ಶುಕ್ರಸಂಕ್ರಮ ಆಂದೋಲನದ ಮೂಲಕ ಎಲ್ಲರಿಗೂ ಗುಣಮಟ್ಟದ ವಿಜ್ಞಾನ ಶಿಕ್ಷಣ ಭಾಗ -2ನಿಮ್ಮ ಕೈಯಲ್ಲಿ ಸೂರ್ಯ
- ವಿವೇಕ್ ಮಾಂಟೇರೋ, ನವನಿಮರ್ಿತಿ, ಬಾಂಬೆ
ಕಳೆದ ತಿಂಗಳು ಮಾಡಿದ ಮಾಯಾದರ್ಪಣ ಪ್ರಯೋಗವನ್ನು ನೆನಪಿಸಿಕೊಳ್ಳಿ. ನೀವು ಪ್ರಯೋಗ ಮಾಡಿದಿರಾ? ನೀವು ಪ್ರಯೋಗ ಮಾಡಿದ್ದರೆ ನಿಮಗೆ ಹಲವು ಗೊಂದಲಗಳು ಉಂಟಾಗಿರಲೇಬೇಕು.
1. ಒಂದು ಮೀಟರ್ ದೂರವಿರುವ ನಿಮ್ಮ ಗೆಳೆಯ / ಗೆಳತಿಯ ಶರ್ಟ್ ನ ಮೇಲೆ ಕನ್ನಡಿಯ ಪ್ರತಿಬಿಂಬ ಪಡೆದಿದ್ದರೆ ಅದು ಕನ್ನಡಿಯ ಆಕಾರದ್ದೇ ಆಗಿರುತ್ತದೆ. ತ್ರಿಕೋನಾಕಾರದ ಕನ್ನಡಿ ತ್ರಿಕೋನಾಕಾರದ ಬಿಂಬವನ್ನೇ ನೀಡುತ್ತದೆ.
2. ದೂರವಿರುವ ಗೋಡೆಯ ಮೇಲೆ ಪ್ರತಿಬಿಂಬವನ್ನು ಪಡೆದಿರೆ ಯಾವುದೇ ಆಕಾರದ ಕನ್ನಡಿಯ ಪ್ರತಿಬಿಂಬವೂ ದುಂಡಾಗಿರುತ್ತವೆ. ಏಕೆ ಹೀಗಾಗುತ್ತದೆ? ಇನ್ನೊಂದು ಪ್ರಯೋಗವನ್ನು ಮಾಡುವ ಮೂಲಕ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳೋಣ. ಕನ್ನಡಿ ಮತ್ತು ಪರದೆಯ ನಡುವಿನ ದೂರವನ್ನು ನಿಧಾನವಾಗಿ ಮತ್ತು ನಿರಂತರವಾಗಿ ಹೆಚ್ಚಿಸುತ್ತಾ ಹೋದಂತೆ, ಯಾವುದೇ ಆಕಾರದ ಕನ್ನಡಿಯ ಪ್ರತಿಬಿಂಬವಾದರೂ ವೃತ್ತಾಕಾರವಾಗುತ್ತದೆ.
ವೃತ್ತಾಕಾರದ ಬಿಂಬ ಏಕೆ ?
ಚಿಕ್ಕ ಕನ್ನಡಿಯನ್ನು ಬಳಸಿದರೆ ಏನಾಗುತ್ತದೆ? (ಅಂದರೆ ಕನ್ನಡಿಗೆ ಕತ್ತರಿಸಿದ ಕಾಗದವನ್ನು ಅಂಟಿಸಿ ಕನ್ನಡಿಯ ಗಾತ್ರವನ್ನು ಚಿಕ್ಕದು / ದೊಡ್ಡದು ಮಾಡಬಹುದು. ಕನ್ನಡಿಯ ವ್ಯಾಸವನ್ನು ಕಡಿಮೆ ಮಾಡಿದಾಗ ಅದು ದೂರದಲ್ಲಿ ಬೀಳುವ ಸೂರ್ಯಬಿಂಬದ ಗಾತ್ರದ ಮೇಲೆ ಏನೂ ಪರಿಣಾಮ ಬೀರುವುದಿಲ್ಲ. ಆದರೆ ಬಿಂಬ ಕಡಿಮೆ ಪ್ರಕಾಶಮಾನವಾಗುತ್ತದೆ.
