Friday 2 April 2021

ಪ್ರೌಢಶಿಕ್ಷಣ ಶೈಕ್ಷಣಿಕ ಮಾಹಿತಿ ವ್ಯವಸ್ಥೆ

 


 ಪ್ರೌಢಶಿಕ್ಷಣ ಶೈಕ್ಷಣಿಕ ಮಾಹಿತಿ ವ್ಯವಸ್ಥೆ
ಹಿನ್ನೆಲೆ:
ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಂಖ್ಯೆಯ ದೃಷ್ಟಿಯಿಂದ ಕರ್ನಾಟಕ ರಾಜ್ಯದಲ್ಲಿ ಒಂದು ಬೃಹತ್ ಪ್ರಮಾಣದ ಶಿಕ್ಷಣ ವ್ಯವಸ್ಥೆಯಾಗಿ ರೂಪುಗೊಂಡಿದೆ..  ರಾಜ್ಯದ ಪ್ರೌಢಶಾಲೆಗಳಿಗೆ ಮೂಲಭೂತ ಸೌಕರ್ಯಗಳು ಮತ್ತು ಶಿಕ್ಷಕರು, ಶಿಕ್ಷಕರಿಗೆ ಗುಣವೃದ್ಧಿ  ಕಾರ್ಯಕ್ರಮಗಳು,  ವಿದ್ಯಾರ್ಥಿಗಳಿಗೆ  ಪಠ್ಯಪುಸ್ತಕಗಳು, ಸಮವಸ್ತ್ರ,  ಮಧ್ಯಾಹ್ನದ  ಬಿಸಿಯೂಟ  ಮುಂತಾದ  ಪ್ರೋತ್ಸಾಹಕಗಳನ್ನು ಸಮರ್ಥವಾಗಿ ಪೂರೈಸಲು, ಬುನಾದಿ ರೂಪದ ಮಾಹಿತಿಗಳ ಅವಶ್ಯಕತೆ ಬಹಳಷ್ಟಿದೆ. ಈ ತೆರನಾದ ಮಾಹಿತಿಗಳು ಲಭ್ಯವಿಲ್ಲದಿದ್ದಲ್ಲಿ ರಾಜ್ಯದ 33 ಶೈಕ್ಷಣಿಕ  ಜಿಲ್ಲೆಗಳ,  202    ಶೈಕ್ಷಣಿಕ  ವಲಯಗಳ,  2708  ಸಮೂಹ ಸಂಪನ್ಮೂಲ  ಕೇಂದ್ರಗಳ  ವ್ಯಾಪ್ತಿಯ  ಶಾಲೆಗಳ,  ಶಾಲಾ  ಸಂಬಂಧಿ ಸೌಲಭ್ಯಗಳ ಪೂರೈಕೆ ಮತ್ತು ಮೇಲ್ವಿಚಾರಣೆ ಕಷ್ಟ ಸಾಧ್ಯ.   ರಾಜ್ಯ ಶಿಕ್ಷಣ ವ್ಯವಸ್ಥೆಗೆ  ಅಡಿಪಾಯ  ರೂಪದ  ಮಾಹಿತಿಗಳ  ಸಂಗ್ರಹಣೆ,  ಪರಿಷ್ಕರಣೆ, ಕ್ರೋಡೀಕರಣ  ಹಾಗೂ  ತಾಲ್ಲೂಕು/ಜಿಲ್ಲಾವಾರು  ಉಪಯುಕ್ತತೆಯೇ ಜಿಲ್ಲಾ ಶೈಕ್ಷಣಿಕ ಮಾಹಿತಿ ವ್ಯವಸ್ಥೆ.

ಉದ್ದೇಶ:
ಪ್ರೌಢಶಿಕ್ಷಣ    ಶೈಕ್ಷಣಿಕ  ಮಾಹಿತಿ  ವ್ಯವಸ್ಥೆಯು  2007-08  ರಿಂದ ಕಾರ್ಯನಿರತವಾಗಿದ್ದು ಪ್ರತೀ ವರ್ಷ ಸರ್ಕಾರದ ಶೈಕ್ಷಣಿಕ ಯೋಜನೆಗಳಿಗೆ, ಕಾರ್ಯಕ್ರಮಗಳ ಅನುಷ್ಠಾನಕ್ಕೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಕ್ಕೆ ಉಪಯುಕ್ತವಾದ  ಮಾಹಿತಿಗಳನ್ನು  ಒದಗಿಸುತ್ತಾ  ಬಂದಿದೆ.    ರಾಜ್ಯದ ಶಿಕ್ಷಣ ಸ್ಥಿತಿಗತಿಯ ಅರಿವಿಗೆ, ಶಾಲಾ ಶಿಕ್ಷಣದ ಸಾರ್ವತ್ರೀಕರಣದ ಗುರಿಗಳ ಸಿದ್ಧಿಗೆ ಈ ಮಾಹಿತಿ ಅತ್ಯಮೂಲ್ಯ.  ರಾಜ್ಯ ಸರ್ಕಾರದ ಶಿಕ್ಷಣ ವಿಭಾಗದ ಹಾಗೂ  ರಾಜ್ಯ  ಶಿಕ್ಷಣ  ವ್ಯವಸ್ಥೆಯಲ್ಲಿ  ಆಸಕ್ತಿ  ಹೊಂದಿರುವವರು,  ನೀತಿ ನಿರೂಪಕರು,  ಅಧಿಕಾರಿಗಳು,  ಯೋಜನಾಕಾರರು,  ಆಡಳಿತಗಾರರು, ಸಂಶೋಧನಾಕಾರರು,  ಅಂಕಿಅಂಶ  ನಿಷ್ಣಾತರು  ಮತ್ತು  ಪ್ರಬುದ್ಧ ಸಾರ್ವಜನಿಕರಿಗೆ  ಸರಿಯಾದ,  ವ್ಯವಸ್ಥಿತವಾದ  ಅಂಕಿಅಂಶಗಳನ್ನು ಒದಗಿಸುವುದೇ ಈ ಮಾಹಿತಿ ಸಂಗ್ರಹಣೆಯ ಮೂಲ ಉದ್ದೇಶ.

ಅನುಷ್ಠಾನ:
 ಪ್ರತೀ  ವರ್ಷ  ಸೆಪ್ಟೆಂಬರ್  30  ರಲ್ಲಿದ್ದಂತೆ  ಮಾಹಿತಿಯನ್ನು ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಿಂದ ಪಡೆಯಲಾಗುತ್ತದೆ. ರಾಜ್ಯಹಂತದಲ್ಲಿ ಎಲ್ಲಾ  ಜಿಲ್ಲೆಗಳ    ಡಿ.ವೈ.ಪಿ.ಸಿ,  ಕಂಪ್ಯೂಟರ್  ಪ್ರೋಗ್ರಾಮರ್,  ಎ.ಪಿ.ಸಿ ಇವರನ್ನೊಳಗೊಂಡು  ಒಂದು  ಕಾರ್ಯಾಗಾರವನ್ನು  ಮಾಡಲಾಗುತ್ತದೆ. ಈ  ಕಾರ್ಯಾಗಾರದಲ್ಲಿ  ಮಾಹಿತಿ  ಸಂಗ್ರಹಣೆಯ  ನಮೂನೆಯ ರೂಪುರೇಷೆಗಳನ್ನು  ಚಚರ್ಿಸಿ  ಅಂತಿಮಗೊಳಿಸಲಾಗುವುದು.    ನಂತರ ನಿಗದಿತ  ನಮೂನೆಯನ್ನು    ಮುದ್ರಣ  ಮಾಡಿಸಲಾಗುತ್ತದೆ.  ಮುದ್ರಿತ ನಮೂನೆಗಳನ್ನು  ಶಾಲೆಗಳ ಸಂಖ್ಯೆಗಳಿಗೆ ಅನುಗುಣವಾಗಿ ಆಯಾಯ ತಾಲ್ಲೂಕುಗಳಿಗೆ ಸರಬರಾಜು ಮಾಡಲಾಗುವುದು.

