ಅಧ್ಯಾಯ-03
ಕ್ರಿ.ಶ 9ರಿಂದ 14ನೇ ಶತಮಾನದ ಭಾರತ
ರಜಪೂತರು
ಗುರ್ಜರ ಪರತಿಹಾರರು, ಗಹಡ್ವಾಲರು, ಪಾರಮಾರರು, ಚೌಹಾಣರು, ಸೋಲಂಕಿಯರು ಮತ್ತು ಚಂದೇಲ ರಜಪೂತ ಮನೆತನಗಳು ಉತ್ತರದಲ್ಲಿ ಆಳ್ವಿಕೆ ನೆಡೆಸಿದವು.
ಗುರ್ಜರ ಪರತಿಹಾರರು
*ಹರಿಶ್ಚಂದ್ರನು ಗುರ್ಜರ ಪರತಿಹಾರ ಮನೆತನದ ಸ್ಥಾಪಕ.
*ಈತನ ನಾಲ್ಕು ಮಕ್ಕಳು ಪ್ರತಿಹಾರರ ಬೇರೆ ಬೇರೆ ಶಾಖೆಗಳಿಂದ ಆಳಿದರು. ಅವುಗಳೆಂದರೆ ಜೋಧ್ ಪುರ, ನಂದಿಪುರ, ಬ್ರೋಚ್, ಉಜ್ಜೈನಿಗಳಿಂದ ಆಳಿದರು.
*ಇವರಲ್ಲಿ ನಾಗಭಟ್ಟನು ಪ್ರಮುಖ ದೊರೆಯಾಗಿದ್ದಾನೆ. ಈತ ಅರಬರ ಆಕ್ರಮಣವನ್ನು ಯಶಸ್ವಿಯಾಗಿ ಎದುರಿಸಿದನು. ಈತನು ಗುಜರಾತ್, ಮಾಳ್ವಾ, ರಜಪುತಾನದ ಸ್ವಲ್ಪ ಭಾಗದವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದನು.
*ಇನ್ನೊಬ್ಬ ಪ್ರಮುಖ ದೊರೆಯಾದ ಮಿಹಿರಭೋಜನು ಪಾಲರ ನಾರಾಯಣಪಾಲನನ್ನು ಸೋಲಿಸಿ ಸಾಮ್ರಾಜ್ಯವನ್ನು ವಿಸ್ತರಿಸಿದನು.
*ಅರಬ್ ಪ್ರವಾಸಿಗರಾದ ಸುಲೈಮಾನ್ ಮತ್ತು ಅಲ್ ಮಸೂದ್ ಈತನ ಆಸ್ಥಾನಕ್ಕೆ ಭೇಟಿ ನೀಡಿದ್ದರು.
*ಮಹೇಂದ್ರ ಪಾಲ ಹಾಗೂ ಮಹೀಪಾಲರ ನಂತರ ಈ ಸಾಮ್ರಾಜ್ಯವು ಪತನ ಹೊಂದಲು ಪ್ರಾರಂಭಿಸಿತು.
ಗಹಡ್ವಾಲರು
*ಚಂದ್ರದೇವ ಈ ವಂಶದ ಸ್ಥಾಪಕ. ಉತ್ತರದ ಬಹುಭಾಗವನ್ನು ವಶಪಡಿಸಿಕೊಂಡು ರಾಜ್ಯಭಾರ ಮಾಡಿದನು.
*ಇವರಲ್ಲಿ ಗೋವಿಂದಚಂದ್ರ ಪ್ರಸಿದ್ಧ ದೊರೆ. ಈತನು ಪಾಲರಿಂದ ಮಗಧ, ಮಾಳ್ವಾ ವಶಪಡಿಸಿಕೊಂಡನಲ್ಲದೆ ಕಳಿಂಗ ಮತ್ತು ಒರಿಸ್ಸಾ ಅರಸರೊಂದಿಗೆ ಯುದ್ಧ ಮಾಡಿ ರಾಜ್ಯವನ್ನು ವಿಸ್ತರಿಸಿದನು.
*ಕಾಶ್ಮೀರ, ಗುಜರಾತ್ ಮತ್ತು ಚೋಳ ಅರಸರೊಂದಿ ಉತ್ತಮ ಬಾಂಧವ್ಯ ಹೊಂದಿದ್ದನು
ಪಾರಮಾರರು
*ಉಪೇಂದ್ರ ರಾಜನು ಈ ವಂಶದ ಸ್ಥಾಪಕನಾಗಿದ್ದಾನೆ.
*ಇವರ ರಾಜಧಾನಿ ಮಾಳ್ವಾದ ಧಾರ.
*ಈ ಮನೆತನದ ಶೀಯಾಕ್ ದೊರೆಯು ರಾಷ್ಟ್ರರ ದೊರೆ ಎರಡನೇ ಕೊಟ್ಟಿಗನನ್ನು ಸೋಲಿಸಿ ಅವರ ಮಾಂಡಲೀಕತ್ವದಿಂದ ಮುಕ್ತನಾದನು.
*ಇವರು ಅನೇಕ ಕೆರೆ ಮತ್ತು ದೇವಾಲಯಗಳನ್ನು ನಿರ್ಮಿಸಿದರು.
*ಇವರ ಆಸ್ಥಾನದಲ್ಲಿ ಧನಂಜಯ, ಭಟ್ಟ ಹಲಾಯುಧ, ಧನಿಕ ಮತ್ತು ಪದ್ಮಗುಪ್ತರೆಂಬ ವಿದ್ವಾಂಸರಿದ್ದರು.
ಚೌಹಾಣರು
*ಅಜ್ಮೀರದ ಪುಥ್ವೀರಾಜ ಚೌಹಾಣ್ ಈ ಮನೆತನದ ಪ್ರಸಿದ್ಧ ದೊರೆಯಾಗಿದ್ದಾನೆ. ಬುಂದೇಲ್ ಖಂಡದ ಚಂದೇಲರನ್ನು ಸೋಲಿಸಿದನು.
*ಮೊದಲನೇ ತರೈನ್ ಯುದ್ಧದಲ್ಲಿ ಮಹಮ್ಮದ ಘೋರಿಯ ವಿರುದ್ಧ ಜಯಗಳಿಸಿದನು.
*ಆದರೆ 2ನೇ ತರೈನ್ ಯುದ್ಧದಲ್ಲಿ ಜಯಚಂದ್ರ ಮಾಡಿದ ಮೋಸದಿಂದ ಪುಥ್ವೀರಾಜ ಚೌಹಾಣ್ ಸೋತನು. ಇವನ ರಾಜ್ಯ ಘೋರಿಯ ಪಾಲಾಯಿತು.
*ಇವನ ಶೌರ್ಯ ಸಾಹಸಗಳನ್ನು ಪೃಥ್ವೀರಾಜ್ ರಾಸೋ ಎಂಬ ಹಿಂದಿ ಗ್ರಂಥದಲ್ಲಿ ವರ್ಣಿಸಲಾಗಿದೆ.
ಸೋಲಂಕಿಯರು
*ಮೂಲರಾಜ ಸೋಳಂಕಿಗಳ ರಾಜಮನೆತನದ ಸ್ಥಾಪಕನಾಗಿದ್ದಾನೆ.
*ಮೊದಲನೇ ಭೀಮರಾಯನು ಈ ಮನೆತನದ ಪ್ರಸಿದ್ಧ ದೊರೆಯಾಗಿದ್ದನು.
*ಇವನ ಆಳ್ವಿಕೆಯಲ್ಲಿ ಮಹಮ್ಮದ್ ಘಜ್ನಿ ಗುಜರಾತಿನ ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿದನು. ಈ ದಾಳಿಯನ್ನು ಭೀಮದೇವನು ವಿಫಲನಾದನು. ಆದುದರಿಂದ ತನ್ನ ಪುತ್ರ ಕರ್ಣದೇವನಿಗೆ ರಾಜ್ಯಾಧಿಕಾರವನ್ನು ನೀಡಿದನು.
*ಈ ಮನೆತನದ ಕಾಲದಲ್ಲಿಯೇ ಜೈನ ಪಂಡಿತನಾದ ಹೇಮಚಂದ್ರನು ದೇಶೀನಾಮ ಮಾಲಾ ಎಂಬ ಖ್ಯಾತ ನಿಘಂಟನ್ನು ಪ್ರಾಕೃತ ಭಾಷೆಯಲ್ಲಿ ರಚಿಸಿದನು.
*2ನೇ ಮೂಲರಾಜನು ಮಹಮ್ಮದ್ ಘೋರಿಯನ್ನು ಮೌಂಟ್ ಅಬು ಸಮೀಪ ಸೋಲಿಸಿದನು.
*ನಂತರ ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕರಾದ ಉಲಘ್ ಖಾನ್ ಮತ್ತು ನುಸ್ರತ್ ಖಾನ್ ರು ಕರ್ಣದೇವನನ್ನು ಸೋಲಿಸಿ ಈ ಪ್ರಾಂತ್ಯವನ್ನು ವಶಪಡಿಸಿಕೊಂಡರು.