ದೂರದಲ್ಲಿ ಮೂಡುವ ಚಿಕ್ಕಗಾತದ್ರ ಕನ್ನಡಿಯ ಪ್ರತಿಬಿಂಬ ಚಿಕ್ಕದಾಗಿರುವುದಿಲ್ಲವೇಕೆ? ನಾವೀಗ ಇನ್ನೊಂದು ಪ್ರಯೋಗ ಮಾಡೋಣ. ಒಂದು ಪೋಸ್ಟ್ ಕಾಡರ್ಿನ ಮಧ್ಯಭಾಗದಲ್ಲಿ ತ್ರಿಕೋನಾಕಾರದ ರಂಧ್ರವನ್ನು ಪ್ರಕಾಶಮಾನವಾದ ಸೂರ್ಯನಡಿ ಭೂಮಿಗೆ ಹತ್ತಿರವಾಗಿರುವಂತೆ ಹಿಡಿಯಿರಿ. ಭೂಮಿಯ ಮೇಲೆ ತತ್ರಿಕೋನಾಕಾರದ ಬಿಂಬ ಮೂಡುತ್ತದೆ. ಈಗ ಪೋಸ್ಟ್ ಕಾರ್ಡನ್ನು ಮೇಲಕ್ಕೆ ಎತ್ತುತ್ತಾ ಹೋಗಿ ಬಿಂಬವು ವೃತ್ತಾಕಾರವಾಗುತ್ತದೆ! ಪೋಸ್ಟ್ಕಾಡರ್್ ಮೇಲಿನ ಸಣ್ಣ ರಂಧ್ರವೇ ಪಿನ್ಹೋಲ್ ಪ್ರೊಜೆಕ್ಟರ್ (ರಂಧ್ರವು ಚಿಕ್ಕದಾಗಿರುವುದರಿಂದ ಅದನ್ನು ಪಿನ್ಹೋಲ್ ಎಂದು ಕರೆಯುತ್ತೆವೆ ಮತ್ತು ಪರದೆಯ ನಡುವಿನ ದೂರವನ್ನು ಹೆಚ್ಚು ಮಾಡಿದಾಗ ಬಿಂಬವು ವೃತ್ತಾಕಾರವಾಗುತ್ತದೆ. ದೂರದಲ್ಲಿ ಮೂಡಿದ ಬಿಂಬ ಬೆಳಕಿನ ಮೂಲಕ ಆಕಾರವನ್ನೇ ಹೊಂದಿರುತ್ತದೆ. ಬೆಳಕಿನ ಮೂಲವಾದ (ಸೂರ್ಯ) ವೃತ್ತಾಕಾರದಲ್ಲಿರುವುದರಿಂದ ಬಿಂಬವೂ ವೃತ್ತಾಕಾರದಲ್ಲಿರುತ್ತದೆ.
ಇದೇ ರೀತಿ ಟ್ಯೂಟ್ಲೈಟ್ ಅನ್ನು ಹೊಂದಿರುವ ಒಂದು ಕತ್ತಲ ಕೋಣೆಯಲ್ಲಿ ಹೋಗಿ, ಟ್ಯೂಟ್ಲೈಟ್ನ ಬಿಂಬವನ್ನು ಪಿನ್ಹೋಲ್ ಮೂಲಕ ಗೋಡೆಯ ಮೇಲೆ ಪಡೆಯಬಹುದು.
ಈಗ ನಾವು ಮಾಯಾದರ್ಪಣದ ಪ್ರಯೋಗವನ್ನು ಅರ್ಥಮಾಡಿಕೊಳ್ಳಬಹುದು. ಕನ್ನಡಿಯು ಪಿನ್ಹೋಲ್ನಂತೆ ವರ್ತಿಸಿ, ಸೂರ್ಯನ ಬಿಂಬವನ್ನು ಪ್ರತಿಪಲಿಸುತ್ತದೆ. ಸೂರ್ಯನು ವೃತ್ತಾಕಾರದಲ್ಲಿ ಇರುವುದರಿಂದ ಅದರ ಬಿಂಬವೂ ವೃತ್ತಾಕಾರದಲ್ಲಿರುತ್ತದೆ.ಪರದೆ ಮತ್ತು ಕನ್ನಡಿಯ ನಡುವಿನ ದೂರವನ್ನು ಹೆಚ್ಚಿಸುವುದರಿಂದ ಸೂರ್ಯನ ದೊಡ್ಡ ದೊಡ್ಡ ಬಿಂಬವನ್ನು ಪಡೆಯಲು ಸಾಧ್ಯ.ಬಿಂಬದ ವ್ಯಾಸವು ಸರಿಸುಮಾರು ಕನ್ನಡಿ ಮತ್ತು ಪರದೆಯ ನಡುವಿನ ದೂರದ 100ರಷ್ಟು ಚಿಕ್ಕದಾಗಿರುತ್ತದೆ. ಕನ್ನಡಿ ಮತ್ತು ಪರದೆಯ ನಡುವಿನ ದೂರ 100 ಮೀಟರ್ ಇದ್ದಾಗ, ಸೂರ್ಯನ ಬಿಂಬದ ವ್ಯಾಸ 1 ಮೀಟರ್ನಷ್ಟಿರುತ್ತದೆ.
