Friday 19 March 2021

ಹಲಗಲಿ ಬೇಡರು


    

   ಹಲಗಲಿ ಬೇಡರು                       

18. ಎಲ್ಲ ಜನರಿಗೆ ಜೋರ ಮಾಡಿ ಕಸಿದುಕೊಳ್ಳಿರಿ ಹತಾರ    ಜನಪದರು ರಚಿಸಿದ ಹಲಗಲಿ ಬೇಡರು ಎಂಬ ಲಾವಣಿಯಿಂದ ಈ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಇದು ಬ್ರೀಟೀಷ್ ಸರಕಾರದ ಆಜ್ಞೆ .    

     ಬ್ರಿಟೀಷ್ ಸರಕಾರವು ಭಾರತೀಯರು ಆಯುಧಗಳನ್ನು ಇಟ್ಟುಕೊಳ್ಳಬಾರದು ಎಂಬ ಶಾಸನವನ್ನು ಮಾಡಿತು. ಹಾಗೂ ಭಾರತೀಯರಲ್ಲಿದ್ದ ಆಯುಧಗಳನ್ನು ಕಸಿದುಕೊಳ್ಳಲು ಆಜ್ಞೆಯನ್ನು ಹೊರಡಿಸಿತು. ಅದು ಎಷ್ಟು ಕಠಿಣವಾಗಿತ್ತೆಂದರೆ ಎಲ್ಲ ಜನರನ್ನು ಜೊರು ಮಾಡಿ ಅವರಿಂದ ಆಯುಧಗಳನ್ನು ಕಸಿದುಕೊಳ್ಳಿರಿ ಎಂಬ ಭೀತಿ ಹುಟ್ಟಿಸಿದ್ದರು.                                                

19.   ಜೀವ ಸತ್ತು ಹೋಗುವುದು ಗೊತ್ತ.                                                                                                                                                      

    ಜನಪದರು ರಚಿಸಿದ ಹಲಗಲಿ ಬೇಡರು ಎಂಬ ಲಾವಣಿಯಿಂದ ಈ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಹಲಗಲಿ ವೀರರು ಹೇಳಿದ ಮಾತು.  ಬ್ರಿಟೀಷ್ ಸರಕಾರವು ಭಾರತೀಯರು ಆಯುಧಗಳನ್ನು ಇಟ್ಟುಕೊಳ್ಳಬಾರದು ಎಂಬ ಶಾಸನವನ್ನು ಮಾಡಿತು. ಹಾಗೂ ಭಾರತೀಯರಲ್ಲಿದ್ದ ಆಯುಧಗಳನ್ನು ಕಸಿದುಕೊಳಲ್ಳು ಆಜ್ಞೆಯನ್ನು ಹೊರಡಿಸಿತು. ಆದರೆ ಹಲಗಲಿಯ ವೀರರಾದ ಹನುಮ, ಬಾಲ, ಜಡಗ ಮತ್ತು ರಾಮ - ಇವರು ನಾವು ನಾಲ್ಕು ಮಂದಿ ಏನೇ ಬಂದರೂ ಬ್ರಿಟೀಷರಿಗೆ ಆಯುಧಗಳನ್ನು ಕೊಡಬಾರದು ಎಂಬ ಪ್ರತಿಜ್ಞೆಯನ್ನು ಸ್ವೀಕರಿಸಿ ಈ ಮಾತನ್ನು ಹೇಳಿದ್ದಾರೆ.                 

20.   ಹೊಡೆದರೊ ಗುಂಡ ಕರುಣೆ ಇಲ್ಲದ್ಹಂಗ        

    ಜನಪದರು ರಚಿಸಿದ ಹಲಗಲಿ ಬೇಡರು ಎಂಬ ಲಾವಣಿಯಿಂದ ಈ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಇದು ಲಾವಣಿಕಾರ ಹೇಳಿದ ಮಾತು.                      