ಶಾಲಾ ಹಂತದ ತರಬೇತಿ: ದಿ: 05-11-2011 ರಂದು ದೂರ ಸಂಪರ್ಕ ವ್ಯವಸ್ಥೆಯಿಂದ  ರಾಜ್ಯದ  ಎಲ್ಲಾ  ತಾಲ್ಲೂಕು  ಸಂಪನ್ಮೂಲ  ಕೇಂದ್ರದಲ್ಲಿ  ತಾಲ್ಲೂಕಿನ ಪ್ರತೀ ಶಾಲೆಯ ಮುಖ್ಯೋಪಾಧ್ಯಾಯರಿಗೆ  ಶಾಲಾ ಹಂತದಲ್ಲಿ  ತರಬೇತಿಯನ್ನು  ನೀಡುವುದು.  ಭರ್ತಿಮಾಡಿದ  ನಮೂನೆಗಳನ್ನು ತಾಲ್ಲೂಕು  ತಂಡವು  ಶೇ.100ರಷ್ಟು  ಪರಿಶೀಲಿಸಿ  ಕ್ರೋಡೀಕರಿಸುವುದು. ಈ  ಸಾಲಿನಲ್ಲಿ  ಭರ್ತಿಮಾಡಿದ  ಶಾಲಾ  ನಮೂನೆಗಳನ್ನು  ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ದೃಢೀಕರಿಸುವುದು. ನಂತರ ಜಿಲ್ಲಾಹಂತದಲ್ಲಿ ಎಲ್ಲಾ    ತಾಲ್ಲೂಕಿನ  ನಮೂನೆಗಳನ್ನು  ಕ್ರೋಡೀಕರಿಸಿ  ಶೇ.25ರಷ್ಟನ್ನು ಪರಿಶೀಲಿಸುವುದು.

ನಮೂನೆಗಳ ಗಣಕೀಕರಣ:
ಭರ್ತಿಮಾಡಿದ  ನಮೂನೆಗಳನ್ನು  ತಾಲ್ಲೂಕು  ಹಂತದಲ್ಲೇ  ಅನ್ ಲೈನ್  ಮುಖಾಂತರ    ಗಣಕೀಕರಣಗೊಳಿಸಲಾಗುವುದು.  ಅನ್ ಲೈನ್    ತಂತ್ರಾಂಶ   ನಲ್ಲಿ  ಶಾಲಾವಾರು ಗಣಕೀರಣ ಮಾಡಬಹುದಾಗಿದೆ. ಇದಕ್ಕೆ ಅವಶ್ಯವಿರುವ ತರಬೇತಿಯನ್ನು ಎಲ್ಲಾ  ಸಂಸ್ಥೆಗಳ  ಮುಖ್ಯಸ್ಥರಿಗೆ  ನೀಡಲಾಗುವುದು.  ಗಣಕೀಕರಣ ಸಂದರ್ಭದಲ್ಲಿ  ತಮ್ಮ  ವ್ಯಾಪ್ತಿಯ  ಶಾಲೆಗಳ  ಮಾಹಿತಿಯನ್ನು ತಪ್ಪಿಲ್ಲದೆ  ಗಣಕೀಕರಣಗೊಳಿಸುವುದು  ಸಂಬಂಧಪಟ್ಟ  ಸಿ.ಆರ್.ಪಿಗಳ ಜವಾಬ್ದಾರಿಯಾಗಿರುತ್ತದೆ.  

ಕ್ರೋಡೀಕರಣ:
ಗಣಕೀಕರಣಗೊಂಡ  ಮಾಹಿತಿಯನ್ನು  ತಾಲ್ಲೂಕು  ಹಂತದಿಂದ ಪಡೆದುಕೊಂಡು  ಜಿಲ್ಲಾಹಂತದಲ್ಲಿ  ಕ್ರೋಡೀಕರಿಸಲಾಗುವುದು.  ಕ್ರೋಡೀಕೃತ ಮಾಹಿತಿಯನ್ನು ಪರಿಶೀಲಿಸಿ ಪ್ರಮಾಣೀಕರಿಸಬೇಕಾಗಿರುತ್ತದೆ. ಜಿಲ್ಲಾಹಂತದ  ದೃಢೀಕೃತ  ಮಾಹಿತಿಯನ್ನು  ರಾಜ್ಯ  ಕಛೇರಿಗೆ ಸಲ್ಲಿಸಲಾಗುವುದು.

ಈ  ರೀತಿ  ಎಲ್ಲಾ  ಜಿಲ್ಲೆಗಳಿಂದ  ಪಡೆದ  ಮಾಹಿತಿಯನ್ನು  ರಾಜ್ಯ ಹಂತದಲ್ಲಿ  ಕ್ರೋಡೀಕರಣಗೊಳಿಸಿ  ಮಾನವ  ಸಂಪನ್ಮೂಲ  ಅಭಿವೃದ್ಧಿ ಇಲಾಖೆಗೆ  ಸಲ್ಲಿಸಲಾಗುವುದು  ಹಾಗೂ  ಇಲಾಖಾ  ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು.  ಈ  ಅಂಕಿಅಂಶಗಳನ್ನು  ಮುಂದೆ  ಕೈಗೊಳ್ಳುವ ಇಲಾಖೆಯ ಎಲ್ಲಾ ಕಾರ್ಯಕ್ರಮಗಳ ಯೋಜನೆ, ಅನುಷ್ಠಾನ ಹಾಗೂ ನಿರ್ವಹಣಾ  ಹಂತದಲ್ಲಿ  ಬಳಸಲಾಗುವುದು.  ಈ  ಸಾಲಿನಲ್ಲಿ  ನಮೂನೆ ಭರ್ತಿ ಮಾಡುವ ಹಂತದಲ್ಲಿ ಪರಿಗಣಿಸಬೇಕಾದ ಮುಖ್ಯ ಅಂಶಗಳು::

ಸಾಮಾನ್ಯ ಸೂಚನೆ:
ಎಲ್ಲಾ ಪ್ರೌಢ ಹಾಗೂ ಸಂಯುಕ್ತ ಕಿರಿಯ ಕಾಲೇಜುಗಳು (ಸರ್ಕಾರಿ, ಅನುದಾನಿತ,  ಅನುದಾನರಹಿತ  ಹಾಗೂ  ಕೇಂದ್ರ  ಸರ್ಕಾರದ  ಮಾನ್ಯತೆ ಪಡೆದ  ಸರ್ಕಾರಿ,  ಅನುದಾನಿತ,  ಅನುದಾನರಹಿತ  ಶಾಲೆಗಳಿಂದ ಸಹ  ಮಾಹಿತಿ  ಸಂಗ್ರಹಿಸುವುದು.)  ತರಗತಿಗಳು/ವಿಭಾಗಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಕಡ್ಡಾಯವಾಗಿ ಒದಗಿಸುವುದು.

