗಳಿಗೆ ಕೀಟಗಳ ಹಾವಳಿ ಸಾಮಾನ್ಯ. ಮಿಡತೆಗಳು, ಇರುವೆಗಳು, ದುಂಬಿಗಳು ಇನ್ನಿತರ ಹುಳುಗಳು ಎಲೆಗಳನ್ನು ಕಚ್ಚುತ್ತವೆ, ತಿನ್ನುತ್ತವೆ ಹಾಗೂ ಸಸ್ಯಭಾಗಗಳಿಂದ ರಸವನ್ನು ಹೀರುತ್ತವೆ. ಸೂಕ್ತ ರಾಸಾಯನಿಕಗಳ ಉಪಯೋಗದಿಂದ ಕೀಟಗಳನ್ನು ನಿಯಂತ್ರಿಸಬಹುದು. ಈ ರಸಾಯನಿಕಗಳಿಗೆ ಕೀಟನಾಶಕಗಳು ಎನ್ನುತ್ತಾರೆ. ಮಾನೋಕ್ರೋಟೋಫಾಸ್, ಡೈಮಿಥೋಯೇಟ್ ಮತ್ತು ಕ್ಲೋರೋಫಿರಿಫೂ ಸಾಮಾನ್ಯವಾಗಿ ಬಳಕೆಯಾಗುವ ಕೀಟನಾಶಕಗಳು.  ಶಿಲೀಂಧ್ರನಾಶಕಗಳನ್ನು (ಜಿಣಟಿರಛಿಜಜ)  ಉಪಯೋಗಿಸಿ  ಕೀಟಗಳನ್ನು  ನಿಯಂತ್ರಿಸುತ್ತಾರೆ. ಅಗ್ರೋಸಾನ್ ಮತ್ತು ಸೆರೆಸಾನ್ ಸಾಮಾನ್ಯ ಶಿಲೀಂಧ್ರನಾಶಕಗಳು. ಕೀಟನಾಶಕಗಳು ವಿಷಕಾರಿ. ಆದ್ದರಿಂದ ಅವುಗಳನ್ನು ಬಳಸುವಾಗ ಎಚ್ಚರಿಕೆಯಿಂದಿರಬೇಕು.

11. ಕಟಾವು
ಕೀಟಗಳಿಂದ ತೊಂದರೆಗೊಳಗಾದ ಸಸ್ಯಗಳುಬೆಳೆಗಳು ಸಂಪೂರ್ಣವಾಗಿ ಬೆಳೆದುನಿಂತಾಗ, ಧಾನ್ಯಗಳು ತುಂಬಿರುವ ಬೆಳೆಗಳನ್ನು ಕತ್ತರಿಸಿ, ಧಾನ್ಯಗಳನ್ನು ಬೇರ್ಪಡಿಸುತ್ತಾರೆ. ಇದಕ್ಕೆ ಕಟಾವು ಎಂದು ಹೆಸರು. ಯಂತ್ರ ಅಥವಾ ಕುಡುಗೋಲುಗಳ ಸಹಾಯದಿಂದ ಬೆಳೆಗಳನ್ನು ಕಟಾವು ಮಾಡುತ್ತಾರೆ. ಧಾನ್ಯಗಳನ್ನು ಹೊಟ್ಟಿನಿಂದ ಬೇರ್ಪಡಿಸುತ್ತಾರೆ. ಧಾನ್ಯಗಳನ್ನು ಬೇರ್ಪಡಿಸುವ ವಿಧಾನವನ್ನು (ಣಡಿಜಟಿರ) ಎಂದು ಕರೆಯುತ್ತಾರೆ. ಇದನ್ನು ಯಂತ್ರಗಳಿಂದ ಮಾಡುತ್ತಾರೆ.

