Saturday 10 April 2021

ಪಠ್ಯಪುಸ್ತಕ ರಚನಾ ಕಾರ್ಯ


ಓಅಈ-2005  ಆಧಾರಿತ  ಪಠ್ಯಪುಸ್ತಕ ರಚನಾ ಕಾರ್ಯ
ಪ್ರೊ. ಜಿ.ಎಸ್. ಮುಚಿಡಂಬಡತ್ತಾಯ


ಮಾನವನ  ಅನುಭವದಲ್ಲಿ  ಸಕಲ  ಕ್ಷೇತ್ರಗಳಲ್ಲೂ  ಜ್ಞಾನವು ನಮ್ಮ  ನಿರೀಕ್ಷಣೆಗಿಂತ  ವೇಗವಾಗಿ  ಹೆಚ್ಚುತ್ತಿರುವುದರಿಂದ  ಹಾಗೂ ಸಾಮಾಜಿಕ ಹಾಗೂ ರಾಷ್ಟ್ರೀಯ ಆಶೋತ್ತರಗಳು ಬದಲಾಗುತ್ತಿರುವ ಈ  ಸಂದರ್ಭದಲ್ಲಿ  ಶಿಕ್ಷಣ  ಕ್ರಮವು  ಅವುಗಳಿಗೆ  ಸಕಾರಾತ್ಮಕವಾಗಿ ಸ್ಪಂದಿಸುವುದು ಪ್ರಗತಿಯ ಲಕ್ಷಣ. ಇಂದು ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪ್ರಗತಿ ಅಸಾಧಾರಣ ಗತಿಯಲ್ಲಿ ಮುಂದುವರಿಯುತ್ತಿದೆ. ಈ ಸಂದರ್ಭದಲ್ಲಿ ಶಿಕ್ಷಣದಲ್ಲಿ ಸೂಕ್ತ ಬದಲಾವಣೆಗಳನ್ನು ತರುವ ದಿಕ್ಕಿನಲ್ಲಿ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ದಿ ಇಲಾಖೆಯು ಐದು ವರ್ಷಗಳಿಗೊಮ್ಮೆ ಪಠ್ಯಕ್ರಮದಲ್ಲಿ ಸೂಕ್ತ ಬದಲಾವಣೆಯನ್ನು ಮಾಡುತ್ತಾ  ಬಂದಿದೆ.  ಈ  ನಿಟ್ಟಿನಲ್ಲಿ  ಓಅಈ -  2005  ಮಾಡಿರುವ ಶಿಫಾರಸುಗಳ  ಆಧಾರದಲ್ಲಿ  ಕರ್ನಾಟಕ  ಸರ್ಕಾರವು  ನೂತನ ಪಠ್ಯಕ್ರಮವನ್ನು ಜಾರಿಗೆ ತಂದಿದೆ.

