Monday 15 March 2021

ಎಮ್ಮನುಡಿಗೇಳ್



ಪದ್ಯಪಾಠ - 1. ಎಮ್ಮನುಡಿಗೇಳ್ - ಆದಿಕವಿ ಪಂಪ ಕನ್ನಡದ ಆದಿಮಹಾಕವಿ ಪಂಪನು ಕ್ರಿ. ಶ. ಸುಮಾರು 941 ರಲ್ಲಿ ವೆಂಗಿಮಂಡಲದ ವೆಂಗಿಪಳು ಎಂಬ ಅಗ್ರಹಾರದಲ್ಲಿ ಜನಿಸಿದನು. ಪಂಪನು 'ವಿಕ್ರಮಾರ್ಜುನ ವಿಜಯ ಮತ್ತು ಆದಿ ಪುರಾಣ' ಎಂಬ ಮಹಾಕಾವ್ಯಗಳನ್ನು ರಚಿಸಿದ್ದಾನೆ. ಈತನಿಗೆ ಸರಸ್ವತೀ ಮಣಿಹಾರ, ಸಂಸಾರ ಸಾರೋದಯ, ಕವಿತಾ ಗುಣಾರ್ಣವ ಎಂಬ ಬಿರುದುಗಳು ಇದ್ದವು. ಪದ್ಯಪಾಠ - 2 ಹಕ್ಕಿ ಹಾರುತಿದೆ ನೋಡಿದಿರಾ - ದ. ರಾ. ಬೇಂದ್ರೆ ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಶ್ರೀ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು ಕ್ರಿ. ಶ. 1896 ರಲ್ಲಿ ಧಾರವಾಡದಲ್ಲಿ ಜನಿಸಿದರು. ಇವರು ಗರಿ, ನಾಕುತಂತಿ, ನಾದಲೀಲೆ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರಿಗೆ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಭಾರತೀಯ ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಪದ್ಯಪಾಠ - 4. ವಚನ ಸೌರಭ - ಜೇಡರ ದಾಸಿಮಯ್ಯ, ಬಸವಣ್ಣ ಶಿವಶರಣ ಜೇಡರ ದಾಸಿಮಯ್ಯ ಅವರು ಕ್ರಿ. ಶ. ಸುಮಾರು 1150 ರಲ್ಲಿ ಯಾದಗಿರಿ ಸನಿಹದ ಮುದೇನೂರಿನಲ್ಲಿ ಜೀವಿಸಿದ್ದರು. ಆದ್ಯವಚನಕಾರ ಎಂದು ಪ್ರಸಿದ್ಧರಾದ ಇವರ ಸುಮಾರು 150 ವಚನಗಳು ದೊರೆತಿವೆ. 'ರಾಮನಾಥ' ಎಂಬದು ಇವರ ಅಂಕಿತನಾಮ. ಸರಳ ಮತ್ತು ನೇರ ನಿರೂಪಣೆಯಿಂದ ಕೂಡಿರುವ ಇವರ ವಚನಗಳು ಸಾಮಾಜಿಕ ಮೌಲ್ಯಗಳಿಂದ ಜನಮಾನ್ಯವಾಗಿವೆ. ಶಿವಶರಣ ಬಸವಣ್ಣ ಅವರು ಕ್ರಿ. ಶ. ಸುಮಾರು 1260 ರಲ್ಲಿ ಬಿಜಾಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಜನಿಸಿದರು.ಇವರು ಕಳಚುರಿ ವಂಶದ ಬಿಜ್ಜಳನ ಆಸ್ಥಾನದಲ್ಲಿ ಮಹಾಭಂಡಾರಿಯಾಗಿ ಸೇವೆಸಲ್ಲಿಸಿದ್ದಾರೆ. 'ಕೂಡಲ ಸಂಗಮದೇವ' ಎಂಬ ಅಂಕಿತನಾಮದಿಂದ ರಚಿಸಿರುವ ಸಾವಿರಾರು ವಚನಗಳು ದೊರೆತಿವೆ. ಇವರ ಸರಳವಾದ ಭಾವಗೀತಾತ್ಮಕವಾದ ವಚನಗಳಲ್ಲಿ ಸಾಮಾಜಿಕ, ನೈತಿಕ ವಿಚಾರಧಾರೆಗಳನ್ನು ಸಾದರಪಡಿಸಲಾಗಿದೆ. ಪದ್ಯಪಾಠ - 5. ಸಂಕಲ್ಪ ಗೀತೆ - ಜಿ. ಎಸ್. ಶಿವರುದ್ರಪ್ಪ ಶ್ರೀ ಜಿ. ಎಸ್. ಶಿವರುದ್ರಪ್ಪ ಅವರು ಕ್ರಿ. ಶ. 1926 ರಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಜನಿಸಿದರು. ಇವರು ಎದೆತುಂಬಿ ಹಾಡಿದೆನು, ಸಾಮಗಾನ, ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರಿಗೆ ರಾಷ್ಟ್ರಕವಿ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೌರವ ಡಿ. ಲಿಟ್ ಪದವಿಗಳನ್ನು ನೀಡಿಗೌರವಿಸಲಾಗಿದೆ. ಪದ್ಯಪಾಠ - 6. ಕೌರವೇಂದ್ರನ ಕೊಂದೆ ನೀನು - ಕುಮಾರ ವ್ಯಾಸ ಕುಮಾರವ್ಯಾಸ ಎಂದು ಪ್ರಸಿದ್ಧನಾಗಿರುವ ಗದುಗಿನ ನಾರಣಪ್ಪ ಅವರು ಕ್ರಿ. ಶ. ಸುಮಾರು 1430 ರಲ್ಲಿ ಗದಗ ಪ್ರಾಂತ್ಯದ ಕೋಳಿವಾಡದಲ್ಲಿ ಜನಿಸಿದರು. ಇವರು ಕರ್ನಾಟ ಭಾರತ ಕಥಾ ಮಂಜರಿ ಮತ್ತು ಐರಾವತ ಎಂಬ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರಿಗೆ ರೂಪಕ ಸಾಮ್ರಾಜ್ಯ ಚಕ್ರವತರ್ಿ ಎಂಬ ಬಿರುದನ್ನು ನೀಡಿ ಗೌರವಿಸಲಾಗಿದೆ. ಪದ್ಯಪಾಠ - 7. ವೀರಲವ - ಲಕ್ಷ್ಮೀಶ ಕವಿ ಲಕ್ಷ್ಮೀಶನು ಕ್ರಿ. ಶ. ಸುಮಾರು 1550 ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರಿನಲ್ಲಿ ಜನಿಸಿದನು. ಇವನಿಗೆ ಲಕ್ಷ್ಮೀರಮಣ, ಲಕ್ಷ್ಮೀಪತಿ ಎಂಬ ಹೆಸರುಗಳೂ ಇದ್ದವು.ಇವರು 'ಜೈಮಿನಿ ಭಾರತ' ಎಂಬ ಪ್ರಸಿದ್ಧ ಕಾವ್ಯವನ್ನು ರಚಿಸಿದ್ದಾನೆ. ಈತನಿಗೆ ಉಪಮಾಲೋಲ, ಕರ್ಣಾಟ ಕವಿಚೂತವನ ಚೈತ್ರ ಎಂಬ ಬಿರುದುಗಳನ್ನು ನೀಡಿ ಗೌರವಿಸಲಾಗಿದೆ. ಪದ್ಯಪಾಠ - 8. ಸಂಕಟಕೆ ಗಡಿ ಇಲ್ಲ - ದು. ಸರಸ್ವತಿ ಶ್ರೀಮತಿ ದುರ್ಗಪ್ಪ ಸರಸ್ವತಿ ಅವರು ಕ್ರಿ. ಶ. 1963 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇವರು ಹೆಣೆದರೆ ಜೇಡನಂತೆ, ಜೀವಸಂಪಿಗೆ, ಈಗೇನ್ಮಾಡೀರಿ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಇವರು ರಂಗಕಲಾವಿದರಾಗಿ, ಸಮಾಜಸೇವಾಕರ್ತರಾಗಿ ದುಡಿಯುತ್ತಿದ್ದಾರೆ.

ಗಾದೆಗಳ ವಿಸ್ತರಣೆ 1. ಶಕ್ತಿಗಿಂತ ಯುಕ್ತಿ ಮೇಲು ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು. ಇವು ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೊಂದಿರುತ್ತವೆ. ಪ್ರಸ್ತುತ ಗಾದೆ 'ಶಕ್ತಿಗಿಂತ ಯುಕ್ತಿ ಮೇಲು' ಎಂಬುದು ಒಂದು ಜನಪ್ರಿಯ ಗಾದೆ. ಶಕ್ತಿ ದೈಹಿಕವಾದದ್ದು. ಯುಕ್ತಿ ಬುದ್ಧಿಚಾತುರ್ಯವನ್ನು ಅವಲಂಬಿಸಿದೆ. ಶಕ್ತಿಯಿಂದ ಗೆಲ್ಲಲಾಗದ ಸಂದರ್ಭದಲ್ಲಿ ಯುಕ್ತಿಯನ್ನು ಪ್ರಯೋಗಿಸಬೇಕು. ತನ್ನ ಜೀವ ಉಳಿಸಿಕೊಳ್ಳಲು ಮೊಲವೊಂದು ಸಿಂಹದಿಂದ ತನ್ನನ್ನು ತಾನು ಯುಕ್ತಿಯಿಂದ ಕಾಪಾಡಿಕೊಂಡ ಪಂಚತಂತ್ರದ ಕಥೆ ಎಲ್ಲರಿಗೂ ತಿಳಿದಿದೆ. ಈ ಹಿನ್ನೆಲೆಯಲ್ಲಿ ದೈಹಿಕ ಶಕ್ತಿಗಿಂತ ಮನಸ್ಸಿನ ಯುಕ್ತಿಯೇ ಶ್ರೇಷ್ಠ ಎಂಬುದೇ ಈ ಗಾದೆಯ ಅರ್ಥವಾಗಿದೆ. 2. ಕೈ ಕೆಸರಾದರೆ ಬಾಯಿ ಮೊಸರು ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು. ಇವು ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೊಂದಿರುತ್ತವೆ. ಈ ಗಾದೆಯು ಕಷ್ಟಪಡದೇ ಸುಖ ಸಿಗುವುದಿಲ್ಲ ಎಂಬುದನ್ನು ಧ್ವನಿಪೂರ್ಣವಾಗಿ ಹೇಳುತ್ತದೆ. ಕೈ ಕೆಸರಾಗುವುದು ದುಡಿಮೆಯನ್ನು ಸಂಕೇತಿಸಿದರೆ ಮೊಸರು ಎಂಬುದು ಅದರ ಪ್ರತಿಫಲವನ್ನು ಬಿಂಬಿಸುತ್ತದೆ. ಬಸವಣ್ಣನವರ 'ಕಾಯಕವೇ ಕೈಲಾಸ' ಎಂಬ ಮಾತು ಮೇಲಿನ ಗಾದೆಯನ್ನು ಪುಷ್ಟಿಕರೀಸುತ್ತದೆ. 3. ಹೆತ್ತತಾಯಿ ಹೊತ್ತನಾಡು ಸ್ವರ್ಗಕ್ಕಿಂತ ಮಿಗಿಲು. ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು. ಇವು ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೊಂದಿರುತ್ತವೆ. ಪ್ರಸ್ತುತ ಗಾದೆ 'ಹೆತ್ತತಾಯಿ ಹೊತ್ತನಾಡು ಸ್ವರ್ಗಕ್ಕಿಂತ ಮಿಗಿಲು' ಎಂಬುದು ಒಂದು ಜನಪ್ರಿಯ ಗಾದೆಯಾಗಿದೆ. ತಾಯಿ ನಮ್ಮನ್ನು ಒಂಬತ್ತು ತಿಂಗಳು ತನ್ನ ಗರ್ಭದಲ್ಲಿಟ್ಟುಕೊಂಡು ಪೋಷಿಸಿದರೆ, ಹೊತ್ತನಾಡು ನಮ್ಮನ್ನು ಜೀವನಪೂರ್ತಿ ತನ್ನ ಮಡಿಲಲ್ಲಿಟ್ಟು ಪೋಷಿಸುತ್ತದೆ. ಹೆತ್ತತಾಯಿಯ ಮಡಿಲಿನಲ್ಲಿ ದೊರಕುವ ಸುಖಕ್ಕೆ ಸಮನಾದ ಸುಖ ಬೇರೊಂದಿಲ್ಲ. ಅದೇ ರೀತಿ ಜನ್ಮಭೂಮಿಯ ಸಂಬಂಧವು ಸಹ ಬಿಡಿಸಲಾಗದಂತಹುದು. ನಮ್ಮ ನಾಡಿನಲ್ಲಿ ನಮಗೆ ದೊರೆಯುವ ಆನಂದ ಮತ್ತೆ ಎಲ್ಲೂ ದೊರೆಯಲು ಸಾಧ್ಯವಿಲ್ಲ. ಆದ್ದರಿಂದ ಹೆತ್ತತಾಯಿ ಹೊತ್ತನಾಡು ಸ್ವರ್ಗಕ್ಕಿಂತ ಮಿಗಿಲಾದುದು. ರಾಮಾಯಣ ಮಹಾಕಾವ್ಯದಲ್ಲಿ ಶ್ರೀರಾಮನು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾನೆ.

4. ಬೆಳೆಯುವ ಸಿರಿ ಮೊಳಕೆಯಲ್ಲಿ ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು.ಇವು ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೊಂದಿರುತ್ತವೆ. ಬೆಳೆಯುವ ಸಸಿಯನ್ನು ನೋಡಿದಾಗಲೇ ಅದು ಮುಂದೆ ಎಂತಹ ಬೆಳೆಯನ್ನು ಕೊಡುತ್ತದೆ ಎಂಬುದು ತಿಳಿಯುತ್ತದೆ. ಹಾಗೆಯೇ ಬಾಲ್ಯದಲ್ಲಿ ಮಕ್ಕಳ ನಡೆನುಡಿಗಳನ್ನು ಗಮನಿಸಿದರೆ ಮುಂದೆ ಅವರು ಏನಾಗುತ್ತಾರೆ ಎಂಬುದನ್ನು ಅರಿಯಬಹುದು. ಕ್ರಿಕೆಟ್ ಆಟಗಾರ ಸಚಿನ್ ಜೀವನವೇ ಇದಕ್ಕೊಂದು ಉತ್ತಮ ಉದಾಹರಣೆ.ಮೊಳಕೆ ಚೆನ್ನಾಗಿದ್ದರೆ ಬೆಳೆ ಚೆನ್ನಾಗಿರುತ್ತದೆ. ಅದೇ ರೀತಿ ಮಕ್ಕಳು ಬಾಲ್ಯದಲ್ಲಿ ಉತ್ತಮ ಗುಣಗಳನ್ನು ಬೆಳೆಸಿಕೊಂಡರೆ ಮುಂದೆ ಅವರು ಉತ್ತಮ ವ್ಯಕ್ತಿಗಳಾಗುತ್ತಾರೆ ಎಂಬುದೇ ಈ ಗಾದೆಯ ಅರ್ಥವಾಗಿದೆ. 5. ಮಾತೇ ಮುತ್ತು; ಮಾತೇ ಮೃತ್ಯು. ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು. ಇವು ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೊಂದಿರುತ್ತವೆ. ಮನುಷ್ಯನಿಗೆ ಮಾತೇ ಮುಖ್ಯವಾದುದು. ಮಾತಿನಿಂದ ನಮಗೆ ಎಲ್ಲವೂ ದೊರೆಯುತ್ತದೆ. ಬಸವಣ್ಣನವರು 'ನುಡಿದರೆ ಮುತ್ತಿನ ಹಾರದಂತಿರಬೇಕು' ಎಂದಿದ್ದಾರೆ. ನಯವಿನಯದಿಂದ ಮಾತನಾಡಿದರೆ ಜಗತ್ತನ್ನೇ ಗೆಲ್ಲಬಹುದು. ಹಾಗೆಯೇ ಮಾತಿನಿಂದ ದ್ವೇಷ ವಿರಸಗಳು ಉಂಟಾಗುತ್ತವೆ. ಕೊನೆಗೆ ಮೃತ್ಯುವು ಬರಬಹುದು. 'ಮಾತು ಬಲ್ಲವನಿಗೆ ಜಗಳವಿಲ್ಲ' ಎಂಬ ಗಾದೆಯೂ ಮೇಲಿನ ಗಾದೆಗೆ ಪೂರಕವಾಗಿದೆ. ಆದ್ದರಿಂದ ನಾವು ಸಮಯೋಚಿತವಾಗಿ ಎಚ್ಚರಿಕೆಯಿಂದ ಮಾತನಾಡಬೇಕು ಎಂಬುದೇ ಇದರ ಅರ್ಥವಾಗಿದೆ.