ಚಂದೇಲರು
* ಪಾರಮಾರರ ಪತನದ ನಂತರ ಚಂದೇಲರು ರಾಜ್ಯವನ್ನು ಸ್ಥಾಪಿಸಿದರು. ಇವರು ಪ್ರತಿಹಾರರ ಮಾಂಡಲೀಕರಾಗಿದ್ದರು.
*ಢಂಗ ಈ ವಂಶದ ಪ್ರಸಿದ್ಧ ದೊರೆ. ಪ್ರತೀಹಾರರಿಂದ ಸ್ವಾತಂತ್ರ್ಯ ಘೋಷಿಸಿಕೊಂಡು ಅವರ ರಾಜ್ಯದ ಪೂರ್ವಭಾಗವನ್ನು ವಶಪಡಿಸಿಕೊಂಡನು.
*ಪಾಲರನ್ನು ಮತ್ತು ಆದ್ರರನ್ನು ಸೋಲಿಸಿ ರಾಜ್ಯವನ್ನು ವಿಸ್ತರಿಸಿದನು. ಹಿಂದೂಷಾಹಿ ರಾಜ ಜಯಪಾಲನಿಗೆ ಮುಸ್ಲಿಂರ ವಿರುದ್ಧ ಸೈನಿಕ ನೆರವು ನೀಡಿದನು. ಮಹಾರಾಜಾಧಿರಾಜ ಎಂಬ ಬಿರುದನ್ನು ಪಡೆದಿದ್ದನು.
*ಢಂಗ ಸ್ವತಃ ಕವಿಯಾಗಿದ್ದನು. ಅನೇಕ ಕವಿಗಳಿಗೆ ಆಶ್ರಯ ನೀಡಿದನು.
*ಈ ರಾಜ್ಯವನ್ನು ಖಿಲ್ಜಿ ಸುಲ್ತಾನರು ವಶಪಡಿಸಿಕೊಂಡರು.
ಸಾಮಾಜಿಕ
*ರಜಪೂತರು ಕ್ಷತ್ರೀಯರಾಗಿದ್ದು ಶೂರರಾಗಿದ್ದರು. ಇವರು ಹಿಂದೂ ಧರ್ಮದ ಅನೇಕ ಹಬ್ಬಗಳನ್ನು ಆಚರಿಸುತ್ತಿದ್ದರು.
*ಸಮಾಜದಲ್ಲಿ ಸ್ತ್ರೀಯರಿಗೂ ಪುರಷರಂತೆ ಸಮಾನ ಸ್ಥಾನಮಾನವಿತ್ತು.
*ಸತಿಪದ್ಧತಿ, ಜೋಹಾರ್ ಪದ್ಧತಿಗಳಿದ್ದವು.
*ಸ್ವಯಂವರ ವಿವಾಹ ಪದ್ಧತಿ ರಾಜಮನೆತನಗಳಲ್ಲಿ ರೂಢಿಯಲ್ಲಿತ್ತು.
*ಸ್ತ್ರೀಯರು ಸ್ವಾಭಿಮಾನದಿಂದ ಕೂಡಿದವರಾಗಿದ್ದು, ಅತ್ಯಂತ ಧೈರ್ಯಶಾಲಿಗಳಾಗಿದ್ದರು.
*ಸ್ತ್ರೀಯರು ಸಾಹಿತ್ಯ, ನೃತ್ಯ, ಸಂಗೀತ, ಚಿತ್ರಕಲೆ, ಕಸೂತಿಕಲೆಗಳಲ್ಲಿ ಪರಿಣಿತರಾಗಿದ್ದರು.
ಸಾಹಿತ್ಯ
* ರಜಪೂತ ದೊರೆಗಳಾದ ಭೋಜ, ಮುಂಜ, ಢಂಗ ಮೊದಲಾದವರು ಸ್ವತಃ ಕವಿಗಳಾಗಿದ್ದು ಅನೇಕ ಕವಿಗಳಿಗೆ ಆಶ್ರಯ ನೀಡಿದ್ದರು.
*ಜಯದೇವ-ಗೀತಗೋವಿಂದಾ
* ಭಾರವಿ-ಕಿರಾತಾರ್ಜುನೀಯ
*ಭರ್ತೃಹರಿ-ರಾವಣ ವಧಾ
*ಮಹೇಂದ್ರಪಾಲ-ಕಾವ್ಯ ಮೀಮಾಂಸೆ
*ರಾಜಶೇಖರ-ಬಾಲ ರಾಮಾಯಣ ಮತ್ತು ಕರ್ಪೂರ ಮಂಜರಿ(ನಾಟಕಗಳು)
*ಭವಭೂತಿ-ಮಾಲತಿ ಮಾಧವ, ಮಹಾವೀರಚರಿತೆ ಮತ್ತು ಉತ್ತರರಾಮಚರಿತೆ
*ಕಲ್ಹಣ-ರಾಜ ತರಂಗಿಣಿ
*ಜಯನಿಕ-ಪೃಥ್ವೀರಾಜ ವಿಜಯ
*ಹೇಮಚಂಧ್ರ- ಕುಮಾರಪಾಲಚರಿತೆ ಮತ್ತು ದೇಶೀನಾಮ ಮಾಲಾ
*ಚಾಂದ್ ಬರದಾಯಿ-ಪೃಥ್ವೀರಾಜ್ ರಾಸೋ
*ಬಲ್ಲಾಳ-ಭೋಜ ಪ್ರಬಂಧ
* ಈ ಕಾಲದಲ್ಲಿ ಗುಜರಾತಿ, ರಾಜಸ್ತಾನಿ, ಹಿಂದಿ ಭಾಷೆಗಳು ಅಭಿವೃದ್ಧಿ ಹೊಂದಿದವು
*ವಿದ್ಯಾಕೇಂದ್ರಗಳಾದ ನಳಂದ, ವಿಕ್ರಮಶೀಲ, ಕಾಶಿ, ಉಜ್ಜಯಿನಿಗಳಿಗೆ ಪ್ರೋತ್ಸಾಹ ನೀಡಿದರು.
ಕಲೆ ಮತ್ತು ವಾಸ್ತುಶಿಲ್ಪ
*ರಜಪೂತ ಅರಸರು ಉತ್ತರ ಭಾರತದ ಚಿತ್ತೋಡ್, ಮಾಂಡು, ರಣಥಂಬೋರ್, ಜೋಧ್ಪುರ ಹಾಗೂ ಗ್ವಾಲಿಯರ್ ಗಳಲ್ಲಿ ವಿಶಾಲವಾದ ಕೋಟೆಗಳನ್ನು ನಿರ್ಮಿಸಿದರು.
*ಜೈಪುರ, ಗ್ವಾಲಿಯರ್, ಉದಯಪುರಗಳಲ್ಲಿ ಅರಮನೆಗಳನ್ನು ನಿರ್ಮಿಸಿದರು.
*ಮೌಂಟ್ ಅಬುದಲ್ಲಿ ದಿಲಾವರ್ ದೇವಾಲಯ, ವಿಮಲಾ ವಸಯಿ, ಲುನಾ ವಸಾಯಿ ದೇವಾಲಯಗಳು ಸುಂದರ ಕಲಾತ್ಮಕತೆಯಿಂದ ಕೂಡಿವೆ.
*ಚಂದೇಲರು ಮಧ್ಯಪ್ರದೇಶದ ಖಜುರಾಹೋದ ಖಂಡರಾಯ ಮಹಾದೇವಾಲಯವನ್ನು ಕಟ್ಟಿಸಿದರು.
*ಇವರ ಕಾಲದಲ್ಲಿ ನಿರ್ಮಿತವಾದ ದೇವಾಲಯಗಳಲ್ಲಿ ಶಿವ ಮತ್ತು ವಿಷ್ಣುವಿನ ದೇವಾಲಯಗಳು ಹೆಚ್ಚಾಗಿವೆ.
*ಇವರ ಕಾಲದ ಚಿತ್ರ ಕಲೆಯನ್ನು ರಾಜಾಸ್ತಾನಿ ಮತ್ತು ಪಹಾರಿ ಕಲಾಶೈಲಿಯೆಂದು ವರ್ಗೀಕರಿಸಲಾಗಿದೆ.
*ಮೇವಾರ್, ಬಿಕಾನೇರ್, ಜೋಧ್ ಪುರ, ಜೈಸಲ್ಮೇರ್ ಮತ್ತು ಬುನಿಗಳಲ್ಲಿ ರಾಜಾಸ್ಥಾನಿ ಶೈಲಿಯ ಚಿತ್ರಕಲೆಗಳನ್ನು ಕಾಣಬಹುದಾಗಿದೆ.
*ಖಸೋಲಿ, ಜಮ್ಮು, ಗರ್ವಾಲ್ ಗಳಲ್ಲಿ ಪಹಾರಿ ಕಲಾಶೈಲಿಯ ಚಿತ್ರಕಲೆಗಳನ್ನು ಕಾಣಬಹುದಾಗಿದೆ.
ಮಹಮ್ಮದ್ ಘಜ್ನಿ
*ಅಲಫ್ತಗೀನ್ ಎಂಬ ತುರ್ಕಿ ಗುಲಾಮ ಘಜ್ನಿಯಲ್ಲಿ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿದನು. ಇವನೇ ಮಹಮ್ಮದ್ ಘಜ್ನಿ.