ಓಅಈ - 2005 ಪಠ್ಯಕ್ರಮದ ಸಾಮಾನ್ಯ ಅಂಶಗಳು:
*  ಭಾರತೀಯ  ಸಂವಿಧಾನದಲ್ಲಿ  ಅಡಕವಾಗಿರುವ  ಮೌಲ್ಯಗಳನ್ನು ಎತ್ತಿಹಿಡಿಯುವುದು
*  ಪಠ್ಯಕ್ರಮದ  ಹೊರೆ  ಇಳಿಸುವುದು  
*  ಎಲ್ಲರಿಗೂ  ಗುಣಮಟ್ಟದ ಶಿಕ್ಷಣ
*  ವ್ಯವಸ್ಥಿತ ಬದಲಾವಣೆಗಳು
* ಸಾಮಾನ್ಯ ಶಾಲಾ ಪದ್ಧತಿ
* ಶಾಲೆಯ ಹೊರಗಿನ ಬದುಕಿಗೆ ಜ್ಞಾನ ಸಂಯೋಜನೆ.
* ಕಂಠಪಾಠ ವಿಧಾನದಿಂದ ಕಲಿಕೆಯನ್ನು ಬೇರ್ಪಡಿಸುವುದು.
*  ಕಲಿಕೆ  ಪಠ್ಯಪುಸ್ತಕ  ಕೇಂದ್ರಿಕೃತವಾಗದಂತೆ  ಮಕ್ಕಳ  ಒಟ್ಟಾರೆ ಬೆಳವಣಿಗೆಗೆೆ ಪ್ರೇರಕವಾಗುವುದು.
* ಜ್ಞಾನದ ಅಭಿವೃದ್ಧಿಗೆ ಕಲಿಕಾ ಅನುಭವಗಳನ್ನು ಬಳಸುವುದು.
* ತರಗತಿಯ ಪರಿಸರಕ್ಕೆ  ಹೊಂದಿಕೊಳ್ಳುವ ಪರೀಕ್ಷಾ ಪದ್ದತಿಗಳ ಬಳಕೆ.  
*  ದೇಶದ  ಪ್ರಜಾಸತ್ತಾತ್ಮಕ  ಆಯಕಟ್ಟಿನಲ್ಲಿ  ಸಮಸ್ಯೆಗಳ ಪರಿಹಾರ
* ಪ್ರಸ್ತುತ ಹಾಗೂ ಮುಂಬರುವ ದಿನಗಳಲ್ಲಿನ ಬೇಕುಗಳಿಗೆ ಶಿಕ್ಷಣವನ್ನು ರೂಪಿಸುವುದು
* ಸಂತಸದ ಕಲಿಕೆ ಮತ್ತು ಜ್ಞಾನದ ಸಂಯೋಜನೆ
* ಮಕ್ಕಳಿಂದಲೇ ಜ್ಞಾನವನ್ನು ಅಭಿವೃದ್ಧಿಪಡಿಸುವುದು

ಓಅಈ  -  2005  ಪಠ್ಯಕ್ರಮವನ್ನು  ಆಧರಿಸಿ  ಕರ್ನಾಟಕ  ರಾಜ್ಯ ಪಠ್ಯಕ್ರಮವನ್ನು ರಚಿಸಲಾಯಿತು. ಓಅಈ 2000 ನಲ್ಲಿ ಸೂಚಿಸಿರುವ 10 ಕೋರ್ ಅಂಶಗಳನ್ನು ಆಧರಿಸಿ ತಯಾರಿಸಲಾಗಿದೆ.

