ಎಮ್ಮ ನುಡಿಗೇಳ್
13. ಎನಗಂ ಪಾಂಡುಗಮಿಲ್ಲ ಭೇದಂ
ಈ ವಾಕ್ಯವನ್ನು ಪಂಪ ಕವಿಯು ರಚಿಸಿರುವ ಎಮ್ಮ ನುಡಿಗೇಳ್ ಪದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ. ಇದು ಧೃತರಾಷ್ಟ್ರನು ದುರ್ಯೋಧನನನಿಗೆ ಹೇಳಿದ ಮಾತು. ಧೃತರಾಷ್ಟ್ರನು
ಪಾಂಡವರೊಂದಿಗೆ ಭೇದವನ್ನು ಹೊಂದಿಲ್ಲ ಎಂಬ ಅರ್ಥವನ್ನು ಈ ಮಾತು ಸೂಚಿಸುತ್ತದೆ.
ಧೃತರಾಷ್ಟ್ರನು ದುರ್ಯೋಧನನನಿಗೆ ಪಾಂಡವರಿಗೂ ನಮಗೂ ಭೇದವಿಲ್ಲ. ರಾಜ್ಯವನ್ನು ಭಾಗಮಾಡಿಕೊಂಡು ಆಳುವುದು. ಪಾಂಡವರೂ ನಿನ್ನಲ್ಲ್ಲಿ ಸರಿಯಾಗಿಯೇ ನಡೆದುಕೊಳ್ಳುತ್ತಾರೆ. ಅವರು ಪಾಂಡುರಾಜನಿಗೆ ವಿಧೇಯರಾಗಿದ್ದಂತೆಯೇ ನನ್ನಲ್ಲಿಯೂ ವಿಧೇಯರಾಗಿದ್ದಾರೆ. ನಾನು ಹೇಳಿದುದನ್ನು ಅವರು ಮೀರುವುದಿಲ್ಲ. ಅವರನ್ನು ಹೇಗಾದರೂ ಒಪ್ಪಿಸಿ ನೀನು ಹೇಳಿದುದನ್ನು ಕೇಳುವಂತೆ ಮಾಡುತ್ತೇನೆ. ಆದ್ದರಿಂದ ಸಂಧಿಗೆ ಒಪ್ಪಿಕೋ ಎಂದು ಹೇಳುವ ಸಂದರ್ಭದಲ್ಲಿ ಧೃತರಾಷ್ಟ್ರನು ಈ ಮಾತನ್ನು ತಿಳಿಸಿದನು.
14. ಈ ಕಲಹಮುಂ ನಿನ್ನಿಂದಮಾಯ್ತೆಂದೊಡಿಂ ಮುನಿವೈ
ಈ ವಾಕ್ಯವನ್ನು ಪಂಪ ಕವಿಯು ರಚಿಸಿರುವ ಎಮ್ಮ ನುಡಿಗೇಳ್ ಪದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ. ಇದು ಧೃತರಾಷ್ಟ್ರನು ದುರ್ಯೋಧನನನಿಗೆ ಹೇಳಿದ ಮಾತು. ಕುರುಕ್ಷೇತ್ರ ಯುದ್ಧವು ಕೌರವನಿಂದಲೇ ಆಯಿತು ಎನ್ನುವುದನ್ನು ಈ ಮಾತು ಸೂಚಿಸುತ್ತದೆ.
ಧೃತರಾಷ್ಟ್ರನು ಹೇಳಿದನು - ಪಾಂಡವರಿಗೂ ನಮಗೂ ಭೇದವಿಲ್ಲ. ರಾಜ್ಯವನ್ನು ಭಾಗಮಾಡಿಕೊಂಡು ಆಳುವುದು. ಪಾಂಡವರೂ ನಿನ್ನಲ್ಲ್ಲಿ ಸರಿಯಾಗಿಯೇ ನಡೆದುಕೊಳ್ಳುತ್ತಾರೆ. ಅವರು ಪಾಂಡುರಾಜನಿಗೆ ವಿಧೇಯರಾಗಿದ್ದಂತೆಯೇ ನನ್ನಲ್ಲಿಯೂ ವಿಧೇಯರಾಗಿದ್ದಾರೆ. ನಾನು ಹೇಳಿದುದನ್ನು ಅವರು ಮೀರುವುದಿಲ್ಲ. ಈ ಯುದ್ಧವು ನಿನ್ನಿಂದ ಆಯಿತು ಎಂದರೆ ನೀನು ಕೋಪಿಸಿಕೊಳ್ಳುವೆ ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.