1.  ಎಲ್ಲಾ  ಶಾಲೆಗಳ  ಮಾಹಿತಿಗಳನ್ನು  ನೀಡುವುದು  (ರಾಜ್ಯ  ಸರ್ಕಾರದ ಪಠ್ಯಕ್ರಮ  ಅನುಸರಿಸುತ್ತಿರುವ  ಎಲ್ಲಾ  ಸರ್ಕಾರಿ/ಅನುದಾನಿತ/ ಅನುದಾನರಹಿತ  ಶಾಲೆಗಳು,  ಕೇಂದ್ರಿಯ  ವಿದ್ಯಾಲಯ/ಭೂಸೇನಾ ಪಠ್ಯಕ್ರಮ/ವಿಶೇಷ ಅವಶ್ಯಕತೆಯುಳ್ಳ ಮಕ್ಕಳ ಶಾಲೆಗಳು
2.  ಪ್ರೌಢಶಾಲೆ/ಪದವಿಪೂರ್ವ  ಕಾಲೇಜುಗಳಾಗಿದ್ದಲ್ಲಿ  8  ರಿಂದ  10 ಅಥವಾ ಹಿರಿಯ ತರಗತಿಯವರೆವಿಗೆ ಮಾಹಿತಿಯನ್ನು ಒದಗಿಸುವುದು.
3. ಎಲ್ಲಾ ಮಾಹಿತಿಗಳನ್ನು ಶಾಲೆಯಲ್ಲಿರುವ ದಾಖಲೆವಹಿಗಳು ಹಾಗೂ ಇತರೆ ಇಲಾಖಾ ದಾಖಲೆಗಳಿಂದ ಪಡೆದು ಪರಿಶೀಲಿಸಿ ಮಾಹಿತಿಯನ್ನು ನಮೂನೆಯಲ್ಲಿ ನಿಖರವಾಗಿ ಭರ್ತಿಮಾಡುವುದು.
4.  ಮಾಹಿತಿಯನ್ನು  ಭರ್ತಿಮಾಡುವಾಗ  ಹಿಂದೂ  ಅರೇಬಿಕ್ ಸಂಖ್ಯೆಗಳನ್ನು  ಮತ್ತು  ಆಂಗ್ಲ  ಭಾಷೆಯಲ್ಲಿ  ಬರೆಯುವಾಗ  ಅಂಕನ್ನು ಬಳಸಬೇಕು.
5. ನಮೂನೆಗಳನ್ನು ಚಿತ್ತು ಮಾಡುವುದು, ತಿದ್ದುವುದು, ಹೊಡೆದುಹಾಕಿ ಬರೆಯುವಂತಿಲ್ಲ,  ಸರಿಯಾದ  ಮಾಹಿತಿಯನ್ನು  ಸಂಗ್ರಹಿಸಿದ  ನಂತರ ಮಾಹಿತಿಯನ್ನು  ನಮೂನೆಗಳಿಗೆ  ವರ್ಗಾಯಿಸಬೇಕು.    ತಪ್ಪಿಲ್ಲದೆ ಸರಿಯಾಗಿ  ಮಾಹಿತಿಯನ್ನು  ಭರ್ತಿಮಾಡಿರುವ  ನಮೂನೆಗಳನ್ನು ಶುಭ್ರವಾಗಿ ಹಿಂದಿರುಗಿಸಬೇಕು.
6.  ನಮೂನೆಯಲ್ಲಿನ  ಎಲ್ಲಾ  ಐಟಂಗಳನ್ನು  ಪೂರ್ತಿಯಾಗಿ ಭರ್ತಿಮಾಡುವುದು.    ಯಾವುದನ್ನೂ  ಖಾಲಿ  ಬಿಡಬಾರದು. (ಸೂಚನಗಳನ್ವಯ ಅನ್ವಯಿಸುವುದಿಲ್ಲವೆಂಬುದನ್ನು ಹೊರತುಪಡಿಸಿ)
7.  ಈ  ನಮೂನೆಗಳನ್ನು  ತರಬೇತಿಗೆ  ಹಾಜರಾದ  ಶಾಲೆಗಳ  ಮುಖ್ಯ ಶಿಕ್ಷಕರೇ/ಪ್ರಭಾರಿ  ಮುಖ್ಯ  ಶಿಕ್ಷಕರೇ  ಖುದ್ದಾಗಿ,  ಶಾಲಾ  ದಾಖಲೆಗಳನ್ನು ಪರಿಶೀಲಿಸಿ ಭರ್ತಿ ಮಾಡುವುದು.

