ಇಂದಿಗೂ ಕರ್ನಾಟಕದ ಮೂಲೆಮೂಲೆಯ ಜನ ಸದಾ ನೆನಪಿಸುವಂತಹ, ಪ್ರಾಮಾಣಿಕತೆಗೆ ಭಾಷ್ಯವನ್ನೇ ಬರೆದಂತಹ, ಮುಂದಿನವರೆಲ್ಲರಿಗೂ ಮಾದರಿಯಾಗುವಂತ ಅನುಕರಣೀಯ ಕೆಲಸಗಳನ್ನು ರಾಜಕೀಯ ಕ್ಷೇತ್ರದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಮಾಡಿ ತೋರಿಸಿದ ಮಹಾನ್ ಚೇತನ ಮಾನ್ಯ ಶ್ರೀ ಗೋವಿಂದ ಗೌಡರು.
ಇಂತಹ ಅಜರಾಮರ ಚೇತನ ಹುಟ್ಟಿದ್ದು 25.05.1926ರಲ್ಲಿ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರದ ಹಿಣಚಿ ಗ್ರಾಮದ ಕಾನೂರಿನಲ್ಲಿ. ತಾಯಿ ಬೋಬಮ್ಮ, ತಂದೆ ಗಿಡ್ಡೇಗೌಡ. ಒಡಹುಟ್ಟಿದವರು ತಂಗಿ ಸೀತಮ್ಮ ಮಾತ್ರ. ಅಂದಿನ ದಿನಗಳಲ್ಲೇ ಸಣ್ಣಕುಟುಂಬ ಸುಖೀ ಕುಟುಂಬ ಎಂಬ ಘೋಷವಾಕ್ಯಕ್ಕೆ ನಾಂದಿ ಹಾಡಿದವರು ಅವರ ತಂದೆ ಗಿಡ್ಡೇಗೌಡರು. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಗೌಡರು ತಮ್ಮ ಬಾಲ್ಯವನ್ನು ತುಂಬ ಕಷ್ಟದಲ್ಲಿಯೇ ಕಳೆದರು. ತಮ್ಮ ಕಿರಿಯ ಪ್ರಾಥಮಿಕ ವಿದ್ಯಾಭ್ಯಾಸವನ್ನು ಎನ್. ಆರ್.ಪುರದ ಕಾನೂರು ಗ್ರಾಮದಲ್ಲಿ ಹಾಗೂ ಹಿರಿಯ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೊಪ್ಪದಲ್ಲಿ ಮುಗಿಸಿದರು. ಇಲ್ಲಿಯೇ ಎಸ್.ಎಸ್. ಎಲ್.ಸಿ.ಯನ್ನು 1944 ರಲ್ಲಿ ಮುಗಿಸಿದ ಗೌಡರು, ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್ ಅನ್ನು 1946 ರಿಂದ 48 ರವರೆಗೆ ಓದಿದರು.
ಅಂದಿನ ಕರ್ನಾಟಕ ರಾಜಕಾರಣದಲ್ಲಿ ಪ್ರಖ್ಯಾತರಾಗಿದ್ದ ಕಡಿದಾಳು ಮಂಜಪ್ಪ, ಕೆಂಗಲ್ ಹನುಮಂತಯ್ಯ, ಹೆಚ್.ಸಿ. ದಾಸಪ್ಪ, ಟಿ. ಸಿದ್ದಲಿಂಗಯ್ಯ ಮೊದಲಾದವರನ್ನು ಹತ್ತಿರದಿಂದ ನೋಡಿದ್ದು, ಅವರುಗಳಿಂದ ಪ್ರಭಾವಿತರಾಗಿದ್ದು ಶಿವಮೊಗ್ಗದಲ್ಲಿಯೇ. ಇಂಟರ್ ಮೀಡಿಯೆಟ್ ಓದುತ್ತಿದ್ದಾಗಲೇ ಗಾಂದೀಜಿಯವರ ಹತ್ಯೆಯಾಗಿ ಇಡೀ ದೇಶ ಪ್ರಕ್ಷಬ್ಧಗೊಂಡಾಗ ಅದರ ನೋವನ್ನು ಅನುಭವಿಸಿ ಇಂಟ- ರ್ಮೀಡಿಯೆಟ್ಗೆ ಶರಣು ಹೇಳಿ ಕೊಪ್ಪದ ಸಣ್ಣಕೆರೆಯ ಶ್ರೀಯುತ ಸುಬ್ಬೇಗೌಡರಲ್ಲಿಗೆ ಬಂದರು. ಸ್ವಾತಂತ್ರ ಹೋರಾಟದಲ್ಲಿ ತಮ್ಮ ಮನಸ್ಸನ್ನು ತೊಡಗಿಸಿದ್ದ ಗೌಡರು, ಗಾಂಧೀ ತತ್ವಗಳಿಂದ ಅಪಾರವಾಗಿ ಪ್ರಭಾವಿತರಾಗಿದ್ದರು.