15 ಪಗೆಗೆ ಕಣಿಯೊಂದುಂಟೇ
ಈ ವಾಕ್ಯವನ್ನು ಪಂಪ ಕವಿಯು ರಚಿಸಿರುವ `ಎಮ್ಮ ನುಡಿಗೇಳ್ ' ಪದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ. ಇದು ಧೃತರಾಷ್ಟ್ರನು ದುರ್ಯೋಧನನನಿಗೆ ಹೇಳಿದ ಮಾತು. ದ್ವೇಷಕ್ಕೆ ಕೊನೆಯಿಲ್ಲ ಎಂಬ ಅರ್ಥವನ್ನು ಈ ಮಾತು ಸೂಚಿಸುತ್ತದೆ.
ನನಗೂ ಪಾಂಡುವಿಗೂ ಭೇದವಿಲ್ಲ; ರಾಜ್ಯವನ್ನು ಭಾಗ ಮಾಡಿಕೊಂಡು ಆಳೋಣ, ಆ ಪಾಂಡುಪುತ್ರರೂ ನಿನ್ನಲ್ಲಿ ಸರಿಯಾಗಿಯೇ ನಡೆದುಕೊಳ್ಳುತ್ತಾರೆ. ಈ ಯುದ್ಧವೂ ನಿನ್ನಿಂದ ಆಯಿತು ಎಂದರೆ ನೀನು ಕೋಪಿಸಿಕೊಳ್ಳುವೆ. ಭೀಷ್ಮ ದ್ರೋಣ ಕರ್ಣರಿಗೆ ಅಸಾಧ್ಯವಾದ ಅರ್ಜುನನನ್ನು ಕೋಪದಿಂದ ಎದುರಿಸಿ ಯುದ್ಧಮಾಡುವವರು ಯಾರಿದ್ದಾರೆ? ಇನ್ನು ಸಂಧಿಯನ್ನು ಅವರೊಂದಿಗೆ ಮಾಡಿಕೊಳ್ಳೋಣ ಎಂದು ಹೇಳುವ ಸಂದರ್ಭದಲ್ಲಿ ಹಗೆತನಕ್ಕೆ ಒಂದು ಗಣಿ ಇದೆಯೇನು ಎಂಬ ಮಾತು ಬಂದಿದೆ.
16. ಪಗೆಯುಂ ನಣ್ಪುಂ ಕಯ್ಕೊಂಡ ಕಜ್ಜದಿನಲ್ತೆ
ಈ ವಾಕ್ಯವನ್ನು ಪಂಪ ಕವಿಯು ರಚಿಸಿರುವ `ಎಮ್ಮ ನುಡಿಗೇಳ್ ' ಪದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ. ಇದು ಧೃತರಾಷ್ಟ್ರನು ದುರ್ಯೋಧನನನಿಗೆ ಹೇಳಿದ ಮಾತು.
ನನಗೂ ಪಾಂಡುವಿಗೂ ಭೇದವಿಲ್ಲ , ರಾಜ್ಯವನ್ನು ಭಾಗ ಮಾಡಿಕೊಂಡು ಆಳೋಣ. ಈ ಯುದ್ಧವೂ ನಿನ್ನಿಂದ ಆಯಿತು ಎಂದರೆ ನೀನು ಕೋಪಿಸಿಕೊಳ್ಳುವೆ. ಭೀಷ್ಮ ದ್ರೋಣ ಕರ್ಣರಿಗೆ ಅಸಾಧ್ಯವಾದ ಆ ಅ6ನನನ್ನು ಕೋಪದಿಂದ ಎದುರಿಸಿ ಯುದ್ಧ ಮಾಡುವವರು ಯಾರಿದ್ದಾರೆ? ಇನ್ನು ಸಂಧಿಯನ್ನು ಅವರೊಂದಿಗೆ ಮಾಡಿಕೊಳ್ಳೋಣ. ಹಗೆತನಕ್ಕೆ ಒಂದು ಗಣಿ ಇದೆಯೇನು? ನೀನು ಯೋಚಿಸು ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.