*ಘಜ್ನಿಯು ಭಾರತದ ಮೇಲೆ ಹದಿನೇಳು ಬಾರಿ ದಂಡಯಾತ್ರೆ ಮಾಡಿ ಭಾರತದ ಸಂಪತ್ತನ್ನು ಕೊಳ್ಳೆ ಹೊಡೆದನು.
*ತನ್ನ ದಾಳಿಯ ಸಮಯದಲ್ಲಿ ಮುಲ್ತಾನದ ದೊರೆ, ರಾಜ ಜಯಪಾಲ, ಭೀಮದೇವ, ಚಂದೇಲರ ರಾಜ ತ್ರಿಲೋಚನಪಾಲರನ್ನು ಸೋಲಿಸಿದನು.
*ನಾಗರಕೋಟೆ, ಥಾಣೇಶ್ವರ, ಗ್ವಾಲಿಯರ್, ಉಜ್ಜಯಿನಿ ಮೊದಲಾದ ನಗರಗಳ ಮೇಲೆ ದಾಳಿ ನೆಡೆಸಿದನು.
*ಗುಜರಾತಿನ ಪ್ರಸಿದ್ಧ ಸೋಮನಾಥ ದೇವಾಲಯದ ಮೇಲೆ ದಾಳಿಯನ್ನು ಮಾಡಿ ಶಿವಲಿಂಗವನ್ನು ನಾಶ ಮಾಡಿ ಅಪಾರ ಸಂಪತ್ತನ್ನು ಕೊಳ್ಳೆ ಹೊಡೆದನು.
*ಘಜ್ನಿಯ ದಂಡಯಾತ್ರೆಯು ಮುಂದೆ ಟರ್ಕರ ದಾಳಿಗೆ ನಾಂದಿಯಾದವು.
*ಈತನ ಆಸ್ಥಾನದಲ್ಲಿದ್ದ ಅಲ್ಬೆರೊನಿ ತಾರೀಖ್ ಉಲ್ ಹಿಂದ್ ಎಂಬ ಗ್ರಂಥವನ್ನು ರಚಿಸಿದನು.
ಮಹಮ್ಮದ್ ಘೋರಿ
*ಮಹಮ್ಮದ್ ಘಜ್ನಿಯು ಭಾರತದಲ್ಲಿ ಟರ್ಕರ ಸಾಮ್ರಾಜ್ಯವನ್ನು ಸ್ಥಾಪಿಸವಲ್ಲಿ ವಿಫಲನಾಗಿದ್ದರಿಂದ ಮಹಮ್ಮದ್ ಘೋರಿಯು ಈ ಪ್ರಯತ್ನವನ್ನು ಮುಂದುವರೆಸಿದನು.
*ಮಹಮ್ಮದ್ ಘೋರಿಯು ರಾಜ್ಯ ವಿಸ್ತರಣೆಯ ಆಕಾಂಕ್ಷೆಯಿಂದ ಭಾರತದ ಮುಲ್ತಾನಿಗೆ ಮುತ್ತಿಗೆ ಹಾಕುವ ಮೂಲಕ ದಂಡಯಾತ್ರೆಯನ್ನು ಆರಂಭಿಸಿದನು.
*ನಂತರ ಅನಿಲವಾಡದ ಮೇಲೆ ಆಕ್ರಮಣ ಮಾಡಿದನು ಆದರೆ ಈ ಆಕದರಮಣವು ವಿಫವಾಯಿತು.
*ಇದರಿಂದಧೃತಿಗೆಡದೆ ಪಂಜಾಬಿನ ಭಾಗವಾಗಿದ್ದ ಪೇಶಾವಾರವನ್ನು ಆಕ್ರಮಿಸಿದನು. ನಂತರ ಖುಸ್ರೋಮಲ್ಲಕ್ ನಿಂದ ಲಾಹೋರನ್ನು ವಶಪಡಿಸಿಕೊಂಡು ಪ್ರಬಲನಾದನು. ಪೇಶಾವಾರ ಈತನ ಸೈನಿಕ ಕೇಂದ್ರವಾಯಿತು.
*ಇದರಿಂದಾಗಿ ಪಂಜಾಬಿನ ನೆರೆ ಪ್ರದೇಶಗಳಾದ ದೆಹಲಿ ಮತ್ತು ಅಜ್ಮೀರದ ಆಕ್ರಮಣಕ್ಕೆ ಪ್ರಯತ್ನಿಸಿ 1ನೇ ತರೈನ್ ಯುದ್ಧದಲ್ಲಿ ರಾಜ ಪೃಥ್ವೀರಾಜ್ ಚೌಹಾನ್ ನಿಂದ ಸೋತನು.ಆದರೆ 2ನೇ ತರೈನ್ ಯುದ್ಧದಲ್ಲಿ ಘೋರಿ ಪೃಥ್ವೀರಾಜ್ ಚೌಹಾನ್ ನನ್ನು ಸೋಲಿಸಿದನು.
*ಘೋರಿ ದಂಡನಾಯಕ ಕುತ್ಬುದ್ದೀನ್ ಐಬಕ್ ದೆಹಲಿಯನ್ನು ವಶಪಡಿಸಿಕೊಂಡು ಗಂಗಾ ಬಯಲು ಪ್ರದೇಶದ ಇನ್ನಿತರ ರಜಪೂತರನ್ನು ಸೋಲಿಸಿ ಘೋರಿ ಸಾಮ್ರಾಜ್ಯವನ್ನು ವಿಸ್ತರಿಸಿದನು.
*ಈ ರೀತಿ ಉತ್ತರ ಭಾರತದಲ್ಲಿ ಟರ್ಕ್ ರ ಆಡಳಿತವು ಪ್ರಾರಂಭವಾಯಿತು.
*ಭಾರತದ ಆಡಳಿತ ನೋಡಿಕೊಳ್ಳಲು ತನ್ನ ನಿಷ್ಠಾವಂತ ಗುಲಾಮನಾದ ಕುತ್ಬುದ್ದೀನ್ ಐಬಕ್ ನನ್ನು ನೇಮಿಸಿದನು.
*ಭಾರತದಲ್ಲಿ ರಜಪೂತರು ಒಗ್ಗಟ್ಟಿನಿಂದ ಿರದೇ ಇರುವುದೇ ಭಾರತದಲ್ಲಿ ಘೋರಿ ಸಾಮ್ರಾಜ್ಯದ ವಿಸ್ತರಣೆಗೆ ಕಾರಣವಾಯಿತು.
ದೆಹಲಿ ಸುಲ್ತಾನರು(ಕ್ರಿ.ಶ1206 ರಿಂದ 1526)
*ಗುಲಾಮಿ, ಖೀಲ್ಜಿ, ತುಘಲಕ್. ಸೈಯದ್ ಮತ್ತು ಲೂಧಿ ಸಂತತಿಗಳು ದೇಹಲಿಯನ್ನಾಳಿದ ದೆಹಲಿ ಸುಲ್ತಾನ ಮನೆತನಗಳಾಗಿವೆ.
ಗುಲಾಮಿ ಸಂತತಿ
*ಕುತ್ಬುದ್ದೀನ್ ಐಬಕ್ ಮುಸ್ಲಿಂ ಆಡಳಿತವನ್ನು ಭಾರತದಲ್ಲಿ ಮುಂದುವರೆಸಿದನು.
*ಐಬಕ್ ಮತ್ತು ಆತನ ಉತ್ತರಾಧಿಕಾರಿಗಳೆಲ್ಲರೂ ಗುಲಾಮರಾಗಿದ್ದರಿಂದ ಐಬಕ್ ಸ್ಥಾಪಿಸಿದ ಮನೆತನಕ್ಕೆ ಗುಲಾಮಿ ಸಂತತಿ ಎಂದು ಹೆಸರು ಬಂದಿತು.
ಕುತ್ಬುದ್ದೀನ್ ಐಬಕ್
*ಕುತ್ಬುದ್ದೀನ್ ಐಬಕ್ ನು ಭಾರತದಲ್ಲಿ ದೆಹಲಿ ಸುಲ್ತಾನರ ಆಳ್ವಿಕೆಗೆ ಭದ್ರ ಬುನಾದಿಯನ್ನು ಹಾಕಿದನು.
*ಆಫ್ಘಾನಿಸ್ತಾನದ ತುರ್ಕಿ ಜನಾಂಗಕ್ಕೆ ಸೇರಿದ ಕುತ್ಬುದ್ದೀನ್ ನನ್ನು ಬಾಲ್ಯದಲ್ಲಿ ಈತನ ಪಾಲಕರು ನಿಶಾಪುರದ ಖಾಜಿಗೆ ಗುಲಾಮನನ್ನಾಗಿ ಮಾರಿದರು.
*ಐಬಕನು ಪರ್ಷಿಯನ್, ಅರೇಬಿಕ್ ಭಾಷೆಗಳ ಶಿಕ್ಷಣದ ಜೊತೆಗೆ ಬಿಲ್ಲುಗಾರಿಕೆ, ಕುದುರೆಸವಾರಿ ಮತ್ತು ಸೈನಿಕ ತರಬೇತಿಯನ್ನು ಪಡೆದಿದ್ದನು.