ಒಂದು ಶಕ್ತಿಯುತ ಸೌರ ಟೆಲಿಸ್ಕೋಪ್ ಅನ್ನು ರಚಿಸಿ, ಸೌರ ಮೇಲ್ಮೈ ಮೇಲೆ ಏನಾಗುತ್ತಿದೆಯೆಂಬುದನ್ನು ನೋಡಲು (ಸೌರಕಲೆಗಳನ್ನು ನೋಡಲು) ಬಳಸಿಕೊಳ್ಳಬಹುದು. ಸೌರಕಲೆಗಳನ್ನು ವೀಕ್ಷಿಸಲು ಸಾಧ್ಯವಾದಷ್ಟು ಕಪ್ಪು ಕೋಣೆಯನ್ನು ರಚಿಸಬೇಕು. ಎರಡನೆಯದಾಗಿ ಚಿಕ್ಕ ಕನ್ನಡಿಯನ್ನು ಸೂರ್ಯನೆದುರಿಗೆ ಹೊಂದಿಸಿಡಲು ಒಂದು ಆಧಾರ(ಟಠಣಟಿಣ) ಬೇಕು. ಮೂರನೆಯದಾಗಿ ಉತ್ತಮ ಗುಣಮಟ್ಟದ ಸೂಕ್ತ ಗಾತ್ರದ ಪಾಲಿಷ್ ಮಾಡಿದ ಕನ್ನಡಿಯ ಅವಶ್ಯಕತೆಯಿದೆ. ಒಂದು ದೊಡ್ಡ ಪ್ಲಾಸ್ಟಿಕ್ ಚೆಂಡನ್ನು ಕೊಂಡು ಅದರಲ್ಲಿ ಮರಳನ್ನು ತುಂಬಿಸಿ ಅದರ ಮೇಲೆ ಕನ್ನಡಿಯನ್ನು ಅಂಟಿಸಿ ಚೆಂಡನ್ನು ಒಂದು ರಿಂಗಿನ(ಆಧಾರದ) ಮೇಲೆ ಇಡುವುದು.
ಇದರಿಂದ ಕನ್ನಡಿಯನ್ನು ಅಲುಗಾಡದಂತೆ ಇಡಲು, ಸೂರ್ಯನ ಬಿಂಬವನ್ನು ಬೇಕಾದೆಡೆ ಪಡೆಯಲು ಸಾಧ್ಯ. ಸರಿಯಾದ ಅಳತೆಯ ಪಾಲಿಷ್ ಮಾಡಿದರೆ ಉತ್ತಮ ಗುಣಮಟ್ಟದ ಕನ್ನಡಿ, ಟೆಲಿಸ್ಕೋಪ್ ಅನ್ನು ಹೊಂದಿಸಿಡಲು ಸರಿಯಾದ ಆಧಾರ ಇಲ್ಲದಿದ್ದರೆ ಎಂಥ ಒಳ್ಳೆಯ ದೂರದರ್ಶಕವೂ ಉಪಯೋಗಕ್ಕೆ ಬರುವುದಿಲ್ಲ. ಒಂದು ದೊಡ್ಡ ಪ್ಲಾಸ್ಟಿಕ್ ಚೆಂಡನ್ನು ತೆಗೆದುಕೊಂಡು ಅದರ ತುಂಬ ಮರಳು ತುಂಬಿಸಿ. ಚಿಕ್ಕ ಕನ್ನಡಿಯನ್ನು ಚೆಂಡಿನ ಮೇಲೆ ಅಂಟಿಸಿ ಅದನ್ನು ಆಧಾರದ (ರಿಂಗ್) ಮೇಲಿಡಿ. ಕನ್ನಡಿಯು ಅಲುಗದಂತೆ ಸ್ಥಿರವಾಗಿಟ್ಟು ದೂರದ ಪರದೆ- ಯ ಮೇಲೆ ಪ್ರತಿಬಿಂಬವು ಬೀಳುವಂತೆ ಹೊಂದಿಸಿ, ಚೆಂಡಿಗೆ ಬದಲಾಗಿ ದುಂಡಗಿನ ಕರಬೂಜ ಅಥವಾ ಕಲ್ಲಂಗಡಿ ಹಣ್ಣನ್ನು ಬಳಸಬಹುದು. ಕತ್ತಲೆ ಕೋಣೆಯನ್ನು ಮಾಡಿಕೊಳ್ಳುವುದು ಹೇಗೆ? ಕನ್ನಡಿಯನ್ನು ಚೆಂಡಿಗೆ ಅಂಟಿಸುವುದು ಹೇಗೆ? ಪ್ಲಾಸ್ಟಿಕ್ ಚೆಂಡನ್ನು ಆಧಾರದ(ರಿಂಗಿನ) ಮೇಲೆ ಇಡುವುದು ಹೇಗೆ? ರಿಂಗು ಎಲ್ಲಿ ಸಿಗುತ್ತದೆ ಇಂಥ ಹಲವು ಪ್ರಶ್ನೆಗಳಿಗೆ ನೀವು ಪ್ರಯೋಗ ಮಾಡುತ್ತಾ ಉತ್ತರ ಪಡೆಯಬಹುದು.