ಮಾನವನಿಂದ ಭತ್ತ ಮತ್ತು ಟೊಮ್ಯಾಟೋಗಳ ಕಟಾವು ವಾನವ ಶವುದ ಒಕ್ಕಣ ಯಂತ್ರಗಳಿಂದ ಒಕ್ಕಣೆ

12. ಸಂಗ್ರಹಣೆ
ಕಟಾವಿನ ನಂತರ ಧಾನ್ಯಗಳನ್ನು ಸರಿಯಾಗಿ ಸಂಗ್ರಹಿಸಬೇಕು. ಇಲಿ, ಕೀಟಗಳಿಂದ ಉತ್ಪನ್ನಗಳನ್ನು ಕಾಪಾಡುವುದು ಅತಿ ಮುಖ್ಯ. ತಾಜಾ ಆಗಿ ಕಟಾವು ಮಾಡಿದ ಧಾನ್ಯಗಳನ್ನು ಬಿಸಿಲಿನಲ್ಲಿ ಒಣಗಿಸಬೇಕು. ಸೆಣಬಿನ ಚೀಲಗಳಲ್ಲಿ ಅಥವಾ ಡಬ್ಬಿಗಳಲ್ಲಿ ಶೇಖರಿಸಬೇಕು.
ಬೃಹತ್ ಪ್ರಮಾಣದಲ್ಲಿ ಧಾನ್ಯಗಳನ್ನು ಸಂಗ್ರಹಿಸಲು ಕಣಜಗಳು (ರಡಿಚಿಟಿಚಿಡಿಜ) ಬೇಕು. ಮನೆಯಲ್ಲಿ ಧಾನ್ಯಗಳನ್ನು ಸಂಗ್ರಹಿಸಿಡಲು ಒಣಗಿದ ಬೇವಿನ ಎಲೆಗಳನ್ನು ಬಳಸುತ್ತಾರೆ. ಬೇವಿನ ಎಲೆಗಳು ಕೀಟಗಳನ್ನು ನಿಯಂತ್ರಿಸುತ್ತವೆ.

13. ಹಸಿರು ಕ್ರಾಂತಿ

ಆಧುನಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡು, ಹೆಚ್ಚು ಇಳುವರಿ ನೀಡುವ ಬೀಜಗಳನ್ನು ಬಳಸಿಕೊಂಡು ಆಹಾರ ಧಾನ್ಯಗಳ ಉತ್ಪಾದನೆಯ ಪ್ರಮಾಣವನ್ನು ಗಣನೀಯವಾಗಿ ಹೆಚ್ಚು ಮಾಡಿರುವ ಕೃಷಿ ಪದ್ಧತಿಗೆ ಹಸಿರು ಕ್ರಾಂತಿ ಎನ್ನುತ್ತಾರೆ. ಭಾರತವು ಹಸಿರು ಕ್ರಾಂತಿಯಲ್ಲಿ ಅತ್ಯಂತ ಹೆಚ್ಚು ಯಶಸ್ಸು ಪಡೆದಿರುವ ರಾಷ್ಟ್ರವೆಂಬ ಖ್ಯಾತಿ ಪಡೆದಿದೆ.

ಜಪಾನಿನಲ್ಲಿ 1940ರ ದಶಕದಲ್ಲಿ ವಿಶೇಷ  ಬಗೆಯ ಗೋಧಿಯ ತಳಿಗಳನ್ನು ಬಳಸಿಕೊಂಡು ಗೋಧಿಯ ಉತ್ಪಾದನೆಯನ್ನು ಅಧಿಕಗೊಳಿಸುವ ಮೂಲಕ ಹಸಿರು ಕ್ರಾಂತಿ ಆರಂಭವಾಯಿತು. ನಂತರ ಅಮೆರಿಕಾದಲ್ಲಿ 1960ರ ಸುಮಾರು ಕೃಷಿ ವಿಜ್ಞಾನಿ ನಾರ್ಮನ್ ಬಾರ್ಲಾಗ್ ಹೆಚ್ಚು ಇಳುವರಿ ನೀಡುವ ಗೋಧಿಯ ತಳಿಗಳನ್ನು ಸಂಶೋಧಿಸಿದನು.    ಇದರಿಂದ ವಿಶ್ವದಾದ್ಯಂತ  ಹಸಿರು ಕ್ರಾಂತಿ ಆರಂಭವಾಯಿತು. ಆದ್ದರಿಂದ ನಾರ್ಮನ್ ಬಾರ್ಲಾಗ್ನನ್ನು ಹಸಿರು ಕ್ರಾಂತಿಯ ಶಕಪುರುಷ ಎಂದು ಕರೆಯುತ್ತಾರೆ.
 