*ಘಜ್ನಿಯ ರಾಜ್ಯಪಾಲನಾಗಿದ್ದ ಮಹಮ್ಮದ್ ಘೋರಿ ಇವನನ್ನು ಗಲಾಮನನ್ನಾಗಿ ಖರೀದಿಸಿದ್ದನು.
*ಐಬಕನು ಘಜ್ನಿಯಲ್ಲಿದ್ದಾಗ ತನ್ನ ಶೌರ್ಯದಿಂದ ಘೋರಿಯ ಗಮನ ಸೆಳೆದನು.
*2ನೇ ತರೈನ್ ಕಾಳಗದ ನಂತರ ಭಾರತದ ಮೇಲಿನ ಆಕ್ರಮಣಗಳ ಉಸ್ತುವಾರಿಯನ್ನು ಪಡೆದನು.
*ಐಬಕನು ಘೋರಿಯ ಕಾಲದಲ್ಲಿ ಉತ್ತರ ಭಾರತದ ಉತ್ತರಾಧಿಕಾರಿಯಾದನು. ಘೋರಿಯ ಮರಣದ ನಂತರ ಸ್ವತಂತ್ರನಾಗಿ ಆಳಿದನು.
*ತನ್ನ ಸ್ಥಾನವನ್ನು ಪ್ರಬಲಗೊಳಿಸಿಕೊಳ್ಳಲು ಇಲ್ತಮಶ್ ಮತ್ತು ನಾಸಿರುದ್ಧೀನ್ ಕಬಾಚರೊಂದಿಗೆ ವೈವಾಹಿಕ ಸಂಬಂಧವನ್ನು ಬೆಳೆಸಿದನು.
*ಐಬಕನು ದೆಹಲಿಯಲ್ಲಿ ಕುವ್ಹಾತ್ ಉಲ್ ಇಸ್ಲಾಂ ಮಸೀದಿಯನ್ನು ಕಟ್ಟಿಸಿದನು. ಅಲ್ಲಿಯೇ ಕುತುಬ್ ಮಿನಾರ್ ನಿರ್ಮಿಸಲು ಪ್ರಾರಂಭಿಸಿದನು.
*ಇವನ ಆಸ್ಥಾನದಲ್ಲಿ ನಿಜಾಮಿ ಮತ್ತು ಪಖ್ ಇ ಮುದಬ್ಬೀರಯೆಂಬ ವಿದ್ವಾಂಸರಿದ್ದರು. ತಾಜುಲ್ ಮಾಸಿರ್ ಐಬಕನ ಬಗ್ಗೆ ಮಾಹಿತಿ ನೀಡುವ ಕೃತಿಯಾಗಿದೆ.
ಇಲ್ತಮಶ್
*ಇಲ್ಬರಿ ಕುಟುಂಬಕ್ಕೆ ಸೇರಿದ ಈತನು ಕುತ್ಬುದ್ಧೀನ್ ನ ಗುಲಾಮನಾಗಿದ್ದನು.
*ಗ್ವಾಲಿಯರ್ ದ ಆಡಳಿತಗಾರನಾಗಿದ್ದ ಇವನು ಐಬಕನ ನಂತರ ಉತ್ತರಾಧಿಕಾರಿಯಾದನು.
*ಇಲ್ತಮಶ್ ಸುಲ್ತಾನನಾಗಿದ್ದುದನ್ನು ಸಹಿಸದ ಘಜ್ನಿ ದೊರೆ ತಾಜುದ್ಧೀನ್ ಇಲ್ದೋಜ್ ಮತ್ತು ಸಿಂಧ್ ನ ನಾಸೀರುದ್ಧೀನ್ ಕಬಾಚ ಈತನ ವಿರುದ್ಧ ಬಂಡೆದ್ದರು. ಇಲ್ತಮಶ್ ಇವರನ್ನು ಸೋಲಿಸಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡನು.
*ನಂತರ ರಣಥಂಭೋರ್, ಮಾಂಡೋರ, ಗ್ವಾಲಿಯರ್, ಭಿಲ್ಸಾ, ಅಜ್ಮೀರ್, ಬನರಾಸ್, ಕನೋಜಗಳನ್ನು ವಶಪಡಿಸಿಕೊಂಡನು.
*ಭಾರತದ ಮೇಲೆ ಪ್ರಥಮ ಬಾರಿಗೆ ಮಂಗೋಲರು ದಾಳಿ ಮಾಡಿದರು. ಆದರೆ ಇಲ್ತಮಶ್ ಈ ದಾಳಿಯನ್ನು ಸಮರ್ಥವಾಗಿ ಎದುರಿಸಿ ಅವರನ್ನು ಹಿಮ್ಮೆಟ್ಟಿಸಿದನು.
*ಈ ಸಾಧನೆಗಾಗಿ ಖಲೀಫನು ಇಲ್ತಮಶ್ ನಿಗೆ ಅಧಿಕೃತ ಅಧಿಕಾರ ಸಮ್ಮತಿ ಪತ್ರ ನೀಡಿದನು.
*ಇಲ್ತಮಶ್ ರಾಜ್ಯವನ್ನು ಅನೇಕ ಇಕ್ತಾಗಳನ್ನಾಗಿ ವಿಂಗಡಿಸಿ, ಆಡಳಿತ ನಿರ್ವಹಣೆಗಾಗಿ ಇಕ್ತಾದಾರರನ್ನು ನೇಮಿಸಿದನು.
*ಆಡಳಿತದಲ್ಲಿ ಸಲಹೆ ನೀಡಲು ನಲವತ್ತು ಸರದಾರರ ಕೂಟವನ್ನು ನೇಮಕ ಮಾಡಿದನು.
*ಪ್ರಧಾನ ಮಂತ್ರಿ ಮತ್ತು ನ್ಯಾಯಾಧೀಶರು ಆಡಳಿತದಲ್ಲಿ ಸಲಹೆಗಳನ್ನು ನೀಡುತ್ತಿದ್ದರು.
*ಇಲ್ತಮಶ್ ನು ಬಂಗಾರ ಮತ್ತು ಬೆಳ್ಳಿಯ ನಾಣ್ಯಗಳನ್ನು ಚಲಾವಣೆಗೆ ತಂದನು.
*ಐಬಕನು ಪ್ರಾರಂಭಿಸಿದ ಕುತುಬ್ ಮಿನಾರ್ ನ ನಿರ್ಮಾಣವನ್ನು ಈತನು ಪೂರ್ಣಗೊಳಿಸಿದನು.
ರಜಿಯಾ ಸುಲ್ತಾನ
*ಇಲ್ತಮಶ್ ನ ಪುತ್ರ ರುಕ್ನುದ್ಧೀನ್ ಫಿರೋಜ್ ಅಸಮರ್ಥನಾಗಿದ್ದರಿಂದ ಅವನ ಪುತ್ರಿ ರಜಿಯಾ ಬೇಗಂ ಆತನ ಉತ್ತರಾಧಿಕಾರಿಯಾದಳು.
*ದೆಹಲಿಯ ಸಿಂಹಾಸನವನ್ನೇರಿದ ಪ್ರಥಮ ಮಹಿಳೆ, ಸುಲ್ತಾನಯೆಂಬ ಬಿರುದನ್ನು ಪಡೆದು ಪುರುಷರಂತೆಯೇ ವೇಷ ಧರಿಸಿ ಯುದ್ಧದಲ್ಲಿ ಭಾಗವಹಿಸುತ್ತಿದ್ದಳು.
*ಸಿಂಧ್ ನಿಂದ ಬಂಗಾಳದ ವಿಶಾಲ ಪ್ರದೇಶದವರೆಗೂ ತನ್ನ ಅಧಿಕಾರ ಸ್ಥಾಪಿಸಿದಳು.
*ಇವಳ ಆಡಳಿತವನ್ನು ಸಹಿಸದೆ ಪ್ರಾಂತ್ಯಾಧಿಕಾರಿಗಳು ದಂಗೆ ಎದ್ದು ಇವಳನ್ನು ಹತ್ಯೆಗೈದರು.
ಘಿಯಾಸುದ್ಧೀನ್ ಬಲ್ಬನ್
*ದೆಹಲಿಯಲ್ಲಿ ಇಲ್ತಮಶ್ ನಿಗೆ ಗುಲಾಮನಾಗಿದ್ದ ಬಲ್ಬನ್ ತನ್ನ ಸ್ವಾಮಿನಿಷ್ಠೆ, ಬುದ್ಧಿಮತ್ತೆ, ಸದ್ಗುಣಗಳಿಂದ ತುರ್ಕಿ ಗುಲಾಮರ ಕೂಟದ ಸದಸ್ಯನಾದನು.
*ರಜಿಯಾ ಸುಲ್ತಾನಳ ಆಸ್ಥಾನದಲ್ಲಿ ಅಮೀರ್ ಇ ಶಿಕಾರ್ ಎಂಬ ಹುದ್ದೆಗೆ ನೇಮಿಸಲ್ಪಟ್ಟನು.