ಸೆಮಿಸ್ ಮೂಲಕ ಸಂಗ್ರಹಿಸಲಾಗುವ ಮಾಹಿತಿ  
ಸೆಮಿಸ್ ಮೂಲಕ ದೇಶದ ಪ್ರತಿ ಶಾಲೆಯಿಂದ ಈ ಕೆಳಗಿನ ಮಾಹಿತಿಯನ್ನು ಪ್ರತಿ ವರ್ಷ ಸೆಪ್ಟೆಂಬರ್ 30 ರಲ್ಲಿದ್ದಂತೆ  ಸಂಗ್ರಹಿಸಲಾಗುತ್ತಿದೆ.   ಶಾಲೆಯ ಸಾಮಾನ್ಯ ಮಾಹಿತಿಗಳು
*  ಶಾಲೆಯ  ಹೆಸರು  ಮತ್ತು    ವಿಳಾಸವನ್ನು  ಪಿನ್ಕೋಡ್  ಸಹಿತ ತಪ್ಪಿಲ್ಲದಂತೆ  ನಮೂದಿಸುವುದು.  
*  ಶಾಲೆ  ಇರುವ  ಸ್ಥಳ  (ನಗರ, ಗ್ರಾಮೀಣ)
* ಶಾಲೆ ಇರುವ ವ್ಯಾಪ್ತಿ (ನಗರ ಪಾಲಿಕೆ, ನಗರಸಭೆ)
*  ಶಾಲೆಯು  ಯಾವ  ಪ್ರದೇಶದಲ್ಲಿದೆ  (ಗ್ರಾಮೀಣ  ಅಥವಾ  ನಗರ, ಜನವಸತಿ ಪ್ರದೇಶ, ಕಂದಾಯ ಗ್ರಾಮ, ಗ್ರಾಮಪಂಚಾಯಿತಿ, ತಾಲ್ಲೂಕು ಪುರಸಭೆ/ನಗರ  ಸಭೆ,  ಎಂ.ಎಲ್.ಎ  ಕ್ಷೇತ್ರಗಳನ್ನೊಳಗೊಂಡಂತೆ) ಎನ್ನುವ ಮಾಹಿತಿಯನ್ನು ನೀಡುವುದು.
* ಶಾಲೆಯ ವರ್ಗ, ನಿರ್ವಹಣೆ, ನಿರ್ವಹಣೆಯ ಉಪವಿಭಾಗ, ಉನ್ನತೀಕರಿಸಿದ್ದಲ್ಲಿ ಮಾಹಿತಿ, ಪಠ್ಯಕ್ರಮ, ಎಸ್.ಡಿ.ಎಂ.ಸಿ  ವಿವರಗಳನ್ನು  ಸರಿಯಾಗಿ  ನಮೂದಿಸುವುದು.
*  ಶಾಲೆಯ  ಹಂತ  (ಹಿರಿಯ  ಪ್ರಾಥಮಿಕ/  ಫ್ರೌಢ/  ಪದವಿ  ಪೂರ್ವ)
* ಶಾಲೆಯ ನಿರ್ವಹಣೆ (ಶಿಕ್ಷಣ ಇಲಾಖೆ, ಸರ್ಕಾರದ ಇತರೆ ಇಲಾಖೆ, ಸ್ಥಳೀಯ ಸಂಸ್ಥೆ, ಅನುದಾನಿತ, ಅನುದಾನರಹಿತ ಇತ್ಯಾದಿ)
* ಶಾಲೆಯ ಬೋಧನಾ ಮಾಧ್ಯಮ,ಶಾಲೆಯಲ್ಲಿರುವ ಪಠ್ಯಕ್ರಮ (ರಾಜ್ಯ, ಸಿ.ಬಿ.ಎಸ್.ಇ., ಇತ್ಯಾದಿ)
* ಎಸ್.ಡಿ.ಎಂ.ಸಿ ಸದಸ್ಯರ ವಿವರ ಮತ್ತು ಖಾತೆಯ ವಿವರ
*  ಕಳೆದ  ಶೈಕ್ಷಣಿಕ  ವರ್ಷದಲ್ಲಿ  ವಿವಿಧ  ಮೂಲಗಳಿಂದ  (ಸ.ಶಿ.ಅ., ವಿದ್ಯಾರ್ಥಿಗಳು,  ಪೋಷಕರು)  ಮಂಜೂರಾದ/ಸಂಗ್ರಹಿಸಿದ  ಹಾಗೂ ವೆಚ್ಚವಾದ ಅನುದಾನದ ಕುರಿತ ವಿವರ
* ಶಾಲಾ ಕಟ್ಟಡ ಸಾಮಗ್ರಿಗಳು, ಪೀಠೋಪಕರಣ ಹಾಗೂ ಇತರೆ ಸೌಲಭ್ಯಗಳ ವಿವರ
* ಶಾಲಾ ಕಟ್ಟಡದ ವಸ್ತುಸ್ಥಿತಿಯನ್ನು  ನಮೂದಿಸುವುದು.  
*  ಶಾಲೆಯಲ್ಲಿರುವ  ಕೊಠಡಿಗಳ ವಿವರವನ್ನು  ನಮೂದಿಸುವುದು.  
*  ವಾಲ್ಸ್ಲೇಟ್  ಹೊಂದಿರುವ ಕೊಠಡಿಗಳ ಸಂಖ್ಯೆಗಳನ್ನು ನಮೂದಿಸುವುದು.
*  ಶಾಲೆಯಲ್ಲಿರುವ ತರಗತಿ  ಕೋಣೆಗಳ  ವಿವರಗಳು  
*  ನಿರ್ಮಾಣ  ಹಂತದಲ್ಲಿರುವ ಕೊಠಡಿಗಳ ಸಂಖ್ಯೆ
* ಮುಖ್ಯ ಶಿಕ್ಷಕರಿಗೆ ಪ್ರತ್ಯೇಕ ಕೊಠಡಿ ಇರುವ ಕುರಿತ ವಿವರ
* ಶಾಲೆಯಲ್ಲಿರುವ ಕಪ್ಪು ಹಲಗೆಗಳ ಸಂಖ್ಯೆ
* ಶಾಲೆಯಲ್ಲಿರುವ ಶೌಚಾಲಯಗಳ  ಸಂಖ್ಯೆ  
*  ಕುಡಿಯುವ  ನೀರಿನ  ಸೌಲಭ್ಯ,  ವಿದ್ಯುಚ್ಫಕ್ತಿ, ಕಾಂಪೌಂಡ್, ಗ್ರಂಥಾಲಯ, ಆಟದ ಮೈದಾನ, ಕಂಪ್ಯೂಟರ್, ರ್ಯಾಂಪ್ಸ್, ಪೀಠೋಪಕರಣ (ಕುರ್ಚಿ, ಮೇಜು, ಮಣೆ, ಡೆಸ್ಕ್, ಬೆಂಚ್)    ಇತ್ಯಾದಿಗಳ ಲಭ್ಯತೆಯ  ವಿವರ.  
*  ಶಾಲಾ  ಕಾಂಪೌಂಡ್  ಇಲ್ಲದಿದ್ದಲ್ಲಿ  ಅಥವಾ ಅಪೂರ್ಣಗೊಂಡಿದ್ದಲ್ಲಿ  ಪೂರ್ಣವಾಗಿ  ನಿರ್ಮಿಸಲು  ಬೇಕಾಗಿರುವ ಗೋಡೆಯ ಉದ್ದವನ್ನು ಮೀಟರ್ನಲ್ಲಿ ನಮೂದಿಸುವುದು.
* ಮಕ್ಕಳಿಗೆ ಆಟವಾಡಲು ಅನುಕೂಲವಾಗುವಂತೆ ಕನಿಷ್ಠ ಒಂದು ಕೊಕೊ ಅಂಕಣದ ಸ್ಥಳವಿದ್ದಲ್ಲಿ ಆಟದ ಮೈದಾನವಿದೆ ಎಂದು ನಮೂದಿಸುವುದು ಹಾಗೂ ಅದರ  ವಿಸ್ತೀರ್ಣವನ್ನು  ಚ.ಮೀ.ಗಳಲ್ಲಿ  ನೀಡುವುದು.  
*  ಶಾಲೆಯು ಇಲಾಖಾವತಿಯಿಂದ ಗಣಕಯಂತ್ರಗಳನ್ನು ಹೊಂದಿದ್ದಲ್ಲಿ  ವಿವರಗಳನ್ನು ನಮೂದಿಸುವುದು.  
* ದೈಹಿಕ ನ್ಯೂನ್ಯತೆಯುಳ್ಳ ಮಕ್ಕಳ ಚಲನವಲನಕ್ಕೆ ಅನುಕೂಲವಾಗುವಂತೆ  ರ್ಯಾಂಪ್ಸ್ಗಳನ್ನು  ನಿರ್ಮಿಸಲಾಗಿದೆಯೇ?  
* ಶಾಲೆಯ ಆವರಣದಲ್ಲಿ ಮಕ್ಕಳು ಆಟವಾಡಲು ಅನುಕೂಲವಾಗುವಂತೆ ಆಟಿಕೆಗಳನ್ನು ನಿರ್ಮಿಸಿದ್ದಲ್ಲಿ  ಚೈಲ್ಡ್   ಫ್ರೆಂಡ್ಲಿ ಎಲಿಮೆಂಟ್ ಇದೆ- ಯೆಂದು ನಮೂದಿಸುವುದು.

ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿವರಗಳು:
* ನಿರ್ಧಿಿಷ್ಟ ಶೈಕ್ಷಣಿಕ ವರ್ಷದಲ್ಲಿ ತರಗತಿವಾರು, ಸಾಮಾಜಿಕ ವರ್ಗವಾರು, ಲಿಂಗವಾರು  ದಾಖಲಾದ  ಮತ್ತು  ಪುನರಾವರ್ತಿತವಾದ  ವಿದ್ಯಾರ್ಥಿಗಳ ವಿವರ  
*  ವಯೋಮಾನವಾರು  ಲಿಂಗವಾರು  ವಿದ್ಯಾರ್ಥಿಗಳ  ವಿವರ.
 * ನಿರ್ಧಿಷ್ಟ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ದಾಖಲಾದ ಸಾಮಾಜಿಕ ವರ್ಗ ಮತ್ತು ಲಿಂಗವಾರು ವಿವಿಧ ಅಗತ್ಯತೆಯ (ದೈಹಿಕ ಅಂಗವಿಕಲತೆ, ಶ್ರವಣ ದೋಷ, ಮಾನಸಿಕ ವಿಕಲತೆ, ದೃಷ್ಟಿ ದೋಷ, ಮಾತನಾಡುವ ವಿಕಲತೆ, ಬಹು ವಿಕಲತೆ ಹಾಗೂ ಕಲಿಕಾ ನ್ಯೂನತೆ) ಮಕ್ಕಳ ಸಂಖ್ಯೆಯ ಕುರಿತ ವಿವರ.
* ಶೈಕ್ಷಣಿಕ ವರ್ಷದಲ್ಲಿ ದಾಖಲಾತಿ ಹಾಗೂ ಹಾಜರಾತಿ ವಿವರ.
*  2011-12  ನೇ  ಶೈಕ್ಷಣಿಕ  ವರ್ಷದಲ್ಲಿ  ಜೂನ್  ರಿಂದ  ಸೆಪ್ಟೆಂಬರ್ 30ರವರೆಗೆ  ತರಗತಿವಾರು,  ಸಾಮಾಜಿಕ  ವರ್ಗವಾರು,  ಲಿಂಗವಾರು ದಾಖಲಾದ ಒಟ್ಟು ಮಕ್ಕಳ ವಿವರವನ್ನು ನೀಡುವುದು.
* 2011-12ನೇ ಶೈಕ್ಷಣಿಕ ವರ್ಷದಲ್ಲಿ ಜೂನ್ ರಿಂದ ಸೆಪ್ಟೆಂಬರ್ 30ರವರೆಗೆ ದಾಖಲಾದ ಒಟ್ಟು  ಮಕ್ಕಳ  ವಿವರವನ್ನು  ವಯೋಮಾನವಾರು  ನೀಡುವುದು. ಪುನರಾವರ್ತಿತ  ವಿದ್ಯಾರ್ಥಿಗಳ  ವಿವರ  
*  2011-12  ನೇ  ಶೈಕ್ಷಣಿಕ ವರ್ಷದಲ್ಲಿ  ಜೂನ್  ರಿಂದ  ಸೆಪ್ಟೆಂಬರ್  30ರವರೆಗೆ  ತರಗತಿವಾರು, ಸಾಮಾಜಿಕ ವರ್ಗವಾರು, ಲಿಂಗವಾರು ಪುನರಾವರ್ತಿತವಾಗಿ ದಾಖಲಾದ ಒಟ್ಟು ಮಕ್ಕಳ ವಿವರವನ್ನು ನೀಡುವುದು.

ಶಾಲೆಯ ಸಾಮಾನ್ಯ ಮಾಹಿತಿಗಳು
*  ಶಾಲೆಯಲ್ಲಿ  ಓದುತ್ತಿರುವ  ಮಕ್ಕಳಿಗಾಗಿ  ಶಾಲೆಯಲ್ಲಿಯೇ  ವಸತಿ ವ್ಯವಸ್ಥೆ ಇದ್ದಲ್ಲಿ ವಿವರವನ್ನು ನಮೂದಿಸುವುದು.
* ಶಾಲೆಯ ಕಟ್ಟಡವು ಒಂದಾದ ನಂತರ ಒಂದರಂತೆ ಎರಡು ಶಾಲೆಗಳಿಗೆ ಹಂಚಿಕೆಯಾಗಿದ್ದಲ್ಲಿ ಪಾಳಿ  ವ್ಯವಸ್ಥೆ  ಇದೆ  ಎಂದು  ನಮೂದಿಸುವುದು.  
*  ಕಳೆದ  ಶೈಕ್ಷಣಿಕ ವರ್ಷವೆಂದರೆ ಜೂನ್ 2010 ರಿಂದ ಏಪ್ರಿಲ್ 2011 ರವರೆಗೆ ಅದರಂತೆ ವಿವರಗಳನ್ನು  ನೀಡುವುದು.  
*  ಹಣದ  ಸಂದಾಯ  ಹಾಗೂ  ಖಚರ್ಿನ ಬಗ್ಗೆ  ನಿಖರವಾದ  ಮಾಹಿತಿಯನ್ನು  ಕಳೆದ  ವರ್ಷವೆಂದಾಗ  01-04- 2010  ರಿಂದ  30-04-2011ರವರೆಗೆ  ಪರಿಗಣಿಸುವುದು.    ಅದರಂತೆ ವಿವರಗಳನ್ನು ನೀಡುವುದು.           

 ಬೋಧನಾ ಸಿಬ್ಬಂದಿ ವಿವರ
* ಸರ್ಕಾರಿ ಪ್ರೌಡಶಾಲೆಗಳಲ್ಲಿ ನೇಮಕಾತಿಗಳನ್ವಯ ಆಯ್ಕೆಗೊಂಡಿರುವ ಬೋಧಕ  ಸಿಬ್ಬಂದಿಯನ್ನು  ಶಿಕ್ಷಕರೆಂದು  ಪರಿಗಣಿಸಬೇಕು.
 * ಅನುದಾನಿತ ಪ್ರೌಢಶಾಲೆಗಳಲ್ಲಿ ನೇಮಕಾತಿಗಳನ್ವಯ ಆಯ್ಕೆಗೊಂಡು ಸರ್ಕಾರದಿಂದ  ವೇತನ  ಪಡೆಯುತ್ತಿರುವ  ಬೋಧಕ  ಸಿಬ್ಬಂದಿಯನ್ನು ಶಿಕ್ಷಕರೆಂದು  ಪರಿಗಣಿಸಬೇಕು.  
*  ಖಾಸಗಿ  ಪ್ರೌಢಶಾಲೆಗಳಾದಲ್ಲಿ ಅಂತಹ  ಶಾಲೆಯಲ್ಲಿ  ಅರ್ಹ  ವಿದ್ಯಾರ್ಹತೆ  ಹೊಂದಿರುವ  ಎಲ್ಲಾ  ಬೋಧಕ ಸಿಬ್ಬಂದಿಯನ್ನು ಶಿಕ್ಷಕರೆಂದು ಪರಿಗಣಿಸಬೇಕು.
*  ಪರ್ಯಾಯ ಶಿಕ್ಷಕರು - ಸಂಚಿತ ವೇತನ ಪಡೆಯುತ್ತಿರುವ (ಜಿಲ್ಲಾ ಪಂಚಾಯತ್) ಶಿಕ್ಷಕರು  ಅಥವಾ  ರಜಾ  ಅವಧಿಯಲ್ಲಿನ  ಬದಲೀ  ಶಿಕ್ಷಕರು  ಅಥವಾ ನಿವೃತ್ತ ಶಿಕ್ಷಕರು ಅಥವಾ ಪರಿಹಾರ ಬೋಧನೆಗಾಗಿ ನೇಮಿಸಲ್ಪಟ್ಟಿರುವ ಶಿಕ್ಷಕರನ್ನು ಪ್ಯಾರಾ ಶಿಕ್ಷಕರೆಂದು ಪರಿಗಣಿಸುವುದು.


ಬೋಧಕೇತರ ಸಿಬ್ಬಂದಿ ವಿವರ
* ಪ್ರೌಢಶಾಲೆಗಳಲ್ಲಿನ ಗುಮಾಸ್ತರು * ಆಯಾಗಳು * ಪ್ರಯೋಗಾಲಯ ಸಹಾಯಕರು ಪರೀಕ್ಷಾ ಫಲಿತಾಂಶ* ಕಳೆದ 2011 ಮಾಚರ್್ ಮಾಹೆಯಲ್ಲಿ ಪರೀಕ್ಷೆಗೆ ಕುಳಿತ, ಪರೀಕ್ಷೆಯಲ್ಲಿ ಉತ್ತೀರ್ಣರಾದ 10ನೇ ತರಗತಿ ಮತ್ತು 12ನೇ ತರಗತಿಯ ವಿದ್ಯಾರ್ಥಿಗಳ  ವಿವರವನ್ನು    ನೀಡುವುದು.  *  ಕಳೆದ  2011  ಮಾಚರ್್  ಮಾಹೆಯಲ್ಲಿ ಪರೀಕ್ಷೆಗೆ ಕುಳಿತ, ಪರೀಕ್ಷೆಯಲ್ಲಿ ಉತ್ತೀರ್ಣರಾಗಿ  ಹಾಗೂ ಶೇ.40ಕ್ಕಿಂತ ಕಡಿಮೆ  .  ಶೇ.40  ರಿಂದ  50,  ಶೇ.50  ರಿಂದ  60,  ಶೇ.60  ರಿಂದ 70,  ಶೇ.70  ರಿಂದ  80,  ಶೇ.80  ರಿಂದ  90,  ಶೇ.90  ರಿಂದ  100, ಹೆಚ್ಚು  ಸಾಮಥ್ರ್ಯ  ಪಡೆದ  10ನೇ  ತರಗತಿ  ಮತ್ತು  12ನೇ  ತರಗತಿಯ ವಿದ್ಯಾರ್ಥಿಗಳ  ವಿವರವನ್ನು  ನೀಡುವುದು.

ವಿಶೇಷ ಅಗತ್ಯತೆೆಯುಳ್ಳ ಮಕ್ಕಳ ವಿವರ
*  ವಿಶೇಷ  ಅಗತ್ಯತೆಯುಳ್ಳ  (ಸಿ.ಡಬ್ಲ್ಯೂ.ಎಸ್.ಎನ್  -  ಚಿಲ್ಡ್ರನ್ ವಿತ್  ಸ್ಪೆಷಲ್  ನೀಡ್ಸ್)  ಮಕ್ಕಳ  ವಿವರವನ್ನು  ಸೆಪ್ಟೆಂಬರ್  30, 2009ರಲ್ಲಿದ್ದಂತೆ  ನೀಡುವುದು.  ಒಂದು  ಮಗು  ಒಂದಕ್ಕಿಂತ  ಹೆಚ್ಚು ನ್ಯೂನ್ಯತೆಗಳನ್ನು ಹೊಂದಿದ್ದಲ್ಲಿ ಒಂದಕ್ಕಿಂತ ಹೆಚ್ಚು ವಿಕಲತೆ ಕಾಲಂನಲ್ಲಿ ನಮೂದಿಸುವುದು.

ಪ್ರೌಢ ಶಿಕ್ಷಣ  ಮಾಹಿತಿ ವ್ಯವಸ್ಥೆ ಉತ್ತಮಪಡಿಸುವಲ್ಲಿ ಕೈಗೊಂಡಿರುವ ಕ್ರಮಗಳು:  
ಪ್ರೌಢಶಿಕ್ಷಣ    ಮಾಹಿತಿ  ವ್ಯವಸ್ಥೆಯನ್ನು  ಉತ್ತಮಪಡಿಸುವಲ್ಲಿ ಹಲವಾರು  ಕ್ರಮಗಳನ್ನು  ಕೈಗೊಳ್ಳಬಹುದು.  ಅದೇ  ರೀತಿ  ಪ್ರೌಢ ಶಿಕ್ಷಣ  ಮಾಹಿತಿ  ಸಂಗ್ರಹಣೆ,  ಕ್ರೋಡೀಕರಣ  ಹಾಗೂ  ಬಳಕೆಯಲ್ಲಿ  ಹಲವಾರು  ಎಚ್ಚರಿಕೆಗಳನ್ನು  ತೆಗೆದುಕೊಳ್ಳಬೇಕಾಗುತ್ತದೆ.  ಈ  ಬಗ್ಗೆ ತೆಗೆದುಕೊಳ್ಳಬಹುದಾದ ಕ್ರಮಗಳನ್ನು ಮುಂದಿನ ಭಾಗದಲ್ಲಿ ಚಚರ್ಿಸಿದೆ.*  ಪ್ರಗತಿಯ ಪರಾಮಶರ್ೆಗೆ ಮೇಲ್ವಿಚಾರಣಾ ಸಮಿತಿ
ರಚನೆ: ಪ್ರೌಢ ಶಿಕ್ಷಣ  ಮಾಹಿತಿಯ  ಸಂಗ್ರಹಣೆ,  ಕ್ರೋಡೀಕರಣವಾದ  ನಂತರ  ಮಾಹಿತಿಯ ನಿಖರತೆ ಇರುವ ಬಗ್ಗೆ ಆಯಾ ಹಂತಗಳಲ್ಲಿ ಸಭೆ ಸೇರಿ ಯೋಜನೆಯ ಅನುಷ್ಠಾನ  ಹಾಗೂ  ಮಾಹಿತಿಯ  ನಿಖರತೆ  ಕುರಿತು  ಪರಾಮರ್ಶೆ ನಡೆಸಬಹುದು.  ಯೋಜನೆಯ  ಅನುಷ್ಠಾನದಲ್ಲಿ  ಸಮಸ್ಯೆಗಳಿದ್ದಲ್ಲಿ ಪರಿಹರಿಸಲು  ಸೂಕ್ತ  ನಿರ್ಧಾರಗಳನ್ನು  ಕೈಗೊಳ್ಳಬಹುದು.  ಶೈಕ್ಷಣಿಕ ಅಂಕಿ-ಅಂಶಗಳ  ಮಾಹಿತಿಯು  ಸರ್ಕಾರದ  ಹಾಗೂ  ಸರ್ವ  ಶಿಕ್ಷಣ ಅಭಿಯಾನ  ಯೋಜನೆ  ಹಾಗೂ  ಯೋಜನೆಗಳ  ಅನುಷ್ಠಾನದ  ಮೇಲೆ ನೇರ  ಪ್ರಭಾವ/ಪರಿಣಾಮ  ಬೀರುವುದರಿಂದ  ಈ  ಕ್ರಮ  ಅನಿವಾರ್ಯ ಹಾಗೂ ಅಗತ್ಯವಾಗಿದೆ.  