ತಮ್ಮ ಮಾನಸಿಕ ಗುರು ಗಾಂಧೀಜಿಯವರ ಮರಣದಿಂದ ಜೀವನೋತ್ಸಾಹವನ್ನೇ ಕಳೆದುಕೊಂಡಿದ್ದ ಗೌಡರಿಗೆ ಮತ್ತೆ ಜೀವನೋತ್ಸಾಹ ತುಂಬಿ ಜೀವನದಲ್ಲಿ ಸಾಧನೆಯೆಡೆಗೆ ಮುಖ ಮಾಡುವಂತೆ ಇವರನ್ನು ಪ್ರೇರೇಪಿಸಿದ ಕೀರ್ತಿ ಸುಬ್ಬೇಗೌಡರಿಗೆ ಹಾಗು ಅಂದಿನ ಇವರ ಸ್ನೇಹಿತರಿಗೆ ಸಲ್ಲುತ್ತದೆ. ಜೊತೆಗೆ ಇವರ ರಾಜಕೀಯ ಗುರು ಕಡಿದಾಳ್ ಮಂಜಪ್ಪ, ಕೆಂಗಲ್ ಹನುಮಂತಯ್ಯ, ಹೆಚ್,ಸಿ ದಾಸಪ್ಪ, ಟಿ.ಸಿದ್ಧಲಿಂಗಯ್ಯ ಮತ್ತಿತರರ ಪ್ರಭಾವವೂ ಕಾರಣವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಜೀವನದಲ್ಲಿ ಎಲ್ಲ ರೀತಿಯ ಏಳು ಬೀಳುಗಳನ್ನು ಕಂಡಿದ್ದ ಗೌಡರು ಗಾಂಧೀಜಿಯವರ ತತ್ವಗಳನ್ನು ತತ್ವಶಃ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಶಾಲೆಗೆ ಹೋಗುವಾಗಲೇ ಎತ್ತು-ದನ ಮೇಯಿಸುವ ಕೆಲಸದಿಂದ ಹಿಡಿದು ಹೊಲ ಉಳುವ, ಸಂತೆಯಲ್ಲಿ ವ್ಯಾಪಾರ ಮಾಡುವವರೆಗೆ ಮಲೆನಾಡ ರೈತಾಪಿ ಜನ ಮಾಡುವ ಹೆಚ್ಚಿನೆಲ್ಲ ಕೆಲಸಗಳನ್ನೂ ಮಾಡಿದ ಅನುಭವ ಈ ಮೇರು ವ್ಯಕ್ತಿತ್ವದ್ದು. ಕಾಲೇಜಿಗೆ ಶರಣು ಹೊಡೆದ ನಂತರ ಮುಂದಿನ ಜೀವನವನ್ನು ಸ್ವತಂತ್ರವಾಗಿ ಪ್ರಾರಂಭಿಸಿದ ಗೌಡರಿಗೆ ಕೋಣೆಗದ್ದೆ ಪುಟ್ಟೇಗೌಡರು ತಮ್ಮ ಅಂಗಡಿಯನ್ನು 1948-49 ರಲ್ಲಿ ವಹಿಸಿಕೊಟ್ಟು ಪ್ರೋತ್ಸಾಹಿಸಿದರು. ಅಂದಿನ ಇವರೆಲ್ಲ ಸ್ನೇಹಿತರೂ ಇವರಿಗೆ ಪ್ರೋತ್ಸಾಹ ನೀಡಿ ಹುರಿದುಂಬಿಸಿದ್ದನ್ನು ಶ್ರೀಯುತರು ಮರೆತಿರಲಿಲ್ಲ.