ನಾರ್ಮನ್ ಬಾರ್ಲಾಗ್ 1914 - 2009 : ಹಸಿರುಕ್ರಾಂತಿಯ ಪಿತಾಮಹ

ಭಾರತದಲ್ಲಿ ಆಮದು ಮಾಡಿಕೊಂಡ ಹೆಚ್ಚು ಇಳುವರಿ ನೀಡುವ ಗೋಧಿ ಬೀಜಗಳು ಮತ್ತು ಆಧುನಿಕ ಕೃಷಿ ತಂತ್ರಜ್ಞಾನದ ಬಳಕೆಯಿಂದ 1960ರ ದಶಕದ ಉತ್ತರಾರ್ಧದಲ್ಲಿ ಹಸಿರು ಕ್ರಾಂತಿ ಆರಂಭವಾಯಿತು. ಕೃಷಿ ವಿಜ್ಞಾನಿಗಳಾದ ಎಂ.ಎಸ್. ಸ್ವಾಮಿನಾಥನ್, ಬಿ.ಪಿ. ಪಾಲ್ ಮತ್ತು ಆಗಿನ ಕೇಂದ್ರ ಕೃಷಿ ಮಂತ್ರಿ ಸಿ. ಸುಬ್ರಹ್ಮಣ್ಯಂ ಭಾರತದಲ್ಲಿ  ಹಸಿರು  ಕ್ರಾಂತಿಗೆ  ಕಾರಣರಾದ  ಪುರುಷರು.  ಆಗ  ದೇಶಾದ್ಯಂತ  ಕೃಷಿ  ಭೂಮಿಯನ್ನು ವಿಸ್ತರಿಸಲಾಯಿತು. ಎರಡು ಬೆಳೆಗಳನ್ನು ಬೆಳೆಯುವ ಪದ್ಧತಿಯನ್ನು ಆರಂಭಿಸಲಾಯಿತು. ಮಾಹಿತಿ ಪ್ರಸಾರಕ್ಕಾಗಿ ಕೃಷಿ ವಿಜ್ಞಾನ ಕೇಂದ್ರಗಳನ್ನು ತೆರೆಯಲಾಯಿತು. ಪ್ರತಿ ಜಿಲ್ಲೆಗೂ ಬ್ಲಾಕ್ ಡೆವಲಪ್ಮೆಂಟ್ ಆಫೀಸರ್ಗಳನ್ನು ನೇಮಿಸಲಾಯಿತು. ಅಣೆಕಟ್ಟುಗಳು, ನೀರಾವರಿ ಕಾಲುವೆಗಳು ಮತ್ತು ಆಳವಾದ ಬಾವಿಗಳನ್ನು ನಿರ್ಮಿಸಲಾಯಿತು. ರೈತರಿಗೆ ರಸಾಯನಿಕ ಗೊಬ್ಬರಗಳನ್ನು ಒದಗಿಸಲು ರಸಗೊಬ್ಬರ ಕಾರ್ಖಾನೆಗಳನ್ನು ಸ್ಥಾಪಿಸಿದರು. ವಿಜ್ಞಾನಿಗಳಾದ ಎಂ ಎಸ್ ಸ್ವಾಮಿನಾಥನ್, ಬಿ. ಪಿ. ಪಾಲ್ ಮತ್ತಿತರರು ಕೃಷಿ ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನಾ ಕೇಂದ್ರಗಳಲ್ಲಿ ಹೆಚ್ಚು ಇಳುವರಿ ನೀಡುವ ಭತ್ತ, ಗೋಧಿ ಇತ್ಯಾದಿ ಧಾನ್ಯಗಳ ಹೊಸ ತಳಿಗಳನ್ನು ಕಂಡುಹಿಡಿದರು.
ಬೀಜಗಳನ್ನು ಬೆಳೆಯಲು ಕೃಷಿಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಯಿತು. ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ವಿಜ್ಞಾನಿಗಳು  ನೇರವಾಗಿ  ರೈತರೊಂದಿಗೆ  ಸಂವಾದ  ನಡೆಸಿ  ಆಧುನಿಕ  ಕೃಷಿ  ತಂತ್ರಜ್ಞಾನದ  ಪರಿಚಯ  ಮಾಡಿಕೊಟ್ಟರು. ಈ ಕ್ರಾಂತಿಯಿಂದಾಗಿ ಆಹಾರ ಧಾನ್ಯಗಳ ಉತ್ಪಾದನೆ ಗಣನೀಯವಾಗಿ ಹೆಚ್ಚಿತು. ಆಹಾರ ಧಾನ್ಯಗಳ ಸಂಗ್ರಹಾಗಾರಗಳನ್ನು ನಿಮರ್ಿಸಲಾಯಿತು. ಈ ಹಸಿರು ಕ್ರಾಂತಿಯ ಫಲವಾಗಿ 1950ರಲ್ಲಿ ಕೇವಲ 50 ಮಿಲಿಯನ್ ಟನ್ಗಳಷ್ಟಿದ್ದ ಆಹಾರ ಧಾನ್ಯಗಳ ಉತ್ಪಾದನೆ 2000ದಲ್ಲಿ 100 ಮಿಲಿಯನ್ ಟನ್ಗಳಿಗೇರಿತು. 1990ರಿಂದೀಚೆಗೆ ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ.