ಮಲೇರಿಯಾ ರೋಗ ನಿಯಂತ್ರಣಕ್ಕೆ ಇತ್ತೀಚಿನ ಸಂಶೋಧನೆಗಳು
- ಎಂ.ಎಸ್.ರಮೇಶ್ಮಲೇರಿಯಾ ರೋಗವು ಎಲ್ಲರಿಗೂ ತಿಳಿದಂತೆ, ಅನಾಫಿಲಿಸ್ ಹೆಣ್ಣುಸೊಳ್ಳೆಯ ಮೂಲಕ ಹರಡುವ ಸಾಂಕ್ರಾಮಿಕ ರೋಗ. ಪ್ಲಾಸ್ಮೋಡಿಯಂ ಎಂಬ ಪರವಾಲಂಬಿಯ ಮೂಲಕ ಹಾಗೂ ಸೊಳ್ಳೆಯು ಒಬ್ಬರಿಂದ ಒಬ್ಬರಿಗೆ ರಕ್ತ ಹೀರಲು ಕಚ್ಚುವ ಮೂಲಕ ಮಲೇರಿಯ ಹರಡುತ್ತದೆ. ಮಲೇರಿಯಾ ರೋಗವನ್ನು ಪತ್ತೆಹಚ್ಚಲು ರೋಗಿಯ ರಕ್ತ ಪರೀಕ್ಷೆಯಿಂದ ಮಾತ್ರ ಸಾಧ್ಯ. ಇದು ಸಾಮಾನ್ಯವಾಗಿ ಉಷ್ಣ ವಾತಾವರಣವಿರುವ ಅಭಿವೃದ್ದಿ ಹೊಂದುತ್ತಿರುವ ದೇಶಗಳಲ್ಲಿ ಹೆಚ್ಚಾಗಿ ಮಕ್ಕಳು, ಗರ್ಭಿಣಿ ಸ್ತ್ರೀಯರಲ್ಲಿ ಕಂಡುಬರುತ್ತಿದೆ.
ಮಲೇರಿಯಾ ರೋಗ ಲಕ್ಷಣಗಳು:
ಸಾಮಾನ್ಯವಾಗಿ ಸೊಳ್ಳೆಯು ಕಚ್ಚಿದ 10 ರಿಂದ 15 ದಿನಗಳಲ್ಲಿ ಈ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಮಲೇರಿಯಾ ರೋಗ ತಗಲಿದ ವ್ಯಕ್ತಿಗೆ ಸಾಮಾನ್ಯವಾಗಿ ನಡುಕ ಹುಟ್ಟಿಸುವ ಚಳಿ, ಜ್ವರ, ತಲೆನೋವು, ಸ್ನಾಯುಗಳಲ್ಲಿ ನೋವು, ವಾಕರಿಕೆ, ವಾಂತಿ ಮತ್ತು ಬೇದಿ ಕಾಣಿಸಿಕೊಳ್ಳುತ್ತದೆ. ಮಲೇರಿಯಾ ರೋಗದ ತೀವ್ರತೆ ಹೆಚ್ಚಾದಾಗ ರೋಗಿಯು ಕೋಮಾ ಸ್ಥಿತಿಗೆ ತಲುಪುತ್ತಾನಲ್ಲದೇ ಸೂಕ್ತವಾದ ಚಿಕಿತ್ಸೆ ದೊರೆಯದಿದ್ದರೆ ರೋಗಿಯು ಮರಣಹೊಂದುವ ಸಂಭವವಿರುತ್ತದೆ. ಪ್ರಪಂಚದಲ್ಲಿ ಪ್ರತಿ ವರ್ಷ ಸುಮಾರು 2.7 ಮಿಲಿಯನ್ ಜನರು ಮಲೇರಿಯಾ ರೋಗದಿಂದ ಸಾಯುತ್ತಿದ್ದಾರೆ.