ಸೂರ್ಯನ ಕಲೆಗಳನ್ನು ಪಡೆಯಲು ಸೂರ್ಯನ ಪ್ರಖರ ಬಿಂಬ ಮೂಡಬೇಕು. ಕನ್ನಡಿಯ ಅಳತೆ ಚಿಕ್ಕದಾದಷ್ಟು ಬಿಂಬ ಪ್ರಖರವಾಗುತ್ತದೆ ಚಿಕ್ಕದು ಎಂದರೆಷ್ಟು? ಅದನ್ನು ನೀವು ಪ್ರಯೋಗ ಮಾಡುತ್ತಾ ಕಲಿಯಿರಿ. ನನಗೆ 2 ಸೆಂ.ಮೀ. ವ್ಯಾಸದ ಕನ್ನಡಿ ಬಳಸಿ, 30 ಮೀಟರ್ ದೂರದ ಕತ್ತಲೆ ಕೋಣೆಯಲ್ಲಿ ಪ್ರಖರವಾದ ಬಿಂಬವನ್ನು ಪಡೆಯಲು ಸಾಧ್ಯವಾಗಿದೆ.
ಜನವರಿ ಕೊನೆಯ ವಾರದಲ್ಲಿ ನಾನು ಈ ಲೇಖನವನ್ನು ಬರೆಯುತ್ತಿದ್ದಾಗ ದೊಡ್ಡ ಗಾತ್ರದ ಸೂರ್ಯನ ಕಲೆಗಳನ್ನು ಕಾಣಬಹುದಿತ್ತು. ಈಗ ಸೂರ್ಯನ ಕಲೆಗಳ ವೀಕ್ಷಣೆಗೆ ಒಳ್ಳೆಯ ಸಮಯ (ಆದರೆ ಕೆಲವು ತಿಂಗಳಲ್ಲಿ ಸೂರ್ಯನ ಕಲೆಗಳೇ ಕಾಣುವುದಿಲ್ಲ).
ಸಮತಟ್ಟಾದ ಒಳ್ಳೆಯ ಗುಣಮಟ್ಟದ ಕನ್ನಡಿಯನ್ನು ಬಳಸಿ ಪ್ರಖರ ಬಿಂಬವನ್ನು ಪಡೆಯಬಹುದು. ಅಂತಹ ಕನ್ನಡಿಯನ್ನು ಸ್ಥಳೀಯ ಗಾಜು ಮಾರಾಟಗಾರರಿಂದ ಪಡೆಯಿರಿ.ನವದೆಹಲಿಯ ವಿಜ್ಞಾನ ಪ್ರಸಾರ್, ಬೇಕನ್ ಟೆಲಿವಿಷನ್, ಬಿಜಿವಿಎಸ್, ಕರ್ನಾಟಕ, ನವನಿರ್ಮಿತಿ ಬಾಂಬೆ, ಇವರು ಭೂಮಿಯ ಮೇಲೆ ಸೂರ್ಯ ಎಂಬ ಡಿವಿಡಿಯನ್ನು ಹೊರತರುತ್ತಿದ್ದಾರೆೆ. ಇದು ದೇಶದ ಎಲ್ಲಾ ವಿದ್ಯಾಥರ್ಿಗಳಿಗೂ ಲಭ್ಯವಿರುತ್ತದೆ. ಇದರಲ್ಲಿ ಮೇಲ್ಕಂಡ ಪ್ರಯೋಗಗಳೂ ಸೇರಿದಂತೆ 15 ಪರಿಣಾಮಕಾರಿಯಾದ ವಿಜ್ಞಾನ ಪ್ರಯೋಗಗಳನ್ನು ಮಾಡಿ ತೋರಿಸಲಾಗಿದೆ.