1956-57 ರಲ್ಲಿ ಕೊಪ್ಪಕ್ಕೆ ವಿದ್ಯುತ್ ಬರಲು ಪ್ರಮುಖ ಕಾರಣಕರ್ತರಾಗಿ ನಂತರ ಕೊಪ್ಪದಲ್ಲಿ ಮೊದಲ ಫ್ಲೋರ್ ಮಿಲ್ ಸ್ಥಾಪಿಸಿದ ಕೀರ್ತಿ, ಕೊಪ್ಪದ ಜನತೆಗೆ ಮೊಟ್ಟಮೊದಲ ಬಾರಿಗೆ ಶುದ್ಧ ಕಾಫಿಪುಡಿಯನ್ನು, ರೇಡಿಯೋವನ್ನು ಪರಿಚಯಿಸಿದ ಕೀರ್ತಿ ಎಲ್ಲವೂ ಇವರಿಗೇ ಸಲ್ಲುತ್ತವೆ. ಎಲ್.ಐ.ಸಿ.ಏಜೆಂಟರಾಗಿಯೂ ಕೆಲವು ಕಾಲ ಇವರು ಕಾರ್ಯ ನಿರ್ವಹಿಸಿದ್ದರು ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಹಿಂದೂಸ್ಥಾನ್ ಲಿವರ್ಸ್ ಸಂಸ್ಥೆಯ ಅಧಿಕೃತ ಪ್ರತಿನಿಧಿಯೂ ಆಗಿದ್ದ ಶ್ರೀಯುತರು ವ್ಯಾಪಾರದ ಎಲ್ಲಾ ಕ್ಷೇತ್ರಗಳಲ್ಲೂ ಕೈಯಾಡಿಸಿ ಜನರಿಗೆ ಪ್ರಾಮಾಣಿಕತೆಯ ಪಾಠ ಕಲಿಸುವುದರ ಜೊತೆಗೆ ಜನರ ಅವಶ್ಯಕತೆಗಳನ್ನು ಸ್ಥಳೀಯವಾಗಿಯೇ ಪೂರೈಸಬೇಕೆಂಬ ತಮ್ಮ ಕನಸನ್ನು ನನಸಾಗಿಸಿಕೊಂಡವರು. ತಮ್ಮ ರಾಜಕೀಯ ಕ್ಷೇತ್ರದ ಕೆಲಸಗಳ ಒತ್ತಡದಿಂದಾಗಿ 1967 ರಲ್ಲಿ ತಮ್ಮ ವ್ಯಾಪಾರವನ್ನು ನಿಲ್ಲಿಸುವವರೆಗೆ ಕೊಪ್ಪದ ವಾಣಿಜ್ಯ ವ್ಯವಹಾರಗಳಲ್ಲಿ ಸಕ್ರಿಯವಾಗಿ ತೊಡಿಗಿಸಿಕೊಂಡಿದ್ದರು.
1950 ಮಾರ್ಚ್ 12 ರಂದು ಗೋವಿಂದಗೌಡರ ಬಾಳಿನಲ್ಲಿ ಮರೆಯಲಾರದ ದಿನ. ಅಂದು ಇವರ ಬಾಳ ಸಂಗಾತಿಯಾಗಿ ಶ್ರೀಮಂತ ಕುಟುಂಬದ ಅಸಗೋಡು ಸಣ್ಣಬೊಬ್ಬೇಗೌಡ ಅವರ ಮಗಳು ಶಾಂತ ಅವರು ಶ್ರೀಮತಿ ಶಾಂತಾಗೋವಿಂದಗೌಡರಾಗಿ ಕೊಪ್ಪದ ಗೋವಿಂದಗೌಡರ ಮನೆ-ಮನ ಪ್ರವೇಶಿಸಿದರು. ಗೋವಿಂದಗೌಡರ ಬಾಳಿನ ಅವಿಭಾಜ್ಯ ಅಂಗವಾಗಿದ್ದ ಶಾಂತ ಅವರ ವ್ಯಕ್ತಿತ್ವ ಅವರನ್ನು ಒಮ್ಮೆ ನೋಡಿದರೆ ತಿಳಿಯುತ್ತದೆ. ಸೂಜಿಗಲ್ಲಿನಂತೆ ಸರ್ವರನ್ನೂ ಸೆಳೆಯುವ ಅವರ ಸೌಮ್ಯಸ್ವಭಾವ, ಹೆಸರಿಗೆ ತಕ್ಕಂತೆ ಇರುವ ಶಾಂತ ಸ್ವಭಾವ, ತುಂಬಿದ ಕೊಡದಂತಿರುವ ಸಕಲ ಸದ್ಗುಣಗಳ ಗಣಿ ಎಲ್ಲರ ಪ್ರೀತಿಯ ಈ ಶಾಂತಕ್ಕ. ಇವರ ದಾಂಪತ್ಯ ಜೀವನ ಎಲ್ಲ ಏಳುಬೀಳುಗಳನ್ನೂ ಕಂಡಿದೆ. ಈ ದಂಪತಿಗಳ ಕೌಟುಂಬಿಕ ಪ್ರೀತಿ, ಸಮಾಜಸೇವೆಯ ತುಡಿತ, ಸಹನೆ, ಉಪಕಾರ, ಕಷ್ಟ ಸಹಿಷ್ಣುತೆ, ಪರಸ್ಪರತ್ಯಾಗ, ಬಂಧುಮಿತ್ರರ ಸ್ನೇಹ ಸಂವರ್ಧನೆ, ಅತಿಥಿ-ಅಭ್ಯಾಗತರ ಉಪಚಾರ, ಜನರ ಕಷ್ಟಗಳಿಗೆ ಸ್ಪಂದಿಸುವ ಗುಣ, ಜನಮಾನಸದಲ್ಲಿ ಇಂದಿಗೂ ಚಿರಸ್ಮರಣೀಯವಾಗಿದೆ.
1969ರಲ್ಲಿ ಕೊಪ್ಪದಿಂದ 1 ಕಿ.ಮೀ.ದೂರದಲ್ಲಿದ್ದ ಇಂದಿನ ಮಣಿಪುರದಲ್ಲಿ ಒಂದು ಮನೆಕಟ್ಟಿ ಸ್ಥಳಾಂತರಗೊಳ್ಳುವವರೆಗೆ ಕೊಪ್ಪದಲ್ಲಿ ಈ ದಂಪತಿಗಳು ತಮ್ಮ ಜೀವನವನ್ನು ಸಾಗಿಸಿದರು. ಈ ಮಾದರಿ ದಂಪತಿಗಳಿಗೆ ಮೊದಲ ಮಗಳು ಲೀಲಾ ಹುಟ್ಟಿದ್ದು 1951ರಲ್ಲಿ ಎರಡನೆಯ ಮಗಳು ಶೀಲಾ, ಮೂರನೆಯವರು ಇವರ ಏಕೈಕ ಪುತ್ರ ವೆಂಕಟೇಶ್, ನಾಲ್ಕನೆಯ ಮಗಳು ಉಮಾ, ಐದನೆಯ ಮಗಳು ಚಂಪಾ, ಕೊನೆಯ ಮಗಳು ರೂಪ. ಗೋವಿಂದಗೌಡ ಮತ್ತು ಶ್ರೀಮತಿ ಶಾಂತಾರವರದದ್ದು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳನ್ನು ಒಳಗೊಂಡಂತೆ 30 ಜನರ ಸುಂದರ ಸುಖೀ ಕುಟುಂಬ. ಮಗ ವೆಂಕಟೇಶ್ರವರ ಪತ್ನಿ ಪ್ರಖ್ಯಾತ ರಾಜಕಾರಣಿ ಬಿ.ಎಲ್.ಶಂಕರ್ ಅವರ ಸಹೋದರಿ ಕೃಪಾಲಿನಿ. ಇವರಿಗೆ ವಾರುಣಿ ಹಾಗೂ ಪ್ರಿಯಾಂಕ ಎಂಬಿಬ್ಬರು ಮಕ್ಕಳು. ಅಪ್ಪ ಹಾಕಿಕೊಟ್ಟ ದಾರಿಯಲ್ಲಿಯೇ ಸಾಗುತ್ತಿರುವ ಶ್ರೀ ವೆಂಕಟೇಶ್ ಅವರು ಪರಿಚಿತರ ಬಾಯಿಯಲ್ಲಿ ಪ್ರೀತಿಯ ವೆಂಕಟೇಶಣ್ಣನಾಗಿ, ಕೊಪ್ಪದ ಸಾರ್ವಜನಿಕ ಜೀವನದಲ್ಲಿ, ಸಮಾಜ ಸೇವೆಯಲ್ಲಿ ಸಕ್ರಿಯವಾಗಿರುವ ಇವರು ಇಂದಿಗೂ ಅಪ್ಪನ ಪ್ರಾಮಾಣಿಕತೆಯನ್ನು ಬೆರಗಿನಿಂದ ನೋಡುತ್ತಾ ಬಂದಿದ್ದು ಈಗಲೂ ಅದೇ ಆದರ್ಶವನ್ನು ಜೀವನದ ಮಂತ್ರವನ್ನಾಗಿಸಿಕೊಂಡಿದ್ದಾರೆ. ಲಯನ್ಸ್ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಛಾಪನ್ನು ಒತ್ತಿದ್ದಾರೆ.
