Thursday 8 April 2021

ಮಕ್ಕಳ ಹಕ್ಕು

 

ಉಚಿತ ಹಾಗೂ ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009
ಹಾಗೂ ಕರ್ನಾಟಕ ಉಚಿತ ಹಾಗೂ ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ನಿಯಮಗಳು 2012

ಮುಖ್ಯಾಂಶಗಳು:
*6 - 14 ವಯೋಮಿತಿಯ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಢಾಯ (1 ರಿಂದ 8 ನೇ ತರಗತಿವರೆಗಿನ) ಶಿಕ್ಷಣವನ್ನು ನೆರೆಹೊರೆಯ ಶಾಲೆಯಲ್ಲಿ ಒದಗಿಸಬೇಕೆಂದು ಕೇಂದ್ರ ಸರ್ಕಾರವು ರೂಪಿಸಿದ ಈ ಕಾಯಿದೆ ದಿನಾಂಕ: 27.08.2009 ರಿಂದ ಭಾರತದಾದ್ಯಂತ (ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ) ಜಾರಿಗೆ ಬಂದಿರುತ್ತದೆ.
* ಕಾಯಿದೆಯ ಅನುಷ್ಠಾನದ ಸಲುವಾಗಿ ರಾಜ್ಯ ಸರ್ಕಾರವು ನಿಯಮಗಳನ್ನು ರೂಪಿಸಿದ್ದು ಈ ನಿಯಮಗಳು 2012-13 ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬಂದಿರುತ್ತದೆ.
* ಈ ನಿಯಮಾವಳಿಗಳು 1983 (ಕರ್ನಾಟಕ ಆಕ್ಟ್ 1 1995) ರ ಶಿಕ್ಷಣ ಕಾಯಿದೆ ಅಡಿಯಲ್ಲಿ ರಚಿಸಲಾದ ನಿಯಮಾವಳಿಗಳ ಮೇಲೆ ಪ್ರಾಶಸ್ತ್ಯವನ್ನು ಪಡೆಯುತ್ತವೆ.
* ಈ ಕಾಯಿದೆ ಮತ್ತು ನಿಯಮಾವಳಿಗಳ ಪ್ರಕಾರ 6 ರಿಂದ 14 ವಯೋಮಿತಿಯ ಎಲ್ಲ ಮಕ್ಕಳು ತಮ್ಮ ವಾಸಸ್ಥಳದ ಹತ್ತಿರವಿರುವ (ನೆರೆಹೊರೆಯ) ಶಾಲೆಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯಬಹುದಾಗಿದೆ.ಕಾಯಿದೆ ಸೆಕ್ಷನ್ 3 (1).
* ಎಲಿಮೆಂಟರಿ (1-8) ವ್ಯಾಪ್ತಿಗೆ ಬರುವ ಯಾವುದೇ ಮಗು ಶಿಕ್ಷಣವನ್ನು ಪೂರ್ಣಗೊಳಿಸುವ ಸೌಲಭ್ಯದಿಂದ ವಂಚಿತರನ್ನಾಗಿ ಮಾಡುವ ಯಾವುದೇ ರೀತಿಯ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
 * ಈ ಕಾಯಿದೆಯನ್ನು ಅನುಷ್ಠಾನಗೊಳಿಸುವ ಸಲುವಾಗಿ ಯುಕ್ತ ಸರ್ಕಾರ ಮತ್ತು ಸ್ಥಳೀಯ ಪ್ರಾಧಿಕಾರಗಳು ತಮ್ಮ ಆಡಳಿತದ ಸಲುವಾಗಿ ನಿಗದಿಪಡಿಸಲಾದ ನೆರೆಹೊರೆಯ ಪ್ರದೇಶದ ವ್ಯಾಪ್ತಿಯಲ್ಲಿ ಈಗಾಗಲೇ ಶಾಲೆಯನ್ನು ಸ್ಥಾಪಿಸದೇ ಇದ್ದ ಪಕ್ಷದಲ್ಲಿ ಕಾಯಿದೆಯ ಪ್ರಾರಂಭದಿಂದ 3 ವರ್ಷಗಳ ಒಳಗೆ ಶಾಲೆಯನ್ನು ಸ್ಥಾಪಿಸತಕ್ಕದ್ದು. (ಸೆಕ್ಷನ್ 6)
* ಪ್ರತಿಯೊಬ್ಬ ಮಗುವನ್ನು ತಮ್ಮ ನೆರೆಹೊರೆಯ ಶಾಲೆಯಲ್ಲಿ ದಾಖಲು ಮಾಡಿ ಎಲಿಮೆಂಟರಿ ಶಿಕ್ಷಣವನ್ನು ಕೊಡಿಸುವುದು ಅಂತಹ ಮಗುವಿನ ಪಾಲಕರು, ಪೋಷಕರು ಅಥವಾ ಮಗುವಿನ ಜವಾಬ್ದಾರಿ ಹೊಂದಿದವರ ಕರ್ತವ್ಯವಾಗಿದೆ. (ಸೆಕ್ಷನ್ 10).