ಅನಾಫಿಲೀಸ್ ಎಂಬ ಹೆಣ್ಣುಸೊಳ್ಳೆಯು ಮಾನವನ ಚರ್ಮದ ಮೇಲೆ ಕಚ್ಚಿದಾಗ, ಸೋಂಕು ದೇಹದ ಯಕೃತ್ ಜೀವಕೋಶಕ್ಕೆ ಹೋಗಿ ನಂತರ ಕೆಂಪು ರಕ್ತಕಣದ ಮೂಲಕ ಮಲೇರಿಯಾ ರೋಗವು ದೇಹವನ್ನು ವ್ಯಾಪಿಸುತ್ತದೆ. ಅನಾಫಿಲಿಸ್ನಲ್ಲಿ 60 ಜಾತಿಗಳಿದ್ದು, ಇವುಗಳ ಮೊಟ್ಟೆಗಳಿಗೆ ಮನುಷ್ಯನ ರಕ್ತವೇ ಆಹಾರವಾಗಿದೆ. ಆದ್ದರಿಂದ ಅನಾಫಿಲಿಸ್ ಸೊಳ್ಳೆಗಳು ಮನುಷ್ಯನನ್ನು ಕಚ್ಚಿ ರಕ್ತವನ್ನು ಹೀರಿ ಅದರ ಮೊಟ್ಟೆಗಳಿಗೆ ರಕ್ತವನ್ನು ಉಣಬಡಿಸುತ್ತದೆ. ಸಾಮಾನ್ಯವಾಗಿ ಸಂಜೆ ಅಥವಾ ಬೆಳಿಗ್ಗೆ ಕಚ್ಚುವ ಸೊಳ್ಳೆಗಳು ಈ ರೋಗ ಹರಡುವ ಮೂಲವಾಗಿವೆ. ಪ್ರಪಂಚದಲ್ಲಿ ಶೇಕಡ 41 ರಷ್ಟು ಪ್ರದೇಶಗಳಲ್ಲಿ ವಾಸಿಸುವ ಜನರು ಮಲೇರಿಯಾ ರೋಗ ಹರಡುವ ಸ್ಥಳದಲ್ಲಿ ವಾಸವಾಗಿರುತ್ತಾರೆ. ಪ್ರತಿವರ್ಷ 300 ರಿಂದ 500 ಮಿಲಿಯನ್ ಜನರು ಹೊಸದಾಗಿ ಮಲೇರಿಯಾ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇಷ್ಟೊಂದು ತೀವ್ರವಾದ ಈ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವಲ್ಲಿ ವಿಜ್ಞಾನಿಗಳ ಇತ್ತೀಚಿನ ಸಂಶೋಧನೆಯೇ ಮಲೇರಿಯಾ ನಿರೋಧಕ ಸೊಳ್ಳೆಗಳು ಮತ್ತು ಫಾಸೋ ಸೋಪ್
ಮಲೇರಿಯಾ ನಿರೋಧಕ ಸೊಳ್ಳೆಗಳು ಎಂದರೇನು?
ಸೊಳ್ಳೆಯ ಮೂಲಕ ಹರಡುವ ಮಲೇರಿಯಾ ರೋಗವನ್ನು ಮಲೇರಿಯಾ ನಿರೋಧಕ ಬ್ಯಾಕ್ಟೀರಿಯಾ ಮೂಲಕ ತಡೆಗಟ್ಟಲು ಸೊಳ್ಳೆಗಳನ್ನೇ ಬಳಸುವುದರಿಂದ ಇವುಗಳಿಗೆ ಮಲೇರಿಯಾ ನಿರೋಧಕ ಸೊಳ್ಳೆಗಳು ಎಂದು ಕರೆಯಲಾಗುತ್ತಿದೆ. ಬ್ಯಾಕ್ಟೀರಿಯಾ ಸೋಂಕುಗಳನ್ನು ಕೃತಕವಾಗಿ ಅತ್ಯುನ್ನತ ಮಟ್ಟದ ತಾಂತ್ರಿಕತೆಯನ್ನು ಉಪಯೋಗಿಸಿಕೊಂಡು, 500 ಸೊಳ್ಳೆಗಳ ಭ್ರೂಣದಲ್ಲಿ ಮೈಕ್ರೋ ಇಂಜೆಕ್ಷನ್ ಮೂಲಕ ಸೇರಿಸಿದಾಗ 494 ಸೊಳ್ಳೆಗಳು ಸಂತಾನೋತ್ಪತ್ತಿ ಶಕ್ತಿಯನ್ನು ಕಳೆದುಕೊಂಡಿದ್ದು, ಕೇವಲ 6 ಸೊಳ್ಳೆಗಳು ಮಾತ್ರ ಮೊಟ್ಟೆಯನ್ನು ಹಾಕಿದ್ದು, ಅದರಲ್ಲಿ 4 ಸೊಳ್ಳೆಗಳ ಮೊಟ್ಟೆಗಳು ಪ್ರೌಢಾವಸ್ಥೆಗೆ ತಲುಪಿರುವುದನ್ನು ಗಮನಿಸಲಾಗಿದೆ. ಇದರಿಂದಾಗಿ ಸೊಳ್ಳೆಗಳ ಸಂತಾನೋತ್ಪತ್ತಿಯಲ್ಲಿ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಸೋಂಕಿತ ಪುರುಷ ಸೊಳ್ಳೆಗಳು ಹೆಣ್ಣು ಸೊಳ್ಳೆಗಳೊಂದಿಗೆ ಸಂತಾನೋತ್ಪತ್ತಿಯಲ್ಲಿ ಯಶಸ್ವಿಯಾಗುವುದಿಲ್ಲ, ಯನೈಟೆಡ್ ಕಿಂಗ್ಡಮ್ ನಲ್ಲಿರುವ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಒಠಡಣಣಠಜ & ಘಠಟಛಚಿಛಿಚಿ ಸಂಶೋಧನೆ ಗುಂಪು, ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿದ್ದು, ಪರವಾಲಂಬಿ ಸೋಂಕು ಡೆಂಗ್ಯೂ ಜ್ವರವನ್ನು ಹೊಂದಿದ ವೈರಸ್ ಅನ್ನು ಸಹ ಕಡಿಮೆ ಮಾಡಿರುವ ಅಂಶವನ್ನು ಪತ್ತೆಹಚ್ಚಿದೆ.