ಮಕ್ಕಳು ಮತ್ತು ವಿಚಾರಪ್ರಜ್ಞೆ
- ಜಿ.ಎಸ್. ಸತೀಶ್ ಹೊಸಕೆರೆ. ಶಿಕ್ಷಕರು. ಸ.ಹಿ.ಪ್ರಾ.ಶಾಲೆ ಮಳಲೂರು. ತೀರ್ಥಹಳ್ಳಿ(ತಾ)
ವೈಚಾರಿಕತೆ ಎಂದರೆ ಕೇವಲ ಬುದ್ದಿಜೀವಿಗಳು, ಫ್ರೊಫೆಸರುಗಳು, ಉನ್ನತ ವರ್ಗದವರು ಮಾತ್ರ ಮಾಡಬಹುದಾದ ದೊಡ್ಡ ಸತ್ಯಾನ್ವೇಷಣೆ ಎಂಬ ಭಾವ ಅನಾದಿಕಾಲದಿಂದಲೂ ನಮ್ಮಲ್ಲಿ ಬೇರೂರಿಬಿಟ್ಟಿದೆ. ಆದರೆ ಇಂದಿನ ದಿನಮಾನಗಳಲ್ಲಿ ನಾವು ಕಾಣುವ ಸಾಮಾಜಿಕ ಸ್ಥಿತ್ಯಂತರಗಳು ಎಲ್ಲವನ್ನೂ ಹುಸಿಯಾಗಿಸುತ್ತಿವೆ.
ಶಿಕ್ಷಣ-ಶಿಕ್ಷಕ-ವಿದ್ಯಾರ್ಥಿಸರಪಳಿಯನ್ನು ದೇಶದ ಸಾಮಾಜಿಕ ಗತಿಶೀಲನೆಯ ಮಾನಕವೆಂದು ಹಿಂದೆ ಭಾವಿಸಲಾಗಿತ್ತು ಆದರೆ ಈಗ ಸಮಾಜ ಆ ಥರದ ಯಾವ ಮಾನಕಗಳನ್ನೂ ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ.
ಯದ್ಭಾವಂ ತದ್ಭವತಿ ಎಂಬ ಉಕ್ತಿ ತುಂಬಾ ಹಳಸಲು ಎನ್ನಿಸಿದರೂ ಅದೊಂದು ಸಾರ್ವಕಾಲಿಕ ಸತ್ಯ. ನಾವು ಇಲ್ಲಿ ಮಕ್ಕಳ ವಿಷಯಕ್ಕೇ ಬಂದರೆ ಮಕ್ಕಳು ನಮ್ಮ(ಶಿಕ್ಷಕರ) ನಡವಳಿಕೆಗಳನ್ನು ಹೇಗೆ ಸ್ವೀಕರಿಸುತ್ತಿದ್ದಾರೆ? ಮತ್ತು ಅವರ ಮೆದುಳಲ್ಲಿ ಅದು ಹೇಗೆ ಡೀಕೋಡಿಂಗ್ ಆಗುತ್ತಾ ಇರುತ್ತದೆ ಎಂಬುದನ್ನು ಅರಿಯಲು ಮನೋವಿಜ್ಞಾನಿಗಳು ನಡೆಸಿದ ಅನೇಕ ಪ್ರಯೋಗಗಳು ಅವರನ್ನು ದಂಗು ಬಡಿಸಿಬಿಟ್ಟವಂತೆ! ಹೊರಗಿನಿಂದ ಅನೇಕ ಸಂಗತಿಗಳನ್ನು ತುಂಬಿಕೊಂಡು ಶಾಲೆಗೆ ಬರುವ ಮಗು ಪಠ್ಯದ ಪ್ರತಿ ವಿಷಯಗಳನ್ನೂ ಅಲ್ಲಿಗೆ ಹೋಗಿ ಟ್ಯಾಗ್ ಮಾಡುತ್ತಿತ್ತಂತೆ. ಉದಾಹರಣೆಗೆ ಎಲ್ಲಿಯಾದರೂ ಕತ್ಲಲ್ಲಿ ಎಂಬ ಪದ ನುಸುಳಿದರೆ ಕರಡೀಗೆ ಜಾಮೂನು ತಿನಿಸೋಕೆ... ಎಂಬ ಪದಗಳನ್ನು ಕೆಲವೇ ಸೆಕೆಂಡುಗಳಲ್ಲಿ ಜೋಡಿಸಿ ಪಠ್ಯವಿಷಯದಿಂದ ಹೊರಬಂದುಬಿಡುವುದು. ಇದು ಕೇವಲ ಉದಾಹರಣೆಯಷ್ಟೇ. ಮಗುವಿನ ಸುತ್ತಲೂ ಮಾಧ್ಯಮಗಳು, ಮೊಬೈಲುಗಳು, ಲೈಂಗಿಕ ವಿಚಾರಗಳು, ಆಥರ್ಿಕತೆ ಮುಂತಾದ ಅನೇಕ ಸಂಗತಿಗಳು ತಮಗೆ ಒಗ್ಗದ ಶಾಲಾ ವಿಚಾರಗಳನ್ನು ತುಂಬಿಕೊಳ್ಳಲು ಅಡ್ಡಗೋಡೆಯಂತೆ ನಿಂತುಬಿಡುತ್ತವೆ.