*  ಉತ್ತರದಾಯಿತ್ವ  ನಿಗದಿ:  ಪ್ರೌಢಶಿಕ್ಷಣ    ಮಾಹಿತಿಯ  ಸಂಗ್ರಹಣೆ, ಮಾಹಿತಿಯನ್ನು  ನೀಡುವ  ಮುಖ್ಯಶಿಕ್ಷಕ  ಶಾಲೆಗೆ      ಸಂಬಂಧಿಸಿದಂತೆ ವಸ್ತುನಿಷ್ಠವಾದ ಹಾಗೂ ಖಚಿತವಾದ ಮಾಹಿತಿಯನ್ನು ನೀಡಬೇಕಾಗುತ್ತದೆ. ಶಾಲೆಯ ಮುಖ್ಯಶಿಕ್ಷಕರು ಯಾವುದಾದರೂ ಕಾರಣದಿಂದ ನೀಡಬೇಕಾದ ಮಾಹಿತಿಯಲ್ಲಿ ವ್ಯತ್ಯಾಸಗಳುಂಟಾದರೆ ಅದು ಸಮಗ್ರ ಡೈಸ್ ಮಾಹಿತಿಯ ಖಚಿತತೆಯ ಮೇಲೆ ಪ್ರಭಾವ ಬೀರುತ್ತದೆ. * ಬೆಂಬಲ ವ್ಯವಸ್ಥೆ:  

ಪ್ರೌಢಶಿಕ್ಷಣ ಮಾಹಿತಿ ಹಾಗೂ ಆ ಮಾಹಿತಿಯು ರಾಜ್ಯದ  ವಿವಿಧ  ಯೋಜನೆ  ಹಾಗೂ  ವರದಿಗಳ  ತಯಾರಿಕೆ  ಮತ್ತು ಆಯವ್ಯಯದ  ಮೇಲೆ  ಯಾವ  ರೀತಿ  ಪರಿಣಾಮ  ಬೀರುತ್ತದೆ  ಎಂಬ ಬಗ್ಗೆ  ವಾಷರ್ಿಕ  ದಿನಾಂಕ  25-11-2011  ಮತ್ತು  26-11-2011  2 ದಿನಗಳ  ತರಬೇತಿ  ಹಾಗೂ  ಅನುಭವ  ಹಂಚಿಕೆ  ಕಾರ್ಯಾಗಾರವನ್ನು ನಡೆಸಲಾಗುವುದು. * ಪ್ರೌಢಶಿಕ್ಷಣ ಮಾಹಿತಿ ವಿಶ್ಲೇಷಣೆ ಕುರಿತ ತರಬೇತಿ

ನೀಡಿಕೆ: ಪ್ರೌಢಶಿಕ್ಷಣ ಮಾಹಿತಿಯನ್ನು ಸಂಗ್ರಹಣೆ ಮಾಡಿ, ಸಲ್ಲಿಸಿದರೆ ಆ ವರ್ಷದ ಕಾರ್ಯ ಮುಗಿದಂತೆ ಭಾವಿಸಲಾಗುತ್ತದೆ. ಆದರೆ ಸರಿಯಾಗಿ ಗಮನಿಸಿದರೆ ಡೈಸ್ ಮಾಹಿತಿ ಸಲ್ಲಿಕೆಯಾದ ನಂತರ ಆ ಮಾಹಿತಿಯನ್ನು ವಿವಿಧ ಯೋಜನೆ ಹಾಗೂ  ಅವಶ್ಯಕ  ಮಾಹಿತಿ  ಬೇಕಾದಾಗಲೆಲ್ಲಾ  ಬಳಸಬೇಕಾಗುತ್ತದೆ. ಸಂಬಂಧಿಸಿದ  ಬ್ಲಾಕ್/ಜಿಲ್ಲೆಯಲ್ಲಿ  ಇರುವ  ಶೈಕ್ಷಣಿಕ  ಸ್ಥಿತಿಯನ್ನು ತಿಳಿಯಲು  ಪ್ರೌಢಶಿಕ್ಷಣ  ಮಾಹಿತಿ  ಸಹಾಯಕವಾಗುತ್ತದೆ.  ಈ  ನಿಟ್ಟಿನಲ್ಲಿ ಪ್ರೌಢಶಿಕ್ಷಣ ಮಾಹಿತಿಯ ವಿಶ್ಲೇಷಣೆ ಮಾಡುವುದು ಮುಖ್ಯವಾಗುತ್ತದೆ. ವಿವಿಧ  ಹಂತದ  ಅಧಿಕಾರಿ/ಸಿಬ್ಬಂದಿಗಳಿಗೆ  ಡೈಸ್  ಕುರಿತ  ವಿವಿಧ ವರದಿಗಳನ್ನು ರೂಢಿಸಲು ಅಗತ್ಯವಾದ ತರಬೇತಿಯನ್ನು 06-12-2011 ರಂದು ನಡೆಸಲಾಗುವುದು.