* ನೆರೆಹೊರೆಯ ಶಾಲೆ ಎಂದರೆ, ನಗರ ಪ್ರದೇಶಗಳನ್ನು ಹೊರತುಪಡಿಸಿ ರಾಜ್ಯದ ಇತರೆ ಕಡೆಗಳಲ್ಲಿ ಪ್ರಾಥಮಿಕ 1 ರಿಂದ 5 ನೇ ತರಗತಿ ವಿದ್ಯಾಥರ್ಿಗಳಿಗೆ ತಮ್ಮ ವಾಸಸ್ಥಳದಲ್ಲಿ ಅಥವಾ 1 ಕಿ.ಮೀ. ವ್ಯಾಪ್ತಿಯಲ್ಲಿರುವ ಶಾಲೆ, 6, 7 ನೇ ತರಗತಿ ವಿದ್ಯಾಥರ್ಿಗಳಿಗೆ ತಮ್ಮ ವಸತಿ ಪ್ರದೇಶದಲ್ಲಿ ಅಥವಾ 3 ಕಿ.ಮೀ. ವ್ಯಾಪ್ತಿಯಲ್ಲಿರುವ ಶಾಲೆ, 8ನೇ ತರಗತಿಗೆ ತಮ್ಮ ವಾಸಸ್ಥಳದಿಂದ 5 ಕಿ.ಮೀ ವ್ಯಾಪ್ತಿಯಲ್ಲಿರುವ ಯಾವುದಾದರೂ ಶಾಲೆ ಎಂದು ಅರ್ಥ(ಕಾಯಿದೆ ಸೆಕ್ಷನ್ 6, ನಿಯಮ4(1), (ಎ), (ಬಿ)ಮತ್ತು(ಸಿ))
* ನಗರ ಪ್ರದೇಶಗಳಲ್ಲಿ ನೆರೆಹೊರೆಯ ಶಾಲೆ ಎಂದರೆ: ನಗರಸಭೆ ಅಥವಾ ಸ್ಥಳೀಯ ಪ್ರಾಧಿಕಾರಗಳು ತಮ್ಮ ಆಡಳಿತದ ಉದ್ದೇಶಕ್ಕಾಗಿ ಗುರುತಿಸಲಾದ ಒಂದು ವಾರ್ಡ್ಎಂದು ಪರಿಗಣಿಸುವುದು. (ಕಾಯಿದೆ ಸೆಕ್ಷನ್ 6, ನಿಯಮ 4 (1), (ಎ), (ಬಿ)ಮತ್ತು (ಸಿ) ನೋಡಿ)
* ಸ್ಥಳೀಯ ಆಡಳಿತವು ತನ್ನ ವ್ಯಾಪ್ತಿಯಲ್ಲಿ 14 ವಯೋಮಿತಿಯ ಒಳಗಿನ ಎಲ್ಲ ಮಕ್ಕಳ ವಿವರಗಳನ್ನು ಗೃಹ ಸಮೀಕ್ಷೆಯ ಮೂಲಕ ಸಂಗ್ರಹಿಸಿ ಪ್ರತಿ ವರ್ಷ ಅದನ್ನು ಪರಿಷ್ಕರಿಸಬೇಕು. (ನಿಯಮ 6).

