ಎಂಜಿನಿಯರ್ಸ್ ದಿನಾಚರಣೆ
23) ವೆಂಕಟಲಕ್ಷಮ್ಮ ತಮ್ಮ ಕುಟುಂಬವನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಿದ್ದು ಏಕೆ?
ಮಕ್ಕಳು ಹೆಚ್ಚು ಓದಿ ದೊಡ್ಡ ವ್ಯಕ್ತಿಗಳಾಗಬೇಕೆಂಬ ಕಾರಣದಿಂದ ವೆಂಕಟಲಕ್ಷಮ್ಮ ಅವರು ತಮ್ಮ ಕುಟುಂಬವನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಿದರು.
24) ಬ್ರಿಟೀಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ಯಾವ ಪದವಿ ನೀಡಿ ಗೌರವಿಸಿತು?
ಬ್ರಿಟೀಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ` ಸರ್ ' ಪದವಿ ನೀಡಿ ಗೌರವಿಸಿತು.
25) ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನೇಮಿಸಿದವರಾರು?
ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನೇಮಿಸಿದವರು ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್.
26) ವಿಶ್ವೇಶ್ವರಯ್ಯ ಅವರ ಹುಟ್ಟುಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಮಾಡಲಾಗುತ್ತದೆ?
ವಿಶ್ವೇಶ್ವರಯ್ಯ ಅವರ ಹುಟ್ಟುಹಬ್ಬದ ನೆನಪಿಗಾಗಿ ` ಎಂಜಿನಿಯರ್ಸ್ ದಿನಾಚರಣೆ ' ಯನ್ನು ಮಾಡಲಾಗುತ್ತದೆ?
27) ದೇವನೂರರ ` ನನ್ನ ದೇವರು ' ಯಾರು?
ದೇವನೂರರ ` ನನ್ನ ದೇವರು ' - ಬುದ್ಧ.
ವ್ಯಾಘ್ರ ಗೀತೆ :
28) ಭಗವದ್ಗೀತೆಯನ್ನು ರಚಿಸಿದವರು ಯಾರು? ಭಗವದ್ಗೀತೆಯನ್ನು ರಚಿಸಿದವರು - ಮಹರ್ಷಿ ವೇದವ್ಯಾಸರು.
29) ಹುಲಿಗೆ ಪರಮಾನಂದವಾಗಲು ಕಾರಣವೇನು?
ಶಾನುಭೋಗರ ದುಂಡುದುಂಡಾದ ಶರೀರವನ್ನು ನೋಡಿ ಹುಲಿಗೆ ಪರಮಾನಂದವಾಯಿತು.
30) ಶಾನುಭೋಗರಿಗೆ ತಲೆ ಸುತ್ತಲು ಕಾರಣವೇನು?
ಹುಲಿಯು ಶಾನುಭೋಗರ ಮುಂಭಾಗಕ್ಕೆ ನೆಗೆದ ಕೂಡಲೇ ಅವರು ಹುಲಿಗೆ ಮುಖವನ್ನು ತೋರಿಸದೆ ಬೆನ್ನು ತೋರಿಸುತ್ತಿದ್ದರು. ಹೀಗೆ ತುಂಬ ಹೊತ್ತು ಆಟವು ನಡೆದ ಕಾರಣ ಶಾನುಭೋಗರಿಗೆ ತಲೆ ಸುತ್ತಲಾರಂಭಿಸಿತು.
31) ಶಾನುಭೋಗರ ಬ್ರಹ್ಮಾಸ್ರ ಯಾವುದು?
ಶಾನುಭೋಗರ ಬ್ರಹ್ಮಾಸ್ರ - ಖಿrf ಪುಸ್ತಕ.
32) ಹಸಿದು ಮಲಗಿದ್ದ ಹುಲಿಯು ಏನೆಂದು ಭಾವಿಸಿತು?
ಹಸಿದು ಮಲಗಿದ್ದ ಹುಲಿಯು ವಿಧಿಯು ಆಹಾರಕ್ಕೆ ಏನನ್ನು ಒದಗಿಸುವುದೋ ಎಂದು ಭಾವಿಸಿತು.
ಎಮ್ಮ ನುಡಿಗೇಳ್
33) ಭೀಮನಿಗೆ ಪವನ ನಂದನ ಎಂಬ ಹೆಸರು ಬರಲು ಕಾರಣವೇನು?
ಭೀಮನು (ಪವನನ)ವಾಯುವಿನ ಮಗನಾಗಿರುವುದರಿಂದ ಅವನಿಗೆ ಪವನ ನಂದನ ಎಂಬ ಹೆಸರು ಬಂದಿದೆ.
34) ಘಟ ಸಂಭೂತ ಯಾರು?
ದ್ರೋಣಾಚಾರ್ಯರು ಘಟಸಂಭೂತರು.
35)ಗಾಂಡೀವಿ ಎಂದು ಅರ್ಜುನನನ್ನು ಏಕೆ ಕರೆಯುತ್ತಾರೆ?
ಗಾಂಡೀವ ಎಂಬ ಬಿಲ್ಲನ್ನು ಹೊಂದಿದ್ದ ಕಾರಣ ಅರ್ಜುನನಿಗೆ ಗಾಂಡೀವಿ ಎಂಬ ಹೆಸರಿನಿಂದ ಕರೆಯುತ್ತಾರೆ.
36) ಪಂಪ ಭಾರತದ ಇನ್ನೊಂದು ಹೆಸರೇನು?
ಪಂಪಭಾರತದ ಇನ್ನೊಂದು ಹೆಸರು - ವಿಕ್ರಮಾರ್ಜುನ ವಿಜಯ.
37) ಪಂಪನು ಎಲ್ಲಿ ಆಸ್ಥಾನ ಕವಿಯಾಗಿದ್ದನು?
ಪಂಪನು ಚಾಲುಕ್ಯ ದೊರೆ ಅರಿಕೇಸರಿಯ ಆಸ್ಥಾನದಲ್ಲಿ ಆಸ್ಥಾನ ಕವಿಯಾಗಿದ್ದನು.
38) ಪಂಪನಿಗೆ ಇದ್ದ ಬಿರುದುಗಳು ಯಾವುವು?
ಪಂಪನಿಗೆ ಇದ್ದ ಬಿರುದುಗಳು - ಸಂಸಾರ ಸಾರೋದಯ, ಕವಿತಾ ಗುಣಾರ್ಣವ ಮತ್ತು ಸರಸ್ವತೀ ಮಣಿಹಾರ.
39) ಕನ್ನಡದ ಆದಿಕವಿ ಎಂದು ಯಾರನ್ನು ಕರೆಯಲಾಗುತ್ತದೆ?
ಪಂಪನನ್ನು ಕನ್ನಡದ ಆದಿಕವಿ ಕರೆಯಲಾಗುತ್ತದೆ.
40) ಪಂಪನು ವಿಕ್ರಮಾರ್ಜುನ ವಿಜಯದಲ್ಲಿ ಅರಿಕೇಸರಿಯನ್ನು ಯಾರಿಗೆ ಹೋಲಿಸಿದ್ದಾನೆ?
ಪಂಪನು ವಿಕ್ರಮಾರ್ಜುನ ವಿಜಯದಲ್ಲಿ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿದ್ದಾನೆ.
41) ಪಂಪ ಕವಿಯು ತಾನು ಬರೆದ ಯಾವ ಕೃತಿಯನ್ನು ಲೌಕಿಕ ಕಾವ್ಯವೆಂದು ಕರೆದಿದ್ದಾನೆ?
` ಪಂಪ ಭಾರತ ' ಕೃತಿಯನ್ನು ಲೌಕಿಕ ಕಾವ್ಯವೆಂದು ಕರೆದಿದ್ದಾನೆ.
42) ಕುರುಕ್ಷೇತ್ರ ಯುದ್ಧವು ಎಷ್ಟು ದಿನಗಳ ಕಾಲ ನಡೆಯಿತು?
ಕುರುಕ್ಷೇತ್ರ ಯುದ್ಧವು ಹದಿನೆಂಟು ದಿನಗಳ ಕಾಲ ನಡೆಯಿತು.
43) ಪಂಪನು ಬರೆದ ಎರಡು ಕೃತಿಗಳು ಯಾವುವು?
ಪಂಪನ ಎರಡು ಕೃತಿಗಳು - ಅದಿಪುರಾಣ ಮತ್ತು ಪಂಪ ಭಾರತ
ವೀರಲವ :
44) ಜೈಮಿನಿ ಭಾರತವನ್ನು ಬರೆದ ಕವಿ ಯಾರು?
ಜೈಮಿನಿ ಭಾರತವನ್ನು ಬರೆದ ಕವಿ - ಲಕ್ಷ್ಮೀಶ ಕವಿ.
45) ಲಕ್ಷ್ಮೀಶ ಕವಿಯ ಸ್ಥಳ ಯಾವುದು?
ಲಕ್ಷ್ಮೀಶ ಕವಿಯ ಸ್ಥಳ – ದೇವನೂರು.