Thursday 13 May 2021

ಪಡೇ ಭಾರತ್ ಬಡೇ ಭಾರತ್ ಕಾರ್ಯಕ್ರಮ ಓದಿನ ಹಿರಿಮೆಯೇ ಭಾರತದ ಗರಿಮೆ ಕೆಂಡಗಣ್ಣಸ್ವಾಮಿ ಕೆ.ಬಿ.

ಪಡೇ ಭಾರತ್ ಬಡೇ ಭಾರತ್ ಕಾರ್ಯಕ್ರಮ ಓದಿನ ಹಿರಿಮೆಯೇ ಭಾರತದ ಗರಿಮೆ
 ಕೆಂಡಗಣ್ಣಸ್ವಾಮಿ ಕೆ.ಬಿ.

ಪಡೇ ಭಾರತ್ ಬಡೇ ಭಾರತ್ ಕೇಂದ್ರ ಸಕರ್ಾರ ರೂಪಿಸಿರುವ ಕಾರ್ಯಕ್ರಮ. ರಾಜ್ಯದ ಶಾಲೆಗಳಲ್ಲಿ ಇದರ ಯಶಸ್ವೀ ಅನುಷ್ಠಾನಕ್ಕಾಗಿ ಶಿಕ್ಷಣ ಇಲಾಖೆಯು ಪ್ರಚಾರ ಹಾಗೂ ಕಾರ್ಯಕ್ರಮಗಳನ್ನು ರೂಪಿಸಿದೆ. ಇದರ ಫಲವಾಗಿ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಪಡೇ ಭಾರತ್ ಬಡೇ ಭಾರತ್ ಕಾರ್ಯಕ್ರಮವು ಅನುಷ್ಠಾನದಲ್ಲಿದೆ.

ಮಕ್ಕಳಿಗೆ ಕಲ್ಪಿಸಿರುವ ಅವಕಾಶಗಳು :
* ಓದುವುದನ್ನು ಕಲಿಯಲು
* ಓದಿ ತಿಳಿಯಲು
* ಓದಿದ್ದನ್ನು ಹಂಚಿಕೊಳ್ಳಲು (ಮೌಖಿಕ-ಲಿಖಿತ)
* ಓದುವ ಹವ್ಯಾಸ ಬೆಳೆಸಿಕೊಳ್ಳಲು
* ಓದಿಗಾಗಿ ಸಂಪನ್ಮೂಲ ಹುಡುಕಲು ಹಾಗೂ ಸಂಗ್ರಹಿಸಲು
* ಓದಿನ ಸಂಪನ್ಮೂಲಗಳ ಬಳಕೆ ಮತ್ತು ಸಂರಕ್ಷಣೆ ಮಾಡಲುಮಕ್ಕಳಿಗೆ ಈ ರೀತಿಯ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮುಂದೆ ಕಾಣಿಸಿದ ಚಟುವಟಿಕೆಗಳನ್ನು ಬಲಗೊಳಿಸಬಹುದಾಗಿದೆ. :

ಅನುಷ್ಠಾನದಲ್ಲಿರುವ ಕಾರ್ಯಕ್ರಮ :
1.ದೈನಂದಿನ ವಾರ್ತೆ ಹಾಗೂ ಸುಭಾಷಿತ ಓದು : ಪ್ರತಿದಿನ ಪ್ರಾರ್ಥನಾ ಸಮಯದಲ್ಲಿ ಈ ಚಟುವಟಿಕೆ ನಡೆಯುತ್ತದೆ. ಮಕ್ಕಳು ದಿನಕ್ಕೊಬ್ಬರಂತೆ ಪಾಳಿಯಲ್ಲಿ ಓದಲು ಮತ್ತು ಪ್ರಕಟಣಾ ಫಲಕದಲ್ಲಿ ಬರೆಯಲು ಅವಕಾಶ ಕಲ್ಪಿಸಿದೆ. ಈ ಕಾರ್ಯವು ಬೆಂಚ್ ಲೀಡರ್ ಸಹಭಾಗಿತ್ವದಲ್ಲಿ ನಡೆದಲ್ಲಿ ಅಗತ್ಯವಿದ್ದವರಿಗೆ ಸಹಕರಿಸುತ್ತಾರೆ.

2. ಲರ್ನಿಂಗ್ ಕಾರ್ನರ್ /ವಾಚನ ಮೂಲೆ :
ಸಾಮಗ್ರಿ
* ಕಥೆ, ಚಿತ್ರಕತೆ, ಕಾಮಿಕ್ಸ್ ಇತ್ಯಾದಿ
* ಶಿಶು ಗೀತೆ, ಗಾದೆ, ಒಗಟುಗಳು
* ಭಿತ್ತಿಪತ್ರ, ಆಮಂತ್ರಣ ಪತ್ರ, ಜಾಹಿರಾತುಗಳು
* ಎಂಟನೇ ತರಗತಿ  : ಸೋಮವಾರ, ಬುಧವಾರ
* ಒಂಬತ್ತನೇ ತರಗತಿ : ಮಂಗಳವಾರ, ಗುರುವಾರ
* ಹತ್ತನೇ ತರಗತಿ : ಬಿಡುವಿನ ವೇಳೆ

3. ಗ್ರಂಥಾಲಯ : ಮಕ್ಕಳು ಹಾಗೂ ಕುಟುಂಬದವರು ಓದಲು
ವಾರ/ ಹದಿನೈದು ದಿನಕ್ಕೆ ಒಮ್ಮೆ ಮನೆಗೆ ಒಯ್ಯಲು ಪುಸ್ತಕಗಳನ್ನು ನೀಡುವುದು.

4. ವಾಚನಾಲಯ :
ವಾಚನಾಲಯಕ್ಕೆ ಪ್ರತ್ಯೇಕ ಕೊಠಡಿ ಗೊತ್ತುಪಡಿಸು ವುದು. ವೇಳಾಪಟ್ಟಿಗೆ ಅನುಗುಣವಾಗಿ ಈ ಚಟುವಟಿಕೆ ಸಾಗಬೇಕು. (ಪ್ರತ್ಯೇಕ ಕೊಠಡಿ ಲಭ್ಯವಿಲ್ಲದಿದ್ದಲ್ಲಿ ಹೊರಾಂಗಣ/ಜಗುಲಿ/ ತರಗತಿ ಕೊಠಡಿಯಲ್ಲಿ ಅವಕಾಶ ನೀಡಬಹುದು).

 ಓದುವ ಸಾಮಗ್ರಿಗಳು :
* ಕಥೆ, ನಾಟಕ, ಗಾದೆ, ಇತ್ಯಾದಿ ಕಿರು ಪುಸ್ತಕಗಳು
* ರಾಷ್ಟ್ರ ನಾಯಕರ, ಕವಿಗಳ, ಸಾಹಿತಿಗಳ, ವಿಜ್ಞಾನಿಗಳ, ದಾರ್ಶನಿಕರ ಕಿರು ಪುಸ್ತಕಗಳು.
* ಪಠ್ಯಕ್ಕೆ ಪೂರಕವಾದ ವಿಷಯವಾರು ಪುಸ್ತಕಗಳು
* ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳು
* ಮಕ್ಕಳ ವಾರ, ಪಾಕ್ಷಿಕ ಪತ್ರಿಕೆಗಳು
(ಹದಿನೈದು ದಿನಗಳಿಗೊಮ್ಮೆ ಪುಸ್ತಕ ಬದಲಿಸಿ ನೀಡುವುದು ಉತ್ತಮ) ಮೌನವಾಗಿ ಓದಲು, ಮುಖ್ಯಾಂಶಗಳನ್ನು ಬರೆದುಕೊಳ್ಳಲು ಮಾರ್ಗದರ್ಶನ ನೀಡುವುದು. ತರಗತಿ ನಾಯಕರಿಗೆ ನಿರ್ವಹಣಾ ಜವಾಬ್ದಾರಿ ನೀಡುವುದು.

ವೇಳಾಪಟ್ಟಿ : ವಾಚನ ಮೂಲೆ ಚಟುವಟಿಕೆಯ ದಿನ ಹೊರತುಪಡಿಸಿ

5. ಬೋಧನಾ ಕಲಿಕಾ ಚಟುವಟಿಕೆ :
ಭಾಷೆ ವಿಷಯದಲ್ಲಿ - ಸಂದರ್ಭ/ಚಟುವಟಿಕೆಗೆ ಅನುಗುಣವಾಗಿ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಓದುವ ಕ್ರಿಯೆಗೆ ಒತ್ತು ನೀಡುವುದು.
* ತಪ್ಪಿಲ್ಲದೆ ಓದುವ ಅಭ್ಯಾಸಕ್ಕಾಗಿ ಓದು : ಮೆಲುದನಿಯ ಓದು
* ಓದುವಾಗ ಯಾವುದೇ ಪದದ ಉಚ್ಚಾರ ಹಾಗೂ ಗುರ್ತಿಸುವಿಕೆಯಲ್ಲಿ ತೊಡಕಾದರೆ ಗೆಳೆಯ/ಶಿಕ್ಷಕರ ಸಹಾಯ ಪಡೆದು ಓದುವುದು.
ಆ ಕ್ಲಿಷ್ಟ ಪದವನ್ನು ಹಲವು ಬಾರಿ ಪುನರುಚ್ಚರಿಸುತ್ತಾ ಓದನ್ನು ಮುಂದುವರಿಸುವುದು. ಎಂದು ಸೂಚನೆ ನೀಡಿ ಚಟುವಟಿಕೆಯಲ್ಲಿ ತೊಡಗಿಸುವುದು.

* ನಿರರ್ಗಳ ಓದಿನ ಕಲಿಕೆಗಾಗಿ ಓದು : ಮೆಲುದನಿ ಓದು
* ಲೇಖನ ಚಿಹ್ನೆ ಆಧರಿಸಿ ಒಂದೊಂದೇ ವಾಕ್ಯವನ್ನು ಸ್ಪಷ್ಟ ಹಾಗೂ ನಿರರ್ಗಳವಾಗಿ ಓದುವುದು. ಓದುವಾಗ ನಿರರ್ಗಳತೆಗೆ ಯಾವುದೇ ಪದ ತೊಡಕಾದರೆ ಗೆಳೆಯ/ಶಿಕ್ಷಕರ ಸಹಾಯ ಪಡೆದು ಓದುವುದು. ಕ್ಲಿಷ್ಟ ವಾಕ್ಯವನ್ನು ಹಲವು ಬಾರಿ ಪುನರುಚ್ಚರಿಸುತ್ತಾ ಓದನ್ನು ಮುಂದುವರಿಸುವುದು ಎಂದು ಸೂಚನೆ ನೀಡಿ ಚಟುವಟಿಕೆಯಲ್ಲಿ ತೊಡಗಿಸುವುದು.
* ವಿದ್ಯಾರ್ಥಿಗಳಿಂದ ಓದಿಸುವುದು.
* ಹೊಸ ಪದಗಳನ್ನು ಗುರ್ತಿಸಲು ಓದು : ಮೌನ ಓದು-ಪದ ಬರೆಹ
* ಓದುವಾಗ ಹೊಸಪದ ಹಾಗೂ ಅರ್ಥವಾಗದ ಪದಗಳಿದ್ದರೆ ಅವುಗಳನ್ನು ಪೆನ್ಸಿಲ್ ಸಹಾಯದಿಂದ ಗುರ್ತಿಸಿಕೊಳ್ಳುವುದು. ಗುರ್ತಿಸಿಕೊಂಡ ಪದಗಳನ್ನು ಹಾಳೆಯಲ್ಲಿ ಬರೆದುಕೊಳ್ಳಲು ಸೂಚಿಸುವುದು.
* ಗುರ್ತಿಸಿಕೊಂಡ ಪದಕ್ಕೆ ಅರ್ಥಕೋಷದಲ್ಲಿ ಅರ್ಥ ಹುಡುಕುವುದು. ಅಗತ್ಯವಿದ್ದಲ್ಲಿ ಅರ್ಥ/ವ್ಯಾಕರಣಾಂಶ ತಿಳಿಯಲು ಗೆಳೆಯ/ಶಿಕ್ಷಕರ ಸಹಾಯ ಪಡೆಯಲು ಸೂಚನೆ ನೀಡಿ ಚಟುವಟಿಕೆಯಲ್ಲಿ ತೊಡಗಿಸುವುದು.
* ಮುಖ್ಯ ವಿಷಯ ತಿಳಿಯಲು ಓದು : ಮೌನ ಓದು-ವಾಕ್ಯ ಬರಹ
* ಒಂದು ಖಂಡಿಕೆಯನ್ನು (ಪ್ಯಾರಾ) ಗಮನವಿಟ್ಟು ಓದುವುದು. ಓದಿದ ನಂತರ ಅದರಲ್ಲಿನ ಮುಖ್ಯ ವಿಷಯ (ಹೆಸರು, ಘಟನೆ, ಸಾಧನೆ, ಹೇಳಿಕೆ ಇತ್ಯಾದಿ) ಗುರ್ತಿಸುವುದು. ಗುರ್ತಿಸಿದ ಅಂಶ/ಸಾಲುಗಳಿಗೆ ಪೆನ್ಸಿಲ್ ಸಹಾಯದಿಂದ ಅಡಿಗೆರೆ ಹಾಕಿಕೊಳ್ಳಲು ಸೂಚನೆ ನೀಡುವುದು.
* ಗುರ್ತಿಸಿರುವ ಮುಖ್ಯಾಂಶಗಳನ್ನು ಓದಿಸುವುದು.
* ಪಠ್ಯದ ಸಹಾಯವಿಲ್ಲದೆ ಮುಖ್ಯಾಂಶ ಹೇಳಿಸುವುದು. ಇದೇ ಕ್ರಮದಲ್ಲಿ ಉಳಿದ ಖಂಡಿಕೆಗಳ ಅಭ್ಯಾಸ ಮಾಡಿಸುವುದು.
* ಪ್ರಶ್ನೆ ರಚಿಸಲು ಓದು : ಮೌನ ಓದು-ಪ್ರಶ್ನೆ ರಚನೆ