ಶಾಲೆಗಳ ಮತ್ತು ಶಿಕ್ಷಕರ ಜವಾಬ್ದಾರಿ
* ಈ ಕಾಯಿದೆಯ ಅಡಿಯಲ್ಲಿ ಶಾಲೆಯಲ್ಲಿ ದಾಖಲಾದ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುವುದು ಪ್ರತಿಯೊಂದು ಶಾಲೆಯ ಕರ್ತವ್ಯವಾಗಿದೆ. (ಸೆಕ್ಷನ್ 12 ಎ)
* ಅನುದಾನಿತ ಶಾಲೆಗಳಲ್ಲಿ 1 ರಿಂದ 8 ನೇ ತರಗತಿವರೆಗೆ ಪ್ರತಿ ತರಗತಿಯಲ್ಲಿ ಲಭ್ಯವಿರುವ ಸೀಟುಗಳ ಪೈಕಿ ಆಯುಕ್ತರ ಸುತ್ತೋಲೆ ಸಂಖ್ಯೆಆರ್.ಟಿ.ಇ./01/2012-13 ದಿನಾಂಕ 10-05- 2012 ರಲ್ಲಿ ಸೂಚಿಸಲಾದ ಸೂತ್ರದ ಪ್ರಕಾರ ಮತ್ತು ಶಾಲೆಗೆ ನೀಡಲಾದ ಅನುದಾನದ ಅನುಪಾತದಲ್ಲಿ ಅವಕಾಶ ವಂಚಿತ ಮತ್ತು ದುರ್ಬಲವರ್ಗದ ಮಕ್ಕಳಿಗೆ ಸೀಟುಗಳನ್ನು ಮೀಸಲಿಡಬೇಕು. (ಸೆಕ್ಷನ್ 12 ಬಿ)
* 2012-13 ನೇ ಶೈಕ್ಷಣಿಕ ಸಾಲಿನಿಂದ ಅನುದಾನರಹಿತ ಶಾಲೆಗಳಲ್ಲಿ (ಅಲ್ಪಸಂಖ್ಯಾತ ಅನುದಾನರಹಿತ ಶಾಲೆಗಳನ್ನು ಹೊರತುಪಡಿಸಿ) ಎಲ್.ಕೆ.ಜಿ./ಯು.ಕೆ.ಜಿ. ಅಥವ 1ನೇ ತರಗತಿಗಳ ಪೈಕಿ ಆ ಶಾಲೆಯಲ್ಲಿ ಪ್ರಥಮವಾಗಿ ಯಾವ ತರಗತಿಗೆ ಪ್ರೇವೇಶ (ದಾಖಲಾತಿ) ಮಾಡಿಕೊಳ್ಳುವ ಪದ್ಧತಿ ಇದೆಯೋ ಅಂತಹ ತರಗತಿಗೆ ಅವಕಾಶವಂಚಿತ ಮತ್ತು ದುರ್ಬಲವರ್ಗದ ಮಕ್ಕಳಿಗೆ ಕನಿಷ್ಠ ಶೇಕಡ 25 ರಷ್ಟು ಸೀಟುಗಳನ್ನು ಮೀಸಲಾತಿ ಇಟ್ಟು ದಾಖಲಾತಿ ಮಾಡಿಕೊಳ್ಳಬೇಕಾಗಿದೆ.(ಕಾಯಿದೆ ಸೆಕ್ಷನ್ 12 ಸಿ)
* ಈ ರೀತಿ ಮೀಸಲಾತಿ ಮೂಲಕ ದಾಖಲು ಮಾಡಿಕೊಳ್ಳಲಾದ ಮಕ್ಕಳನ್ನು ಇತರೆ ಮಕ್ಕಳಿಂದ ಪ್ರತ್ಯೇಕಿಸಿ ತಾರತಮ್ಯ ಮಾಡಬಾರದು (ನಿಯಮ 7 (1) )
* ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಮೀಸಲಾತಿ ಕೋಟಾದ ಅಡಿಯಲ್ಲಿ ದಾಖಲು ಮಾಡಿಕೊಳ್ಳಲಾದ ಮಕ್ಕಳ ಪರವಾಗಿ ರಾಜ್ಯ ಸರ್ಕಾರವು ಪ್ರತಿ ವಿದ್ಯಾಥರ್ಿಯ ಶಿಕ್ಷಣದ ಮೇಲೆ ವ್ಯಯ ಮಾಡಲಾಗುವ ತಲಾವಾರು ವೆಚ್ಚದ ಗರಿಷ್ಠ ಮಿತಿಯೊಳಗೆ ಶಾಲಾ ಆಡಳಿತಕ್ಕೆ ಸರ್ಕಾರದಿಂದ ಮರುಪಾವತಿ ಮಾಡಲಾಗುತ್ತದೆ. (ನಿಯಮ 8)
* ಅವಕಾಶ ವಂಚಿತ ಮತ್ತು ದುರ್ಬಲವರ್ಗದ ಮಕ್ಕಳಿಗೆ ಮೀಸಲಾದ ಕೋಟಾದ ಅಡಿಯಲ್ಲಿ ದಾಖಲಾದ ಮಕ್ಕಳಿಂದ ಶಾಲೆಯವರು ಯಾವುದೇ ರೀತಿಯ ಶುಲ್ಕವನ್ನು ವಸೂಲು ಮಾಡುವಂತಿಲ್ಲ (ನಿಯಮ 8 (1) )
* ರಿಟ್ಅರ್ಜಿ ಸಂಖ್ಯೆ (ಸಿ) ನಂ. 95 ಆಫ್ 2010 ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ಉಚಿತ ಹಾಗೂ ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009 ಮತ್ತು ನಿದರ್ಿಷ್ಟವಾಗಿ ಸೆಕ್ಷನ್ 12 (1) (ಸಿ) ಮತ್ತು ಸೆಕ್ಷನ್ 18 (3) ಈ ವಿಧಿಗಳು ಸಂವಿಧಾನದ ಆರ್ಟಿಕಲ್ 30 (1) ರ ಅಡಿಯಲ್ಲಿ ಅಲ್ಪಸಂಖ್ಯಾತ ಸಂಸ್ಥೆಗಳೆಂದು ಮಾನ್ಯತೆ ಪಡೆದ ಶಾಲೆಗಳಿಗೆ ಅನ್ವಯವಾಗುವುದಿಲ್ಲ. ಕರ್ನಾಟಕ ರಾಜ್ಯದಲ್ಲಿ ಈ ರೀತಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳೆಂದು ಮಾನ್ಯತೆ ಪಡೆದ ಶಾಲೆಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.
* ಶಾಲೆಗೆ ಮಕ್ಕಳನ್ನು ದಾಖಲು ಮಾಡಿಕೊಳ್ಳುವಾಗ ಮಕ್ಕಳಿಂದ ಅಥವಾ ಪೋಷಕರಿಂದ ಯಾವುದೇ ರೀತಿಯ ದೇಣಿಗೆ (ಕ್ಯಾಪಿಟೇಷನ್ ಶುಲ್ಕ) ಇತ್ಯಾದಿಗಳನ್ನು ಪಡೆಯುವಂತಿಲ್ಲ ಹಾಗೂ ಮಗುವನ್ನು ಅಥವಾ ಪಾಲಕ/ಪೋಷಕರನ್ನು ಯಾವುದೇ ರೀತಿಯ ಆಯ್ಕೆ ಪರೀಕ್ಷೆಗೆ ಒಳಪಡಿಸುವಂತಿಲ್ಲ.