ಕರ್ನಾಟಕ ರಾಜ್ಯ ನೂತನ ಪಠ್ಯಕ್ರಮದ ಸಾಮಾನ್ಯ ಅಂಶಗಳು: (ಏಅಈ-2007)
* ವಿದ್ಯಾರ್ಥಿಗಳ ಅವಶ್ಯಕತೆ ಹಾಗೂ ಸಾಮಥ್ರ್ಯಗಳಿಗೆ ಪ್ರಾಮುಖ್ಯತೆ ನೀಡುವುದು
*   ಕಲಿಕೆಯಲ್ಲಿ ಹಿಂದುಳಿದಿರುವ, ಸಾಮಾನ್ಯ ಹಾಗೂ ಪ್ರತಿಭಾವಂತ ಮಕ್ಕಳ ಅವಶ್ಯಕತೆಗಳಿಗೆ ಆದ್ಯತೆ ನೀಡುವುದು
*  ಪ್ರಾಥಮಿಕ  ಹಂತದಲ್ಲಿ  ಶಾಲೆಯಿಂದ  ಹೊರಗುಳಿದವರ ಹಾಗೂ  ಹತ್ತನೇ  ತರಗತಿಯಲ್ಲಿ  ಅನುತ್ತೀರ್ಣಗೊಳ್ಳುವವರಿಗೆ ಗಮನ  ಕೊಡುವುದು
* 8  ನೇ  ತರಗತಿಯ  ನಂತರ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು
* ಪಠ್ಯೇತರ ವಿಷಯಗಳ ಮೌಲ್ಯಮಾಪನ, ಯೋಜನಾಕಾರ್ಯ, ಶ್ರೇಣಿ ನೀಡುವುದು ಮೌಖಿಕ ಪರೀಕ್ಷೆ  ನಡೆಸುವುದು  
*  ಹತ್ತನೇ  ತರಗತಿ  ಅಂತ್ಯದಲ್ಲಿ  ಸಾಮಾನ್ಯ ಪರೀಕ್ಷೆ
*  ತೆರೆದ  ಶಾಲೆ  ಹಾಗೂ  ಅನೌಪಚಾರಿಕ  ಶಾಲೆಗಳಿಗೆ ಅವಕಾಶ ಕಲ್ಪಿಸುವುದು
*   ಸೆಮಿಸ್ಟರ್ ಪದ್ಧತಿ
* ಮೌಲ್ಯಮಾಪನದ ವಿಧಾನ ಹಾಗೂ ಪರಿಣಾಮಗಳಿಗೆ ಗಮನ ಕೊಡುವುದು
* ಶಾಲಾ ಗುಣಮಟ್ಟ ಮೌಲ್ಯಾಂಕ ಆಧಾರಿತ ಶಾಲಾ ತಪಾಸಣೆ*  ಶಿಕ್ಷಕರಿಗೆ  ಸ್ವಯಂ  ಮೌಲ್ಯಮಾಪನ  ನಮೂನೆ  
*  ಭಾಷೆಗಳು, ಸಮಾಜ  ವಿಜ್ಞಾನ,  ವಿಜ್ಞಾನ,  ಗಣಿತ,  ಆರೋಗ್ಯ  ಹಾಗೂ  ದೈಹಿಕ ಶಿಕ್ಷಣ  ಮತ್ತು  1  ರಿಂದ  4  ನೇ  ತರಗತಿವರೆಗೆ  ಪರಿಸರ  ವಿಜ್ಞಾನ ಗಳನ್ನು ಪಠ್ಯ ವಿಷಯಗಳಾಗಿ ಬೋಧಿಸಲಾಗುತ್ತಿದೆ.

ಭಾಷೆಗಳನ್ನು ರಾಜ್ಯದಲ್ಲಿ ಪ್ರಥಮ ಭಾಷೆಗಳಾಗಿ ಬೋಧಿಸಲಾಗುತ್ತಿದೆ. ರಾಜ್ಯದಲ್ಲಿ  ತ್ರ್ರಿಭಾಷಾ  ಸೂತ್ರದ  ನಿಯಮವನ್ನು  ಪಾಲಿಸಲಾಗುತ್ತಿದ್ದು  ವಿದ್ಯಾರ್ಥಿಗಳಿಗೆ  ಪ್ರಥಮ,  ದ್ವಿತೀಯ  ಮತ್ತು  ತೃತೀಯ  ಭಾಷೆಗಳ ಸಂಯೋಜನೆಯನ್ನು ಈ ಕೆಳಕಂಡಂತೆ ನೀಡಲಾಗುತ್ತಿದೆ.

5ನೇ ತರಗತಿಯಿಂದ ಕನ್ನಡ ಮತ್ತು ಆಂಗ್ಲ ಭಾಷೆಯನ್ನು ದ್ವಿತೀಯ ಭಾಷೆಯಾಗಿ ಕಲಿಯಲು ಅವಕಾಶವಿದೆ. 6ನೇ ತರಗತಿಯಿಂದ 10 ನೇ ತರಗತಿಯವರೆಗೆ ಕನ್ನಡ , ಆಂಗ್ಲ, ಹಿಂದಿ, ಸಂಸ್ಕೃತ, ಅರೆಬಿಕ್, ಪರ್ಷಿಯನ್, ತುಳು, ಉರ್ದು ಮತ್ತು ಕೊಂಕಣಿಯನ್ನು  ತೃತೀಯ ಭಾಷೆಯಾಗಿ ಕಲಿಯಲು ಅವಕಾಶವಿದೆ.

1 ರಿಂದ 4 ನೇ ತರಗತಿವರೆಗೆ ಗಣಿತ ಮತ್ತು ಪರಿಸರ ವಿಜ್ಞಾನ ಹಾಗೂ 5 ರಿಂದ 10 ನೇ ತರಗತಿವರೆಗೆ ಗಣಿತ, ವಿಜ್ಞಾನ ಮತ್ತು ಸಮಾಜ  ವಿಜ್ಞಾನ  ಕೋರ್  ವಿಷಯಗಳು  ಇರುತ್ತವೆ.  ಈ  ಕೋರ್ ವಿಷಯಗಳನ್ನು  ಕನ್ನಡ,  ಇಂಗ್ಲಿಷ್,  ಹಿಂದಿ,  ಉರ್ದು,  ತಮಿಳು, ತೆಲುಗು, ಮರಾಠಿ 7 ಮಾಧ್ಯಮಗಳಲ್ಲಿ ಇರುತ್ತವೆ.

ಪಠ್ಯೇತರ ವಿಷಯಗಳು - ಜೀವನ ಕೌಶಲ್ಯಗಳು, ಮೌಲ್ಯ ಶಿಕ್ಷಣ, ಯೋಗ ಶಿಕ್ಷಣ ಹಾಗೂ ಇತರ ಲಲಿತ ಕಲೆಗಳು
ರಾಜ್ಯ  ನೂತನ  ಪಠ್ಯಕ್ರಮ  ಆಧರಿಸಿ  ನೂತನ  ಪಠ್ಯವಸ್ತುವನ್ನು ತಯಾರಿಸಲಾಗಿದೆ.  ನೂತನ  ಪಠ್ಯವಸ್ತುವಿನಲ್ಲಿ  ಭಾಷೆಯಲ್ಲಿ ಆಲಿಸುವುದು,  ಮಾತನಾಡುವುದು,  ಓದುವುದು,  ಬರೆಯುವುದು ಹಾಗೂ  ಆಕರ  ಗ್ರಂಥಗಳಿಂದ  ವಿಷಯ  ಸಂಗ್ರಹಣೆಯಂತಹ ಕ್ಷೇತ್ರವಾರು ಸಾಮಥ್ರ್ಯಗಳಿಗೆ ಒತ್ತು ನೀಡಲಾಗಿದೆ.

5 ರಿಂದ 10 ನೇ ತರಗತಿವರೆಗೆ ಸಾಮಾನ್ಯ ವಿಜ್ಞಾನ ವಿಷಯದ ಹೆಚ್ಚಿನ ಅಂಶಗಳು ಎನ್.ಸಿ. ಎಫ್. ಅನ್ನು ಆಧರಿಸಿದ್ದು ಅಂತರ್ಗತ ವಿಧಾನವನ್ನು  ಬಳಸಿರುವುದಲ್ಲದೇ,  ವಿಷಯವ್ಯಾಪ್ತಿ  ತರಗತಿವಾರು ವಿಸ್ತರಿಸುವಂತೆ  ಸಿದ್ಧಪಡಿಸಲಾಗಿದೆ  ಹಾಗೆಯೇ  ವಿಜ್ಞಾನ ಪಠ್ಯಪುಸ್ತಕದಲ್ಲಿ ಪ್ರಯೋಗಗಳನ್ನು  ಹಾಗೂ  ಚಟುವಟಿಕೆಗಳನ್ನು ಆಧರಿಸಿದ ಕಲಿಕೆಯು ರಚನಾತ್ಮಕ ವಿಧಾನದಲ್ಲಿ ಇರುವಂತೆ ಗಮನ ಹರಿಸಿದೆ.