*ಅವಿಧೇಯ ತುರ್ಕಿ ಸರದಾರರ ದುರಾಡಳಿತ ನಿಯಂತ್ರಿಸಿದನು.
*ಮಂಗೋಲರ ದಾಳಿಯನ್ನು ತಡೆಗಟ್ಟಿ ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿದನು.
*ಆಸ್ಥಾನದ ದರ್ಬಾರಿನಲ್ಲಿ ಸಂಪ್ರದಾಯ ಮತ್ತು ಶಿಷ್ಟಾಚಾರಗಳನ್ನು ತಂದನು.
*ಪರ್ಷಿಯನ್ ಶೈಲಿಯ ವೇಷಭೂಷಣಗಳನ್ನು ಧರಿಸುತ್ತಿದ್ದನು.
*ತನ್ನನ್ನು ದೇವರ ಪ್ರತಿನಿಧಿಯೆಂದು ಸಾರಿ ನಿರಂಕುಶ ರಾಜಪ್ರಭುತ್ವ ಜಾರಿಗೆ ತಂದನು.
*ಅನುಭವಿ ಹಾಗೂ ವಿಶ್ವಾಸಿಕ ಸೇನಾಪತಿಗಳ ನೇತೃತ್ವದಲ್ಲಿ ಸೈನ್ಯವನ್ನು ಪುನರ್ ಸಂಘಟಿಸಿದನು.
*ಜಾಗೀರ್ ಪಡೆದು ಸೇವೆ ಸಲ್ಲಿಸದ ಕುಟುಂಬಗಳಿಂದ ಭೂಮಿಯನ್ನು ಹಿಂತೆಗೆದುಕೊಂಡನು.
*ಮಂಗೋಲರ ದಾಳಿಯನ್ನು ತಡೆಗಟ್ಟಲು ವಾಯುವ್ಯ ಗಡಿಯಲ್ಲಿ ಕೋಟೆಯನ್ನು ಕಟ್ಟಿಸಿದನು.
*ಬಲ್ಬನ್ ನಂತರದ ಸುಲ್ತಾನ ಕೈಕುಬಾದ್ ನು ಆತನ ವಜೀರನಿಂದಲೇ ಕೊಲೆಯಾದನು. ಅಲ್ಲಿಗೆ ಗುಲಾಮಿ ಸಂತತಿಯ ಆಡಳಿತ ಅಂತ್ಯಗೊಂಡಿತು.
ಖಿಲ್ಜಿ ಸಂತತಿ
*ಖಿಲ್ಜಿ ಸಂತತಿಯನ್ನು ಜಲಲುದ್ಧೀನನು ಸ್ಥಾಪಿಸಿದನು.
*ಇವನು ಮೃದುಸ್ವಭಾವದವನು, ಕ್ಷಮಾಶಿಲತೆ ಗುಣವನ್ನು ಹೊಂದಿದ್ದನು. ಇದರಿಂದ ಸರದಾರರು ಪ್ರಬಲರಾಗಿ ಒಳಸಂಚು ನಡೆಸಿದರು.
*ಮುಂದೆ ಈತನನ್ನು ಅಲ್ಲಾವುದ್ಧೀನ್ ಖಿಲ್ಜಿ ಕೊಲೆ ಮಾಡಿ ದೆಹಲಿಯ ಸುಲ್ತಾನನಾದನು.
ಅಲ್ಲಾವುದ್ಧೀನ್ ಖಿಲ್ಜಿ
*ಅಲ್ಲಾವುದ್ಧೀನ್ ಖಿಲ್ಜಿಯು ಬಾಲ್ಯದಲ್ಲಿ ಜಲಾಲುದ್ಧೀನನ ಆಶ್ರಯದಲ್ಲಿ ಬೆಳೆದನು. ಶೂರ ಯೋಧನಾದ ಇವನು ರಾಜ್ಯಪಾಲನಾಗಿ ಹಾಗೂ ದಂಡನಾಯಕನಾಗಿ ಸೇವೆ ಸಲ್ಲಿಸಿದನು.
*ದಂಡನಾಯಕನಾಗಿ ಮಾಳ್ವಾ, ಭಿಲ್ಸಾ ಮತ್ತು ದೇವಗಿರಿಗಳ ಮೇಲೆ ದಾಳಿ ಮಾಡಿ ಅಪಾರವಾದ ಸಂಪತ್ತನ್ನು ಲೂಟಿ ಮಾಡಿದನು.
*ಅಲ್ಲಾವಿದ್ದೀನ್ ಮಂಗೋಲರ ದಾಳಿಯನ್ನು ಹಿಮ್ಮೆಟ್ಟಿಸಿದ್ದಲ್ಲದೆ ಉತ್ತರ ಮತ್ತು ದಕ್ಷಿಣ ಭಾರತದ ರಸರನ್ನು ಸೋಲಿಸಿ ಅಪಾರ ಸಂಪತ್ತನ್ನು ಲೂಟಿ ಮಾಡಿದನು.
*ಗುಜರಾತಿನ ವಾಘೇಲಾ ವಂಶದ ರಜಪೂತ ದೊರೆ ಇಮ್ಮಡಿ ಕರ್ಣದೇವ, ರಣಥಂಭೋರದ ಹಮೀರದೇವ, ಚಿತ್ತೋರಿನ ರಾಜ ಭೀಮಸಿಂಗನನ್ನು ಸೋಲಿಸಿದನು.
*ಅಲ್ಲದೆ ಮಾಳ್ವ, ಜಾಲೋರ್, ಬುಂದಿ, ಮಾಂಡೋರ್ ಮತ್ತು ಟೋಂಕಗಳನ್ನು ಗೆದ್ದುಕೊಂಡನು.
*ದಕ್ಷಿಣ ಭಾರತದ ದಂಡಯಾತ್ರೆಯನ್ನು ಯಶಸ್ವಿಗೊಳಿಸಿ ಕೀರ್ತಿ ಈತನ ದಂಡನಾಯಕ ಮಲಿಕಾಫರ್ ಗೆ ಸಲ್ಲುತ್ತದೆ.
*ದೇವಗಿರಿ, ವಾರಂಗಲ್, ದ್ವಾರಸಮುದ್ರ ಮತ್ತು ಮಧುರೈಗಳ ಮೇಲೆ ದಾಲಿ ನಡೆಸಿ ಅವುಗಳ ಅವನತಿಗೆ ಕಾರಣನಾದನು.
*ಆದರೆ ಗೆದ್ದ ರಾಜ್ಯಗಳನ್ನು ರಾಜ್ಯದಲ್ಲಿ ವಿಲೀನಗೊಳಿಸಿಕೊಳ್ಳದೆ ಕೇವಲ ಸಂಪತ್ತನ್ನು ಮಾತ್ರ ಲೂಟಿ ಮಾಡಿದನು.
*ಆತನ ಮೂರನೇ ಮಗ ಕುತ್ಬುದ್ದೀನ್ ಮುಬಾರಕ್ ನಾಲ್ಕು ವರ್ಷಗಳ ಕಾಲ ಅಧಿಕಾರ ನೆಡೆಸಿ ಖುಸ್ರು ಎಂಬ ಸೈನಿಕನಿಂದ ಕೊಲ್ಲಲ್ಪಟ್ಟನು.
*ಮುಂದೆ ಘಾಜಿ ಮಲ್ಲಿಕ್ ಖುಸ್ರುವನ್ನು ಕೊಂದು ತುಘಲಕ್ ಸಂತತಿ ಸ್ಥಾಪಿಸಿದನು.
*+
ವಾಣಿಜ್ಯ ಸುಧಾರಣೆ
*ಜೀವನಾವಶ್ಯಕ ವಸ್ತುಗಳಾದ ಧಾನ್ಯ, ಖಾದ್ಯ ತೈಲ, ಸಕ್ಕರೆ, ಉಪ್ಪು, ಬಟ್ಟೆ ಮುಂತಾದವುಗಳ ಬೆಲೆಯನ್ನು ಅಲ್ಪ ಪ್ರಮಾಣದ ಲಾಭದ ಮೇಲೆ ನಿಗಧಿ ಮಾಡಲಾಯಿತು.
*ವರ್ತಕರು ನಿಗಧಿಪಡಿಸಿದ ಬೆಲೆಯಲ್ಲಿ ವಸ್ತುಗಳನ್ನು ಮಾರಾಟ ಮಾಡಲು ಆದೇಶ ನೀಡಿದನು.
*ಮಾರುಕಟ್ಟೆಗಳ ನಿಯಂತ್ರಣಕ್ಕಾಗಿ ಸಹನಾ ಇ ಮಂಡಿ ಎಂಬ ಉನ್ನತಾಧಿಕಾರಿಯನ್ನು ನೇಮಿಸಿದನು.
ತುಘಲಕ್ ಸಂತತಿ
*ತುಘಲಕ್ ಸಂತತಿಯನ್ನು ಘಿಯಾಸುದ್ಧೀನ್ ಸ್ಥಾಪಿಸಿದನು.