* ಗೊತ್ತುಪಡಿಸಿದ ಖಂಡಿಕೆಯಲ್ಲಿ ಸಾಧ್ಯವಿರುವ ಎಲ್ಲ ಪ್ರಕಾರದಲ್ಲಿ (ವಸ್ತುನಿಷ್ಠ, ಸರಳ ಉತ್ತರ, ದೀರ್ಘ ಉತ್ತರ ಇತ್ಯಾದಿ) ಪ್ರಶ್ನೆ ರಚಿಸಲು ಸೂಚಿಸುವುದು.
* ರಚಿಸಿದ ಪ್ರಶ್ನೆಗಳನ್ನು ತರಗತಿಯಲ್ಲಿ ಮಂಡಿಸುವುದು. ದೋಷಗಳಿದ್ದರೆ ಸರಿಪಡಿಸುವುದು.
* ಪ್ರತಿ ವ್ಯಕ್ತಿ/ಗುಂಪಿಗೂ ಒಂದೊಂದು ಪ್ರಕಾರದ ಪ್ರಶ್ನೆಗಳನ್ನು (ವಸ್ತುನಿಷ್ಟ, ಲಘು-ದೀರ್ಘ ಉತ್ತರ ಇತ್ಯಾದಿ) ನೀಡುವುದು. ಪಠ್ಯವನ್ನು ಓದಿಕೊಂಡು ಪ್ರಶ್ನೆಗಳಿಗೆ ಉತ್ತರ ಬರೆಯಲು ಸೂಚಿಸುವುದು.
* ಉತ್ತರ ಓದಿಸುವುದು. ತಪ್ಪಿದ್ದರೆ ತಿದ್ದಿಸುವುದು
6. ಕಾರ್ಯಕ್ರಮ ನಿರೂಪಣೆ ಹಾಗೂ ವರದಿ ಮಂಡನೆ : ಶಾಲೆಯಲ್ಲಿ ನಡೆಯುವ ಆಚರಣೆ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿ ಕಾರ್ಯಕ್ರಮದ ನಿರೂಪಣೆಯನ್ನು ಮಕ್ಕಳೇ ಮಾಡುತ್ತಿದ್ದಾರೆ. ಜೊತೆಗೆ ವರದಿ, ವಿಜೇತರ ಪಟ್ಟಿ ಓದುವ ಕಾರ್ಯದಲ್ಲಿ ಎಲ್ಲರಿಗೂ ಅವಕಾಶ ನೀಡುವುದು.
ಈ ರೀತಿ ಓದಲು ಅವಕಾಶ ಇರುವ ಸಂದರ್ಭಗಳನ್ನು ಗುರ್ತಿಸಿ ಬಲಗೊಳಿಸುವ ಮೂಲಕ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬಹುದು. ಜೊತೆಗೆ ಲೇಖನ/ ಪುಸ್ತಕಗಳ ಸಂಗ್ರಹ, ಅದರ ನಿರ್ವಹಣೆ, ದಾಖಲೀಕರಣ, ಸಂರಕ್ಷಣೆ ಮುಂತಾದ ಉತ್ತಮ ಅಭ್ಯಾಸಗಳನ್ನು ತಮ್ಮದಾಗಿಸಿಕೊಳ್ಳಲು ಸಹಕಾರಿಯಾಗಿದೆ. ಪರಸ್ಪರ ಸಹಕಾರ ಮತ್ತು ವಿಚಾರ ವಿನಿಮಯ ನಿತ್ಯದ ಕ್ರಿಯೆಯಾಗಿರುತ್ತದೆ. ಈ ಎಲ್ಲ ಸಕಾರಾತ್ಮಕ ಅಂಶಗಳ ಹಿನ್ನೆಲೆಯಲ್ಲಿ ಪಡೇ ಭಾರತ್ ಬಡೇ ಭಾರತ್ ಕಾರ್ಯಕ್ರಮಕ್ಕೆ ಒತ್ತು ನೀಡಿದಂತಾಗುತ್ತದೆ ಅಲ್ಲವೇ?
 
 ಪಡೇ ಭಾರತ್ ಬಡೇ ಭಾರತ್ ಕಾರ್ಯಕ್ರಮ ಓದಿನ ಹಿರಿಮೆಯೇ ಭಾರತದ ಗರಿಮೆ.....
- ಕೆಂಡಗಣ್ಣಸ್ವಾಮಿ ಕೆ.ಬಿ.