     ಬ್ರಿಟೀಷ್ ಸರಕಾರವು ಭಾರತೀಯರಲ್ಲಿದ್ದ ಆಯುಧಗಳನ್ನು ಕಸಿದುಕೊಳ್ಳಲು ಆಜ್ಞೆಯನ್ನು ಹೊರಡಿಸಿತು. ಆದರೆ ಹಲಗಲಿಯ ವೀರರು ಏನೇ ಬಂದರೂ ಬ್ರಿಟೀಷರಿಗೆ ಆಯುಧಗಳನ್ನು ಕೊಡಬಾರದು ಎಂದು ಹೇಳಿದರು. ಕಾರಕೂನನ ಕಪಾಳಕ್ಕೆ ಹೊಡೆದಾಗ ಅವನು ಬಿದ್ದುಹೋದ. ಈ ಸುದ್ದಿ ತಿಳಿದ ಬ್ರಿಟೀಷ್ ಸಾಹೇಬ ಕೊಪದಿಂದ ಆಜ್ಞೆ ಹೊರಡಿಸಿದ ಕಾರಣ ಕುದುರೆಯ ಸೈನ್ಯ ಹಲಗಲಿಗೆ ಬಂದು ಬೆನ್ನಟ್ಟಿಕೊಂಡು ಹೋಗಿ ಹಲಗಲಿಯ ಜನರನ್ನು ಕರುಣೆ ಇಲ್ಲದೆ ಕೊಲ್ಲುತ್ತಿತ್ತು ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ. 

21.   ಕೆಟ್ಟು ವರ್ಣಿಸಿ ಹೇಳಿದೆ ಒಂದಷ್ಟು                        

     ಜನಪದರು ರಚಿಸಿದ ಹಲಗಲಿ ಬೇಡರು ಎಂಬ ಲಾವಣಿಯಿಂದ ಈ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಇದು ಲಾವಣಿಕಾರ ಹೇಳಿದ ಮಾತು.                           

     ಬ್ರಿಟೀಷ್ ಸರಕಾರವು ಭಾರತೀಯರಲ್ಲಿದ್ದ ಆಯುಧಗಳನ್ನು ಕಸಿದುಕೊಳ್ಳಲು ಆಜ್ಞೆಯನ್ನು ಹೊರಡಿಸಿತು. ಆದರೆ ಹಲಗಲಿಯ ವೀರರಾದ ಹನುಮ, ಬಾಲ, ಜಡಗ ಮತ್ತು ರಾಮ - ಇವರು ನಾವು ಏನೇ ಬಂದರೂ ಬ್ರಿಟೀಷರಿಗೆ ಆಯುಧಗಳನ್ನು ಕೊಡಬಾರದು ಎಂದು ಹೇಳಿದರು. ಕಾರಕೂನನ ಕಪಾಳಕ್ಕೆ ಹೊಡೆದ ಪರಿಣಾಮವಾಗಿ ಸೈನ್ಯವು ಹಲಗಲಿಗೆ ಬಂದು ಊರನ್ನು ಲೂಟಿಮಾಡಿ, ಊರಿಗೆ ಬೆಂಕಿ ಕೊಟ್ಟರು. ಈ ದುಃಖದ ಕಥೆಯನ್ನು ಸ್ವಲ್ಪ ಹೇಳಿದ್ದೇನೆ ಎನ್ನುತ್ತಾನೆ ಲಾವಣಿಕಾರ.         

 ಸಂಕಟಕೆ ಗಡಿ ಇಲ್ಲ                 

22.   ಗೆರೆ ಎಳೆದು ಗಡಿ ಎಂದ.                                                                                                                                       

    ದು. ಸರಸ್ವತಿಯವರ ಸಂಕಟಕೆ ಗಡಿ ಇಲ್ಲ ಎಂಬ ಪದ್ಯಪಾಠದಿಂದ ಈ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಕವಯತ್ರಿ ಈ ಮಾತನ್ನು ಹೇಳಿದ್ದಾರೆ.                                         