ಕೊಪ್ಪದ ತಹಶೀಲ್ದಾರ್ ಆಗಿದ್ದ ವೆಂಕಟರಾಮಯ್ಯನವರ ಒತ್ತಾಯದ ಮೇರೆಗೆ 1952 ರಲ್ಲಿ ಕರ್ನಾಟಕದಲ್ಲಿ ಸ್ವಾತಂತ್ರ್ಯಾನಂತರ ನಡೆದ ಮೊದಲ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪಧರ್ಿಸಿ ಕೊಪ್ಪ ಪುರಸಭೆಗೆ ಅವಿರೋಧವಾಗಿ ಆಯ್ಕೆಯಾದರು. ಹಾಗೆಯೇ ಅವಿರೋಧವಾಗಿ ಅಧ್ಯಕ್ಷರೂ ಆದರು. ಆಗ ಇವರಿಗೆ ಕೇವಲ 24 ವರ್ಷ ವಯಸ್ಸು. ಇಲ್ಲಿಂದಲೇ ಇವರ ಮುಂದಿನ ರಾಜಕೀಯ ಜೀವನ ಪ್ರಾರಂಭಗೊಂಡಿತು ಎಂದರೆ ತಪ್ಪಾಗಲಾರದು. 1960 ರವರೆಗೆ 2 ಅವಧಿಗೆ ಅಧ್ಯಕ್ಷರಾಗಿದ್ದರು. ಕೊಪ್ಪ ನಗರಕ್ಕೆ ಆಧುನಿಕತೆ ತಂದುಕೊಟ್ಟ ಸಂಪೂರ್ಣ ಕೀತರ್ಿ ಇವರಿಗೆ ಸಲ್ಲುತ್ತದೆ. ಮುಖ್ಯರಸ್ತೆಗೆ ಕಾಂಕ್ರೀಟ್ ಅನ್ನು ಅಂದಿನ ಕಾಲಕ್ಕೇ 40 ಸಾವಿರ ಖರ್ಚು ಮಾಡಿ ನಿರ್ಮಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಇವರ ಸ್ನೇಹಿತರು ನೆನಪಿಸಿಕೊಳ್ಳುತ್ತಾರೆ.
ಓವರ್ ಹೆಡ್ ಟ್ಯಾಂಕನ್ನು ನಿರ್ಮಿಸಿ ಜನರಿಗೆ ಅಂದಿನ ದಿನಗಳಲ್ಲಿಯೇ ನಲ್ಲಿ ಮೂಲಕ ನೀರನ್ನು ಒದಗಿಸಿದ ಕೀರ್ತಿಯೂ ಇವರದ್ದೇ. ದಾನಿಗಳ ನೆರವನ್ನು ಪಡೆದು ಶಾಲೆ, ಆಸ್ಪತ್ರೆ ಇತ್ಯಾದಿ ಜನೋಪಯೋಗಿ ಕಾರ್ಯಗಳನ್ನು ಹಮ್ಮಿಕೊಂಡ ಕೀರ್ತಿಯೂ ಇವರದ್ದು. ಇದಕ್ಕೊಂದು ಉದಾಹರಣೆ ಶ್ರೀ ವಾಸು ಶೆಟ್ಟಿಯವರು ಕಟ್ಟಿಸಿದ ಕೆಳಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಣ್ಣಕೆರೆಯ ಸುಬ್ಬೇಗೌಡರು ಕಟ್ಟಿಸಿದ ಈಗ ಸುವರ್ಣಮಹೋತ್ಸವ ಆಚರಿಸಿಕೊಳ್ಳುತ್ತಿರುವ ಗುಣವಂತೆ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಪುರಸಭೆಯಿಂದ ಇವರ ಮುಂದಿನ ನಡೆ ತಾಲ್ಲೂಕು ಅಭಿವೃದ್ದಿಮಂಡಲಿಯ ಕಡೆಗೆ ಸಾಗಿತ್ತು. ಇಲ್ಲಿಯೂ ಸ್ನೇಹಿತರ ಒತ್ತಡದಿಂದಲೇ ಅಧ್ಯಕ್ಷರಾದದ್ದು ಸಹ ಒಂದು ವಿಸ್ಮಯವೇ. 