16. ಪಗಲೆನಿತಾನುಂ ದೀವಿಗೆಗಳುರಿದೊಡೇಂ
ಈ ವಾಕ್ಯವನ್ನು ಪಂಪ ಕವಿಯು ರಚಿಸಿರುವ `ಎಮ್ಮ ನುಡಿಗೇಳ್ ' ಪದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ. ಇದು ಧೃತರಾಷ್ಟ್ರನು ದುರ್ಯೋಧನನನಿಗೆ ಹೇಳಿದ ಮಾತು. ದ್ವೇಷಕ್ಕೆ ಕೊನೆಯಿಲ್ಲ ಎಂಬ ಅರ್ಥವನ್ನು ಈ ಮಾತು ಸೂಚಿಸುತ್ತದೆ.
ನನಗೂ ಪಾಂಡುವಿಗೂ ಭೇದವಿಲ್ಲ; ರಾಜ್ಯವನ್ನು ಭಾಗ ಮಾಡಿಕೊಂಡು ಆಳೋಣ, ಆ ಪಾಂಡುಪುತ್ರರೂ ನಿನ್ನಲ್ಲಿ ಸರಿಯಾಗಿಯೇ ನಡೆದುಕೊಳ್ಳುತ್ತಾರೆ. ಈ ಯುದ್ಧವೂ ನಿನ್ನಿಂದ ಆಯಿತು ಎಂದರೆ ನೀನು ಕೋಪಿಸಿಕೊಳ್ಳುವೆ. ಇನ್ನು ಅವರೊಂದಿಗೆ ಸಂಧಿಯನ್ನು ಮಾಡಿಕೊಳ್ಳೋಣ. ಹಗೆತನಕ್ಕೆ ಒಂದು ಗಣಿ ಇದೆಯೇನು.. ಹಗಲಿನಲ್ಲಿ ಎಷ್ಟು ದೀಪಗಳು ಇದ್ದರೇನು, ಇಲ್ಲದಿದ್ದರೇನು ಬೆಳಕನ್ನು ಕೊಡಲು ಸೂರ್ಯನೊಬ್ಬನೇ ಸಾಲದೇ. ನೀನೊಬ್ಬನಿದ್ದರೆ ನಮಗೆ ಎಲ್ಲರೂ ಇದ್ದಂತೆ ಎಂದು ಧೃತರಾಷ್ಟ್ರನು ಹೇಳಿದನು.
17. ಪೆರ್ಮರನುಳಿವಂತೆ ನೀನುಳಿದೆ
ಈ ವಾಕ್ಯವನ್ನು ಪಂಪ ಕವಿಯು ರಚಿಸಿರುವ `ಎಮ್ಮ ನುಡಿಗೇಳ್ ' ಪದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ. ಇದು ಗಾಂಧಾರಿಯು ದುರ್ಯೋಧನನನಿಗೆ ಹೇಳಿದ ಮಾತು. ದುರ್ಯೋಧನ ಒಬ್ಬನಾದರೂ ಬದುಕಿರುವುದಕ್ಕೆ ಗಾಂಧಾರಿಯು ತೃಪ್ತಿಯನ್ನು ವ್ಯಕ್ತಪಡಿಸಿದ್ದಾಳೆ.
ಕುರುಕುಲವೆಂಬ ನಂದನ ವನವು ಭೀಮನೆಂಬ ಮದ್ದಾನೆಯು ಕೋಪದಿಂದ ನುಗ್ಗಲು ಧ್ವಂಸವಾಯಿತು. ನಮ್ಮ ಪುಣ್ಯದಿಂದ ಒಂದು ದೊಡ್ಡ ಮರವು ಉಳಿಯುವ ಹಾಗೆ ನೀನು ಉಳಿದಿರುವೆ. ಇನ್ನು ಯುದ್ಧಮಾಡುವವರು ಯಾರೂ ಇಲ್ಲ. ಮುದುಕರು, ಕುರುಡರು ಎನ್ನದೆ ನಮ್ಮ ಮಾತನ್ನು ಕೇಳು; ಸಂಧಾನಕ್ಕೆ ಒಪ್ಪಿಕೋ ಎಂದು ಹೇಳುವ ಸಂದರ್ಭದಲ್ಲಿ ಈಮಾತು ಬಂದಿದೆ.