* ಎಲಿಮೆಂಟರಿ ಶಾಲೆಗೆ ದಾಖಲು ಮಾಡಲು ಮಗುವಿನ ವಯಸ್ಸನ್ನು ಸಾಬೀತು ಮಾಡಲು ಜನನ ಪ್ರಮಾಣ ಪತ್ರ ಲಭ್ಯವಿಲ್ಲದ ಪ್ರಕರಣದಲ್ಲಿ ಆಸ್ಪತ್ರೆಯ ರಿಜಿಸ್ಟರಿನ ದಾಖಲೆ ಅಥವಾ ಅಂಗನವಾಡಿ ಶಾಲೆಯ ದಾಖಲೆ ಅಥವಾ ಪಾಲಕರ/ಪೋಷಕರ ಸ್ವಯಂ ಘೋಷಣೆ ಈ ಪೈಕಿ ಯಾವುದಾದರೂ ಒಂದನ್ನು ಹಾಜರುಪಡಿಸಿದರೆ ಸಾಕು. (ಸೆಕ್ಷನ್ 14 (1), ನಿಯಮ 9)ವಯಸ್ಸಿನ ದಾಖಲೆ ಇಲ್ಲದ ಕಾರಣಕ್ಕಾಗಿ ಯಾವುದೇ ಮಗುವಿಗೆ ಶಾಲಾ ಪ್ರವೇಶವನ್ನು ನಿರಾಕರಿಸುವಂತಿಲ್ಲ. (ಸೆಕ್ಷನ್ 14 (2) )
* ಯಾವುದೇ ಮಗುವಿಗೆ ದೈಹಿಕ ಅಥವಾ ಮಾನಸಿಕ ಹಿಂಸೆಯನ್ನು ನೀಡುವಂತಿಲ್ಲ (ಸೆಕ್ಷನ್ 17 (1) ) ಈ ಕಾಯಿದೆಯನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತವಾದ ಸೇವಾ ನಿಯಮಗಳ ಅಡಿಯಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು.(ಸೆಕ್ಷನ್ 17 (2) )
* ಈ ಕಾಯಿದೆ ಜಾರಿಯಾದ ನಂತರ ಯುಕ್ತ ಸರ್ಕಾರ ಅಥವಾ ಸ್ಥಳೀಯ ಆಡಳಿತದಿಂದ ಸ್ಥಾಪನೆಗೊಂಡು ನಡೆಸಲಾಗುತ್ತಿರುವ ಶಾಲೆಗಳನ್ನು ಹೊರತುಪಡಿಸಿ ಇತರೆ ಯಾವುದೇ ವ್ಯಕ್ತಿಗಳು ನಿಗದಿತ ಪ್ರಾಧಿಕಾರದಿಂದ ಮಾನ್ಯತೆ ಪಡೆಯದ ಹೊರತು ಶಾಲೆಗಳನ್ನು ಸ್ಥಾಪಿಸುವುದಾಗಲೀ ಅಥವಾ ನಡೆಸಿಕೊಂಡು ಹೋಗುವುದಾಗಲೀ ಮಾಡುವಂತಿಲ್ಲ. ಅಂತಹವರು ನಿಗದಿತ ಸಮಯದಲ್ಲಿ ಅರ್ಜಿಯನ್ನು ಸಲ್ಲಿಸಿ ಮಾನ್ಯತೆಯನ್ನು ಪಡೆಯತಕ್ಕದ್ದು. (ಸೆಕ್ಷನ್ 13 (1).
