Monday, 1 March 2021

ಭಾರತವು



ಗುಂಪಿನಲ್ಲಿ ಚರ್ಚಿಸಿದ ನಂತರ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1.   ಭಾರತವು ಏಷ್ಯಾಖಂಡದ ಯಾವ ಭಾಗದಲ್ಲಿದೆ?
 ಭಾರತವು ಏಷ್ಯಾಖಂಡದ ಒಂದು ಪರ್ಯಾಯ ದ್ವೀಪವಾಗಿದ್ದು, ಏಷ್ಯಾಖಂಡದ ಆಗ್ನೇಯ ಭಾಗದಲ್ಲಿದೆ.

2.  ಭಾರತವು ಭೂಮಿಯ ಯಾವ ಗೋಳಾರ್ಧದಲ್ಲಿದೆ?
 ಭಾರತವು ಭೂಮಿಯ ಉತ್ತರ ಗೋಳಾರ್ಧದಲ್ಲಿದೆ.

3.  ಭಾರತದ ದಕ್ಷಿಣದ ತುತ್ತ ತುದಿ ಯಾವುದು?
 ಇಂದಿರಾ ಪಾಯಿಂಟ್

4. ಭಾರತದ ಮುಖ್ಯ ಭಾಗದ ದಕ್ಷಿಣದ ತುದಿ ಯಾವುದು?
 ಕನ್ಯಾಕುಮಾರಿ

5. ಭಾರತದ ಮಧ್ಯಭಾಗದಲ್ಲಿ ಹಾದು ಹೋಗುವ ಪ್ರಮುಖ ಅಕ್ಷಾಂಶ ಯಾವುದು?
 231/20 ಉತ್ತರ ಅಕ್ಷಾಂಶ

6.  ಇಂದಿರಾ ಪಾಯಿಂಟ್ ಯಾವ ದ್ವೀಪದಲ್ಲಿದೆ?
 ಭಾರತದ ದಕ್ಷಿಣದ ತುತ್ತ ತುದಿ ಇಂದಿರಾ ಪಾಯಿಂಟ್ ನಿಕೋಬಾರ್ ದ್ವೀಪದಲ್ಲಿದೆ.

7.  ಭಾರತ ಯಾವ ಅಕ್ಷಾಂಶ ಮತ್ತು ರೇಖಾಂಶಗಳ ನಡುವೆ ಹರಡಿದೆ?
 ಭಾರತ () 60,4' ಉತ್ತರ ಅಕ್ಷಾಂಶದಿಂದ 370.6' ಉತ್ತರ ಅಕ್ಷಾಂಶದವರೆಗೆ
 () 680.7' ಪೂರ್ವ ರೇಖಾಂಶದಿಂದ 970.25' ಪೂರ್ವ ರೇಖಾಂಶದವರೆಗೆ ಹರಡಿದೆ.

8.  ಭಾರತದ ನೆರೆಹೊರೆಯ ರಾಷ್ಟ್ರಗಳಾವುವು?
 ಭಾರತವು 7 ರಾಷ್ಟ್ರಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
 ವಾಯುವ್ಯ - ಆಫ್ಘಾನಿಸ್ತಾನದ ಮತ್ತು ಪಾಕಿಸ್ತಾನ.
 ಉತ್ತರ- ಚೀನಾ, ನೇಪಾಳ ಮತ್ತು ಭೂತಾನ್
 ಪೂರ್ವ - ಮ್ಯಾನ್ಮಾರ್ (ಬರ್ಮಾ) ಹಾಗೂ ಬಾಂಗ್ಲಾದೇಶ
 ದಕ್ಷಿಣ - ಶ್ರೀಲಂಕಾ
 ನೈರುತ್ಯ- ಮಾಲ್ಡೀವ್ಸ್