ಗಣಿತ  ಪಠ್ಯವಸ್ತು  ಗಣಿತದ  ಪರಿಕಲ್ಪನೆಯನ್ನು  ಪ್ರತಿ ಹಂತದಲ್ಲೂ ಅಥರ್ೈಸುವ ಸಾಮಥ್ರ್ಯವನ್ನು ಆಧರಿಸಿ ಸಿದ್ಧಪಡಿಸಿದೆ. ಎನ್ಸಿಇಆರ್ಟಿ  ಪಠ್ಯವಸ್ತುವಿನಲ್ಲಿನ  ಹೆಚ್ಚಿನ  ಅಂಶಗಳನ್ನು ಗಣಿತ  ಪಠ್ಯವಸ್ತುವಿನಲ್ಲಿ  ಅಳವಡಿಸಲಾಗಿದೆ.  ವಿಜ್ಞಾನ  ಹಾಗೂ ಗಣಿತ  ವಿಷಯದ  ಪಠ್ಯಪುಸ್ತಕಗಳಲ್ಲಿ  ಆಯಾ ಪಾಠಗಳಲ್ಲಿ ಸಂದರ್ಭಕ್ಕನುಗುಣವಾಗಿ  ಆಯಾ  ಕ್ಷೇತ್ರಗಳಲ್ಲಿ ಭಾರತೀಯರ ಕೊಡುಗೆಗಳ  ಬಗೆಗಿನ  ಮಾಹಿತಿಗೆ  ಹೆಚ್ಚು  ಒತ್ತು ನೀಡಲಾಗಿದೆ. ಹಾಗೆಯೇ  ಗಣಿತ ಪಠ್ಯಪುಸ್ತಕದಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಸಾಮಥ್ರ್ಯಕ್ಕೆ  ಹೆಚ್ಚು  ಒತ್ತು  ನೀಡಲಾಗಿದೆ.  ವಾಸ್ತವ  ಜೀವನಕ್ಕೆ ಸಂಬಂಧಿಸಿದ  ಉದಾಹರಣೆಗಳನ್ನು  ಹೆಚ್ಚಾಗಿ  ನೀಡಲಾಗಿದೆ. ಪಾಠಕ್ಕೆ  ಸಂಬಂಧಿಸಿದಂತೆ  ವಿವಿಧ  ಸ್ಥಳಗಳಿಗೆ  ಭೇಟಿ  ನೀಡಲು ಅವಕಾಶಗಳನ್ನು ಕಲ್ಪಿಸಿದೆ.

1  ರಿಂದ  4  ನೇ  ತರಗತಿವರೆಗೆ  ಪರಿಸರ  ಅಧ್ಯಯನವನ್ನು ಪ್ರತ್ಯೇಕವಾಗಿ ಬೋಧಿಸಲಾಗುತ್ತಿದೆ. ಏಟಿಠತಿಟಿ ಣಠ ಗಟಿಞಟಿಠತಿಟಿ ತತ್ವದ ಆಧಾರದ ಮೇಲೆ ಆರಂಭದಲ್ಲಿ ತಾಲ್ಲೂಕು, ಜಿಲ್ಲೆ ಹಾಗೂ ಸುತ್ತಲು ಜಿಲ್ಲೆಗಳ ಪರಿಸರ, ಇತಿಹಾಸ ಇತ್ಯಾದಿ ವಿಷಯಗಳನ್ನು ಇರುವಂತೆ ಪರಿಸರ ಅಧ್ಯಯನ ಪಠ್ಯವಸ್ತುವನ್ನು ಸಿದ್ದಪಡಿಸಲಾಗಿದೆ.