* ಶಾಲೆಗಳ ಮಾನ್ಯತೆ ಕುರಿತಂತೆ ಈ ಕಾಯಿದೆ ಮತ್ತು ನಿಯಮಗಳಿಗೆ ಧಕ್ಕೆಯಾಗದಂತೆ ಕರ್ನಾಟಕ ಶಿಕ್ಷಣ ಕಾಯಿದೆ 1983ರ ಅಡಿಯಲ್ಲಿ ರಚಿಸಲಾದ ನಿಯಮಗಳು ಯಥಾವತ್ ಅನ್ವಯವಾಗುತ್ತವೆ. (ನಿಯಮ 11 (1))
* ಸರ್ಕಾರಿ ಮತ್ತು ಸ್ಥಳೀಯ ಆಡಳಿತ ನಡೆಸುವ ಶಾಲೆಗಳನ್ನು ಹೊರತುಪಡಿಸಿ ಉಳಿದ ಪ್ರತಿ ಶಾಲೆಯ ಆಡಳಿತ ಮಂಡಳಿಯವರು ಈ ನಿಯಮಗಳು ಜಾರಿಯಾದ ದಿನಾಂಕದಿಂದ 6 ತಿಂಗಳ ಒಳಗೆ ನಮೂನೆ 1 ರಲ್ಲಿ ಸ್ವಯಂ ಘೋಷಣೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಲ್ಲಿಸಬೇಕು. (ನಿಯಮ 11 (2) )
* ಅನುದಾನರಹಿತ ಶಾಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಶಾಲೆಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಪೋಷಕರು ಮತ್ತು ಶಾಲೆಯ ವಿದ್ಯಾರ್ಥಿ ಪ್ರತಿನಿಧಿಗಳನ್ನೊಳಗೊಂಡ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯನ್ನು ಈ ನಿಯಮಗಳು ಜಾರಿಯಾದ ದಿನಾಂಕದಿಂದ 6 ತಿಂಗಳ ಒಳಗೆ ರಚಿಸಬೇಕು. (ನಿಯಮ 13)
* ಮಕ್ಕಳ ಹಕ್ಕುಗಳ ಹಿತರಕ್ಷಣೆಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಮತ್ತು ರಾಜ್ಯಮಟ್ಟದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವನ್ನು ರಚಿಸಲು ಮತ್ತು ತೊಂದರೆಗೊಳಗಾದ ವ್ಯಕ್ತಿಗಳು ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. (ಸೆಕ್ಷನ್ 31, 32). ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಆಯೋಗ ರಚನೆಯಾಗಿದ್ದು ಈ ಆಯೋಗದೆದುರು ದೂರುಗಳನ್ನು ದಾಲಿಸಬಹುದು(ನಿಯಮ21)
* ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಸಲಹಾ ಮಂಡಳಿಗಳ ರಚನೆ, ನಿರ್ವಹಿಸಬೇಕಾದ ಕೆಲಸ ಕಾರ್ಯಗಳ ವಿವರ (ಸೆಕ್ಷನ್ 33, 34) ರಾಜ್ಯಮಟ್ಟದ ಸಲಹಾ ಮಂಡಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಕಾರ್ಯದರ್ಶಿಯವರು ಉಪಾಧ್ಯಕ್ಷರಾಗಿರುತ್ತಾರೆ. ಸಾರ್ವಜನಿಕ ಶಿಕ್ಷಣ ಆಯುಕ್ತರು ಕಾರ್ಯದರ್ಶಿಯಾಗಿರುತ್ತಾರೆ.

 (ನಿಯಮ 22)
* ಕಾಯಿದೆ ಉಲ್ಲಂಘನೆಗೆ ಕ್ರಮ: (ಸೆಕ್ಷನ್ 35 (1). ರಾಜ್ಯದಲ್ಲಿ ಕಾಯಿದೆ ಮತ್ತು ನಿಯಮಗಳ ಉಲ್ಲಂಘನೆಯ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಕ್ಷಮ ಪ್ರಾಧಿಕಾರಿಯಾಗಿರುತ್ತಾರೆ. (ನಿಯಮ 23)