ಅಮೇರಿಕಾದ ಖ್ಯಾತ ಮನೋತಜ್ಞ ಹ್ಯಾರಿ ಸ್ಟಾಕ್ ಸುಲೈವನ್ ಹೇಳುವಂತೆ ಮಗುವು ತಂದೆ ತಾಯಿಗಳ ಸಂವೇದನೆಗಳ ಹಿಡಿತಕ್ಕೆ ಸಿಕ್ಕಿ ಸುತ್ತಲೂ ಏನು ನಡೆಯುತ್ತಿದೆ ಎಂದು ತಿಳಿಯುವ ಮೊದಲೇ ತನ್ನ ಸಮೀಪದಲ್ಲಿರುವವರ ಭಾವನೆಗಳಿಗೆ ಸ್ಪಂದಿಸತೊಡಗುತ್ತದೆ. ತಾಯಿಯು ಸ್ತನ್ಯಪಾನ ಮಾಡಿಸುವ ಸಮಯದಲ್ಲಿ ಆತಂಕದಿಂದಿದ್ದರೆ ಅದು ಮಗುವಿಗೂ ತಿಳಿದು ಆತಂಕ, ಒತ್ತಡಗಳನ್ನು ತಾನೂ ಅನುಭವಿಸುತ್ತದಲ್ಲದೆ ಈ ಸಂವೇದನೆಯು ಭವಿಷ್ಯದಲ್ಲಿ ಪ್ರಮುಖ ವ್ಯಕ್ತಿಗಳಿಗನುಗುಣವಾಗಿ ಅನುಬಂಧಿತವಾಗಿಬಿಡುತ್ತದೆ.
ಶಾಲೆಯು ಮಗುವಿನ ವಿಕಾಸದಲ್ಲಿ ಒಂದು ದೊಡ್ಡ ಪ್ರಯೋಗಶಾಲೆಯಾಗಿದ್ದು ಶಿಕ್ಷಕ ಕೇವಲ ತುಂಬುವ ಕೆಲಸ ಮಾಡಿದರೆ ಅವರೊಳಗಿನ ನೈಜ ಸಾಮಥ್ರ್ಯಗಳೆಲ್ಲಾ ನಶಿಸುತ್ತಾ ಒಂದು ಮನೋಪಂಥದ ಅನುಯಾಯಿಗಳಾಗಿಬಿಡುತ್ತಾರೆ. ಒಂದು ಸಂಗತಿಯನ್ನು ಪದೇಪದೇ, ಉಚ್ಛಕಂಠದಿಂದ ಕೂಗಿ ಹೇಳಿದರೆ ಅದನ್ನೇ ಮಕ್ಕಳು ಸಾರ್ವಕಾಲಿಕ ಸತ್ಯವೆಂದು ತಮ್ಮ ಮನೋಪಟಲದಲ್ಲಿ ಮುದ್ರಿಸಿಕೊಂಡು ಅದನ್ನೊಂದು ವಿಮರ್ಷೆಯ ಕಲ್ಲಿಗೆ ಸಾಣೆ ಹಿಡಿಯುವ ಕೆಲಸವನ್ನು ಎಂದಿಗೂ ಮಾಡಲಾರರು.