1952ರಿಂದ 1959 ರವರೆಗೆ ಪುರಸಭೆಯ ಅಧ್ಯಕ್ಷರಾಗಿದ್ದ ಇವರು ಕೊಪ್ಪದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣೀಭೂತರಾದರು. ಇವರ ರಾಜಕೀಯ ಪ್ರವೇಶ ನಡೆದದ್ದೇ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ. ಆದ್ದರಿಂದಲೇ ಇವರು ಸದಾ ಜನಮಾನಸದ ನೆನಪಿನಲ್ಲಿ ಉಳಿಯುವಂತಹ, ಎಲ್ಲೇ ಇರಲಿ, ಹೇಗೇ ಇರಲಿ, ಜನೋಪಯೋಗಿ ಕೆಲಸ ಮಾಡುವಂತಹ ಶಕ್ತಿ, ಛಲ ಬಂದಿದೆ ಎಂದರೆ ತಪ್ಪಾಗಲಾರದು.
ಗೋವಿಂದಗೌಡರು ಸ್ವಾಭಿಮಾನದ ಖನಿ, ಅನುಭವದ ಗಣಿ. ಆತ್ಮಗೌರವ ಅವರ ಹೆಗ್ಗುರುತು, ಅವರು ಅಹಂಕಾರದಿಂದ ಎಂದೂ ಬೀಗಿದವರಲ್ಲ. ವಿನಯದಿಂದ ಬಾಗಿದವರು. ಅವರು ಶುದ್ಧಜೀವನದ ಪಥದಲ್ಲಿ ಮುನ್ನಡೆದ ಸಂತೃಪ್ತ ಸ್ನೇಹಜೀವಿ.
1983 ರಲ್ಲಿ ಮೊಟ್ಟ್ಟಮೊದಲ ಬಾರಿಗೆ ವಿಧಾನ ಸಭೆಯ ಚುನಾವಣೆಯನ್ನು ಎದುರಿಸಿ ಅಂದಿನ ಸಕರ್ಾರದಲ್ಲಿ ಮಂತ್ರಿಗಳಾಗಿದ್ದ ಬೇಗಾನೆ ರಾಮಯ್ಯ ಅವರನ್ನು ಸೋಲಿಸಿ ಮೊದಲ ಬಾರಿಗೆ ವಿಧಾನ ಸಭೆಯನ್ನು ಪ್ರವೇಶಿಸಿದರು. 1985 ರಿಂದ 86 ರವರೆಗೆ ರಾಜ್ಯ ಸರ್ಕಾರದಲ್ಲಿ ಪ್ರಾಥಮಿಕ ಹಾಗೂ ವಯಸ್ಕರ ಶಿಕ್ಷಣ ಸಚಿವರಾಗಿದ್ದರು. 1988ರಲ್ಲಿ ಶ್ರೀ ಬೊಮ್ಮಾಯಿಯವರ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು. 1994ರಲ್ಲಿ ಮತ್ತೆ ವಿಧಾನ ಸಭೆಗೆ ಆಯ್ಕೆಯಾಗಿ 94 ರಿಂದ 99ರವರೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದರು. ಭಾರತದ ರಾಜಕೀಯ ಇತಿಹಾಸದಲ್ಲಿಯೇ ಅಪರೂಪ ಎನ್ನಬಹುದಾದ ರಾಜಕೀಯದಲ್ಲಿ ಚಲಾವಣೆಯಲ್ಲಿದ್ದಾಗಲೇ ಸಕ್ರಿಯ ರಾಜಕಾರಣದಿಂದ ಸ್ವಯಂ ನಿವೃತ್ತಿ ಪಡೆದರು.