“Education of a country must be rooted in its culture” – World Education Commission Report (Treasure Within).  ಈ  ನಿಟ್ಟಿನಲ್ಲಿ  5  ರಿಂದ  10  ನೇ ತರಗತಿವರೆಗಿನ  ಸಮಾಜ  ವಿಜ್ಞಾನ  ಪಠ್ಯಪುಸ್ತಕಗಳಲ್ಲಿ  ವಿಷಯದ ಹೆಚ್ಚಿನ  ಅಂಶಗಳು  ಸ್ಥಳೀಯ  ಅಗತ್ಯತೆಗಳನ್ನು  ಆಧರಿಸಿ  ಸ್ಥಳೀಯ ಇತಿಹಾಸಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಸಮಾಜ ವಿಜ್ಞಾನದಲ್ಲಿ 1  ರಿಂದ  4  ತರಗತಿಯಲ್ಲಿ  ಜಿಲ್ಲೆ,  ರಾಜ್ಯ,  ರಾಷ್ಟ್ರ,  5  ರಿಂದ  7 ತರಗತಿಯಲ್ಲಿ  ರಾಜ್ಯ,  ರಾಷ್ಟ್ರ,  8  ರಿಂದ  10  ತರಗತಿಯಲ್ಲಿ  ಜಿಲ್ಲೆ,

ರಾಜ್ಯ, ರಾಷ್ಟ್ರ ಅಂತರಾಷ್ಟ್ರೀಯ ಮಾಹಿತಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. 5 ನೇ ತರಗತಿಯಲ್ಲಿ ಪ್ರತಿ ಭೌಗೋಳಿಕವಾರು ವಿಭಾಗಕ್ಕೆ ಒಂದು ಪ್ರತ್ಯೇಕ ಪಠ್ಯಪುಸ್ತಕ ತಯಾರಿಸಲಾಗಿದೆ. ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಭೂಪಟವನ್ನು ಓದುವುದು ಹಾಗೂ ಬರೆಯುವ ಕೌಶಲ್ಯಕ್ಕೆ ಒತ್ತು ಕೊಡಲಾಗಿದೆ.

ವಿಷಯಗಳನ್ನು ಬೋಧಿಸುವಾಗ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಅಗತ್ಯವಿರುವ ಮಾರ್ಗದಶರ್ಿ ಸೂಚನೆಗಳೊಂದಿಗೆ ಮೌಲ್ಯಶಿಕ್ಷಣದ ಪಠ್ಯವಸ್ತುವನ್ನು ಸಿದ್ದಪಡಿಸಲಾಗಿದೆ.

ಈಗಿನ  ಪಠ್ಯವಸ್ತುವಿನಲ್ಲಿ  ಯೋಗಶಿಕ್ಷಣವನ್ನು  ಪ್ರತ್ಯೇಕಗೊಳಿಸಿರುವುದರಿಂದ  ಯೋಗ  ಪಠ್ಯವಸ್ತುವನ್ನು  ರಚಿಸಲಾಗಿದೆ.  ಹಾಗೆಯೇ ಪಠ್ಯೇತರ ವಿಷಯಗಳಾದ ಜೀವನ ಕೌಶಲ ಮತ್ತು ಇತರ ಲಲಿತಕಲೆ ವಿಷಯಗಳಾದ ಸಂಗೀತ, ನಾಟಕ, ನೃತ್ಯ, ಚಿತ್ರಕಲೆ ಪ್ರತ್ಯೇಕವಾದ ಪಠ್ಯವಸ್ತುವನ್ನು ರಚಿಸಲಾಗಿದೆ.

ನೂತನ ಪಠ್ಯಪುಸ್ತಕಗಳಲ್ಲಿ ಅಳವಡಿಸಿರುವ ನೂತನ ವಿಧಾನಗಳನ್ನು ಅರ್ಥೈಸಲು ಶಿಕ್ಷಕರಿಗೆ ಸಹಾಯವಾಗುವಂತೆ ಪಠ್ಯವಿಷಯಗಳಲ್ಲಿ ಶಿಕ್ಷಕರಿಗೆ  ಸಂಪನ್ಮೂಲ  ಪುಸ್ತಕಗಳು  ಹಾಗೂ  ನೂತನ  ಪಠ್ಯಪುಸ್ತಕಗಳಿಗೆ  ಪೂರಕವಾಗಿ  ಮಕ್ಕಳಿಗೆ  ಅಭ್ಯಾಸ  ಪುಸ್ತಕಗಳನ್ನು  ತಯಾರಿಸಿ ಹೊರತರಲಾಗುತ್ತಿದೆ.