ಶ್ರೀಮತಿ ಕ್ಲೈನ್ ಪ್ರಕಾರ ತನ್ನ ದೈಹಿಕ ಪ್ರವೃತ್ತಿಗಳನ್ನು ಅರ್ಥ ಮಾಡಿಕೊಳ್ಳುವ ಜೀವನದ ಅಪಾಯಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಮಗುವಿನಲ್ಲಿ ವಿಚಿತ್ರ ಕಲ್ಪನೆಗಳು ರೂಪುಗೊಂಡು ಅವು ಮೂಲತಃ
ಪ್ರಜ್ಞಾ ಸ್ಥಿತಿಯಲ್ಲಿದ್ದರೂ ಸಮಸ್ಯಾ ಜೀವನದಲ್ಲಿ ಸುಪ್ತ ಮನಸ್ಸಿನೊಳಗೆ ದೂಡಲ್ಪಟ್ಟಿರುತ್ತವೆ. ಮಕ್ಕಳು ಸಂತೋಷವಾಗಿಲ್ಲದೇ ಇದ್ದಾಗ ಸುತ್ತ ಜಗತ್ತಿನ ಕಡೆಗೆ ಗಮನ ಹರಿಸುವುದು ಬಿಟ್ಟು ಗೊತ್ತುಗುರಿಯಿಲ್ಲದ ಕಲ್ಪನಾ ಲೋಕದಲ್ಲಿ ಮುಳುಗಿಬಿಡುತ್ತಾರೆ. ಇದು ಮಕ್ಕಳಿಗಲ್ಲದೆ ದೊಡ್ಡವರಾದ ನಮಗೂ ಅನ್ವಯಿಸಿಕೊಳ್ಳಬಹುದು.
ಇನ್ನೊಂದು ಉದಾಹರಣೆ ತೆಗೆದುಕೊಳ್ಳೋಣ; ಹಲವಾರು ದಿನಗಳಿಂದಲೂ ತನ್ನ ಬದುಕಿನಲ್ಲಿ ನೋವು ಅವಮಾನಗಳನ್ನೇ ಉಣ್ಣುತ್ತಾ ಬದುಕಿದವನಿಗೊಮ್ಮೆ ನಾನು ಯಾಕಾದರೂ ಈ ಭೂಮಿ ಮೇಲೆ ನಿಸ್ಪೃಹನಾಗಿ ಬದುಕುತ್ತಿದ್ದೇನೆಯೋ? ಎಂಬ ಪ್ರಶ್ನೆ ಮೂಡಿ ಅದರ ಬಗ್ಗೆ ಆಳವಾಗಿ ಯೋಚಿಸಿದ ಎಂದುಕೊಳ್ಳಿ ಎಲ್ಲಾ ಉತ್ತರಗಳೂ ಅಸ್ಪಸ್ಟವಾಗಿ ಇನ್ನೂ ಸಾಯದೇ ಇರುವ ಕಾರಣಕ್ಕೆ ಎಂಬುದು ಅಲ್ಟಿಮೇಟ್ ಉತ್ತರವಾಗಿಬಿಡುತ್ತದೆ. ಆದರೆ ಮಗುವೊಂದಕ್ಕೆ ಹೀಗೆ ಆಲೋಚಿಸುವ ಕಹಿ ವಾತಾವರಣ ಸೃಷ್ಟಿಸಿದೆವೆಂದುಕೊಳ್ಳಿ ನೇರವಾಗಿ ಅದು ಆತ್ಮಹತ್ಯೆಯ ಮಾರ್ಗಗಳ ಬಗ್ಗೆ ಯೋಚಿಸತೊಡಗುತ್ತೆ. ಅತ್ತ ಪೋಷಕರೂ, ಇತ್ತ ಶಿಕ್ಷಕರೂ ಸತ್ತ ಮಗುವಿನ ಸುತ್ತ ದುಃಖಿಸುತ್ತಾ ಅವನು ಏನು ಚೀಟಿ ಬರೆದಿದ್ದಾನೆಂದು ಹುಡುಕುತ್ತಾರೆಯೇ ವಿನಃ ತಾವು ಅವನ ಮೆದುಳಿನಲ್ಲಿ ಏನು ಬರೆದಿದ್ದೇವೆಂದು ಯೋಚಿಸುವುದೇ ಇಲ್ಲ!