      ಮಾನವನೆಂಬ ಅಹಂಕಾರಿಯು ಈ ಭೂಮಿಯು ತನ್ನದೆಂದು ಹೇಳಿಕೊಂಡು ಬೀಗುತ್ತಾನೆ. ತಾನೇ ಈ ಭೂಮಿಗೆ ಮಾಲೀಕ ಎಂಬ ಮತ್ತಿನಲ್ಲಿ ಮೆರೆಯುತ್ತಾನೆ. ಅದೇ ಅಹಂಕಾರದಿಂದ ಭೂಮಿಯ ಮೇಲೆ ಗೆರೆ ಎಳೆದು ಗಡಿಯನ್ನು ನಿರ್ಮಿಸಿಕೊಂಡು ಮೆರೆಯುತ್ತಾನೆ ಎಂದು ಕವಯತ್ರಿ ಹೇಳಿದ್ದಾರೆ.                      

23.   ಜೀವಗಳು ಶವವಾದವು .                         

      ದು. ಸರಸ್ವತಿಯವರ ಸಂಕಟಕೆ ಗಡಿ ಇಲ್ಲ ಎಂಬ ಪದ್ಯಪಾಠದಿಂದ ಈ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಕವಯತ್ರಿ ಈ ಮಾತನ್ನು ಹೇಳಿದ್ದಾರೆ.                           

    ಮಾನವನು ಭೂಮಿಯ ಮೇಲೆ ಗೆರೆ ಎಳೆದು ಗಡಿಯನ್ನು ನಿರ್ಮಿಸಿಕೊಳ್ಳುತ್ತಾನೆ. ಈ ಭೂಮಿಗೆ ಮಾಲೀಕ ಎಂಬ ಮತ್ತಿನಲ್ಲಿ ಮೆರೆಯುತ್ತಾನೆ. ಅದೇ ಅಹಂಕಾರದಿಂದ ಭೂಮಿಗಾಗಿ ಕಾದಾಟದ ಆಟವನ್ನು ಆಡುತ್ತಾನೆ. ಇದರಿಂದ ಜೀವಗಳು ಶವಗಳಾಗುತ್ತವೆ ಎಂದು ಕವಯತ್ರಿ ಹೇಳಿದ್ದಾರೆ.                 

24.   ಗಡಿಯ ಮ್ಯಾಜಿಕ್ನಿಂದ ಜೀವ ತೆತ್ತವರು  .   

     ದು. ಸರಸ್ವತಿಯವರ ಸಂಕಟಕೆ ಗಡಿ ಇಲ್ಲ ಎಂಬ ಪದ್ಯಪಾಠದಿಂದ ಈ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಕವಯತ್ರಿ ಈ ಮಾತನ್ನು ಹೇಳಿದ್ದಾರೆ.                          

     ಮಾನವನು ಭೂಮಿಯ ಮೇಲೆ ಗೆರೆ ಎಳೆದು ಗಡಿಯನ್ನು ನಿರ್ಮಿಸಿಕೊಳ್ಳುತ್ತಾನೆ. ಈ ಭೂಮಿಗೆ ಮಾಲೀಕ ಎಂಬ ಮತ್ತಿನಲ್ಲಿ ಮೆರೆಯುತ್ತಾನೆ. ಅದೇ ಅಹಂಕಾರದಿಂದ ಭೂಮಿಗಾಗಿ ಕಾದಾಟದ ಆಟವನ್ನು ಆಡುತ್ತಾನೆ. ಗಡಿಯ ಎರಡೂ ಕಡೆ ರಕ್ತ ಒಂದೇ ಆದರೂ ಗಡಿಯ ಮ್ಯಾಜಿಕ್ನಿಂದಾಗಿ ಸಾವು ಸಂಭವಿಸುತ್ತದೆ ಎಂದು ಕವಯತ್ರಿ ಹೇಳಿದ್ದಾರೆ.                            

25.   ಗಡಿಯೂ ಇಲ್ಲ, ಆಚೆ ಈಚೆಯೂ ಇಲ್ಲ .              

     ದು. ಸರಸ್ವತಿಯವರ ಸಂಕಟಕೆ ಗಡಿ ಇಲ್ಲ ಎಂಬ ಪದ್ಯಪಾಠದಿಂದ ಈ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಕವಯತ್ರಿ ಈ ಮಾತನ್ನು ಹೇಳಿದ್ದಾರೆ.                      

