Sunday 21 March 2021

ಅಮೆರಿಕಾದಲ್ಲಿ ಗೊರೂರು

ಅಮೆರಿಕಾದಲ್ಲಿ ಗೊರೂರು          

 ಒಂದೊಂದು ವಾಕ್ಯದಲ್ಲಿ ಉತ್ತರಿಸಿ                                                    

01)  ಪಾಶ್ಚಾತ್ಯರಲ್ಲಿ ಮಕ್ಕಳಾದಿಯಾಗಿ ತಿಳಿದುಕೊಂಡಿರುವ 

     ಅಂಶಗಳಾವುವು?   

     ಪಾಶ್ಚಾತ್ಯರಲ್ಲಿ ಮಕ್ಕಳಾದಿಯಾಗಿ ತಿಳಿದುಕೊಂಡಿರುವ ಅಂಶಗಳೆಂದರೆ - ಯಾಂತ್ರೀಕರಣ, ವಿದ್ಯುದೀಕರಣ, ಔದ್ಯೋಗೀಕರಣ ಮತ್ತು ಅಣು ಶಕ್ತಿ.                              

02)  ಅಮೇರಿಕಾ, ಕೆನಡಾಗಳಲ್ಲಿ ಬೆಂಕಿಯ ಅಪಾಯ ಹೆಚ್ಚು. ಏಕೆ? 

     ಅಮೇರಿಕಾ, ಕೆನಡಾ ದೇಶಗಳಲ್ಲಿ ಸಾಧಾರಣವಾಗಿ ಮನೆಗಳನ್ನು ಮರದಿಂದ ಕಟ್ಟಿರುತ್ತಾರೆ ಆದ್ದರಿಂದ ಬೆಂಕಿಯ ಅಪಾಯ ಹೆಚ್ಚು.  

03)  ಗೊರೂರು ರಾಮಸ್ವಾಮಿ ಅಯ್ಯಂಗಾರ್ ಸ್ಕೂಲಿನತ್ತ ಹೆಜ್ಜೆ 

     ಹಾಕಲು ಕಾರಣವೇನು?             

     ವಿದ್ಯುತ್ ಒಲೆಯ ಶಬ್ದ ಒಂದೇ ಸಮನೆ ಬರುತ್ತಿದ್ದ ಕಾರಣ ಅದನ್ನು ನಿಲ್ಲಿಸಲು ಹುಡುಗರನ್ನೋ, ಮೇಷ್ಟ್ರನ್ನೋ ಕರೆತರಲು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಸ್ಕೂಲಿನತ್ತ ಹೆಜ್ಜೆ ಹಾಕಿದರು.                                     

04)  ಅಮೇರಿಕಾದ ವಿದ್ಯಾರ್ಥಿಗಳನ್ನು ರಂಜಿಸಿದ ಕನ್ನಡ ಸಾಹಿತ್ಯ     ಭಾಗಗಳು ಯಾವುವು?          

ಅಮೇರಿಕಾದ ವಿದ್ಯಾರ್ಥಿಗಳನ್ನು ರಂಜಿಸಿದ ಕನ್ನಡ ಸಾಹಿತ್ಯ ಭಾಗಗಳು - ಜಾನಪದ ಹಾಸ್ಯ ಕಥೆಗಳು, ಗಾದೆಗಳು, ಮತ್ತು ಪಂಚತಂತ್ರದ ಕಥೆಗಳು.            

05)  ಶಾಲೆಗೆ ಹೋದ ಕೆಲಸದ ಬಗ್ಗೆ ಗೊರೂರರಿಗೆ ಯಾವಾಗ      ಜ್ಞಾನೋದಯವಾಯಿತು?         

     ಗೋರೂರು ಅವರ ಹೆಂಡತಿಯು ಶಾಲೆಗೆ ಬಂದು ಬಂದ ಕೆಲಸವೇ ಬಿಟ್ಟು ಮಾತನಾಡುತ್ತಾ ಕೂತು ಬಿಟ್ಟಿರಿ. ಈಗಲೋ ಆಗಲೋ ಮನೆ ಉರಿದು ಹೋಗುತ್ತೆ ಎಂದು ಹೇಳಿದಾಗ ಗೊರೂರರಿಗೆ ಜ್ಞಾನೋದಯವಾಯಿತು.                                    

06)  ಗೊರೂರು ರಾಮಸ್ವಾಮಿ ಅಯ್ಯಂಗಾರ್ರವರ ಸ್ಥಳ ಯಾವುದು?                       

    ಗೊರೂರು ರಾಮಸ್ವಾಮಿ ಅಯ್ಯಂಗಾರ್ರವರ ಸ್ಥಳ ಹಾಸನ ಜಿಲ್ಲೆಯ ಗೊರೂರು.                    

 07)  ಅಮೇರಿಕಾದಲ್ಲಿ ಗೊರೂರು ಪಾಠವನ್ನು ಯಾವ ಕೃತಿಯಿಂದ  ಆಯ್ದುಕೊಳ್ಳಲಾಗಿದೆ?         

ಅಮೇರಿಕಾದಲ್ಲಿ ಗೊರೂರು ಪಾಠವನ್ನು ಅಮೇರಿಕಾದಲ್ಲಿ ಗೊರೂರು ಕೃತಿಯಿಂದ ಆಯ್ದುಕೊಳ್ಳಲಾಗಿದೆ.  

08) ಯಾಂತ್ರೀಕರಣ ಎಂದರೇನು? 

ಯಂತ್ರಗಳ ಸಹಾಯದಿಂದ ಕೆಲಸವನ್ನು ನಿರ್ವಹಿಸುವುದು ಯಾಂತ್ರೀಕರಣ.                               

09) ವಿದ್ಯುದೀಕರಣ ಎಂದರೇನು?     