*ಈ ಸಂತತಿಯ ಮಹಮ್ಮದ್ ಬಿನ್ ತುಘಲಕ್ ಮತ್ತು ಫಿರೋಜ್ ಷಾ ತುಘಲಕ್ ಪ್ರಮುಖರು.
*ಘಿಯಾಸುದ್ಧೀನನು ಕೆಲವು ಉದಾರ ಆಡಳಿತಾತ್ಮಕ ನೀತಿಯ ಮೂಲಕ ದೆಹಲಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸ್ಥಾಪಿಸಿದನು.
*ಮಂಗೋಲರ ದಾಳಿ ತಡೆಗಟ್ಟಲು ಗಡಿ ಭದ್ರಪಡಿಸಿದನು.
*ರೈತರಿಗೆ ನೀರಾವರಿ ಕಾಲುವೆಗಳನ್ನು ನಿರ್ಮಿಸಿ, ಭೂಕಂದಾಯ ಕಡಿಮೆ ಮಾಡಿದನು.
*ಕುದುರೆ ಮತ್ತು ಕಾಲಾಳುಗಳ ಮೂಲಕ ಅಂಚೆ ಪದ್ಧತಿಯನ್ನು ಸಂಘಟಿಸಿದನು.
*ದೆಹಲಿಯ ಬಳಿ ತುಘಲಕಾಬಾದ್ ಕೋಟೆ ಕಟ್ಟಿಸಿದನು.
*ವಾರಂಗಲ್, ಮಧುರೈ ವಶಪಡಿಸಿಕೊಂಡು ಗುಜರಾತ್ ಮತ್ತು ಬಂಗಾಳಗಳಲ್ಲಿ ಸುವ್ಯವಸ್ಥೆ ಕಾಪಾಡಿದನು.
ಮಹಮ್ಮದ್ ಬಿನ್ ತುಘಲಕ್
*ಈತನು ಪರ್ಶಿಯನ್ ಮತ್ತು ಅರೇಬಿಕ್ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದನು.
*ಗಣಿತ, ಭೌತವಿಜ್ಞಾನ, ವೈದ್ಯಶಾಸ್ತ್ರ, ಪರ್ಶೀಯನ್ ಕಾವ್ಯ, ಖಗೋಳಶಾಸ್ತ್ರ ಮುಂತಾದ ವಿಷಯಗಳಲ್ಲಿ ಪರಿಣಿತಿ ಪಡೆದಿದ್ದನು.
*ಅಪಾರ ಜ್ಞಾನಹೊಂದಿದ್ದರೂ, ಆತನ ವ್ಯಕ್ತಿತ್ವದಲ್ಲಿ ಅನೇಕ ದೋಷಗಳಿದ್ದವು. ಮಹಮ್ಮದ್ ತುಘಲಕ್ ನಲ್ಲಿ ವ್ಯವಹಾರಿಕ ಬುದ್ಧಿವಂತಿಕೆ, ಪರಿಜ್ಞಾನ, ತಾಳ್ಮೆಗುಣ, ಮಾನಸಿಕ ಸಮತೋಲನ, ದೂರದೃಷ್ಠಿ, ವಾಸ್ತವಿಕವಾದ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇರಲಿಲ್ಲ.
ಆಡಳಿತಾತ್ಮಕ ಸುಧಾರಣೆಗಳು
ಕಂದಾಯ ಸುಧಾರಣೆ
*ಸಾಮ್ರಾಜ್ಯದ ಭೂಕಂದಾಯಕ್ಕೆ ಸಂಬಂಧಿಸಿದಂತೆ ಭೂಮಿಯ ಎಲ್ಲಾ ವಿವರಗಳನ್ನೊಳಗೊಂಡ ಅಧಿಕೃತ ದಾಖಲೆ ಪುಸ್ತಕವನ್ನು ತಯಾರಿಸಿದನು.
*ಕೃಷಿ ಇಲಾಖೆಯನ್ನು ಸ್ಥಾಪಿಸಿದನು. ಕೃಷಿಗೆ ಒಳಪಡವದ ಭೂಮಿಯನ್ನು ಸಾಗುವಳಿಗೆ ಒಳಪಡಿಸಿದನು.
*ರೈತರಿಗೆ ಆರ್ಥಿಕ ನೆರವು ನೀಡಿದನು. ದೋ-ಅಬ್ ಪ್ರದೇಶದಲ್ಲಿ ಭೂಕಂದಾಯ ಹೆಚ್ಚಿಸಿದನು.
ರಾಜಧಾನಿ ವರ್ಗಾವಣೆ
*ಮಹಮ್ಮದ್ ಬಿನ್ ತುಘಲಕನು ತನ್ನ ರಾಜಧಾನಿಯನ್ನು ದೆಹಲಿಯಿಂದ ಮಧ್ಯ ಭಾರತದ ದೇವಗಿರಿಗೆ ವರ್ಗಾಯಿಸಿದನು.
*ಇದರ ಮುಖ್ಯ ಉದ್ದೇಶ ವಿಶಾಲವಾದ ಸಾಮ್ರಾಜ್ಯಕ್ಕೆ ರಾಜಧಾನಿ ಕೇಂದ್ರಭಾಗದಲ್ಲಿರಬೇಕು ಹಾಗೂ ಪರಕೀಯ ದಾಳಿಗಳಿಂದ ರಕ್ಷಿಸಲು ಅನುಕೂಲವಾಗಿರಬೇಕೆಂದಾಗಿತ್ತು.
*ಯೋಜನೆ ಉತ್ತಮವಾಗಿದ್ದರೂ ಸ್ಥಳಾಂತರಕ್ಕೆ ಸೂಕ್ತ ಏರ್ಪಾಡುಗಳನ್ನು ಕೈಗೊಂಡಿರಲಿಲ್ಲ. ಇದರಿಂದ ಅಸಂಖ್ಯಾತ ಜನರು ಸಂಕಷ್ಟಕ್ಕೆ ಈಡಾದರು.
ಸಾಂಕೇತಿಕ ನಾಣ್ಯ ಪ್ರಯೋಗ
*ನಾಣ್ಯಗಳ ಮೌಲ್ಯಗಳನ್ನು ತನ್ನ ಕಾಲದ ಬಂಗಾರ ಮತ್ತು ಬೆಳ್ಳಿಯ ಮೌಲ್ಯಕ್ಕೆ ಸರಿಹೊಂದುವಂತೆ ಮಾಡಿದನು.
*‘ದಿನಾರ್’ ಎಂಬ ಬಂಗಾರದ ಹಾಗೂ ‘ಅದಲಿ’ ಎಂಬ ಬೆಳ್ಳಿ ನಾಣ್ಯಗಳನ್ನು ಚಲಾವಣೆಗೆ ತಂದನು. ಅವುಗಳನ್ನು ಕಲಾತ್ಮಕವಾಗಿ ವಿನ್ಯಾಸಗೊಳಿಸಿದ್ದನು.
*ಕೆಲವು ವರ್ಷಗಳ ನಂತರ ತಾಮ್ರ ಮತ್ತು ಹಿತ್ತಾಳೆಯ ಸಾಂಕೇತಿಕ ನಾಣ್ಯಗಳನ್ನು ಚಲಾವಣೆಗೆ ತಂದನು.
*ನಾಣ್ಯಗಳನ್ನು ಟಂಕಿಸುವುದು ಸರಕಾರದ ಏಕಸ್ವಾಮ್ಯಕ್ಕೆ ಒಳಪಟ್ಟಿರಲಿಲ್ಲ. ಆದ್ದರಿಂದ ಸಾರ್ವಜನಿಕರು ಅವುಗಳನ್ನು ಟಂಕಿಸಿದ್ದರಿಂದ ಅವ್ಯವಸ್ಥೆ ಉಂಟಾಯಿತು.
*ಅಧಿಕ ವೆಚ್ಚಾದಯಕ ಆಡಳಿತಾತ್ಮಕ ಪ್ರಯೋಗಗಳು, ಭೀಕರ ಬರಗಾಲ, ರಾಜಧಾನಿ ಸ್ಥಳಾಂತರಗಳಿಂದ ರಾಜ್ಯದ ಖಜಾನೆ ಬರಿದಾಯಿತು.
ದಖನ್ ನೀತಿ
*ಮಹಮ್ಮದ್ ಬಿನ್ ತುಘಲಕನು ದಖನ್ ನಲ್ಲಿ ಗೆದ್ದ ಪ್ರದೇಶಗಳಲ್ಲಿ ತನ್ನ ಆಡಳಿತ ನೆಡೆಸಿದನು.
*ಕಾಕತೀಯರ ರಾಜಧಾನಿ ವಾರಂಗಲ್ ವಶಪಡಿಸಿಕೊಂಡನು.
*ಹೊಯ್ಸಳರ ರಾಜಧಾನಿ ದ್ವಾರಸಮುದ್ರವನ್ನು ಧ್ವಂಸಗೊಳಿಸಿದನು.