ಮೊನ್ನೆ ಪೋಷಕರೊಬ್ಬರೊಂದಿಗೆ ಮಾತನಾಡುತ್ತಾ ಇದ್ದಾಗ ಅವರೆಂದರು ನಿಮ್ಮ ಶಾಲೆಗಳಲ್ಲಿ ಎಲ್ಲವನ್ನೂ ಕಲಿಸುತ್ತೀರಿ; ಪ್ರಕೃತಿಯೊಂದಿಗೆ ಬದುಕುವುದೊಂದನ್ನು ಬಿಟ್ಟು! ಎಷ್ಟು ಮಕ್ಕಳಿಗೆ ಈಜು ಕಲಿಯಲು ಹೇಳುತ್ತೀರಿ? ಎಷ್ಟು ಮಕ್ಕಳಿಗೆ ಮರ ಹತ್ತಲು ಹೇಳಿಕೊಟ್ಟಿದ್ದೀರಿ? ಎಷ್ಟು ಮಕ್ಕಳಿಕೆ ಸ್ವಂತ ಅಭಿಪ್ರಾಯಗಳೊಂದಿಗೆ ಬದುಕುವುದು ಗೊತ್ತು ಹೇಳಿ? ಎಂದರು. ಮೊದಲೆರಡು ಪ್ರಶ್ನೆಗಳು ನನಗೆ ಅಷ್ಟೇನೂ ಕಾಡಲಿಲ್ಲ. ಆದರೆ ಅಭಿಪ್ರಾಯ ಅಭಿವ್ಯಕ್ತಿ ಎಂಬುದು ಮಾತ್ರ ನನಗೆ ಎಲ್ಲೋ ಚುಚ್ಚಿದಂತೆನಿಸಿತು. ಏಕೆಂದರೆ ನಾನೂ ಇತ್ತೀಚಿಗೆ ನನ್ನ ಅಭಿಪ್ರಾಯಗಳನ್ನೆಲ್ಲಾ ಗುಂಡಿಯೊಳಗೆ ಹೂತಿಟ್ಟು ಒಂದು ಅಮೂರ್ತ ಚೌಕಟ್ಟಿನೊಳಗಣ ಅನಿವಾರ್ಯತೆಯಲ್ಲಿ ಬದುಕುತ್ತಿದ್ದೇನೋ ಎನಿಸಿಬಿಟ್ಟಿತು.
ಸಿಗ್ಮಂಡ್ ಫ್ರಾಯ್ಡ್ ಎಂಬ ಖ್ಯಾತ ಮನೋವಿಷ್ಲೇಷಕ ನಮ್ಮ ದೇಹ, ಜೀವನಕ್ರಮ, ಸಂಸ್ಕೃತಿಗಳೆಲ್ಲದರ ಮೇಲೆ ಪ್ರಭಾವ ಬೀರುವ ಸುಪ್ತ ಚೇತನದ ಲಯಪ್ರವೃತ್ತಿ ಹಾಗೂ ಸೃಷ್ಟಿ ಪ್ರವೃತ್ತಿಗಳ ಆಧಾರದಿಂದ ಪ್ರೀತಿ, ದ್ವೇಷ, ಕೋಪ, ಭಯ, ಕಾಮಗಳೆಲ್ಲಾ ಹುಟ್ಟಿಕೊಳ್ಳುವುದು ಎಂದು ವಿವರಿಸುತ್ತಾ ಅವುಗಳ ನಿಯಂತ್ರಣ ಹಾಗೂ ಬಳಕೆಯಿಂದ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ವಿವರಣೆ ನೀಡುತ್ತಾನೆ. ಇದನ್ನೇ ನಾವು ಸ್ವಲ್ಪ ಮುಂದುವರಿಸಿಕೊಂಡು ನಮ್ಮ ಶಾಲಾ ಕೊಠಡಿಯೊಳಕ್ಕೆ ಎಳೆದುಕೊಂಡು ಹೋಗುವುದಾದರೆ ಪ್ರತಿಯೊಂದು ಮಗುವಿಗೂ ಒಂದೊಂದು ಸೆಲ್ಫ್ ಸ್ಟೇಟಸ್ಸನ್ನು ಸೃಷ್ಠಿಸಿಕೊಡುವುದು ಹೇಗೋ ನಮಗೆ ವೇದ್ಯವಾಗಿಬಿಡುತ್ತದೆ.
ಪೋಷಕರು ಮತ್ತು ಶಿಕ್ಷಕರಿಗೆ ಮಕ್ಕಳು ತಮ್ಮ ಶ್ರೀಮಂತಿಕೆಯ, ದರ್ಪದ, ಬುದ್ಧಿವಂತಿಕೆಯ ಮತ್ತು ಇತರೆ ದೊಡ್ಡಸ್ತಿಕೆಗಳನ್ನು ಪ್ರದಶರ್ಿಸುವ ಆಟಿಕೆಗಳಂತಾಗದೆ ಪ್ರಕೃತಿಯಲ್ಲಿ ಸಹಜವಾಗಿ, ಯಾವುದೇ ಒತ್ತಡವಿಲ್ಲದೆ ಅರಳುವ ಹೂವುಗಳಂತಾಗಬೇಕು. ಆಗಲೇ ಪ್ರಕೃತಿಸೃಷ್ಠಿಗೆ ಒಂದು ಗೌರವ ಸೂಚಿಸಿದಂತಾಗುತ್ತದಲ್ಲವೇ?