     ಭೂಮಿಯ ಮೇಲೆ ಗೆರೆ ಎಳೆದು ಗಡಿಯನ್ನು ನಿರ್ಮಿಸಿಕೊಂಡ ಮಾನವನು ಅದರ ಮತ್ತಿನಲ್ಲಿ ಭೂಮಿಗಾಗಿ ಕಾದಾಟ ಮಾಡುತ್ತಾನೆ. ನೆತ್ತರು ಹರಿಯುತ್ತದೆ.ಆದರೆ ಒಡಲು ಅನುಭವಿಸುವ ಸಂಕಟಕ್ಕೆ ಗಡಿಯೂ ಇಲ್ಲ, ಆಚೆ ಈಚೆಯೂ ಇಲ್ಲ ಎನ್ನುತ್ತಾರೆ ಕವಯತ್ರಿ.                                                

8-10 ವಾಕ್ಯಗಳಲ್ಲಿ ಉತ್ತರಿಸಿ.    

ಜೀವನ ದೃಷ್ಟಿ                         

1. ಜೀವನ ದೃಷ್ಟಿ ಗದ್ಯದಲ್ಲಿ ಅಂತರ್ ಜೀವಿಯ ವ್ಯಕ್ತಿತ್ವ ಹೇಗೆ 

 ವರ್ಣಿತವಾಗಿದೆ?                                     

          ಅಂತರ್ಜೀವಿಯು ಉಳಿದವರನ್ನು ಪ್ರೀತಿಯಿಂದ ಕಾಣಬಲ್ಲ. ಅವನು ತನ್ನಿಂದ ಆದಷ್ಟು ಯಾರಿಗೂ ತೊಂದರೆ ಆಗಬಾರದೆಂದು ಎಚ್ಚರದಿಂದ ಇರುತ್ತಾನೆ. ಅಂತರ್ಜೀವಿಯು ತನ್ನ ಮನಸ್ಸನ್ನು ಓರಣವಾಗಿ ಇಡುವುದರಲ್ಲಿ ಎಲ್ಲ ಶಕ್ತಿಯನ್ನು ಖರ್ಚು ಮಾಡುತ್ತಾನೆ. ಇವನಿಗೆ ಪರರ ಹಂಗು ಇರುವುದಿಲ್ಲ. ಸಮಾಜದ ಕಲ್ಯಾಣವನ್ನು ಪೋಷಿಸುವ ಒಂದು ಶಕ್ತಿಯು ಅವನಲ್ಲಿರುತ್ತದೆ. ಅವನು ಉಳಿದವರ ಹಿತಚಿಂತನೆ, ಹಿತಸಾಧನೆ ಮಾಡುವುದನ್ನು ತನ್ನ ಕರ್ತವ್ಯವೆಂದು ತಿಳಿದಿರುತ್ತಾನೆ. ಅಂತರ್ಜೀವಿಯು ಇನ್ನೊಬ್ಬರಮೇಲೆ ಭಾರ ಹಾಕುವುದಿಲ್ಲ. ಇನ್ನೊಬ್ಬರು ತಾವಾಗಿಯೇ ಕೈಯೆತ್ತಿಕೊಡದೆ ಏನನ್ನೂ ಸ್ವೀಕರಿಸುವುದಿಲ್ಲ. ಅಂತರ್ಜೀವಿಯು ಸಮಾಜದ ಮಧ್ಯದಲ್ಲಿಯೇ ಬಾಳುತ್ತಾನೆ. ಇವನು ರಸವೇ ಜೀವನ ಎಂದು ತಿಳಿದಿರುತ್ತಾನೆ. ಅಂತರ್ಜೀವಿಯು ತನ್ನಲ್ಲಿಯೂ, ಇತರರಲ್ಲಿಯೂ ದೈವಿಕತೆಯು ಇದೆಯೆಂಬುದನ್ನು ತಿಳಿದಿರುತ್ತಾನೆ. ಇದು ಅಂತರ್ಜೀವಿಯ ವ್ಯಕ್ತಿತ್ವ.                                                

2. ಸಮಾಜದಲ್ಲಿ ಕಲೋಪಾಸಕನ ಮಹತ್ವವನ್ನು ವಿ.ಕೃ. ಗೋಕಾಕ್ ಹೇಗೆ ವಿಶ್ಲೇಷಿಸಿದ್ದಾರೆ?                      