*ದಕ್ಷಿಣ ಭಾರತದಲ್ಲಿರುವ ಮಧುರೈಯನ್ನು ಗೆದ್ದು ಅದರ ಆಡಳಿತ ನಿರ್ವಹಣೆಗೆ ಜಲಾಲುದ್ಧೀನ್ ಹಸನ್ ಷಾನನ್ನು ರಾಜ್ಯಪಾಲನನ್ನಾಗಿ ನೇಮಿಸಿದನು.
*ಹೀಗೆ ಭಾರತದಲ್ಲಿ ವಿಶಾಲ ಸಾಮ್ರಾಜ್ಯ ಸ್ಥಾಪಿಸಿದ ದೆಹಲಿ ಸುಲ್ತಾನರಲ್ಲಿ ಮಹಮ್ಮದ್ ಬಿನ್ ತುಘಲಕನು ಮೊದಲಿಗನು.
*ಈತನ ಆಡಳಿತಾವಧಿಯ ಕೊನೆಯಲ್ಲಿ ದಕ್ಷಿಣ ಭಾರತದಲ್ಲಿ ಇಪ್ಪತ್ತೇಳು ದಂಗೆಗಳು ನಡೆದವು. ಪರಿಣಾಮವಾಗಿ ವಿಜಯ ನಗರ ಮತ್ತು ಬಹುಮನಿ ರಾಜ್ಯಗಳು ತಲೆಯೆತ್ತಿದವು.
ಫಿರೋಜ್ ಷಾ ತುಘಲಕ್
*ಫಿರೋಜ್ ಷಾ ತುಘಲಕನು ಅನೇಕ ಪ್ರಜಾಹಿತ ಕಾರ್ಯಗಳನ್ನು ಜಾರಿಗೆ ತಂದನು.
*ಪ್ರಜೆಗಳಿಗೆ ನೆರವು ನೀಡುವ ಉದ್ದೇಶದಿಂದ ತೆಕಾವಿ ಸಾಲ ಮನ್ನಾ ಮಾಡಿದನು.
*ಮಹಮ್ಮದ್ ತುಘಲಕನ ದಾಳಿಗೆ ತುತ್ತಾಗಿದ್ದ ಪ್ರಜೆಗಳಿಗೆ ಪರಿಹಾರ ಹಣ ನೀಡಿದನು.
*ಸುಮಾರು ಇಪ್ಪತ್ತು ತೆರಿಗೆಗಳನ್ನು ರದ್ದುಗೊಳಿಸಿದನು.
*ಖಾಸಗಿ ಗಣಿಗಳ ಮೇಲೆ ಮತ್ತು ನೀರಾವರಿ ಸೌಲಭ್ಯ ನೀಡಿದ್ದಕ್ಕಾಗಿ ತೆರಿಗೆಗಳನ್ನು ರದ್ದುಪಡಿಸಿದನು.
*ಖಾಸಗಿ ಗಣಿಗಳ ಮೇಲೆ ಮತ್ತು ನೀರಾವರಿ ಸೌಲಭ್ಯ ನೀಡಿದ್ದಕ್ಕಾಗಿ ತೆರಿಗೆಗಳನ್ನು ಸಂಗ್ರಹಿಸಲಾಗುತ್ತಿತ್ತು.
*ಜಾನಪುರ, ಫತೇಬಾದ್, ಹಿಸ್ಸಾರ, ಫಿರೋಜಪುರ, ಫಿರೋಜಾಬಾದ್ ಮೊದಲಾದ ನಗರಗಳನ್ನು ನಿರ್ಮಿಸಿದನು.
ಸಯ್ಯದ್ ಸಂತತಿ
*ಮುಲ್ತಾನಿನ ರಾಜ್ಯಪಾಲನಾಗಿದ್ದ ಖಿಜರ್ ಖಾನ್ ದೆಹಲಿಯನ್ನು ವಶಪಡಿಸಿಕೊಂಡು ದೋ ಅಬ್, ಬಿಯಾನ್ ಮತ್ತು ಗ್ವಾಲಿಯರ್ ಗಳಲ್ಲಿ ಅಧಿಕಾರ ಸ್ಥಾಪಿಸಿ ದಂಗೆಗಳನ್ನು ಅಡಗಿಸಿ ಶಾಂತಿ, ಸುವ್ಯವಸ್ಥೆ ಮತ್ತು ಭದ್ರತೆಯನ್ನು ನೆಲೆಗೊಳಿಸಿದನು.
*ಮಹಮ್ಮದ್ ಷಾ, ಅಲ್ಲಾವುದ್ಧೀನ್ ಮತ್ತು ಅಲಂಷಾ ಈ ಸಂತತಿಯ ಪ್ರಮುಖ ಸುಲ್ತಾನರಾಗಿದ್ದಾರೆ.
*ಅಲಂ ಷಾನ್ನು ಬಹಲೋಲ್ ಲೋಧಿ ಸೋಲಿಸಿ ಸೈಯದ್ ಸಂತತಿಯ ಆಡಳಿತವನ್ನು ಅಂತ್ಯಗೊಳಿಸಿದನು.
ಲೋಧಿ ಸಂತತಿ
*ಇದು ದೆಹಲಿಯನ್ನಾಳಿದ ದೆಹಲಿ ಸುಲ್ತಾನರ ಕೊನೆಯ ಸಂತತಿಯಾಗಿದೆ.
*ಬಹುಲೋಲ್ ಲೋದಿ, ಸಿಕಂದರ್ ಲೋಧಿ ಮತ್ತು ಇಬ್ರಾಹಿಂ ಲೋಧಿ ಈ ಸಂತತಿಯ ಸುಲ್ತಾನರು.
*ಸಿಕಂದರ್ ಲೋಧಿಯು ಬಿಹಾರ, ಬಂಗಾಳ, ಧೋಲಪುರ ಮತ್ತು ಚಂದೇರಿಗಳನ್ನು ವಶಪಡಿಸಿಕೊಂಡನು. ದೆಹಲಿಯಲ್ಲಿ ಶಾಂತಿ ನೆಲೆಸುವಂತೆ ಕ್ರಮ ಕೈಗೊಂಡನು.
*ಇವನ ಉತ್ತರಾಧಿಕಾರಿ ಇಬ್ರಾಹಿಂ ಲೋಧಿ ಅದಕ್ಷನಾಗಿದ್ದನು.
*ಭಾರತದ ಮೇಲೆ ದಾಳಿ ಮಾಡುವಂತೆ ರಾಜ್ಯಪಾಲರಾದ ಆಲಂಖಾನ್ ಮತ್ತು ದೌಲತ್ ಖಾನ್ ಅಫ್ಘನ್ನರಿಗೆ ಆಮಂತ್ರಣ ನೀಡಿದರು.
*ಬಾಬರ್ ಭಾರತದ ಮೇಲೆ 1526ರಲ್ಲಿ ದಾಳಿ ಮಾಡಿ ಪಾಣಿಪತ್ ಯುದ್ಧದಲ್ಲಿ ಇಬ್ರಾಹಿಂ ಲೋಧಿಯನ್ನು ಸೋಲಿಸಿದನು. ಪರಿಣಾಮವಾಗಿ ಭಾರತದಲ್ಲಿ ಮೊಘಲ್ ಆಳ್ವಿಕೆ ಪ್ರಾರಂಭವಾಯಿತು.
ದೆಹಲಿ ಸುಲ್ತಾನರ ಕೊಡುಗೆಗಳು
ಆಡಳಿತ ಪದ್ಧತಿ
*ದೆಹಲಿಯ ಸುಲ್ತಾನರು ನಿರಂಕುಶ ಪ್ರಭುಗಳಾಗಿದ್ದು, ಸೈನ್ಯದ ಮುಖ್ಯಸ್ಥ ಹಾಗೂ ಮುಖ್ಯ ನ್ಯಾಯಾಧೀರಾಗಿದ್ದರು.
*ಸುಲ್ತಾನನ ಆಡಳಿತವು ಕುರಾನಿನ ಕಾನೂನಿನನ್ವಯ ನಡೆಯುತ್ತಿತ್ತು.
*ಸರದಾರರು, ಅಮೀರರು ಮತ್ತು ಉಲೇಮರು ಆಡಳಿತದಲ್ಲಿ ತಮ್ಮ ಪ್ರಭಾವ ಹೊಂದಿದ್ದರು.
*ಕೇಂದ್ರ ಸರ್ಕಾರದಲ್ಲಿ ಆಡಳಿತ ನೆಡೆಸಲು ಸೈನ್ಯ ಇಲಾಖೆ, ವಿದೇಶಾಂಗ ಇಲಾಖೆ, ಪತ್ರವ್ಯವಹಾರ ಇಲಾಖೆ, ದಾನ ಧರ್ಮ ಇಲಾಖೆಗಳಿದ್ದು ಅವುಗಳ ಮೇಲ್ವಿಚಾರಣೆಗೆ ಮಂತ್ರಿಗಳು ಮತ್ತು ಅಧಿಕಾರಿಗಳಿದ್ದರು.
*ರಾಜ್ಯವನ್ನು ಅನೇಕ ಪ್ರಾಂತ್ಯಗಳನ್ನಾಗಿ ವಿಂಗಡಿಸಲಾಗಿತ್ತು. ಆಡಳಿತ ಘಟಕಗಳಿಗೆ ಶಿಕ್ದಾರ್, ಅಮೀನ್ ಮತ್ತು ಚೌಕಿದಾರ ಮುಕ್ಯಸ್ಥರಾಗಿದ್ದರು.