ಮಂತ್ರಿಗಳಾಗಿದ್ದಾಗ ತಿಂಗಳಿಗೆ ಕನಿಷ್ಠ 20 ದಿನ ಪ್ರವಾಸ ಮಾಡುತ್ತಿದ್ದ ಇವರು ಅತಿಥಿಗೃಹದಲ್ಲಿ ಕೊಠಡಿ ಬಾಡಿಗೆ, ಊಟದ ವೆಚ್ಚವನ್ನು ತಾವೇ ಭರಿಸುತ್ತಿದ್ದರು. ಅಕಸ್ಮಾತ್ ಯಾರಾದರೂ ಊಟದ ವ್ಯವಸ್ಥೆ ಮಾಡಿದ್ದರೂ ಅದರ ವೆಚ್ಚವನ್ನು ನೀಡಿಯೇ ಊಟ ಮಾಡುತ್ತಿದ್ದರು. ಇಂದಿಗೂ ರಾಜಕಾರಣದಲ್ಲಿ ಹೇಗಿರಬೇಕು ಎಂಬುದಕ್ಕೆ ಜೀವಂತ ಸಾಕ್ಷಿಯಾಗಿ ನಿಂತಿದ್ದ ಅವರು ತಮ್ಮ ಸರಳ, ಪ್ರಾಮಾಣಿಕ ಜೀವನದಿಂದಲೇ, ಜನೋಪಯೋಗಿ ಕಾರ್ಯಗಳಿಂದಲೇ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಮಾನ್ಯ ಗೋವಿಂದಗೌಡರು ಸಚಿವರಾಗಿದ್ದಾಗ ಜಾರಿಗೆ ತಂದ ಕೆಲವು ಕೆಲಸಗಳನ್ನು ಮೆಲುಕು ಹಾಕುವುದಾದರೆ: * ವರ್ಗಾವಣೆಯಲ್ಲಿ ತಂದ ಪಾರದರ್ಶಕತೆ. ಯಾವುದೇ ಲಂಚ, ಶಿಪಾರಸ್ಸು ಮತ್ತು ಪ್ರಲೋಭನೆಗೆ ಅವಕಾಶ ಇಲ್ಲದಂತೆ ಮಾಡುವ ವಗರ್ಾವಣೆ ಪ್ರಕ್ರಿಯೆ. ವಗರ್ಾವಣೆ ಬಯಸುವ ನೌಕರ ಅಜರ್ಿ ಹಾಕಿ ಪಾರದರ್ಶಕವಾಗಿ ನಡೆಯುವ ಸ್ಥಳ ಆಯ್ಕೆ ಆಂದರೆ ಕೌನ್ಸಲಿಂಗ್ಗೆ ಹಾಜರಾಗಿ ತನಗೆ ಬೇಕಾದ ಸ್ಥಳವನ್ನು ಎಲ್ಲರೆದುರೇ ಪಡೆಯಲು ಅನುಕೂಲವಾಗುವಂತೆ ನಿಯಮವನ್ನು ರೂಪಿಸಿದ ಕೀರ್ತಿ ಇವರಿಗೇ ಸಲ್ಲಬೇಕು. * ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಸಿ.ಇ.ಟಿ. ಸೀಟು ಹಂಚಿಕೆಯಲ್ಲಿ ಪಾರದರ್ಶಕತೆ ತಂದದ್ದು ದೇಶದಲ್ಲೇ ಮನ್ನಣೆ ಪಡೆದ ಒಂದು ಕ್ರಾಂತಿಕಾರಕ ಯೋಜನೆ. * ಒಂದು ಲಕ್ಷಕ್ಕೂ ಮೀರಿದ ಶಿಕ್ಷಕರನ್ನು ಪ್ರಾಥಮಿಕ ಶಿಕ್ಷಣ ವಿಭಾಗಕ್ಕೆ ನೇಮಕ ಮಾಡಿದರು. ಇದಕ್ಕಾಗಿ ಅಭ್ಯರ್ಥಿಗಳು ಹಣ ಖರ್ಚು ಮಾಡದೆ ಪಾರದರ್ಶಕವಾಗಿ ಮಾಡಲಾಯಿತು. ಒಂದು ಲಕ್ಷಕ್ಕೂ ಹೆಚ್ಚು ಜನ ಶಿಕ್ಷಕರನ್ನು ಆಯ್ಕೆ ಮಾಡಿ ಇಂದು ಅನೇಕ ಮನೆಗಳಲ್ಲಿ ಬದುಕಿನ ದೀಪ ಉರಿಯುವಂತೆ ಮಾಡಿದ್ದು ಅವರ ಮತ್ತೊಂದು ಜನಪರ ಕೆಲಸ. ಇಂದಿಗೂ ಕರ್ನಾಟಕದಾದ್ಯಂತ ಜನ ಇವರ ಹೆಸರಿನಲ್ಲಿ ದೀಪ ಹಚ್ಚುತ್ತಿದ್ದಾರೆ. ಮನೆಯಲ್ಲಿ ಇವರ ಫೋಟೋ ಇಟ್ಟು ಪೂಜೆ ಮಾಡುತ್ತಿದ್ದಾರೆ. * ಇವರೊಬ್ಬ ಪ್ರಾಮಾಣಿಕ ರಾಜಕಾರಣಿ. ಸದಾ ಜನಪರ ಕೆಲಸಗಳಲ್ಲಿಯೇ ಜೀವನ ಸಾರ್ಥಕ್ಯವನ್ನು ಪಡೆದವರು.