ಮಲೇರಿಯಾ ನಿರೋಧಕ ನಿಟ್ಟಿನಲ್ಲಿ ಇನ್ನೊಂದು ಸಂಶೋಧನೆ ಫಾಸೋ ಸಾಬೂನು
ಆಫ್ರಿಕಾದಲ್ಲಿ ಬೆಳೆಯುವ ಶಿಯಾ ಎಂಬ ಮರದಲ್ಲಿ ಬೆಳೆಯುವ ಶಿಯಾ ಹಣ್ಣಿನ ಬೀಜಗಳನ್ನು ತೆಗೆದು ಪುಡಿ ಮಾಡಿ ನೀರಿನಲ್ಲಿ ಕುದಿಸಿದಾಗ ಬರುವ ಹಳದಿ ಬಣ್ಣದ ಬೆಣ್ಣೆಯ ಜೊತೆಗೆ ನಿಂಬೇ ಹುಲ್ಲಿನ ಎಣ್ಣೆ ಮತ್ತು ಇನ್ನಿತರ ರಹಸ್ಯ ಪದಾರ್ಥಗಳನ್ನು ಬೆರೆಸಿ, ಈ ಸಾಬೂನನ್ನು ತಯಾರಿಸುವ ವಿಧಾನವನ್ನು ಆಫ್ರಿಕಾದ ಬುರಿಕಿನೋ ಫಾಸೋ ಹಾಗೂ ಬುರುಂಡಿ ದೇಶದ ವಿದ್ಯಾರ್ಥಿಗಳಾದ, ಮೊಕ್ಟಾರ್ ಡೆಂಬೆಲೆ ಹಾಗೂ ಜೆರಾರ್ಡ ನಿಯೋಂಡಿಕೋ ಎಂಬವವರು 2013 ರಲ್ಲಿ ಕಂಡುಹಿಡಿದಿದ್ದಾರೆ. ಇವರುಗಳು ಈ ಸಂಶೋಧನೆಗಾಗಿ 25,000 ಡಾಲರ್ ಬಹುಮಾನವನ್ನು ಪಡೆದಿದ್ದಾರೆ. ಈ ಸೋಪನ್ನು ಉಪಯೋಗಿಸಿದ ನಂತರ ದೇಹದಿಂದ ಹೊರಹೊಮ್ಮುವ ಪರಿಮಳವು ಸೊಳ್ಳೆಗಳಿಗೆ ಪ್ರತಿಕೂಲ ಪರಿಣಾಮವನ್ನು ಉಂಟುಮಾಡುವ ಮೂಲಕ ಸೊಳ್ಳೆಯು ಹತ್ತಿರಕ್ಕೆ ಬಾರದಂತೆ ತಡೆಯುತ್ತದೆ. ತಾಂತ್ರಿಕತೆಯ ಸ್ಪರ್ಶದೊಂದಿಗೆ ಈ ಸೋಪು ಪ್ರಪಂಚದಾದ್ಯಂತ ಲಭ್ಯವಾದಾಗ ಕಡಿಮೆ ಖಚರ್ಿನಲ್ಲಿ ಮಲೇರಿಯಾ ರೋಗವನ್ನು ತಡೆಯಬಹುದಾಗಿದೆ.
ಈ ರೀತಿಯ ಸಂಶೋಧನೆಗಳು ಮಲೇರಿಯಾ ತಡೆಗಟ್ಟಲು ಸಹಕಾರಿಯಾದರೂ ಸಹ ಮೂಲಭೂತವಾಗಿ ನಾವು ನಮ್ಮ ಸುತ್ತಮುತ್ತಲಿನ ವಾತಾವರಣ, ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡುವ ಮೂಲಕ ಆರಂಭಿಕ ಹಂತದಲ್ಲೇ ಮಲೇರಿಯಾ ರೋಗವನ್ನು ನಿಯಂತ್ರಿಸಲು ಸಾಧ್ಯವಿದ್ದು ಈ ನಿಟ್ಟಿನಲ್ಲಿ ಶ್ರಮಿಸೋಣ.