2012-13  ನೇ  ಸಾಲಿಗೆ  5  ಮತ್ತು  8  ನೇ  ತರಗತಿಗಳ  ಪಠ್ಯಪುಸ್ತಕಗಳನ್ನು  ಹೊರತರಲಾಗಿದೆ.  ಈ  ಪಠ್ಯಪುಸ್ತಕಗಳನ್ನು  ವಿವಿಧ ಹಂತಗಳಲ್ಲಿ ಪರಿಷ್ಕರಣೆ ಮಾಡಲಾಗಿದೆ. ಕರಡು ಪ್ರತಿ ಸಿದ್ಧಗೊಂಡ ಕೂಡಲೇ ರಾಜ್ಯದ ಎಲ್ಲಾ ಡಯಟ್ ಹಾಗೂ ಸಿಟಿಇಗಳಿಗೆ ಕಳುಹಿಸಿ ಶಿಕ್ಷಣ ತಜ್ಞರಿಂದ, ಶಿಕ್ಷಕರುಗಳಿಂದ ಮತ್ತು ಪೋಷಕರಿಂದ ಸಲಹೆಗಳನ್ನು ಪಡೆಯಲಾಗಿದೆ. ಸಾರ್ವಜನಿಕ ಶಿಕ್ಞಣ ಇಲಾಖೆಯ ಆಯುಕ್ತರು ಪಠ್ಯಪುಸ್ತಕಗಳು  ಎನ್ಸಿಎಫ್  2005  ರ  ಪ್ರಕಾರ  ಇರುವವೇ  ಎಂಬ  ಅಂಶವನ್ನು  ಖಾತ್ರಿಪಡಿಸಲು  ಡಿಎಸ್ಇಆರ್ಟಿಯ  ವತಿಯಿಂದ ಪರಿಶೀಲನೆ ನಡೆಸಿ ಸಲ್ಲಿಸಿರುವ ವರದಿಗಳ ಅಂಶಗಳನ್ನೂ ಅಳವಡಿಸಲಾಗಿದೆ. ಹಾಗೂ ಕರ್ನಾಟಕ ಸರ್ಕಾರ ನೇಮಿಸಿದ್ದ ವಿವಿಧ ವಿಷಯದಲ್ಲಿ 35 ತಜ್ಞರನ್ನೊಳಗೊಂಡ ಸಂಪಾದಕೀಯ ಮಂಡಳಿಯು ಸಹ ಕೂಲಂಕುಷವಾಗಿ ಪರಿಶೀಲಿಸಿ ನೀಡಿರುವ ವರದಿಯ ಅಂಶಗಳನ್ನೂ ಸೇರಿಸಿ ಪಠ್ಯಪುಸ್ತಕಗಳನ್ನು ಅಂತಿಮವಾಗಿ ಪರಿಷ್ಕರಿಸಲಾಗಿದೆ. 2013-14 ನೇ ಸಾಲಿಗೆ 1, 2, 6 ಮತ್ತು 9 ನೇ ತರಗತಿಗಳ ಪಠ್ಯಪುಸ್ತಕಗಳನ್ನು ಮತ್ತು 2014-15 ನೇ ಸಾಲಿಗೆ 3, 4, 7 ಮತ್ತು 10 ನೇ ತರಗತಿ ಪಠ್ಯಪುಸ್ತಕಗಳನ್ನು ಹೊರತರಲಾಗುವುದು.