ಮಾದರಿ ರಾಜಕಾರಣಿಯಾಗಿ, ಅನುಕರಣೀಯ ಮಂತ್ರಿಯಾಗಿ, ಸ್ವಾತಂತ್ರೋತ್ತರ ಭಾರತದ ಅದರಲ್ಲೂ ಕರ್ನಾಟಕದ ರಾಜಕೀಯ ರಂಗದಲ್ಲಿ ಪಕ್ಷಾತೀತವಾಗಿ ಜನಮನ್ನಣೆ ಗಳಿಸಿರುವ ಗೌಡರದ್ದು ಅಪರೂಪದ ವ್ಯಕ್ತಿತ್ವ. ತಮ್ಮ ಮಣಿಪುರ ಎಸ್ಟೇಟ್ನಲ್ಲಿ ವಿಶ್ರಾಂತ ಜೀವನವನ್ನು ಅತ್ಯಂತ ಸಂತೃಪ್ತಿಯಿಂದ ಸಾಗಿಸುತ್ತಿದ್ದ ಗೌಡರು ತಮ್ಮ ಮಗ ಹೆಚ್. ಜಿ .ವೆಂಕಟೇಶ್ರಲ್ಲಿ ತಮ್ಮ ಗುಣಗಳನ್ನು ಕಾಣುತ್ತಾ ಹೊರಗೆ ನಡೆಯುತ್ತಿರುವ ಭ್ರಷ್ಟಾಚಾರಗಳಿಗೆ ಮನನೊಂದು ತಮ್ಮ ಭೇಟಿಗೆ ಬರುವವರ ಹತ್ತಿರ ವಿಚಾರ ವಿನಿಮಯ ಮಾಡುತ್ತಿದ್ದರು. ಬೇಡಿ ಬಂದವರಿಗೆ ಸೂಕ್ತ ಸಲಹೆ ಮಾರ್ಗದರ್ಶನ ನೀಡುತ್ತಿದ್ದರು. ತಮ್ಮನ್ನು ಕಾಡುತ್ತಿದ್ದ ವಯೋಸಹಜ ಅನಾರೋಗ್ಯದಿಂದ ದಿನಾಂಕ: 06.01.2016 ರಂದು ನಮ್ಮನ್ನಗಲಿದ್ದಾರೆ. ಆಗಲೂ ತಮ್ಮ ಕಣ್ಣುಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.
ಮಲೆನಾಡ ಗಾಂಧಿಎಚ್.ಜಿ. ಗೋವಿಂದ ಗೌಡ
- ಆರ್.ಡಿ. ರವೀಂದ್ರ,
ಅಪ್ಪಟ ಗಾಂಧೀವಾದಿ, ನಡೆದಂತೆ ನಡೆದ ಸಮಾಜಸೇವಕ, ನಿಸ್ವಾರ್ಥಿ ಸಜ್ಜನ ರಾಜಕಾರಣಿ, ಧೀಮಂತ ಮುತ್ಸದ್ದಿ ಜನಮಾನಸದಲ್ಲಿ ತಮ್ಮದೇ ಆದ ಛಾಪನ್ನು ಒತ್ತಿರುವ ಮಲೆನಾಡ ಗಾಂಧಿ ಗೋವಿಂದಗೌಡರದು ಮೇರು ವ್ಯಕ್ತಿತ್ವ.