ವಿದ್ಯುತ್ ಶಕ್ತಿಯಿಂದ ಕೆಲಸಗಳನ್ನು ನಿರ್ವಹಿಸುವುದು ವಿದ್ಯುದೀಕರಣ.                    

10) ಔದ್ಯೋಗೀಕರಣ ಎಂದರೇನು?

ಸಂಘಟಿತವಾಗಿ ವಿವಿಧ ಬಗೆಯ ಉದ್ಯೋಗಗಳನ್ನು ಮಾಡುವುದು - ಔದ್ಯೋಗೀಕರಣ.                                

11) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಗೊರೂರರ ಕೃತಿ ಯಾವುದು?   

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಗೊರೂರರ ಕೃತಿ -ಅಮೇರಿಕದಲ್ಲಿ ಗೊರೂರು.                       

12) ದುರ್ಯೋಧನನು ಪಾಂಡವರಿಗಾಗಿ ಕಟ್ಟಿದ ಮನೆ ಯಾವುದು?    

ದುರ್ಯೋಧನನು ಪಾಂಡವರಿಗಾಗಿ ಕಟ್ಟಿದ ಮನೆ - ಅರಗಿನ ಮನೆ. ಧರ್ಮ ಸಮದೃಷ್ಟಿ       

13) ಬುಕ್ಕರಾಯನ ಹಿರಿಮೆ ಏನು?            

     ಬುಕ್ಕರಾಯನು ಶ್ರೀಮನ್ಮಹಾ ಮಂಡಳೇಶ್ವರ, ರಾಯರ ಗಂಡ ಎಂಬ ಹಿರಿಮೆಗೆ ಪಾತ್ರನಾಗಿದ್ದನು

14) ಬುಕ್ಕರಾಯನ ರಾಜ್ಯಭಾರ ಕಾಲದಲ್ಲಿ ಯಾರೊಳಗೆ ಸಂವಾದ ನಡೆಯಿತು?              

ಬುಕ್ಕರಾಯನ ರಾಜ್ಯಭಾರ ಕಾಲದಲ್ಲಿ ಜೈನರಿಗೂ ವೈಷ್ಣವರಿಗೂ ಸಂವಾದ ನಡೆಯಿತು.                          

15) ನಾಡ ಭವ್ಯ ಜನರು ಬುಕ್ಕರಾಯನ ಬಳಿ ಏನೆಂದು ಬಿನ್ನಹ ಮಾಡಿದರು?                  

     ನಾಡ ಭವ್ಯ ಜನರು ಬುಕ್ಕರಾಯನ ಬಳಿ ವಿಷ್ಣುವಿನ ಭಕ್ತರು ಮಾಡುವ ಅನ್ಯಾಯಗಳನ್ನು ಬಿನ್ನಹ ಮಾಡಿದರು. 

16) ಶ್ರೀವೈಷ್ಣವರೊಡನೆ ಮಹಾರಾಜನು ಏನು ಹೇಳಿದನು?                      

     ವೈಷ್ಣವರು ಮತ್ತು ಜೈನರೊಳಗೆ ಯಾವುದೇ ಭೇದವಿಲ್ಲವೆಂದೂ ಎಲ್ಲರೂ ಸಾಮರಸ್ಯದಿಂದ ಬಾಳಬೇಕೆಂದೂ ಶ್ರೀವೈಷ್ಣವರೊಡನೆ ಮಹಾರಾಜನು ಹೇಳಿದನು.                 

17) ರಾಯನು ವಿಧಿಸಿದ ಕಟ್ಟಳೆಯನ್ನು ಮೀರಿದರೆ ಆಗುವ  ಪರಿಣಾಮವೇನು?      

ರಾಯನು ವಿಧಿಸಿದ ಕಟ್ಟಳೆಯನ್ನು ಮೀರಿದರೆ ರಾಜದ್ರೋಹಿಯಾಗುವನು.    

18) ಧರ್ಮ ಸಮದೃಷ್ಟಿ ಶಾಸನ ಯಾವ ಅರಸನಿಗೆ ಸಂಬಂಧಿಸಿದ್ದು?                     

       ಧರ್ಮ ಸಮದೃಷ್ಟಿ ಶಾಸನ ವಿಜಯನಗರ ಸಾಮ್ರಾಜ್ಯದ ಅರಸ ವೀರಬುಕ್ಕರಾಯನಿಗೆ ಸಂಬಂಧಿಸಿದ್ದು.     

19) ಒಟ್ಟು ಎಷ್ಟು ಸಂವತ್ಸರಗಳಿವೆ?  

ಒಟ್ಟು 60 ಸಂವತ್ಸರಗಳಿವೆ.       

20) ಶುಕ್ಲಪಕ್ಷ ಅಥವಾ ಶುದ್ಧ ಪಕ್ಷ ಎಂದರೇನು? 

ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗಿನ ದಿನಗಳು - ಶುಕ್ಲಪಕ್ಷ.                   

21) ಕೃಷ್ಣಪಕ್ಷ ಎಂದರೇನು? 

ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗಿನ ದಿನಗಳು - ಕೃಷ್ಣಪಕ್ಷ.   

ಭಾಗ್ಯಶಿಲ್ಪಿ ಸರ್ ಎಂ. ವಿಶ್ವೇಶ್ವರಯ್ಯ                                      

22)  ವಿಶ್ವೇಶ್ವರಯ್ಯನವರ ಪೂರ್ವಜರು ಎಲ್ಲಿಯವರು? 

ವಿಶ್ವೇಶ್ವರಯ್ಯನವರ ಪೂರ್ವಜರು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಮೋಕ್ಷಗುಂಡಂ ಅಗ್ರಹಾರಕ್ಕೆ ಸೇರಿದವರು.