* ಮಾಹಿತಿಯ ಒಡೆತನ: ಪ್ರೌಢಶಿಕ್ಷಣ ಮಾಹಿತಿಯ ಕುರಿತು ಒಡೆತನದ ಭಾವವನ್ನು  (ಠತಿಟಿಜಡಿಠಿ)  ವಿವಿಧ  ಹಂತದ  ಅಧಿಕಾರಿ/ಸಿಬ್ಬಂದಿಗಳು ಪ್ರದಶರ್ಿಸುತ್ತಿಲ್ಲ.  ಪ್ರೌಢಶಿಕ್ಷಣ  ಕುರಿತು  ತಮ್ಮ  ಶಾಲೆ/ಬ್ಲಾಕ್/ಜಿಲ್ಲೆಯ ಮಾಹಿತಿಯ ಬಗ್ಗೆ ಹೆಚ್ಚಿನ ತಿಳುವಳಿಕೆ ಇಲ್ಲ ಹಾಗೂ ಪ್ರೌಢಶಿಕ್ಷಣದ ಬಗ್ಗೆ ಇದುವರೆಗೆ ಆಗಿರುವ ಪ್ರಗತಿ ಹಾಗೂ ಪ್ರೌಢಶಿಕ್ಷಣದ  ವಿವಿಧ ಹಂತದ ಮಾಹಿತಿ ಕಂಪ್ಯೂಟರ್ಗಳಲ್ಲಿ ಮತ್ತು ಆನ್ಲೈನ್ನಲ್ಲಿ ಲಭ್ಯ ಇರುವ ಬಗ್ಗೆ ಮಾಹಿತಿ  ಇಲ್ಲ.   ವೆಬ್ಸೈಟ್ನಲ್ಲಿ ಲಭ್ಯವಿರುತ್ತದೆ. *  ವಿವಿಧ  ವರದಿಗಳ  
ಲಭ್ಯತೆ:  ಸಂಬಂಧಿಸಿದ  ಬ್ಲಾಕ್/ಜಿಲ್ಲೆಯ  ಪ್ರೌಢ ಶಿಕ್ಷಣ  ಶಾಲೆಗಳ  ಮಾಹಿತಿ  ಭರ್ತಿಆಗುತ್ತಿದ್ದಂತೆ,  ಆಯಾ  ಹಂತಕ್ಕೆ ಸಂಬಂಧಿಸಿದ  ವಿವಿಧ  ವರದಿಗಳು  (ಮಕ್ಕಳ  ಸಂಖ್ಯೆ,  ಶಾಲೆಗಳಲ್ಲಿರುವ ಸೌಲಭ್ಯಗಳ  ಕುರಿತ  ವಿವರ  ಇತ್ಯಾದಿ)  ಆನ್ಲೈನ್ನಲ್ಲಿ  ಲಭ್ಯವಾಗುತ್ತಿದೆ. ಇಲಾಖೆಯ  ಅಧಿಕಾರಿಗಳ  ಪ್ರಗತಿ  ಪರಿಶೀಲನೆಯನ್ನು  ಪ್ರೌಢಶಿಕ್ಷಣ ಸೆಮಿಸ್ ಮಾಹಿತಿಯ ಆಧಾರದ ಮೇಲೆ ಕೈಗೊಂಡರೆ ಸೆಮಿಸ್ ಮಾಹಿತಿ ಕುರಿತ ಬಳಕೆ ಹೆಚ್ಚಾಗುತ್ತದೆ ಹಾಗೂ ತನ್ಮೂಲಕ ಸೆಮಿಸ್ ಮಾಹಿತಿಯ ನಿಖರತೆ ಉತ್ತಮಗೊಳ್ಳುತ್ತದೆ.     
ದೊರೆತರೆ ಶಿಕ್ಷಣ ವ್ಯವಸ್ಥೆ ಹಲವು ವರ್ಷಗಳಿಂದ ಸಾಗಿ  ಬರುತ್ತಿರುವ  ಹಾದಿಯನ್ನು  ತಿಳಿಯಲು  ಅನುಕೂಲವಾಗುತ್ತದೆ. ಅದೇ ರೀತಿ ಇಲಾಖೆಯು ಭವಿಷ್ಯದಲ್ಲಿ ಯಾವ ರೀತಿಯಲ್ಲಿ ಸಾಗಬೇಕು ಎಂಬುದರ  ಬಗ್ಗೆ  ಖಚಿತ  ನಿಲುವುಗಳನ್ನು  ತೆಗೆದುಕೊಳ್ಳಲು  ಸಹಾಯ ಮಾಡುತ್ತದೆ. ಈ ನಿಟ್ಟಿನಲ್ಲಿ ಮಾಹಿತಿಯ ಅವಶ್ಯಕತೆ ಹಾಗೂ ಖಚಿತತೆಯ ಕುರಿತು ಕಾಳಜಿ ಮತ್ತು ಬದ್ಧತೆಯಿಂದ ಶಿಕ್ಷಣ ವ್ಯವಸ್ಥೆಯಲ್ಲಿನ ಮಾಹಿತಿ ವ್ಯವಸ್ಥೆಯನ್ನು  ರೂಪಿಸುವ  ಕಾರ್ಯವನ್ನು  ಮಾಡಲು  ಸಂಬಂಧಿಸಿದ ಎಲ್ಲರೂ ಕೈಜೋಡಿಸುವ ಅವಶ್ಯಕತೆ ಇದೆ. ಕೊನೆಯ ಮಾತು: ಪ್ರೌಢಶಿಕ್ಷಣ (ಸೆಮಿಸ್ ) ಮಾಹಿತಿ ಸಂಗ್ರಹಣೆ, ಕ್ರೋಡೀಕರಣ, ವರದಿ ರೂಪಿಸುವಿಕೆ ಅಮೂಲ್ಯ ಎಂಬುದರಲ್ಲಿ ಎರಡು ಮಾತಿಲ್ಲ.  ಆದರೆ  ಶಿಕ್ಷಣ  ಕ್ಷೇತ್ರದ  ಅಂತಿಮ  ಉದ್ದೇಶ  ವಿದ್ಯಾರ್ಥಿಗಳ ಸವರ್ಾಂಗೀಣ  ವ್ಯಕ್ತಿತ್ವದ  ವಿಕಾಸ.  ಈ  ಗುರಿ  ಸಾಧನೆಗೆ  ಇತರೆ  ಎಲ್ಲ ಅಂಶಗಳು ಪೂರಕವಾಗಬೇಕು. ಆದರೆ ಅನೇಕ ಬಾರಿ ಇತರ ಅಂಶಗಳು ಪ್ರಧಾನವಾಗಿ,  ಮುಖ್ಯ  ಗುರಿಯು  ಹಿಂದೆ  ಬೀಳುತ್ತದೆ.  ಮಾಹಿತಿ ಸಂಗ್ರಹಣೆಯ  ಕಾರ್ಯದಲ್ಲಿ  ಬೋಧನೆ-ಕಲಿಕೆಯ  ಕಾರ್ಯಗಳು ಹಿಂದೆ  ಬೀಳದಂತೆ  ಎಚ್ಚರ  ವಹಿಸುವ  ಅವಶ್ಯಕತೆ  ಇದೆ.  ಈ  ನಿಟ್ಟಿನಲ್ಲಿ ಸೆಮಿಸ್ ಮಾಹಿತಿ ಸಂಗ್ರಹಣೆ, ಕ್ರೋಡೀಕರಣ, ವರದಿ ರೂಪಿಸುವಿಕೆಯ ಕಾರ್ಯಗಳು  ವ್ಯವಸ್ಥಿತವಾಗಿ  ಹಾಗೂ  ವಸ್ತುನಿಷ್ಠತೆಯಿಂದ  ಕೈಗೊಳ್ಳುವ ಅವಶ್ಯಕತೆ ಇದೆ.  * ಮಾಹಿತಿಯೇ ಶಕ್ತಿ ಎಂಬ ಮಾತಿನಂತೆ ಮಾಹಿತಿಯು ಸುಲಭವಾಗಿ ಹಾಗೂ  ಬೇಕೆನಿಸಿದ  ನಮೂನೆಯಲ್ಲಿ  ಇಲಾಖೆಯ  ಅಧಿಕಾರಿ/ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