*ಕಂದಾಯ ಸಂಗ್ರಹಣೆ, ಶಾಂತಿ ಕಾಪಾಡುವುದು, ಶಿಕ್ಷಣ ನೀಡುವುದು, ನೈರ್ಮಲ್ಯ ಕಾಪಾಡುವುದು ಇವರ ಪ್ರಮುಖ ಕರ್ತವ್ಯಗಳಾಗಿದ್ದವು.
*ಈ ಕಾಲದಲ್ಲಿ ಖರಜ್, ಜಕಾತ್, ಉಶ್ರು, ಖಮ್ಸ್, ಜೆಸಿಯಾ, ವಾರಸುದಾರರಿಲ್ಲದ ಆಸ್ತ ಮೇಲೆ ತೆರಿಗೆ, ಆಮದು ತೆರಿಗೆ, ಮನೆ ತೆರಿಗೆ ಮುಂತಾದವುಗಳು ವರಮಾನದ ಪ್ರಮುಖ ಮೂಲಗಳಾಗಿದ್ದವು.
*ಕಂದಾಯ ಸಂಗ್ರಹಣೆಗೆ ಅಧಿಕಾರಿಗಳಿದ್ದರು.
*ಖಾಜಿಗಳು ಪ್ರಾಂತ್ಯಗಳಲ್ಲಿ ಮತ್ತು ಪಟ್ಟಣಗಳಲ್ಲಿ ನ್ಯಾಯದಾನ ವಿಷಯದಲ್ಲಿ ಸುಲ್ತಾನನಿಗೆ ನೆರವಾಗುತ್ತಿದ್ದರು.
ಸಾಮಾಜಿಕ ವ್ಯವಸ್ಥೆ
*ಸುಲ್ತಾನರ ಆಡಳಿತದಲ್ಲಿ ಷಿಯಾ ಮತ್ತು ಹಿಂದೂ ಪ್ರಜೆಗಳಿಗೆ ಧಾರ್ಮಿಕ ನಿರ್ಬಂಧಗಳಿದ್ದವು.
*ಮುಸ್ಲಿಂ ಸರದಾರರನ್ನೇ ಉನ್ನತ ಹುದ್ದೆಗಳಿಗೆ ನೇಮಕ ಮಾಡುತ್ತಿದ್ದರು.
*ಸುಲ್ತಾನರು ಆಡಳಿತದಲ್ಲಿ ನೆರವು ನೀಡಲು ಹಿಂದೂ ಕಂದಾಯ ಅಧಿಕಾರಿಗಳನ್ನು, ಕಾರಕೂನರನ್ನು ನೇಮಕ ಮಾಡಿಕೊಂಡಿದ್ದರು.
*ಇತರ ಕುಶಲ ಕಸುಬುದಾರರು, ವಾಸ್ತುಶಿಲ್ಪಿಗಳನ್ನು ಕಟ್ಟಡ ನಿರ್ಮಾಣದ ಕಾರ್ಯದಲ್ಲಿ ನೇಮಿಸಿಕೊಂಡಿದ್ದರು.
*ಗುಲಾಮಗಿರಿ ಪದ್ಧತಿ ಇವರ ಕಾಲದಲ್ಲಿ ವ್ಯಾಪಕವಾಗಿ ಬೆಳೆಯಿತು.ಯುದ್ಧ ಕೈದಿಗಳನ್ನು ಗುಲಾಮರನ್ನಾಗಿ ನೇಮಿಸುತ್ತಿದ್ದರು.
*ಅರಮನೆಯಲ್ಲಿ ಅನೇಕ ಮಹಿಳಾ ಗುಲಾಮರಿದ್ದರು.
*ಸ್ತ್ರೀಯರ ಸ್ಥಾನಮಾನ ಉತ್ತಮವಾಗಿರಲಿಲ್ಲ. ಪರದಾ ಮತ್ತು ಬಾಲ್ಯವಿವಾಹ ಪದ್ಧತಿಗಳು ರೂಢಿಯಲ್ಲಿದ್ದವು.
*ಮೇಲ್ವರ್ಗದ ಸ್ತ್ರೀಯರು ಲಲಿತಕಲೆಗಳಲ್ಲಿ ಭಾಗವಹಿಸುತ್ತಿದ್ದರು.
*ಗ್ರಾಮೀಣ ಮಹಿಳೆಯರು ಕೃಷಿ, ಮನೆಗೆಲಸಗಳಲ್ಲಿ ನಿರತರಾಗುತ್ತಿದ್ದರು.
ಆರ್ಥಿಕ ವ್ಯವಸ್ಥೆ
*ಅಧಿಕ ತೆರಿಗೆ ಭಾರ ಜನರ ಮೇಲಿತ್ತು.
*ಸಾರಿಗೆ ಸಂರ್ಪಕ ಕಷ್ಟವಾದದ್ದರಿಂದ ಬೆಲೆಗಳು ಎಲ್ಲಾ ಭಾಗದಲ್ಲೂ ಏಕರೂಪದಲ್ಲಿರಲಿಲ್ಲ.
*ಕೃಷಿಯು ಸಂಪತ್ತಿನ ಮೂಲವಾಗಿತ್ತು.
*ದೆಹಲಿಯ ಸುಲ್ತಾನರು ತಮ್ಮದೇ ಆಧ ಕಾರ್ಖಾನೆಗಳನ್ನು ಹೊಂದಿದ್ದರು.
*ಚಿನ್ನ, ಬೆಳ್ಳಿ ಸಾಮಗ್ರಿ ತಯಾರಿಕೆ, ಕಸೂತಿ ಹಾಕುವಿಕೆ, ಬಟ್ಟೆ ತಯಾರಿಕೆ, ಬಣ್ಣ ತಯಾರಿಕೆ, ಬಣ್ಣ ಹಾಕುವಿಕೆ ಮೊದಲಾದ ಕಾರ್ಖಾನೆಗಳಿದ್ದವು.
ಸಾಹಿತ್ಯ
*ಅಲ್ಬೆರೊನಿ – ತಾರೀಖ್ ಉಲ್ ಹಿಂದ್
*ಉತ್ಬಿಯ – ತಾರೀಖ್ ಇ ಯಾಮಿನಿ
*ಹಸನ್ ನಿಜಾಮಿ – ತಾಜುಲ್ ಮಾಸಿಖ್
*ಮಿನ್ಹಾಜ್ ಉಸ್ ರಾಜ್ – ತಬಖತ್ ಈ ನಾಸಿರಿ
*ಬರನಿ – ತಾರೀಖ್ ಇ ಫಿರೋಜ್ ಷಾಹಿ
*ಫಿರೋಜ್ ಷಾ ತುಘಲಕ್ – ಫುತುಹತ್ ಇ ಫಿರೋಜ್ ಷಾಹಿ
*ಅಮೀರ್ ಖುಸ್ರೂನನ್ನು ಭಾರತದ ಗಿಳಿ ಎಂದು ಕರೆಯುತ್ತಿದ್ದರು.
ಕಲೆ ಮತ್ತು ವಾಸ್ತುಶಿಲ್ಪ
*ದೆಹಲಿ ಸುಲ್ತಾನರು ಭಾರತದಲ್ಲಿ ಇಂಡೋ-ಇಸ್ಲಾಮಿಕ್ ಎಂಬ ಹೊಸ ಶೈಲಿಯ ವಾಸ್ತುಶಿಲ್ಪವನ್ನು ಪರಿಚಯಿಸಿದರು.
*ಕಮಾನು, ಗುಮ್ಮಟ ಮತ್ತು ಮಿನಾರುಗಳು ಈ ಶೈಲಿಯ ಮುಖ್ಯ ಲಕ್ಷಣಗಳಾಗಿವೆ.
*ದೆಹಲಿಯ ಸುಲ್ತಾನರು ಕೋಟೆ, ಮಸೀದಿ, ಅರಮನೆ, ಸಾರ್ವಜನಿಕ ಕಟ್ಟಡ, ಮದರಸಾ,ಧರ್ಮಶಾಲೆಗಳನ್ನು ನಿರ್ಮಿಸಿದರು.
*ದೆಹಲಿಯ ಕುವತ್ ಉಲ್ ಇಸ್ಲಾಂ ಮಸೀದಿ, ಕುತುಬ್ ಮಿನಾರ್, ಅಲೈ ದರ್ವಾಜಾ, ಜಮೈತ್ ಖಾನಾ ಮಸೀದಿಗಳು ಈ ಶೈಲಿಗೆ ಉತ್ತಮ ಉದಾರಣೆಯಾಗಿವೆ.
Sunday, 23 May 2021
Home »
general knowledge
» ಕ್ರಿ.ಶ 9ರಿಂದ 14ನೇ ಶತಮಾನದ ಭಾರತ
ಕ್ರಿ.ಶ 9ರಿಂದ 14ನೇ ಶತಮಾನದ ಭಾರತ
Subscribe to:
Post Comments (Atom)