     ಹಿರಿಯ ಸಾಹಿತಿಯೊಬ್ಬರು ಹೇಳುವಂತೆ ಕಲೋಪಾಸಕನಿಗೆ ಸಮಾಜದಲ್ಲಿ ಯಾವ ಹೊಣೆಯೂ ಇರಬಾರದು. ಸಮಾಜದ ಕಲ್ಯಾಣವನ್ನು ಬೆಳೆಸುವ ಶಕ್ತಿ ಅವನಲ್ಲಿರುತ್ತದೆ. ಆದ್ದರಿಂದ ಅವನನ್ನು ಪೋಷಿಸುವ ಹೊಣೆ ಸಮಾಜದ ಮೇಲಿದೆ. ಅವನು ಅಂಗಡಿಗೆ ಹೋಗಲಿ, ಹೊಟೇಲಿಗೆ ಹೋಗಲಿ ಅವನು ಕಲೊಪಾಸಕನೆಂದು ತಿಳಿದ ಕೂಡಲೇ ಎಲ್ಲರೂ ಅವನ ಅವಶ್ಯಕತೆಗಳನ್ನು ಈಡೇರಿಸಬೇಕು. ಕಲೋಪಾಸಕನೂ ಒಬ್ಬ ವ್ಯಕ್ತಿ. ಅವನು ಸಮಾಜದ ಒಂದು ಘಟಕ. ಕಲೋಪಾಸಕನಾಗಿ ಕಲಾ ಸೇವೆಯನ್ನು ಸಲ್ಲಿಸುವುದರೊಂದಿಗೆ ಅವನ ವ್ಯಕ್ತಿತ್ವ ವಿಕಾಸವೂ ಆಗಬೇಕು. ಕಲೋಪಾಸಕನು ಜನರ ಮನಸ್ಸನ್ನು ತಿದ್ದಬಹುದು. ಆದರೆ ಯಾರ ಮನಸ್ಸನ್ನೂ ನೋಯಿಸದಂತೆ ಹಿತಚಿಂತನೆ, ಹಿತ ಸಾಧನೆಯಲ್ಲಿ ತೊಡಗುವುದು ಅವನ ಕರ್ತವ್ಯವಾಗಿರುತ್ತದೆ. ರಸವೇ ಜೀವನ, ಸಮರಸವೇ ಸಹಜೀವನ ಎಂಬುದನ್ನು ಕಲೊಪಾಸಕನು ಅರಿತಿರಬೇಕು. ಕಲೋಪಾಸಕನ ಎರಡು ಕಣ್ಣುಗಳು ಯಾವಾಗಲೂ ತೆರೆದಿರಬೇಕಾಗುತ್ತದೆ. ಒಂದು ತನ್ನಿಂದ ಬೇರೆಯವರಿಗೆ ಯಾವ ತೊಂದರೆಯೂ ಆಗದಂತೆ ಎಚ್ಚರ ವಹಿಸುವ ಕಣ್ಣು, ಇನ್ನೊಂದು ಇತರರ ಮಾನಸಿಕ,ಐಹಿಕ, ಆತ್ಮಿಕ ಹಿತ ಚಿಂತನೆ ಎಲ್ಲೆಲ್ಲಿ ಸಾಧ್ಯ ಎಂದು ಅಭ್ಯಾಸ ಮಾಡುವ ಕಣ್ಣು. ಕಲೋಪಾಸಕನಿಗೆ ಈ ರೀತಿಯ ಒಳಗಣ್ಣನ್ನು ಕೊಟ್ಟಿದ್ದಾನೆ ಎಂದು ಲೇಖಕರು ಹೇಳಿದ್ದಾರೆ.